ಮಾಹಿತಿ ಇರುವಲ್ಲಿ ಹೋಗಲು

ಯುವಜನರ ಪ್ರಶ್ನೆಗಳು

ಆನ್‌ಲೈನಲ್ಲಿ ಫೋಟೊ ಶೇರ್‌ ಮಾಡೋದ್ರ ಬಗ್ಗೆ ನಿಮಗೆ ಏನು ಗೊತ್ತಿರಬೇಕು?

ಆನ್‌ಲೈನಲ್ಲಿ ಫೋಟೊ ಶೇರ್‌ ಮಾಡೋದ್ರ ಬಗ್ಗೆ ನಿಮಗೆ ಏನು ಗೊತ್ತಿರಬೇಕು?

 ನೆನಸಿ, ನೀವು ರಜೆಯಲ್ಲಿ ತುಂಬಾ ಚೆನ್ನಾಗಿ ಮಜಾ ಮಾಡ್ತಾ ಇದ್ದೀರಾ, ಇದ್ರ ಬಗ್ಗೆ ನಿಮ್ಮ ಎಲ್ಲಾ ಫ್ರೆಂಡ್ಸ್‌ಗೆ ಹೇಳಬೇಕು. ಅದಕ್ಕೆ ಏನು ಮಾಡ್ತೀರಾ?

  1.   ಎಲ್ಲರಿಗೂ ಒಂದು ಪೋಸ್ಟ್‌ಕಾರ್ಡ್‌ ಕಳಿಸ್ತೀರಾ?

  2.   ನಿಮ್ಮ ಎಲ್ಲಾ ಫ್ರೆಂಡ್ಸ್‌ಗೆ ಮೇಲ್‌ ಬರಿತೀರಾ?

  3.   ಆನ್‌ಲೈನಲ್ಲಿ ಫೋಟೊಸ್‌ನ ಪೋಸ್ಟ್‌ ಮಾಡ್ತೀರಾ?

 ನಿಮ್ಮ ಅಜ್ಜ-ಅಜ್ಜಿ ನಿಮ್ಮ ವಯಸ್ಸಿನಲ್ಲಿದ್ದಾಗ ಅವ್ರಿಗೆ ಆಪ್ಷನ್‌ “ಎ” ಬಿಟ್ಟು ಬೇರೆ ದಾರಿ ಇರಲ್ಲಿಲ್ಲ.

 ನಿಮ್ಮ ಅಪ್ಪ-ಅಮ್ಮ ನಿಮ್ಮ ವಯಸ್ಸಿನಲ್ಲಿದ್ದಾಗ ಅವ್ರು ಆಪ್ಷನ್‌ “ಬಿ” ಬಳಸಿರಬಹುದು.

 ಈಗ ತುಂಬಾ ಯುವಜನರು ಆಪ್ಷನ್‌ ”ಸಿ”ಯನ್ನೇ ಬಳಸ್ತಾರೆ. ನೀವೂ ಹೀಗೆ ಮಾಡ್ತಿರಾ? ಒಂದುವೇಳೆ ಹೀಗೆ ಮಾಡ್ತಿದ್ರೆ ಇದರಿಂದ ಬರೋ ಅಪಾಯಗಳ ಬಗ್ಗೆ ತಿಳಿದುಕೊಳ್ಳೋಕೆ ಈ ಲೇಖನ ಸಹಾಯ ಮಾಡುತ್ತೆ.

 ಇದ್ರಿಂದ ಏನು ಪ್ರಯೋಜನ ಇದೆ?

 ಕಣ್ಮುಚ್ಚಿ ತೆಗೆಯೋಷ್ಟರಲ್ಲಿ ಫೋಟೊ ಕಳಿಸಿಬಿಡಬಹುದು. “ನಾನು ಟ್ರಿಪ್‌ನ ಎಂಜಾಯ್‌ ಮಾಡ್ತಿರೋವಾಗ್ಲೇ ಅಥವಾ ನನ್ನ ಫ್ರೆಂಡ್ಸ್‌ ಜೊತೆ ಮಜಾ ಮಾಡ್ತಿರುವಾಗ್ಲೇ ಅದ್ರ ಫೋಟೊಗಳನ್ನ ಕಳಿಸಬಹುದು.”—ಮೆಲಾನಿ.

 ಸುಲಭವಾಗಿ ಬೇರೆಯವರ ಬಗ್ಗೆನೂ ತಿಳ್ಕೊಳ್ಳಬಹುದು. “ನಮ್ಮ ಫ್ರೆಂಡ್ಸ್‌ ಎಲ್ಲಿದ್ದಾರೆ, ಏನ್‌ ಮಾಡ್ತಿದ್ದಾರೆ ಅಂತ ಮಾರುದ್ದ ಇಮೇಲ್‌ ಬರೆಯೋದಕ್ಕಿಂತ ಈ ಫೋಟೊಗಳ ಮೂಲಕ ಸುಲಭವಾಗಿ ತಿಳಿದುಕೊಳ್ಳಬಹುದು.”—ಜೋರ್ಡನ್‌.

 ಸಂಪರ್ಕದಲ್ಲಿ ಇರೋದಕ್ಕೆ ಸಹಾಯ ಮಾಡುತ್ತೆ. “ನನ್ನ ಕೆಲವು ಫ್ರೆಂಡ್ಸ್‌ ಮತ್ತು ಕುಟುಂಬದವರು ತುಂಬಾ ದೂರದಲ್ಲಿ ಇದ್ದಾರೆ. ಅವರು ಆಗಾಗ ಆನ್‌ಲೈನ್‌ನಲ್ಲಿ ಫೋಟೊಗಳನ್ನ ಹಾಕ್ತಾರೆ. ಅದನ್ನ ನಾನು ನೋಡೋದ್ರಿಂದ, ಅವರನ್ನ ಪ್ರತಿದಿನ ನೋಡ್ತಿದ್ದಿನೇನೋ ಅಂತ ಅನಿಸುತ್ತೆ.”—ಕೆರೆನ್‌.

 ಇದ್ರಿಂದ ಬರೋ ಅಪಾಯಗಳೇನು?

 ನಿಮ್ಮ ಸುರಕ್ಷತೆಗೆ ತೊಂದ್ರೆ ಆಗಬಹುದು. ನೀವು ಪೋಸ್ಟ್‌ ಮಾಡೋ ಫೋಟೊಗಳಿಂದ ನೀವೆಲ್ಲಿದ್ದೀರಾ ಅಂತ ಬೇರೆಯವರಿಗೆ ಗೊತ್ತಾಗುತ್ತೆ. ಇದ್ರಿಂದ ತೊಂದ್ರೆ ಆಗಬಹುದು. ಒಂದು ವೆಬ್‌ಸೈಟ್‌ ಹೇಳೋ ಪ್ರಕಾರ “ನಾವು ಹಾಕೋ ಫೋಟೊಗಳು ಮತ್ತು ವಿಡಿಯೋಗಳಿಂದ ನಾವು ಎಲ್ಲಿದ್ದೀವಿ, ಯಾವ ಸಮಯದಲ್ಲಿ ಇದ್ದೀವಿ ಅಂತ ಬೇರೆಯವರಿಗೆ ಗೊತ್ತಾಗುತ್ತೆ. ಇದ್ರಿಂದ ಅಪರಿಚಿತರು ಇಂಟರ್ನೆಟ್‌ನಿಂದ ನಮ್ಮನ್ನ ಗಮನಿಸುತ್ತಾ ಇರಬಹುದು, ನಮಗೆ ತೊಂದ್ರೆನೂ ಮಾಡಬಹುದು.”

 ವಿಶೇಷವಾಗಿ ಕಳ್ಳರು ಅಥವಾ ದರೋಡೆಕೋರರು ಇಂಥಾ ಮಾಹಿತಿಯನ್ನ ಹುಡುಕ್ತಾ ಇರ್ತಾರೆ. ಇದು ನಿಜವಾಗಿ ನಡೆದ ಘಟನೆ. ಒಂದು ಸಲ 3 ಕಳ್ಳರು 18 ಮನೆಗೆ ಕನ್ನ ಹಾಕಿ 70 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ವಸ್ತುಗಳನ್ನ ಲೂಟಿ ಮಾಡಿದ್ರು. ಇವ್ರಿಗೆ ಮನೆಯಲ್ಲಿ ಯಾರೂ ಇಲ್ಲ ಅಂತ ಹೇಗೆ ಗೊತ್ತಾಯ್ತು? ಅವ್ರು ಆನ್‌ಲೈನ್‌ ಪೋಸ್ಟ್‌ಗಳ ಮೂಲಕ ಮನೆಯವ್ರನ್ನ ಟ್ರ್ಯಾಕ್‌ ಮಾಡಿದ್ರು. ಇದನ್ನ ಸೈಬರ್‌ ಕೇಸಿಂಗ್‌ ಅಂತ ಕರಿತಾರೆ.

 ತಪ್ಪಾದ ವಿಷ್ಯಗಳನ್ನ ನೋಡೋ ಸಾಧ್ಯತೆ ಎದುರಾಗಬಹುದು. ಕೆಲವು ಜನರು ತಾವು ಏನು ಪೋಸ್ಟ್‌ ಮಾಡ್ತೀವಿ ಅನ್ನೋದ್ರ ಬಗ್ಗೆ ಜಾಸ್ತಿ ತಲೆನೇ ಕೆಡಿಸಿಕೊಳ್ಳಲ್ಲ. “ನಾವು ನಮಗೆ ಗೊತ್ತಿಲ್ಲದೇ ಇರೋ ಜನರ ಪೋಸ್ಟ್‌ಗಳನ್ನ ನೋಡ್ತಾ ಇದ್ರೆ ಅದ್ರಿಂದ ಅಪಾಯಗಳೇ ಜಾಸ್ತಿ. ಇದು ಹೇಗಿರುತ್ತೆ ಅಂದ್ರೆ ನಮಗೆ ಗೊತ್ತಿಲ್ದೆ ಇರೋ ಊರಲ್ಲಿ ನಕ್ಷೆ ಇಲ್ಲದೇ ಸುತ್ತಾಡಿದ ತರ ಇರುತ್ತೆ. ಆಗ ನಾವು ಯಾವ ಜಾಗಕ್ಕೆ ಹೋಗಬಾರದು ಅಂದ್ಕೊಂಡಿರ್ತೀವೊ ಅಲ್ಲಿಗೆ ಹೋಗೋ ಸಾಧ್ಯತೆ ಇದೆ” ಅಂತ ಸಾರಾ ಹೇಳ್ತಾಳೆ.

 ನಿಮ್ಮ ಅಮೂಲ್ಯವಾದ ಸಮಯ ವ್ಯರ್ಥ ಆಗಬಹುದು. “ಜನ ಯಾವ ಹೊಸ ಪೋಸ್ಟ್‌ಗಳನ್ನ ಹಾಕಿದ್ದಾರೆ, ಯಾವ ಹೊಸ ಕಾಮೆಂಟ್‌ಗಳನ್ನ ಹಾಕಿದ್ದಾರೆ ಅಂತ ಅದನ್ನ ನೋಡ್ತಾ, ಓದ್ತಾ ಸಮಯವನ್ನ ವ್ಯರ್ಥ ಮಾಡೋ ಸಾಧ್ಯತೆ ಇದೆ” ಅಂತ ಯೊಲಾಂಡಾ ಹೇಳ್ತಾರೆ. ಅದು ಎಷ್ಟರಮಟ್ಟಿಗೆ ಸಮಸ್ಯೆ ಆಗುತ್ತೆ ಅಂದ್ರೆ ನಾವು ಪ್ರತಿ ಸೆಕೆಂಡಿಗೂ ಮೊಬೈಲ್‌ ನೋಡೋ ಚಟಕ್ಕೆ ಬಿದ್ದು ಬಿಡ್ತೀವಿ.

ಫೋಟೊ ಶೇರಿಂಗ್‌ ಅಕೌಂಟ್‌ ನಿಮಗಿದ್ರೆ ನೀವು ಸ್ವನಿಯಂತ್ರಣ ತೋರಿಸಲೇಬೇಕು

 ಸಮಂತಾ ಏನು ಹೇಳ್ತಾಳೆ ನೋಡಿ. “ನಾನು ಎಷ್ಟು ಟೈಮ್‌ ಆನ್‌ಲೈನ್‌ ಇರಬೇಕು ಅಂತ ಮೊದ್ಲೆ ನಿರ್ಧಾರ ಮಾಡ್ತೀನಿ. ಒಂದುವೇಳೆ ನಿಮಗೆ ಫೋಟೊ ಶೇರಿಂಗ್‌ ಅಕೌಂಟ್‌ ಇರೋದಾದ್ರೆ ಸ್ವನಿಯಂತ್ರಣ ತೋರಿಸಲೇಬೇಕು.”

 ನೀವೇನು ಮಾಡಬಹುದು?

  •   ಅಶ್ಲೀಲ ಫೋಟೊಗಳನ್ನ ನೋಡಬೇಡಿ. ಈ ವಿಚಾರದ ಬಗ್ಗೆ ಬೈಬಲ್‌ ಹೀಗೆ ಹೇಳುತ್ತೆ: “ಪ್ರಯೋಜನಕ್ಕೆ ಬಾರದ ಯಾವದನ್ನೂ ನಾನು ಕಣ್ಮುಂದೆ ಇಟ್ಕೊಳ್ಳಲ್ಲ.”—ಕೀರ್ತನೆ 101:3.

     “ನಾನು ನನ್ನ ಸ್ನೇಹಿತರ ಪೋಸ್ಟ್‌ಗಳನ್ನ ಆಗಾಗ ನೋಡ್ತಾ ಇರ್ತಿನಿ. ಒಂದುವೇಳೆ ಅವರು ನನಗೆ ಇಷ್ಟ ಇಲ್ಲದೇ ಇರೋದನ್ನ ಪೋಸ್ಟ್‌ ಮಾಡಿದ್ರೆ ಆಗ ಅವರನ್ನ ನನ್ನ ಸ್ನೇಹಿತರ ಲಿಸ್ಟ್‌ನಿಂದ ತೆಗೆದು ಹಾಕ್ತೀನಿ.” —ಸ್ಟೀವನ್‌.

  •   ಯಾರ ಆಚಾರ ವಿಚಾರ ನಿಮ್ಮ ತರ ಇರಲ್ವೋ ಅವರ ಸಹವಾಸ ಬಿಟ್ಟುಬಿಡಿ. ಯಾಕಂದ್ರೆ ಅವರ ಕೆಟ್ಟ ಪ್ರಭಾವ ನಿಮ್ಮ ಮೇಲೆ ಪರಿಣಾಮ ಬೀರಬಹುದು. ಅದಕ್ಕೆ ಬೈಬಲ್‌ ಹೀಗೆ ಹೇಳುತ್ತೆ: “ಮೋಸ ಹೋಗಬೇಡಿ. ಕೆಟ್ಟ ಸಹವಾಸ ಒಳ್ಳೇ ನೈತಿಕ ಮೌಲ್ಯಗಳನ್ನ ಹಾಳು ಮಾಡುತ್ತೆ.”—1 ಕೊರಿಂಥ 15:33, ಪಾದಟಿಪ್ಪಣಿ.

     “ಎಲ್ರೂ ಫೋಟೊಗಳನ್ನ ಶೇರ್‌ ಮಾಡ್ತಾರೆ ಅಂತ ನೀವು ಮಾಡೋಕೆ ಹೋಗಬೇಡಿ. ಇದ್ರಿಂದ ಸಮಸ್ಯೆಗೆ ಸಿಕ್ಕಿ ಹಾಕಿಕೊಳ್ಳಬಹುದು. ಕೆಟ್ಟ ಮಾತು ಮಾತಾಡೋಕೆ, ಅಶ್ಲೀಲ ಚಿತ್ರ ನೋಡೋಕೆ ಅಥವಾ ಬೇರೆ ತಪ್ಪಾದ ಕೆಲಸ ಮಾಡೋಕೆ ಇದು ಕುಮ್ಮಕ್ಕು ಕೊಡುತ್ತೆ.”—ಜಸ್ಸಿಕಾ.

  •   ಆನ್‌ಲೈನ್‌ನಲ್ಲಿ ಎಷ್ಟು ಸಮಯ ಕಳಿಬೇಕು, ಎಷ್ಟು ಸಲ ಫೋಟೊ ಹಾಕಬೇಕು ಅಂತ ಮೊದ್ಲೇ ನಿರ್ಧಾರ ಮಾಡಿ. ಬೈಬಲ್‌ ಹೇಳೋದು, “ನೀವು ಹೇಗೆ ನಡ್ಕೊಳ್ತಿದ್ದೀರ ಅಂತ ಚೆನ್ನಾಗಿ ಗಮನಿಸಿ. ಬುದ್ಧಿ ಇಲ್ಲದವ್ರ ತರ ಅಲ್ಲ, ಬುದ್ಧಿ ಇರುವವ್ರ ತರ ನಡ್ಕೊಳ್ಳಿ . . . ಮುಖ್ಯವಾದ ವಿಷ್ಯಕ್ಕೆ ಸಮಯ ಕೊಡಿ.”—ಎಫೆಸ 5:15, 16.

     “ಒಂದೇ ಫೋಟೊನ ಪದೇ ಪದೇ ಪೋಸ್ಟ್‌ ಮಾಡೋರ ಪೋಸ್ಟ್‌ಗಳನ್ನ ನಾನು ನೋಡೋಕೆ ಹೋಗಲ್ಲ. ಉದಾಹರಣೆಗೆ ಒಬ್ಬರು ಬೀಚ್‌ಗೆ ಹೋಗಿ ಒಂದು ಕಪ್ಪೆಚಿಪ್ಪಿನ ಇಪ್ಪತ್ತು ಫೋಟೊ ಹಾಕಿದ್ರೆ ನಾನು ಅದನ್ನ ನೋಡ್ತಾ ಇದ್ರೆ ನನ್ನ ಸಮಯ ವ್ಯರ್ಥ ಆಗುತ್ತೆ. ಅಂಥವರ ಪೋಸ್ಟನ್ನ ನೋಡೋಕೆ ಹೋಗಲ್ಲ.”—ರೆಬೆಕ್ಕ.

  •   ಯಾವಾಗ್ಲೂ ನಿಮ್ಮ ಫೋಟೊಗಳನ್ನೇ ಪೋಸ್ಟ್‌ ಮಾಡ್ತಾ ಇರಬೇಡಿ. ಬೈಬಲ್‌ ಬರಹಗಾರನಾದ ಪೌಲ ಹೇಳಿದ್ದು: “ನಾನು ನಿಮ್ಮೆಲ್ಲರಿಗೆ ಹೇಳೋದು ಏನಂದ್ರೆ, ನೀವು ನಿಮ್ಮನ್ನೇ ಮೇಲೆ ಏರಿಸ್ಕೊಬೇಡಿ.” (ರೋಮನ್ನರಿಗೆ 12:3) ನಿಮ್ಮ ಸ್ನೇಹಿತರು ನಿಮ್ಮ ಬಗ್ಗೆ ತಿಳಿದುಕೊಳ್ಳೋಕೆ, ನಿಮ್ಮನ್ನ ನೋಡೋಕೆ ಕಾಯ್ತಾ ಇರ್ತಾರೆ ಅಂತ ಅಂದ್ಕೊಬೇಡಿ.

     “ಕೆಲವರು ಒಂದಾದ ಮೇಲೆ ಒಂದು ಸೆಲ್ಫಿಗಳನ್ನ ಪೋಸ್ಟ್‌ ಮಾಡ್ತಾನೆ ಇರ್ತಾರೆ. ನಂಗೆ ಒಂದು ಫ್ರೆಂಡ್‌ ಇದ್ರೆ ಅವಳು ನೋಡೋಕೆ ಹೇಗಿದ್ದಾಳೆ ಅಂತ ನನಗೆ ಚೆನ್ನಾಗಿ ಗೊತ್ತಿರುತ್ತೆ, ಅಂದ್ಮೇಲೆ ಅಷ್ಟೊಂದು ಸೆಲ್ಫಿ ಹಾಕಿ ಜ್ಞಾಪಿಸೋ ಅವಶ್ಯಕತೆ ಇಲ್ಲ.”—ಆಲಿಸನ್‌.