ಮಾಹಿತಿ ಇರುವಲ್ಲಿ ಹೋಗಲು

ನಾನು ಅಶ್ಲೀಲ ಚಿತ್ರ ನೋಡೋ ಚಟಕ್ಕೆ ಬಿದ್ದಿದ್ರೆ ಏನು ಮಾಡಬೇಕು?

ನಾನು ಅಶ್ಲೀಲ ಚಿತ್ರ ನೋಡೋ ಚಟಕ್ಕೆ ಬಿದ್ದಿದ್ರೆ ಏನು ಮಾಡಬೇಕು?

ನೀವೇನು ಮಾಡಬಹುದು?

 ಅಶ್ಲೀಲ ಚಿತ್ರದ ಉದ್ದೇಶ ಏನು ಅಂತ ಅರ್ಥ ಮಾಡ್ಕೊಳ್ಳಿ. ದೇವರು ಯಾವುದನ್ನ ಗೌರವಿಸಬೇಕು ಅಂತ ಹೇಳಿದ್ದಾನೋ ಅದನ್ನ ಅವಮಾನಿಸೋ ತರ ಈ ಅಶ್ಲೀಲ ಚಿತ್ರ ನಮಗೆ ಕುಮ್ಮಕ್ಕು ಕೊಡುತ್ತೆ. ಇದನ್ನ ನಾವು ತಿಳ್ಕೊಂಡ್ರೆ “ಕೆಟ್ಟದ್ದನ್ನ ದ್ವೇಷಿಸೋಕೆ” ಸಹಾಯ ಆಗುತ್ತೆ.—ಕೀರ್ತನೆ 97:10.

 ಇದರಿಂದ ಆಗೋ ಪರಿಣಾಮಗಳ ಬಗ್ಗೆ ಯೋಚನೆ ಮಾಡಿ. ಅಶ್ಲೀಲ ಚಿತ್ರಗಳಿಂದ ಅದ್ರಲ್ಲಿರೋ ವ್ಯಕ್ತಿಗಳ ಮರ್ಯಾದೆ ಹಾಳಾಗುತ್ತೆ. ಅಷ್ಟೇ ಅಲ್ಲ, ಇದನ್ನ ನೋಡೋ ವ್ಯಕ್ತಿಗಳನ್ನೂ ಜನ ಕೀಳಾಗಿ ನೋಡ್ತಾರೆ. ಅದಕ್ಕೆ ಬೈಬಲ್‌ ಹೀಗೆ ಸಲಹೆ ಕೊಡುತ್ತೆ: “ಜಾಣ ಅಪಾಯ ನೋಡಿ ಅಡಗಿಕೊಳ್ತಾನೆ, ಅನುಭವ ಇಲ್ಲದವನು ಮುಂದೆ ಹೋಗಿ ನಷ್ಟ ಅನುಭವಿಸ್ತಾನೆ.”—ಜ್ಞಾನೋಕ್ತಿ 22:3.

 ದೃಢ ತೀರ್ಮಾನ ಮಾಡಿ. ದೇವರ ನಂಬಿಗಸ್ತ ಸೇವಕನಾದ ಯೋಬ “ನಾನು ಯಾವ ಹೆಣ್ಣನ್ನೂ ಕೆಟ್ಟ ದೃಷ್ಟಿಯಿಂದ ನೋಡಲ್ಲ ಅಂತ ದೃಢನಿರ್ಧಾರ ಮಾಡಿದ್ದೀನಿ” ಅಂತ ಹೇಳಿದ. (ಯೋಬ 31:1) ನೀವು ಕೂಡ ಈ ಮುಂದೆ ಕೊಟ್ಟಿರೋ ಕೆಲವು ವಿಷಯಗಳ ಬಗ್ಗೆ ದೃಢ ತೀರ್ಮಾನ ಮಾಡಿ:

  •  ನಾನು ಒಬ್ಬನೇ ಇರುವಾಗ ಇಂಟರ್‌ನೆಟ್‌ನ ಬಳಸಲ್ಲ.

  •  ನನ್ನ ಕಂಪ್ಯೂಟರ್‌ನಲ್ಲಿ ಇದ್ದಕ್ಕಿದ್ದಂತೆ ಏನಾದ್ರೂ ಅಶ್ಲೀಲ ವಿಷ್ಯ ಕಾಣಿಸಿಕೊಂಡ್ರೆ ತಕ್ಷಣ ಅದನ್ನ ಆಫ್‌ ಮಾಡ್ತೀನಿ.

  •  ಒಂದುವೇಳೆ ಅಶ್ಲೀಲ ಚಿತ್ರ ನೋಡೋ ಚಟ ಇದ್ರೆ ದೊಡ್ಡವರ ಹತ್ರ ಇದ್ರ ಬಗ್ಗೆ ಮಾತಾಡ್ತೀನಿ.

ನೀವು ಅಶ್ಲೀಲ ಚಿತ್ರವನ್ನ ಎಷ್ಟು ಸಲ ನೋಡ್ತಿರೋ ಅಷ್ಟೇ ಸಮಸ್ಯೆಯಲ್ಲಿ ಸಿಕ್ಕಿ ಹಾಕೊಳ್ತಿರ. ಆಮೇಲೆ ಅದ್ರಿಂದ ಹೊರಗೆ ಬರೋಕೆ ತುಂಬಾ ಕಷ್ಟ ಆಗುತ್ತೆ.

 ಪ್ರಾರ್ಥನೆ ಮಾಡಿ. ಒಬ್ಬ ಬೈಬಲ್‌ ಬರಹಗಾರ ಕೂಡ ಸಹಾಯಕ್ಕಾಗಿ ಹೀಗೆ ಬೇಡಿಕೊಂಡ: “ಅಯೋಗ್ಯ ವಿಷ್ಯಗಳನ್ನ ನೋಡದ ಹಾಗೆ ನನ್ನ ದೃಷ್ಟಿಯನ್ನ ಪಕ್ಕಕ್ಕೆ ತಿರುಗಿಸು.” (ಕೀರ್ತನೆ 119:37) ಈ ವಿಚಾರದಲ್ಲಿ ನೀವು ಯಶಸ್ವಿಯಾಗಬೇಕು ಅನ್ನೋದು ದೇವರ ಇಷ್ಟ. ಅದಕ್ಕೆ ಇದರ ಬಗ್ಗೆ ನೀವು ಪ್ರಾರ್ಥನೆ ಮಾಡಿದ್ರೆ ಸರಿಯಾಗಿರೋದನ್ನ ಮಾಡೋಕೆ ಬೇಕಾದ ಬಲವನ್ನ ಆತನು ಖಂಡಿತ ಕೊಡ್ತಾನೆ.—ಫಿಲಿಪ್ಪಿ 4:13.

 ಯಾರ ಹತ್ರನಾದ್ರೂ ಮಾತಾಡಿ. ಈ ಚಟದಿಂದ ಹೊರಗೆ ಬರೋಕೆ ನೀವು ನಂಬೋ ಒಬ್ಬ ಕ್ಲೋಸ್‌ ಫ್ರೆಂಡ್‌ ಹತ್ರ ಮಾತಾಡಿ.—ಜ್ಞಾನೋಕ್ತಿ 17:17.

 ಒಂದು ವಿಷ್ಯ ನೆನಪಿಟ್ಟುಕೊಳ್ಳಿ: ನೀವು ಪ್ರತಿ ಸಲ ಅಶ್ಲೀಲ ಚಿತ್ರನ ನೋಡದೇ ಇದ್ದಾಗ ಒಂದು ದೊಡ್ಡ ಯುದ್ಧನ ಗೆದ್ದಂತೆ. ಈ ಗೆಲುವಿನ ಬಗ್ಗೆ ಯೆಹೋವನ ಹತ್ರ ಮಾತಾಡಿ. ಇದಕ್ಕೆ ಸಹಾಯ ಮಾಡಿದಕ್ಕೆ ಆತನಿಗೆ ಥ್ಯಾಂಕ್‌ ಹೇಳಿ. ಈ ರೀತಿ ನೀವು ಅಶ್ಲೀಲ ಚಿತ್ರ ನೋಡದೇ ಇದ್ರೆ ಯೆಹೋವನ ಮನಸ್ಸಿಗೆ ಸಂತೋಷ ಆಗುತ್ತೆ.—ಜ್ಞಾನೋಕ್ತಿ 27:11.