ಮಾಹಿತಿ ಇರುವಲ್ಲಿ ಹೋಗಲು

ಬೈಬಲ್‌ ವಚನಗಳ ವಿವರಣೆ

ಮತ್ತಾಯ 6:34—“ನಾಳಿನ ವಿಷಯವಾಗಿ ಚಿಂತೆ ಮಾಡಬೇಡಿರಿ”

ಮತ್ತಾಯ 6:34—“ನಾಳಿನ ವಿಷಯವಾಗಿ ಚಿಂತೆ ಮಾಡಬೇಡಿರಿ”

 “ನಾಳೆ ಬಗ್ಗೆ ಚಿಂತೆ ಮಾಡಬೇಡಿ. ನಾಳೆಗೆ ನಾಳೆದೇ ಚಿಂತೆ ಇರುತ್ತೆ. ಇವತ್ತಿನ ಸಮಸ್ಯೆಗಳು ಇವತ್ತಿಗೇ ಸಾಕು.”—ಮತ್ತಾಯ 6:34, ಹೊಸ ಲೋಕ ಭಾಷಾಂತರ.

 “ನಾಳಿನ ವಿಷಯವಾಗಿ ಚಿಂತೆ ಮಾಡಬೇಡಿರಿ; ನಾಳಿನ ದಿನವು ತನ್ನದನ್ನು ತಾನೇ ಚಿಂತಿಸಿಕೊಳ್ಳುವದು. ಆ ಹೊತ್ತಿನ ಕಾಟ ಆ ಹೊತ್ತಿಗೆ ಸಾಕು.”—ಮತ್ತಾಯ 6:34, ಸತ್ಯವೇದವು.

ಮತ್ತಾಯ 6:34—ಅರ್ಥ

 ನಾಳೆದು ನಾಳೆಗೆ, ಇವತ್ತಿಂದು ಇವತ್ತಿಗೆ. ಹಾಗಾಗಿ ನಾಳೆ ಏನು ಕಷ್ಟ ಬರುತ್ತೋ ಅಂತ ಇವತ್ತೇ ಅತಿಯಾಗಿ ಚಿಂತಿಸಬೇಡಿ, ಇವತ್ತಿನ ಕಷ್ಟನ ಇವತ್ತು ನಿಭಾಯಿಸಿ, ಅದೇ ಒಳ್ಳೇದು ಅಂತ ಯೇಸು ಜನ್ರಿಗೆ ಹೇಳ್ತಿದ್ದಾನೆ.

 ಯೇಸುವಿನ ಮಾತಿನ ಅರ್ಥ ನಾಳೆ ಬಗ್ಗೆ ಯೋಚನೆ ಮಾಡಬಾರದು, ಭವಿಷ್ಯಕ್ಕಾಗಿ ಯೋಜನೆ ಮಾಡಬಾರದು ಅಂತಲ್ಲ. (ಜ್ಞಾನೋಕ್ತಿ 21:5) ಆದ್ರೆ ನಾಳೆ ‘ಹೀಗೆ ಆಗಬಹುದಾ, ಹಾಗೆ ಆಗಬಹುದಾ?’ ಅಂತ ಅನಾವಶ್ಯಕವಾಗಿ ಚಿಂತಿಸಬಾರದು ಅಂತ ಯೇಸು ನಮಗೆ ಹೇಳ್ತಿದ್ದಾನೆ. ಹಾಗೆ ಚಿಂತೆ ಮಾಡಿದ್ರೆ ನಮ್ಮ ಸಂತೋಷ ಕಳಕೊಳ್ತೀವಿ. ಮಾಡಬೇಕಾಗಿರೋ ಕೆಲಸವನ್ನೂ ಮಾಡಲಿಕ್ಕೆ ಆಗಲ್ಲ. ಬರದೇ ಇರೋ ಕಷ್ಟದ ಬಗ್ಗೆ ಇವತ್ತು ಯೋಚನೆ ಮಾಡಿ ಏನೂ ಪ್ರಯೋಜನ ಇಲ್ಲ. ಯಾಕೆಂದ್ರೆ ನಾವು ಯಾವುದ್ರ ಬಗ್ಗೆ ಚಿಂತೆ ಮಾಡ್ತಿವೋ ಅದು ಆಗದೇನೇ ಇರಬಹುದು, ಒಂದುವೇಳೆ ಆದ್ರೂ ನಾವು ನೆನಸಿದಷ್ಟು ಕೆಟ್ಟದಾಗಿ ಆಗಲಿಕ್ಕಿಲ್ಲ.

ಮತ್ತಾಯ 6:34—ಸಂದರ್ಭ

 ಈ ವಚನದಲ್ಲಿರೋ ಮಾತು ಪರ್ವತ ಪ್ರಸಂಗದಲ್ಲಿ ಅಂದ್ರೆ ಬೆಟ್ಟದ ಭಾಷಣದಲ್ಲಿ ಯೇಸು ಹೇಳಿದ ಮಾತಾಗಿದೆ. ಈ ಪ್ರಸಿದ್ಧ ಭಾಷಣ ಮತ್ತಾಯ 5-7 ನೇ ಅಧ್ಯಾಯಗಳಲ್ಲಿದೆ. ಅತಿಯಾಗಿ ಚಿಂತೆ ಮಾಡೋದ್ರಿಂದ ಜೀವನದಲ್ಲಿ ಖುಷಿಯಾಗಿ ಇರಲಿಕ್ಕೆ ಆಗಲ್ಲ, ಆಯಸ್ಸು ಕೂಡ ಹೆಚ್ಚಾಗಲ್ಲ ಅಂತ ಯೇಸು ಆ ಭಾಷಣದಲ್ಲಿ ವಿವರಿಸಿದನು. (ಮತ್ತಾಯ 6:27) ದೇವರು ಹೇಳಿದ ವಿಷ್ಯಗಳನ್ನ ನಾವು ಮೊದಲು ಮಾಡಿದ್ರೆ ನಾಳೆ ಬಗ್ಗೆ ನಾವು ಅತಿಯಾಗಿ ಚಿಂತೆ ಮಾಡಲ್ಲ. ಗಿಡ, ಪಕ್ಷಿಗಳನ್ನೇ ದೇವರು ನೋಡಿಕೊಳ್ತಾನೆ ಅಂದ್ರೆ ಆತನನ್ನ ಆರಾಧನೆ ಮಾಡೋ ಜನ್ರನ್ನು ನೋಡಿಕೊಳ್ಳಲ್ವಾ? ಖಂಡಿತ ನೋಡಿಕೊಳ್ತಾನೆ ಅಂತ ಯೇಸು ಹೇಳಿದನು.—ಮತ್ತಾಯ 6:25, 26, 28-33.

ಮತ್ತಾಯ ಅಧ್ಯಾಯ 6 ಓದಿ. ಜೊತೆಗೆ ಪಾದಟಿಪ್ಪಣಿಗಳನ್ನು ಮತ್ತು ಅಡ್ಡ ಉಲ್ಲೇಖಗಳನ್ನು ಸಹ ಓದಿ.