ವಾಶಿಂಗ್ ಮಷೀನ್ ಕೆಳಗೆ ಚೀಟಿಗಳು
ಜ಼ರಿನ ದೀಕ್ಷಾಸ್ನಾನ ಪಡೆದು ಯೆಹೋವನ ಸಾಕ್ಷಿಯಾದ ಮೇಲೆ ತನ್ನ ಇಬ್ಬರು ಹೆಣ್ಣುಮಕ್ಕಳನ್ನ ಸತ್ಯದಲ್ಲಿ ಬೆಳೆಸೋಕೆ ತೀರ್ಮಾನ ಮಾಡಿದಳು. ಹಾಗಾಗಿ ಅವಳು ರಷ್ಯಾದಿಂದ ಸೆಂಟ್ರಲ್ ಏಷ್ಯದಲ್ಲಿರೋ ತನ್ನ ಊರಿಗೆ ಹೋದಳು. ಅವಳಿಗೆ ಹಣಕಾಸಿನ ತೊಂದರೆ ಇದ್ದದ್ರಿಂದ ಅವಳು ಅಪ್ಪಅಮ್ಮ, ತಮ್ಮ, ತಮ್ಮನ ಹೆಂಡತಿ ಜೊತೆ ವನ್ ಬೆಡ್‌ರೂಮ್ ಅಪಾರ್ಟ್‌ಮೆಂಟ್‌ನಲ್ಲಿ ಉಳುಕೊಂಡಳು. ಅವಳ ಅಪ್ಪಅಮ್ಮ ಅವಳಿಗೆ ‘ನಿನ್ನ ಹೆಣ್ಣು ಮಕ್ಕಳಿಗೆ ಬೈಬಲ್ ಸತ್ಯ ಕಲಿಸಲೇಬಾರದು’ ಅಂತ ಹೇಳಿದ್ರು. ಅಲ್ಲದೆ ಮಕ್ಕಳಿಗೂ ಅಮ್ಮನ ಹತ್ರ ಬೈಬಲ್ ಬಗ್ಗೆ ಮಾತಾಡಬಾರದು ಅಂತ ಹೇಳಿದ್ರು.
ಮಕ್ಕಳಿಗೆ ಯೆಹೋವನ ಬಗ್ಗೆ ಹೇಗಪ್ಪಾ ಕಲಿಸೋದು ಅಂತ ಜ಼ರಿನ ತುಂಬ ಯೋಚನೆ ಮಾಡಿದಳು. (ಜ್ಞಾನೋಕ್ತಿ 1:8) ಅವಳು ಯೆಹೋವ ದೇವರ ಹತ್ರ ಮಾರ್ಗದರ್ಶನೆ ಮತ್ತು ವಿವೇಚನೆಗಾಗಿ ಕಟ್ಟಾಸಕ್ತಿಯಿಂದ ಪ್ರಾರ್ಥಿಸ್ತಾ ಇದ್ದಳು. ಇದಕ್ಕೆ ತಕ್ಕಂತೆ ಅವಳು ಪ್ರಯತ್ನನೂ ಮಾಡಿದಳು. ಅವಳು ಮಕ್ಕಳನ್ನ ವಾಕಿಂಗ್‌ಗೆ ಕರ್ಕೊಂಡು ಹೋಗಿ ಅವರ ಹತ್ರ ಯೆಹೋವ ದೇವರು ಮಾಡಿದ ಅದ್ಭುತ ಸೃಷ್ಟಿಯ ಬಗ್ಗೆ ಮಾತಾಡ್ತಿದ್ದಳು. ಇದ್ರಿಂದ ಮಕ್ಕಳಿಗೆ ಸೃಷ್ಟಿಕರ್ತನ ಮೇಲೆ ಆಸಕ್ತಿ ಮೂಡಿತು.
ನಂತರ ಜ಼ರಿನ ಮಕ್ಕಳಿಗೆ ಇದ್ದ ಆಸಕ್ತಿಯನ್ನು ಜಾಸ್ತಿ ಮಾಡಲಿಕ್ಕೆ ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? a ಪುಸ್ತಕದಿಂದ ಕಲಿಸಲು ಯೋಚಿಸಿದಳು. ಅವಳು ಪುಸ್ತಕದಲ್ಲಿದ್ದ ಹಾಗೆ ಪ್ಯಾರ ಮತ್ತು ಪ್ರಶ್ನೆಗಳನ್ನ ಚಿಕ್ಕ ಚಿಕ್ಕ ಪೇಪರಲ್ಲಿ ಬರೆದಳು. ಮಕ್ಕಳು ವಿಷ್ಯನ ಚೆನ್ನಾಗಿ ಅರ್ಥಮಾಡಿಕೊಳ್ಳಬೇಕಂತ ಸ್ವಲ್ಪ ವಿವರಿಸಿ ಕೆಲವು ವಾಕ್ಯಗಳನ್ನು ಕೂಡ ಬರೆದಳು. ಆ ಪೇಪರ್‌ಗಳ ಜೊತೆಗೆ ಒಂದು ಪೆನ್ಸಿಲನ್ನು ಬಾತ್‌ರೂಮಲ್ಲಿದ್ದ ವಾಶಿಂಗ್ ಮಷೀನ್ ಕೆಳಗೆ ಇಟ್ಟಳು. ಮಕ್ಕಳು ಬಾತ್‌ರೂಮಿಗೆ ಹೋದಾಗ ಪೇಪರ್‌ಗಳದ್ದ ಪ್ಯಾರಗಳನ್ನ ಓದಿ ಪ್ರಶ್ನೆಗಳಿಗೆ ಉತ್ತರ ಬರೆದಿಡುತ್ತಿದ್ರು.
ಸ್ವಲ್ಪ ದಿನ ಆದ ಮೇಲೆ ಜ಼ರಿನ ಮತ್ತು ಅವಳ ಮಕ್ಕಳು ಬೇರೆ ಮನೆಗೆ ಹೋದ್ರು. ಅಷ್ಟರಲ್ಲಿ ಅವಳು ತನ್ನ ಮಕ್ಕಳಿಗೆ ಬೈಬಲ್ ಬೋಧಿಸುತ್ತದೆ ಪುಸ್ತಕದಿಂದ ಎರಡು ಅಧ್ಯಾಯಗಳನ್ನು ಕಲಿಸಿದ್ದಳು. ಬೇರೆ ಮನೆಯಲ್ಲಿ ಜ಼ರಿನ ಏನೂ ಅಡ್ಡಿ ಇಲ್ಲದೆ ತನ್ನ ಹೆಣ್ಣುಮಕ್ಕಳಿಗೆ ಕಲಿಸಿದಳು. ಅಕ್ಟೋಬರ್ 2016 ರಲ್ಲಿ ಆ ಇಬ್ಬರೂ ಹೆಣ್ಣುಮಕ್ಕಳು ದೀಕ್ಷಾಸ್ನಾನ ತಗೊಂಡ್ರು. ಅಮ್ಮ ಹೇಗೆ ಜಾಣ್ಮೆ ವಿವೇಕದಿಂದ ತಮಗೆ ದೇವರ ಬಗ್ಗೆ ಕಲಿಸಿದ್ರು ಅಂತ ನೆನಸಿ ಆ ಹುಡುಗಿಯರು ತುಂಬ ಖುಷಿಪಡ್ತಾರೆ.
a ಈಗ ಅನೇಕರು ಎಂದೆಂದೂ ಖುಷಿಯಾಗಿ ಬಾಳೋಣ! ಅನ್ನೋ ಪುಸ್ತಕವನ್ನ ಉಪಯೋಗಿಸ್ತಾರೆ.