ಮಾಹಿತಿ ಇರುವಲ್ಲಿ ಹೋಗಲು

ಯುವಜನರ ಪ್ರಶ್ನೆಗಳು

ಮೆಸೆಜ್‌ ಮಾಡೋದ್ರ ಬಗ್ಗೆ ನಮಗೆ ಏನು ಗೊತ್ತಿರಬೇಕು?

ಮೆಸೆಜ್‌ ಮಾಡೋದ್ರ ಬಗ್ಗೆ ನಮಗೆ ಏನು ಗೊತ್ತಿರಬೇಕು?
  • :-) ಸರಿಯಾಗಿ ಉಪಯೋಗಿಸಿದ್ರೆ ಇದ್ರಿಂದ ಫ್ರೆಂಡ್‌ಶಿಪ್‌ ಚೆನ್ನಾಗಿರುತ್ತೆ.

  • :-( ಸರಿಯಾಗಿ ಉಪಯೋಗಿಸದೇ ಇದ್ರೆ ನಿಮ್ಮ ಫ್ರೆಂಡ್‌ಶಿಪ್‌ ಅಷ್ಟೇ ಅಲ್ಲ ನಿಮ್ಮ ಹೆಸರೂ ಹಾಳಾಗುತ್ತೆ.

ಈ ಲೇಖನದಲ್ಲಿ ಕೆಳಗಿನ ವಿಷಯಗಳ ಬಗ್ಗೆ ತಿಳ್ಕೊಬಹುದು

ಈ ಲೇಖನದಲ್ಲಿ ಇನ್ನೂ ಬೇರೆ ಏನಿದೆ?

 ಯಾರಿಗೆ ಮೆಸೆಜ್‌ ಮಾಡಬೇಕು?

 ತುಂಬಾ ಯುವಜನರು ಬೇರೆಯವರ ಜೊತೆ ಮಾತಾಡೋಕೆ ಮೆಸೆಜ್‌ ಮಾಡೋದು ಬಿಟ್ಟು ಬೇರೆ ದಾರಿನೇ ಇಲ್ಲ ಅಂತ ಅಂದ್ಕೊಂಡಿದ್ದಾರೆ. ಒಂದುವೇಳೆ ನಿಮ್ಮ ಅಪ್ಪ-ಅಮ್ಮ ಏನು ಹೇಳಲ್ಲ ಅಂದ್ರೆ ನಿಮ್ಮ ಪೋನಲ್ಲಿ ಯಾರಾರ ನಂಬರ್‌ ಇದೆಯೊ ಅವ್ರಿಗೆಲ್ಲಾ ಮೆಸೆಜ್‌ ಮಾಡ್ತಾ, ಮಾತಾಡ್ತಾ ಇರಬಹುದು.

 “ನಾನೂ ನನ್ನ ತಂಗಿ ಹುಡುಗರ ಜೊತೆ ಮಾತಾಡೋದು ನಮ್ಮ ಅಪ್ಪನಿಗೆ ಇಷ್ಟ ಇಲ್ಲ. ಒಂದುವೇಳೆ ಮಾತಾಡಲೇ ಬೇಕಂದ್ರೆ ಲ್ಯಾಂಡ್‌ಲೈನ್‌ನಿಂದ ಹಾಲ್‌ನಲ್ಲಿ ಎಲ್ಲರ ಮುಂದೆ ಮಾತಾಡಬೇಕು.”—ಲೆನೊರಾ.

 ನಿಮಗೆ ಏನು ಗೊತ್ತಿರಬೇಕು: ಸಿಕ್ಕಸಿಕ್ಕವರಿಗೆ ನಿಮ್ಮ ಫೋನ್‌ ನಂಬರ್‌ ಕೊಟ್ರೆ ಖಂಡಿತ ಸಮಸ್ಯೆಯಲ್ಲಿ ಸಿಕ್ಕಿ ಹಾಕೊಳ್ತಿರ.

 “ಗುರುತು ಪರಿಚಯ ಇಲ್ಲದವರಿಗೆ ನಂಬರ್‌ ಕೊಟ್ರೆ ಅವರು ನಮಗೆ ಬೇಡವಾಗಿರೋ ಫೋಟೊಗಳನ್ನ, ಮೆಸೆಜ್‌ಗಳನ್ನ ಕಳಿಸ್ತಿರ್ತಾರೆ.”—ಸ್ಕೊಟ್‌.

 “ವಿರುದ್ದ ಲಿಂಗದವರಿಗೆ ಯಾವಾಗ್ಲೂ ಮೆಸೆಜ್‌ ಮಾಡ್ತಾ ಇದ್ರೆ ನೀವು ಭಾವನಾತ್ಮಕವಾಗಿ ಅವರಿಗೆ ಹತ್ರ ಆಗಿಬಿಡ್ತಿರ.”—ಸ್ಟೀವನ್‌.

 ಬೈಬಲ್‌ ಹೇಳೋ ಮಾತು: “ಜಾಣ ಅಪಾಯ ನೋಡಿ ಅಡಗಿಕೊಳ್ತಾನೆ. ಅನುಭವ ಇಲ್ಲದವನು ಮುಂದೆ ಹೋಗಿ ನಷ್ಟ ಅನುಭವಿಸ್ತಾನೆ.” (ಜ್ಞಾನೋಕ್ತಿ 22:3) ನೀವು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನ ತಗೊಂಡ್ರೆ ಸಮಸ್ಯೆಗಳಿಗೆ ಸಿಕ್ಕಿ ಒದ್ದಾಡೋ ಪರಿಸ್ಥಿತಿ ಬರಲ್ಲ.

 ನೈಜ ಘಟನೆ: “ನಾನು ಮತ್ತೆ ಒಬ್ಬ ಹುಡುಗ ಒಬ್ಬರಿಗೊಬ್ಬರು ಯಾವಾಗ್ಲೂ ಮೆಸೆಜ್‌ ಮಾಡ್ತಾ ಇದ್ವಿ. ನಾವಿಬ್ಬರೂ ಬರೀ ಫ್ರೆಂಡ್ಸ್‌ ಅಷ್ಟೇ ಅಂತ ಅಂದ್ಕೊಂಡಿದ್ದೆ. ಆದ್ರೆ ಒಂದಿನ ಅವನು ನನ್ನ ಇಷ್ಟಪಡ್ತಿದ್ದಾನೆ ಅಂತ ಹೇಳಿದಾಗಲೇ ಇದ್ರಿಂದ ಎಷ್ಟು ದೊಡ್ಡ ಸಮಸ್ಯೆಯಾಗಿದೆ ಅಂತ ನಂಗೆ ಅರ್ಥ ಆಗಿದ್ದು. ಅವನ ಜೊತೆ ಜಾಸ್ತಿ ಸಮಯ ಕಳೆದಿದ್ದು ಮತ್ತೆ ಜಾಸ್ತಿ ಮೆಸೆಜ್‌ ಮಾಡಿದ್ದೇ ಇದಕ್ಕೆ ಕಾರಣ ಅಂತ ಆಮೇಲೆ ನಂಗೆ ಗೊತ್ತಾಯಿತು.”—ಮೆಲಿಂಡ.

 ಸ್ವಲ್ಪ ಯೋಚ್ನೆ ಮಾಡಿ: ಆ ಹುಡುಗ ಹಾಗೆ ಹೇಳಿದ ಮೇಲೆ ಮೆಲಿಂಡ ಮತ್ತು ಆ ಹುಡುಗನ ಮಧ್ಯೆ ಇದ್ದ ಫ್ರೆಂಡ್‌ಶಿಪ್‌ ಏನಾಗಿರಬಹುದು?

 ಕಥೆನ ಬದಲಾಯಿಸಿ! ಆ ಹುಡುಗನಿಗೆ ಈ ತರ ಭಾವನೆ ಬರದೆ, ಅವರಿಬ್ಬರೂ ಬರೀ ಫ್ರೆಂಡ್‌ ಆಗೇ ಇರಬೇಕಂದಿದ್ರೆ ಮೆಲಿಂಡ ಏನ್‌ ಮಾಡ್ಬೇಕಿತ್ತು?

 ಏನು ಮೆಸೆಜ್‌ ಮಾಡಬೇಕು?

 ಬೇರೆಯವ್ರಿಗೆ ಮೆಸೆಜ್‌ ಕಳಿಸೋದು, ರಿಪ್ಲೈ ಬಂದಾಗ ಅದನ್ನ ಓದೋದು ಖುಷಿ ಕೊಡುತ್ತೆ ನಿಜ. ಆದ್ರೆ ಕೆಲವು ಸಲ ನಮ್ಮ ಮೆಸೆಜನ್ನ ಬೇರೆಯವರು ತಪ್ಪಾಗಿ ಅರ್ಥ ಮಾಡ್ಕೊಬಹುದು.

 ಇದು ನಿಮಗೆ ಗೊತ್ತಿರಲಿ: ನಮ್ಮ ಮೆಸೆಜಲ್ಲಿರೋ ಪದಗಳನ್ನ ಕೆಲವರು ತಪ್ಪರ್ಥ ಮಾಡ್ಕೊಬಹುದು.

 “ನಮ್ಮ ಮೆಸೆಜ್‌ ಓದೋವ್ರಿಗೆ ನಮ್ಮ ಭಾವನೆ, ಸ್ವರ ಗೊತ್ತಾಗಲ್ಲ. ಎಮೋಜಿ ಕಳಿಸಿದ್ರೂ ಬೇರೆಯವ್ರು ಅದನ್ನ ತಪ್ಪರ್ಥ ಮಾಡ್ಕೊಬಹುದು.”—ಬ್ರಿಯಾನ.

 “ನನಗೆ ಗೊತ್ತಿರೋ ಕೆಲವು ಹುಡುಗಿಯರು ಹುಡುಗರಿಗೆ ಏನೇನೋ ಮೆಸೇಜ್‌ ಮಾಡಿ ಅವ್ರ ಹೆಸರನ್ನ ಹಾಳು ಮಾಡಿಕೊಂಡಿದ್ದಾರೆ. ಜೊತೆಗೆ ಚೆಲ್ಲಾಟ ಆಡೋರು ಅಂತ ಕರೆಸಿಕೊಂಡಿದ್ದಾರೆ.”—ಲಾರ.

 ಬೈಬಲ್‌ ಹೇಳೋ ಮಾತು: “ನೀತಿವಂತನ ಹೃದಯ ಉತ್ತರ ಕೊಡೋ ಮುಂಚೆ ಯೋಚ್ನೆ ಮಾಡುತ್ತೆ.” (ಜ್ಞಾನೋಕ್ತಿ 15:28) ಈ ಮಾತಿಂದ ನಮಗೇನು ಪಾಠ? ಮೆಸೆಜ್‌ ಕಳಿಸೋ ಮೊದ್ಲು ಒಂದು ಸಲ ಓದಬೇಕು.

 ಯಾವಾಗ ಮೆಸೆಜ್‌ ಮಾಡಬೇಕು?

 ಯಾವಾಗ ಮೆಸೆಜ್‌ ಮಾಡ್ಬೇಕು, ಯಾವಾಗ ಮಾಡಬಾರದು ಅಂತ ಯೋಚನೆ ಮಾಡಿ. ಈ ವಿಚಾರದಲ್ಲಿ ಕೆಲವು ನಿಯಮಗಳನ್ನಿಟ್ಟು ಅದರ ಪ್ರಕಾರ ನಡ್ಕೊಳ್ಳಿ.

 ನಿಮಗೆ ಏನು ಗೊತ್ತಿರಬೇಕು: ನೀವು ಸಮಯ ಸಂದರ್ಭ ನೋಡದೆ ಮನ್ಸಿಗೆ ಬಂದಾಗೆಲ್ಲಾ ಮೆಸೆಜ್‌ ಮಾಡ್ತಿದ್ರೆ, ನಿಮ್‌ ಫ್ರೆಂಡ್ಸ್‌ಗೆ ಅದು ಇಷ್ಟ ಆಗದೇ ಅವ್ರು ನಿಮ್ಮಿಂದ ದೂರ ಆಗಬಹುದು.

 “ನಾವು ಮಾಡಿರೋ ರೂಲ್ಸ್‌ನ್ನ ನಾವೇ ಮರೆತುಹೋಗಬಹುದು. ಕೆಲವೊಂದು ಸಲ ನಾನು ಬೇರೆಯವ್ರ ಜೊತೆ ಮಾತಾಡ್ತಿದ್ದಾಗ ಅಥವಾ ಎಲ್ರೂ ಸೇರಿ ಊಟ ಮಾಡ್ತಿದ್ದಾಗ ಬೇರೆಯವ್ರಿಗೆ ಮೆಸೆಜ್‌ ಮಾಡ್ತಾ ಇರ್ತಿದ್ದೆ.”—ಅಲಿಸನ್‌.

 “ಗಾಡಿ ಓಡಿಸ್ತಾ ಮೆಸೆಜ್‌ ಮಾಡೋದು ತುಂಬಾ ಡೇಂಜರ್‌. ಒಂದು ಕ್ಷಣ ನಿಮ್ಮ ಗಮನ ಆಚೆ ಈಚೆ ಹೋದ್ರು ಆಕ್ಸಿಡೆಂಟ್‌ ಆಗಬಹುದು.”—ಆ್ಯನ್‌.

 ಬೈಬಲ್‌ ಹೇಳೋ ಮಾತು: “ಪ್ರತಿಯೊಂದಕ್ಕೂ ಒಂದು ಸಮಯ ಇದೆ . . . ಸುಮ್ಮನಿರೋಕೆ ಒಂದು ಸಮಯ, ಮಾತಾಡೋಕೆ ಒಂದು ಸಮಯ.” (ಪ್ರಸಂಗಿ 3:1, 7) ಈ ವಚನದಿಂದ ಏನು ಗೊತ್ತಾಗುತ್ತೆ ಅಂದ್ರೆ ಮಾತಾಡೋಕೆ ಅಷ್ಟೇ ಅಲ್ಲ, ಮೆಸೆಜ್‌ ಮಾಡೋಕೂ ಒಂದು ಸಮಯ ಇದೆ.

 ಕಿವಿ ಮಾತುಗಳು

ಯಾರಿಗೆ ಮೆಸೆಜ್‌ ಮಾಡಬೇಕು?

  •  ;-) ನಿಮ್ಮ ಅಪ್ಪ ಅಮ್ಮನ ಮಾತು ಕೇಳಿ.—ಕೊಲೊಸ್ಸೆ 3:20.

  •  ;-) ಸಿಕ್ಕಿದವರಿಗೆಲ್ಲಾ ನಂಬರ್‌ ಕೊಡಬೇಡಿ. ಯಾರಾದ್ರೂ ನಿಮ್ಮ ವೈಯಕ್ತಿಕ ವಿಷ್ಯನಾಗಲಿ, ನಿಮ್ಮ ಫೋನ್‌ ನಂಬರ್‌ನಾಗಲಿ ಕೊಡಿ ಅಂತ ಕೇಳಿದಾಗ ‘ಇಲ್ಲ’ ಅಂತ ಅವ್ರಿಗೆ ನೋವಾಗದೇ ಇರೋ ತರ ಹೇಳೋಕೆ ಕಲಿರಿ. ಇದ್ರಿಂದ ಮುಂದೆ ನೀವು ದೊಡ್ಡವರಾದ ಮೇಲೂ ಪ್ರಯೋಜನ ಆಗುತ್ತೆ.

  •  ;-) ಬೇರೆಯವರಿಗೆ ಪ್ರಣಯಾತ್ಮಕ ಮೆಸೆಜ್‌ ಹಾಕಬೇಡಿ. ಯಾಕಂದ್ರೆ ಪ್ರೀತಿ ಪ್ರೇಮ ಅನ್ನೋ ಭಾವನೆಗಳು ಹುಟ್ಟಿಕೊಂಡ್ರೆ ಅದರಿಂದ ತುಂಬಾ ನೋವು ಮತ್ತು ತೊಂದ್ರೆ ಆಗುತ್ತೆ.

 “ಇಲ್ಲಿವರೆಗೂ ನಾನು ಫೋನ್‌ ಸರಿಯಾಗಿ ಉಪಯೋಗಿಸಿದ್ರಿಂದ ಅಪ್ಪ ಅಮ್ಮಗೆ ನನ್ನ ಮೇಲೆ ನಂಬಿಕೆ ಇದೆ. ಬೇರೆಯವರ ನಂಬರ್‌ ತಗೊಳ್ಳೋ ವಿಷಯದಲ್ಲಿ ನಾನು ಸರಿಯಾಗಿ ತೀರ್ಮಾನ ಮಾಡ್ತೀನಿ ಅಂತ ಅವ್ರು ನನ್ನನ್ನ ನಂಬ್ತಾರೆ.”—ಬ್ರಿಯಾನಾ.

ಏನು ಮೆಸೆಜ್‌ ಮಾಡಬೇಕು?

  •  ;-) ಮೆಸೆಜ್‌ ಮಾಡೋಕೂ ಮುಂಚೆ ‘ಈ ವಿಷಯದ ಬಗ್ಗೆ ನಾನು ಮೆಸೆಜ್‌ ಮಾಡಿದ್ರೆ ಚೆನ್ನಾಗಿರುತ್ತಾ?’ ಅಂತ ಕೇಳಿಕೊಳ್ಳಿ. ಯಾಕಂದ್ರೆ ಕೆಲವು ಸಲ ಇದನ್ನ ಫೋನಲ್ಲಿ ಅಥವಾ ನೇರವಾಗಿ ಮಾತಾಡಿದ್ರೆ ಚೆನ್ನಾಗಿರುತ್ತೆ.

  •  ;-) ನೀವು ಒಬ್ಬರಿಗೆ ನೇರವಾಗಿ ಹೇಳೋಕೆ ಹಿಂದೆ ಮುಂದೆ ನೋಡೋ ವಿಷ್ಯನಾ ಮೆಸೆಜ್‌ನಲ್ಲೂ ಹೇಳಬೇಡಿ. “ಒಂದು ವಿಷಯನ ನೀವು ನೇರವಾಗಿ ಹೇಳಲ್ಲ ಅಂದ್ಮೇಲೆ ಅದನ್ನ ಮೆಸೆಜ್‌ನಲ್ಲೂ ಹೇಳಬಾರದು” ಅಂತ 23 ವರ್ಷ ವಯಸ್ಸಿನ ಸಾರಾ ಹೇಳ್ತಾರೆ.

 “ಯಾರಾದ್ರೂ ನಿಮಗೆ ಅಶ್ಲೀಲ ಚಿತ್ರಗಳನ್ನ ಕಳಿಸಿದ್ರೆ ಅದನ್ನ ತಕ್ಷಣ ನಿಮ್ಮ ಅಪ್ಪ ಅಮ್ಮನ ಹತ್ರ ಹೇಳಿ. ಇದರಿಂದ ನಿಮಗೇ ಒಳ್ಳೇದು. ಅಪ್ಪ ಅಮ್ಮನಿಗೂ ನಿಮ್ಮ ಮೇಲೆ ನಂಬಿಕೆ ಬರುತ್ತೆ.”—ಸೀರವಾನ್‌.

ಯಾವಾಗ ಮೆಸೆಜ್‌ ಮಾಡಬೇಕು?

  •  ;-) ಮೊಬೈಲನ್ನ ಯಾವಾಗ ಉಪಯೋಗಿಸಬಾರದು ಅಂತ ಮೊದಲೇ ನಿರ್ಧಾರ ಮಾಡಿ. “ನಾನು ಊಟ ಮಾಡೋವಾಗ, ಮತ್ತೆ ಓದೋವಾಗ ಮೊಬೈಲನ್ನ ಬಳಸಲ್ಲ. ಅಷ್ಟೇ ಅಲ್ಲ, ಕೂಟಗಳಲ್ಲಿ ನಾನು ಮೊಬೈಲನ್ನ ಆಫ್‌ ಮಾಡಿಬಿಡ್ತಿನಿ. ಇದ್ರಿಂದ ಆಗಾಗ ಅದನ್ನ ನೋಡಬೇಕು ಅಂತ ಅನಿಸಲ್ಲ” ಅಂತ ಒಲಿವಿಯಾ ಅನ್ನೋ ಹುಡುಗಿ ಹೇಳ್ತಾಳೆ.

  •  ;-) ಹುಷಾರಾಗಿರಿ. (ಫಿಲಿಪ್ಪಿ 2:4) ನೀವು ಯಾರ ಜೊತೆನಾದ್ರೂ ಮಾತಾಡ್ತಿರೋವಾಗ ಬೇರೆಯವರಿಗೆ ಮೆಸೆಜ್‌ ಮಾಡಬೇಡಿ.

 “ಮೆಸೆಜ್‌ ಮಾಡೋ ವಿಷ್ಯದಲ್ಲಿ ನಾನು ಕೆಲವು ರೂಲ್‌ ಮಾಡ್ಕೊಂಡಿದ್ದೀನಿ. ನಾನು ಫ್ರೆಂಡ್ಸ್‌ ಜೊತೆ ಇರೋವಾಗ ಮೆಸೆಜ್‌ ಮಾಡೋಕೆ ಹೋಗಲ್ಲ. ಏನಾದ್ರೂ ಅರ್ಜಂಟ್‌ ಇದ್ರೆ ಮಾತ್ರ ಮಾಡ್ತೀನಿ. ಯಾರು ನಂಗೆ ಜಾಸ್ತಿ ಕ್ಲೋಸ್‌ ಇರಲ್ವೋ ಅಂಥವ್ರಿಗೆ ನನ್ನ ಫೋನ್‌ ನಂಬರ್‌ ಕೊಡಲ್ಲ.”—ಯಾನೆಲಿ.