ಮಾಹಿತಿ ಇರುವಲ್ಲಿ ಹೋಗಲು

ಯುವಜನರ ಪ್ರಶ್ನೆಗಳು

ಚೆಲ್ಲಾಟ ಆಡೋದು (Flirting) ಸರೀನಾ?

ಚೆಲ್ಲಾಟ ಆಡೋದು (Flirting) ಸರೀನಾ?

 ಚೆಲ್ಲಾಟ ಆಡೋದು ಅಂದ್ರೇನು?

 ಚೆಲ್ಲಾಟ ಆಡೋದು ಅಂದ್ರೆ ವಿರುದ್ಧ ಲಿಂಗದ ವ್ಯಕ್ತಿಯ ಬಗ್ಗೆ ನಿಮ್ಮಲ್ಲಿ ಪ್ರೀತಿ ಪ್ರೇಮ ಅನ್ನೋ ಭಾವನೆಗಳಿದ್ದು ಅದನ್ನ ನಿಮ್ಮ ಮಾತು ಅಥವಾ ನಡವಳಿಕೆಯಲ್ಲಿ ತೋರಿಸೋದಾಗಿದೆ ಅಂತ ಕೆಲವರು ಹೇಳ್ತಾರೆ. ಹಾಗಾದ್ರೆ ಪ್ರೀತಿ ಪ್ರೇಮ ಅನ್ನೋ ಭಾವನೆಯಲ್ಲಿ ಬಿದ್ದು ಯಾರ ಮೇಲಾದ್ರೂ ಆಸಕ್ತಿ ತೋರಿಸೋದು ತಪ್ಪಾ? ಹಾಗಂತ ಏನಿಲ್ಲ. “ಡೇಟಿಂಗ್‌ ಮಾಡೋಕೆ ಸಿದ್ಧರಾಗಿದ್ದು ಯಾರನ್ನಾದರೂ ಇಷ್ಟಪಡ್ತಿರೋದಾದರೆ ನಮಗೆ ಅವರ ಮೇಲೆ ಆಸಕ್ತಿ ಇರೋ ತರಾನೇ ಅವರಿಗೂ ನಮ್ಮ ಮೇಲೆ ಆಸಕ್ತಿ ಇದೆಯಾ ಅಂತ ತಿಳ್ಕೊಳ್ಳೋಕೆ ಚೆಲ್ಲಾಟ ಆಡಬೇಕಲ್ವಾ?” ಅಂತ ಆ್ಯನ್‌ ಅನ್ನೋ ಹುಡುಗಿ ಹೇಳ್ತಾಳೆ.

 ಈ ಲೇಖನದಲ್ಲಿ, ಚೆಲ್ಲಾಟ ಅಂತ ಹೇಳುವಾಗ ಮದುವೆ ಆಗೋ ಉದ್ದೇಶ ಇಲ್ಲದೆ ಕೇವಲ ಒಬ್ಬ ವ್ಯಕ್ತಿಯ ಭಾವನೆಗಳ ಜೊತೆ ಆಟ ಆಡೋದರ ಬಗ್ಗೆ ನೋಡ್ತೀವಿ.

 “ನೀವು ಯಾರನ್ನಾದರೂ ನಿಮ್ಮ ಜೀವನ ಸಂಗಾತಿಯನ್ನಾಗಿ ಮಾಡಿಕೊಳ್ಳಲು ಯೋಚಿಸುತ್ತಿರುವಾಗ, ಅವನ ಬಗ್ಗೆ ವಿಶೇಷ ಗಮನ ಹರಿಸೋದು ಸರಿನೇ. ಆದರೆ ಮನಸಲ್ಲಿ ಆಸೆ ಹುಟ್ಟಿಸಿ ಆಮೇಲೆ ಒಂದಿನ ನನಗೆ ಅಂತ ಯೋಚನೇನೆ ಇರಲಿಲ್ಲ ಅಂತ ಹೇಳಿ ಬಿಟ್ಟುಬಿಡೋದು ಸರಿಯಲ್ಲ.”—ಡಿಯಾನಾ.

 ಕೆಲವರು ಯಾಕೆ ಹೀಗೆ ಮಾಡ್ತಾರೆ?

 ಕೆಲವರು ತಮ್ಮ ಆತ್ಮವಿಶ್ವಾಸವನ್ನ ಹೆಚ್ಚಿಸಿಕೊಳ್ಳೋಕೆ ಚೆಲ್ಲಾಟ ಆಡ್ತಾರೆ. ”‏ಜನರು ಅವರಕಡೆ ನೋಡ್ತಾರೆ, ಆಕರ್ಷಿತರಾಗುತ್ತಾರೆ ಅಂತ ಕೆಲವರಿಗೆ ಗೊತ್ತಾದಾಗ, ಅದರಿಂದ ಮಜಾ ಪಡೀತಾ ಇನ್ನೂ ಹೆಚ್ಚಿನ ಜನರು ತಮ್ಮ ಕಡೆಗೆ ಗಮನ ಕೊಡಬೇಕಂತ ಚೆಲ್ಲಾಟ ಆಡ್ತಾರೆ”‏ ಅಂತ ಹ್ಯಾಲಿ ಅನ್ನೋ ಹುಡುಗಿ ಹೇಳ್ತಾಳೆ.

 ಒಬ್ಬ ವ್ಯಕ್ತಿಯ ಮೇಲೆ ನಿಮಗೆ ನಿಜವಾಗಲೂ ಯಾವ ಅಸಕ್ತಿ ಇಲ್ಲದೆ ಇದ್ದರೂ ಬೇಕುಬೇಕಂತಾನೇ ನಿಮಗೆ ಅವರ ಮೇಲೆ ಆಸಕ್ತಿ ಇದೆ ಅನ್ನೋ ಅಭಿಪ್ರಾಯ ಬರೋ ತರ ನಡ್ಕೊಂಡರೆ, ನೀವು ಆ ವ್ಯಕ್ತಿಯ ಭಾವನೆಗಳಿಗೆ ಬೆಲೆ ಕೊಡದೆ ಆಟ ಆಡ್ತಾ ಇರೋ ಹಾಗೆ ಇರುತ್ತೆ. ಹೀಗೆ ಮಾಡಿದರೆ ಜನ ನಿಮ್ಮ ವ್ಯಕ್ತಿತ್ವನ ಪ್ರಶ್ನಿಸ್ತಾರೆ. ಇದರ ಬಗ್ಗೆ ಬೈಬಲ್‌ ಹೀಗೆ ಹೇಳುತ್ತೆ: “ಬುದ್ಧಿ ಇಲ್ಲದವನಿಗೆ ಮೂರ್ಖತನದಿಂದ ಸಂತೋಷ ಸಿಗುತ್ತೆ.”—ಜ್ಞಾನೋಕ್ತಿ 15:21.

 ಹ್ಯಾಲಿ ತನ್ನ ಮಾತನ್ನ ಮುಂದುವರಿಸ್ತಾ ಹೀಗೆ ಹೇಳ್ತಾಳೆ, “ಆರಂಭದಲ್ಲಿ ಚೆಲ್ಲಾಟ ಆಡೋದ್ರಲ್ಲಿ ತಪ್ಪೇನಿಲ್ಲ ಅನಿಸಬಹುದು ಆದರೆ ಕೊನೆಯಲ್ಲಿ ಅದರ ಪರಿಣಾಮ ಅಪಾಯಕಾರಿಯಾಗಿರುತ್ತೆ.”

 ಅದರಿಂದ ಏನಾದರೂ ಅಪಾಯ ಇದೆಯಾ?

  •   ಚೆಲ್ಲಾಟ ಆಡೋದ್ರಿಂದ ನಿಮ್ಮ ಹೆಸರು ಹಾಳಾಗುತ್ತೆ.

     “ಜನ ಚೆಲ್ಲಾಟವಾಡುವವರನ್ನ ಆತ್ಮವಿಶ್ವಾಸ ಕಮ್ಮಿ ಇರೋರು, ಹುಡುಗಾಟ ಆಡೋರು ಅಂತ ಹೇಳ್ತಾರೆ. ಅವಳಿಗೆ ನಿಮ್ಮ ಮೇಲೆ ಯಾವುದೇ ಆಸಕ್ತಿಯಿರಲ್ಲ, ನಿಮ್ಮಿಂದ ಏನಾದ್ರೂ ಸಿಗುತ್ತೆ ಅನ್ನೋ ಕಾರಣಕ್ಕೆ ನಿಮ್ಮ ಜೊತೆ ಇದ್ದಾಳೆ ಅಂತ ಗೊತ್ತಾಗುತ್ತೆ.”—ಜೆರೆಮಿ.

     ಬೈಬಲ್‌ ಹೀಗೆ ಹೇಳುತ್ತೆ: “ಪ್ರೀತಿ ಇರುವವನು . . . ಸ್ವಾರ್ಥಿಯಾಗಿರಲ್ಲ.”—1 ಕೊರಿಂಥ 13:4, 5.

     ಇದರ ಬಗ್ಗೆ ಯೋಚಿಸಿ: ನಿಮ್ಮ ಯಾವ ಮಾತು ಹಾಗೂ ನಡವಳಿಕೆ ಜನರು ನಿಮ್ಮನ್ನ ಒಬ್ಬ ಚೆಲ್ಲಾಟ ಆಡೋ ವ್ಯಕ್ತಿ ಅಂತ ನೋಡೋ ತರ ಮಾಡಬಹುದು?

  •   ನೀವು ಯಾರ ಜೊತೆ ಚೆಲ್ಲಾಟ ಆಡ್ತೀರೋ ಅವರ ಮನಸ್ಸನ್ನ ನೋಯಿಸ್ತೀರ.

     “ಯಾರು ಚೆಲ್ಲಾಟ ಆಡ್ತಾರೋ ಅಂಥವರ ಹತ್ತಿರ ಇರೋಕೂ ನನಗೆ ಇಷ್ಟ ಆಗಲ್ಲ. ನಾನು ಹುಡುಗಿ ಅನ್ನೋ ಕಾರಣಕ್ಕೆ ಮಾತ್ರ ನನ್ನ ಹತ್ತಿರ ಮಾತಾಡ್ತಿದ್ದಾನೆ ಅಂತ ನನಗೆ ಅನಿಸುತ್ತೆ. ಯಾರು ಚೆಲ್ಲಾಟ ಆಡ್ತಾರೋ ಅವರು ನನ್ನ ಬಗ್ಗೆ ಯೋಚಿಸಲ್ಲ, ಅವರು ಖುಷಿಯಾಗಿರೋದರ ಬಗ್ಗೆ ಮಾತ್ರ ಯೋಚಿಸ್ತಾರೆ.”—ಜಾಕ್ಲಿನ್‌.

     ಬೈಬಲ್‌ ಹೀಗೆ ಹೇಳುತ್ತೆ: “ಪ್ರತಿಯೊಬ್ಬನು ಯಾವಾಗ್ಲೂ ಬರೀ ತನಗೆ ಪ್ರಯೋಜನ ಆಗುತ್ತಾ ಅಂತ ಅಲ್ಲ, ಬೇರೆಯವ್ರಿಗೂ ಪ್ರಯೋಜನ ಆಗುತ್ತಾ ಅಂತ ಯೋಚಿಸಲಿ.”—1  ಕೊರಿಂಥ 10:24.

     ಇದರ ಬಗ್ಗೆ ಯೋಚಿಸಿ: ಒಬ್ಬ ವ್ಯಕ್ತಿಯ ನಡವಳಿಕೆ ಅವರಿಗೆ ನಿಮ್ಮ ಮೇಲೆ ಪ್ರೀತಿ ಪ್ರೇಮ ಅನ್ನೋ ಭಾವನೆಗಳಿದೆ ಅಂತ ನಿಮಗೆ ಅನಿಸೋ ತರ ಇದ್ದು ಅಮೇಲೆ ಅವರಿಗೆ ನಿಮ್ಮ ಬಗ್ಗೆ ಅಂತ ಯಾವುದೇ ಭಾವನೆಗಳಿರಲಿಲ್ಲ ಅಂತ ಗೊತ್ತಾದಾಗ ನಿಮಗೆ ಹೇಗನಿಸುತ್ತೆ? ಅದೇ ತರ ನೀವು ಬೇರೆಯವರಿಗೆ ನೋವಾಗೋ ತರ ನಡ್ಕೊಳ್ಳದೇ ಇರೋಕೆ ಏನು ಮಾಡಬಹುದು?

  •   ಚೆಲ್ಲಾಟ ಆಡೋದ್ರಿಂದ ನಿಮಗೆ ನಿಜ ಪ್ರೀತಿಯನ್ನ ಕಂಡುಕೊಳ್ಳೋಕೆ ಕಷ್ಟವಾಗಬಹುದು.

     “ಚೆಲ್ಲಾಟ ಆಡೋ ವ್ಯಕ್ತಿ ಜೊತೆ ಮದುವೆ ಆಗೋದೇನು, ಡೇಟಿಂಗ್‌ ಮಾಡೋಕೂ ಇಷ್ಟ ಆಗಲ್ಲ. ನನ್ನ ಮೇಲೆ ಪ್ರೀತಿ ಇದೆ ಅಂತ ನಾಟಕ ಆಡೋರನ್ನ ಹೇಗೆ ಸರಿಯಾಗಿ ಅರ್ಥಮಾಡಿಕೊಳ್ಳೋಕಾಗುತ್ತೆ, ಹೇಗೆ ತಾನೇ ನಂಬೋಕಾಗುತ್ತೆ?”—ಒಲಿವಿಯ.

     ಕೀರ್ತನೆಗಾರನಾದ ದಾವೀದ ಬೈಬಲಿನಲ್ಲಿ ಹೀಗೆ ಹೇಳ್ತಾನೆ: “ತಮ್ಮ ನಿಜ ಸ್ವರೂಪವನ್ನ ಮುಚ್ಚಿಡೋರಿಂದ ನಾನು ದೂರ ಇರ್ತಿನಿ.”—ಕೀರ್ತನೆ 26:4.

     ಇದರ ಬಗ್ಗೆ ಯೋಚಿಸಿ: ಚೆಲ್ಲಾಟ ಆಡೋ ವ್ಯಕ್ತಿನ ಯಾರು ಇಷ್ಟ ಪಡ್ತಾರೆ? ಒಬ್ಬ ಚೆಲ್ಲಾಟ ಆಡೋ ವ್ಯಕ್ತಿ ನಿಮ್ಮನ್ನ ಇಷ್ಟ ಪಡ್ಬೇಕಂತ ನೀವು ಬಯಸ್ತೀರಾ?