ಮಾಹಿತಿ ಇರುವಲ್ಲಿ ಹೋಗಲು

ಬದುಕು ಬದಲಾದ ವಿಧ

ಶ್ರೀಮಂತನಾದೆ, ಆದ್ರೆ ದುಡ್ಡಿಂದ ಅಲ್ಲ

ಶ್ರೀಮಂತನಾದೆ, ಆದ್ರೆ ದುಡ್ಡಿಂದ ಅಲ್ಲ
  • ಜನನ: 1968

  • ದೇಶ: ಅಮೆರಿಕ

  • ಹಿಂದೆ: ಶ್ರೀಮಂತನಾಗಲು ಪ್ರಾರ್ಥಿಸಿದ ಬ್ಯೂಸಿನಸ್‌ ಎಕ್ಸಿಕ್ಯೂಟಿವ್‌

ಹಿನ್ನೆಲೆ

 ನನ್ನ ಊರು ನ್ಯೂಯಾರ್ಕ್‌ನ ರಾಚೆಸ್ಟರ್‌ ನಗರ. ನಾನೊಬ್ಬ ಕ್ಯಾಥೊಲಿಕ್‌. ನಾನು ಎಂಟು ವಯಸ್ಸಲ್ಲಿ ಇದ್ದಾಗ ನನ್ನ ಅಪ್ಪಅಮ್ಮ ಬೇರೆ ಆದ್ರು. ಅದಕ್ಕೆ ನಾನು ವಾರದ ಐದು ದಿನ ಅಮ್ಮನ ಜೊತೆ ಇರ್ತಿದ್ದೆ. ಅಮ್ಮ ಬಡ ಜನರಿಗಿದ್ದ ಕಾಲೋನಿಯಲ್ಲಿ ವಾಸಿಸ್ತಿದ್ರು. ವಾರದ ಕೊನೆಯಲ್ಲಿ ಅಪ್ಪನ ಜೊತೆ ಇರ್ತಿದ್ದೆ. ಅಪ್ಪನ ಮನೆ ಶ್ರೀಮಂತರು ಇರೋ ಸ್ಥಳದಲ್ಲಿ ಇತ್ತು. ಅಮ್ಮ ಆರು ಮಕ್ಕಳನ್ನ ಬೆಳೆಸೋಕೆ ತುಂಬ ಕಷ್ಟಪಟ್ರು. ಹಾಗಾಗಿ ನಾನು ಶ್ರೀಮಂತನಾದ್ರೆ ನನ್ನ ಕುಟುಂಬಕ್ಕೆ ಸಹಾಯ ಮಾಡಬಹುದು ಅಂತ ನನಗೆ ಅನಿಸ್ತಿತ್ತು. ಚಿಕ್ಕ ವಯಸ್ಸಿಂದ ಇದ್ರ ಬಗ್ಗೆ ನಾನು ಕನಸ್ಸು ಕಾಣ್ತಿದ್ದೆ.

 ಅಪ್ಪನಿಗೆ ನಾನು ಜೀವನದಲ್ಲಿ ಮುಂದೆ ಬರಬೇಕು ಅಂತ ಆಸೆ. ಹಾಗಾಗಿ ಒಂದು ದೊಡ್ಡ ಹೋಟೆಲ್‌ ಮ್ಯಾನೆಜ್‌ಮೆಂಟ್‌ ಸ್ಕೂಲ್‌ನ ನಾನು ನೋಡ್ಕೊಂಡು ಬರಲಿಕ್ಕೆ ಅಪ್ಪ ಏರ್ಪಾಡು ಮಾಡಿದ್ರು. ಅಲ್ಲಿ ಹೋಗಿ ನೋಡಿದಾಗ ತುಂಬ ಇಷ್ಟ ಆಗಿಬಿಡ್ತು. ನಾನು ಅಲ್ಲೇ ಸೇರಿಕೊಂಡೆ. ಶ್ರೀಮಂತನಾಗಿ ಖುಷಿಯಾಗಿ ಇರಬೇಕು ಅಂತ ನಾನು ಮಾಡಿದ ಪ್ರಾರ್ಥನೆಗೆ ದೇವರು ಉತ್ತರ ಕೊಡ್ತಿದ್ದಾನೆ ಅಂತ ಅನಿಸಿತು. ನಾನು ಐದು ವರ್ಷ ಹೋಟೆಲ್‌ ಮ್ಯಾನೆಜ್‌ಮೆಂಟ್‌, ಬ್ಯೂಸಿನಸ್‌ ಲಾ, ಕಾರ್ಪರೇಟ್‌ ಫಿನಾನ್ಸ್‌ ಕೋರ್ಸ್‌ ಮಾಡಿದೆ. ಅದರ ಜೊತೆ ನೆವಾಡದ ಲಾಸ್‌ ವೇಗಸ್‌ ನಗರದಲ್ಲಿರೋ ಕ್ಯಾಸಿನೋ ಹೋಟಲ್‌ನಲ್ಲಿ ಕೆಲಸ ಮಾಡ್ತಿದ್ದೆ.

ದೊಡ್ಡ ದೊಡ್ಡ ಶ್ರೀಮಂತರಿಗೆ ನಾನು ಸಹಾಯ ಮಾಡಬೇಕಿತ್ತು

 22 ವಯಸ್ಸಲ್ಲಿ ನಾನು ಕ್ಯಾಸಿನೋ ಹೋಟಲ್‌ನ ಅಸಿಸ್ಟಂಟ್‌ ವೈಸ್‌ ಪ್ರೆಸಿಂಡೆಂಟ್‌ ಆದೆ. ಬೇಕಾದಷ್ಟು ದುಡ್ಡಿತ್ತು. ಜೀವನದಲ್ಲಿ ಏನೋ ಸಾಧಿಸಿದ್ದೀನಿ ಅಂತ ಅನಿಸ್ತಿತ್ತು. ಬೆಸ್ಟ್‌ ಊಟ ತಿನ್ನುತ್ತಿದ್ದೆ. ತುಂಬ ಕಾಸ್ಟ್ಲಿ ವೈನ್‌, ಲಿಕ್ಕರ್‌ ಕುಡಿತಿದ್ದೆ. ನನ್ನ ಫ್ರೆಂಡ್ಸ್‌ ನನಗೆ “ಪೈಸಾ ಇದ್ರೆ ಪ್ರಪಂಚ ಅಂತ ಮರಿಬೇಡ” ಅನ್ನುತ್ತಿದ್ರು. ಅವರ ಲೆಕ್ಕದಲ್ಲಿ ನಿಜ ಸಂತೋಷ ಸಿಗೋದು ದುಡ್ಡಿಂದಾನೇ.

 ದೊಡ್ಡ ದೊಡ್ಡ ಶ್ರೀಮಂತರು ಲಾಸ್‌ ವೇಗಸ್‌ ನಗರಕ್ಕೆ ಜೂಜು ಆಡಲಿಕ್ಕೆ ಬರ್ತಿದ್ರು. ನಾನು ಅವರಿಗೆ ಸಹಾಯ ಮಾಡಬೇಕಿತ್ತು. ಅವರ ಹತ್ರ ಬೇಕಾದಷ್ಟು ದುಡ್ಡು ಇತ್ತು, ಆದರೆ ಖುಷಿ ಇರಲಿಲ್ಲ. ನನ್ನಲ್ಲೂ ಖುಷಿ ಕಣ್ಮರೆ ಆಗ್ತಿದೆ ಅಂತ ಅನಿಸ್ತು. ನನ್ನ ಹತ್ತಿರ ದುಡ್ಡೇನೋ ಜಾಸ್ತಿ ಆಗ್ತಿತ್ತು. ಆದ್ರೆ ಅದರ ಜೊತೆಗೆ ಚಿಂತೆನೂ ಜಾಸ್ತಿ ಆಯ್ತು. ನಿದ್ದೆನೇ ಬರ್ತಿರಲಿಲ್ಲ. ಆತ್ಮಹತ್ಯೆ ಬಗ್ಗೆನೂ ಯೋಚಿಸಿದೆ. ಜೀವನದಲ್ಲಿ ಜಿಗುಪ್ಸೆ ಹುಟ್ಟಿ ದೇವರ ಹತ್ರ, “ನಿಜ ಸಂತೋಷ ಎಲ್ಲಿ ಸಿಗುತ್ತೆ?” ಅಂತ ಕೇಳ್ತಾ ಇದ್ದೆ.

ಬದುಕನ್ನೇ ಬದಲಾಯಿಸಿತು ಬೈಬಲ್‌

 ಅಷ್ಟು ಹೊತ್ತಿಗಾಗಲೇ ನನ್ನ ಇಬ್ಬರು ಅಕ್ಕಂದಿರು ಲಾಸ್‌ ವೇಗಸ್‌ ನಗರಕ್ಕೇ ಬಂದು ಮನೆ ಮಾಡ್ಕೊಂಡ್ರು. ಅವರು ಯೆಹೋವನ ಸಾಕ್ಷಿಗಳಾಗಿದ್ರು. ಅವರು ಕೊಡೋ ಪ್ರಕಾಶನಗಳನ್ನ ನಾನು ತಗೊಳ್ತಿರಲಿಲ್ಲ. ಆದ್ರೆ ಅವರ ಜೊತೆ ಕೂತು ನನ್ನ ಹತ್ರ ಇದ್ದ ಬೈಬಲ್‌ ಓದುತ್ತಿದ್ದೆ. ನನ್ನ ಬೈಬಲಲ್ಲಿ ಯೇಸುವಿನ ಮಾತುಗಳೆಲ್ಲ ಕೆಂಪು ಬಣ್ಣದಲ್ಲಿತ್ತು. ಯೇಸು ಹೇಳಿದನ್ನೆಲ್ಲ ನಾನು ಒಪ್ತಿದ್ದೆ. ಅದಕ್ಕೆ ನನ್ನ ಅಕ್ಕಂದಿರು ನನ್ನ ಜೊತೆ ಹೆಚ್ಚಾಗಿ ಯೇಸು ಬಗ್ಗೆ ಮಾತಾಡ್ತಿದ್ರು. ಒಬ್ಬನೇ ಇದ್ದಾಗಲೂ ನಾನು ಬೈಬಲ್‌ ಓದುತ್ತಿದ್ದೆ.

 ಬೈಬಲಲ್ಲಿರೋ ತುಂಬ ವಿಷ್ಯ ಓದಿ ಆಶ್ಚರ್ಯ ಆಯ್ತು. ಉದಾಹರಣೆಗೆ, ಮತ್ತಾಯ 6:7 ರಲ್ಲಿರೋ (BSI) ಯೇಸುವಿನ ಮಾತು: “ಪ್ರಾರ್ಥನೆಮಾಡುವಾಗ ಅಜ್ಞಾನಿಗಳ ಹಾಗೆ ಹೇಳಿದ್ದನ್ನೇ ಸುಮ್ಮಸುಮ್ಮನೆ ಹೇಳಬೇಡ; ಅವರು ಬಹಳ ಮಾತುಗಳನ್ನಾಡಿದರೆ ತಮ್ಮ ಪ್ರಾರ್ಥನೆಯನ್ನು ದೇವರು ಕೇಳುತ್ತಾನೆಂದು ನೆನಸುತ್ತಾರೆ.” ಒಂದು ಸಲ ಒಬ್ಬ ಪಾದ್ರಿ ನನಗೆ ಯೇಸುವಿನ ಚಿತ್ರ ಕೊಟ್ಟು ಅದರ ಮುಂದೆ ಪ್ರಾರ್ಥನೆಗಳನ್ನ ಹೇಳ್ತಾ ಇದ್ರೆ ದೇವರು ನಾನು ಕೇಳಿದಷ್ಟು ಹಣ ಕೊಡ್ತಾನೆ ಅಂತ ಹೇಳಿದ್ದ. ಆದ್ರೆ ಆ ವಚನ ಓದಿದ ಮೇಲೆ ನಾನೂ ಹೇಳಿದ್ದನ್ನೇ ಸುಮ್ಮಸುಮ್ಮನೆ ಹೇಳ್ತಿದ್ದಿನೀ ಅಂತ ಅನಿಸ್ತು. ಮತ್ತಾಯ 23:9 ರಲ್ಲಿರೋ ಮಾತು ಕೂಡ ನನ್ನ ಕಣ್ಣಿಗೆ ಬಿತ್ತು: “ಭೂಮಿಯಲ್ಲಿ ಯಾರನ್ನೂ ನಿಮ್ಮ ತಂದೆಯೆಂದು ಕರೆಯಬೇಡಿರಿ; ಏಕೆಂದರೆ ಸ್ವರ್ಗದಲ್ಲಿರುವ ಒಬ್ಬನೇ ನಿಮ್ಮ ತಂದೆಯಾಗಿದ್ದಾನೆ.” ಇದನ್ನ ಓದಿದ ಮೇಲೆ “ನಾನು, ನನ್ನ ಜೊತೆ ಇದ್ದ ಬೇರೆ ಕ್ಯಾಥೊಲಿಕ್ಸ್‌ ನಮ್‌ ಪಾದ್ರಿಗಳನ್ನ ’ಫಾದರ್‌‘ ಅಂತ ಕರಿತೇವಲಾ, ಯಾಕೆ?” ಅಂತ ಯೋಚಿಸಿದೆ.

 ಯಾಕೋಬ ಪುಸ್ತಕ ಓದಿದ ಮೇಲೆ ನಾನು ನನ್ನ ಜೀವನ ಶೈಲಿ ಬಗ್ಗೆ ಆಳವಾಗಿ ಯೋಚಿಸಲು ಶುರುಮಾಡಿದೆ. 4 ನೇ ಅಧ್ಯಾಯದಲ್ಲಿ ಯಾಕೋಬ ಹೀಗೆ ಬರೆದಿದ್ದಾನೆ: “ಲೋಕದೊಂದಿಗೆ ಸ್ನೇಹವು ದೇವರೊಂದಿಗೆ ವೈರತ್ವವಾಗಿದೆ ಎಂಬುದು ನಿಮಗೆ ತಿಳಿಯದೊ? ಆದುದರಿಂದ ಯಾವನಾದರೂ ಲೋಕಕ್ಕೆ ಸ್ನೇಹಿತನಾಗಲು ಬಯಸುವುದಾದರೆ ಅವನು ತನ್ನನ್ನು ದೇವರಿಗೆ ವೈರಿಯನ್ನಾಗಿ ಮಾಡಿಕೊಳ್ಳುತ್ತಾನೆ.” (ಯಾಕೋಬ 4:4) 17 ನೇ ವಚನ ಅಂತೂ ನನ್ನ ಮನಸ್ಸಿಗೆ ನಾಟಿತು. ’ಸರಿಯಾದದ್ದನ್ನು ಮಾಡುವುದು ಹೇಗೆಂಬುದು ಒಬ್ಬನಿಗೆ ತಿಳಿದಿದ್ದರೂ ಅದನ್ನು ಮಾಡದೇ ಇರುವುದಾದರೆ ಅದು ಪಾಪವಾಗಿದೆ.‘ ಆಮೇಲೆ ನಾನು ನನ್ನ ಅಕ್ಕಂದಿರಿಗೆ ಫೋನ್‌ ಮಾಡಿ ಕೆಲಸ ಬಿಡ್ತಿದ್ದೀನಿ ಅಂತ ಹೇಳಿದೆ. ಯಾಕಂದ್ರೆ ಇಲ್ಲಿದ್ರೆ ಜೂಜ ಆಡಬೇಕಾಗುತ್ತೆ, ದುರಾಸೆ ಬೆಳೆಯುತ್ತೆ. ಯಾಕೋ ಇದೆಲ್ಲ ನನಗೆ ಇಷ್ಟ ಆಗ್ತಿಲ್ಲ ಅಂತ ಹೇಳಿದೆ.

“ಯಾಕೋಬ ಪುಸ್ತಕ ಓದಿದ ಮೇಲೆ ನಾನು ನನ್ನ ಜೀವನ ಶೈಲಿ ಬಗ್ಗೆ ಆಳವಾಗಿ ಯೋಚಿಸಲು ಶುರುಮಾಡಿದೆ”

 ನಾನು ದೇವರಿಗೆ, ಅಪ್ಪಅಮ್ಮಗೆ, ಅಕ್ಕಂದಿರಿಗೆ, ತಮ್ಮನಿಗೆ ಹತ್ರ ಆಗಲಿಕ್ಕೆ ಇಷ್ಟಪಟ್ಟೆ. ಹಾಗಾಗಿ ಅವರಿಗೆ ಹೆಚ್ಚು ಸಮಯ ಕೊಡಲು ಸರಳ ಜೀವನ ಮಾಡಿದೆ. ಆದ್ರೆ ಇದು ಅಷ್ಟೇನೂ ಸುಲಭ ಆಗಿರಲಿಲ್ಲ. ಉದಾಹರಣೆಗೆ, ಕ್ಯಾಸಿನೋ ಹೋಟೆಲ್‌ ನಲ್ಲಿ ನನಗೆ ಪ್ರೊಮೋಷನ್‌ ಕೊಟ್ಟು ಮೊದಲಗಿಂತ ಎರಡರಷ್ಟು ಮೂರರಷ್ಟು ಜಾಸ್ತಿ ಸಂಬಳ ಕೊಡ್ತೀವಿ ಅಂತ ಹೇಳಿದ್ರು. ಆದ್ರೆ ಈ ವಿಷ್ಯದ ಬಗ್ಗೆ ಪ್ರಾರ್ಥನೆ ಮಾಡಿ ಇಂಥ ಜೀವನ ನನಗೆ ಬೇಡ ಅಂತ ತೀರ್ಮಾನ ಮಾಡಿದೆ. ನಾನು ಕೆಲಸ ಬಿಟ್ಟು ಅಮ್ಮನ ಜೊತೆ ಗ್ಯಾರೇಜಲ್ಲಿ ಉಳ್ಕೊಂಡೆ. ರೆಸ್ಟೋರೆಂಟ್‌ ಮೆನುಗಳಿಗೆ ಲಾಮಿನೇಷನ್‌ ಮಾಡೋ ಚಿಕ್ಕ ಕೆಲಸ ಶುರುಮಾಡಿದೆ.

 ಜೀವನದಲ್ಲಿ ಯಾವುದು ಮುಖ್ಯ ಅಂತ ಅರ್ಥಮಾಡಿಕೊಳ್ಳಲು ಬೈಬಲ್‌ ಸಹಾಯಮಾಡ್ತು. ಆದ್ರೂ ನಾನು ಯೆಹೋವನ ಸಾಕ್ಷಿಗಳ ಕೂಟಕ್ಕೆಲ್ಲ ಹೋಗ್ತಿರಲಿಲ್ಲ. ನನ್ನ ಅಕ್ಕಂದಿರು ನನ್ನ ಹತ್ರ ‘ಸಾಕ್ಷಿಗಳಲ್ಲಿ ಅಂಥದ್ದೇನು ನಿನಗೆ ಹಿಡಿಸದೆ ಇರೋದು’ ಅಂತ ಕೇಳಿದ್ರು. ಅದಕ್ಕೆ ನಾನು, “ನಿಮ್ಮ ದೇವರು ಯೆಹೋವ ಕುಟುಂಬ ಒಡೆಯುತ್ತಾನೆ. ಕ್ರಿಸ್ಮಸ್‌ ಮತ್ತು ಬರ್ತ್‌ ಡೇಗಳಲ್ಲಿ ನಾವೆಲ್ಲ ಜೊತೆಯಾಗಿ ಇರಬೇಕು ಅಂತ ನನಗಿಷ್ಟ. ಆದ್ರೆ ನೀವು ಅದನ್ನೆಲ್ಲ ಮಾಡಲ್ಲ.” ನಾನು ಹೇಳಿದ್ದನ್ನ ಕೇಳಿ ಒಬ್ಬ ಅಕ್ಕನ ಕಣ್ಣಲ್ಲಿ ನೀರು ಬಂತು. ಅವಳು, “ನಿನಗೆ ಇಲ್ಲಿ ಬರಬೇಕು ಅಂತ ಅನಿಸೋದು ಬರೀ ಕ್ರಿಸ್ಮಸ್‌ ಮತ್ತು ಬರ್ತ್‌ ಡೇಗಳಲ್ಲಿ ಅಷ್ಟೇನಾ? ನೀನು ಬರಬೇಕಲ್ಲ ಅಂತ ಬರ್ತಿಯ. ಬೇರೆ ದಿನದಲ್ಲೂ ನಾವು ನಿನಗೋಸ್ಕರ ಕಾಯ್ತಾ ಇರ್ತಿವಿ. ಅವಾಗ ನೀನು ಎಲ್ಲಿ ಹೋಗಿದ್ದೆ?” ಅಂತ ಹೇಳಿದಳು. ಅವಳ ಮಾತು ಕೇಳಿ ನನ್ನ ಕಣ್ಣಲ್ಲೂ ನೀರು ಬಂತು. ಇಬ್ಬರೂ ಸೇರಿ ಅತ್ವಿ.

 ನಂತ್ರ ನಾನು ಅಂದ್ಕೊಂಡಿರೋದು ತಪ್ಪು ಅಂತ ಅರ್ಥ ಆಯ್ತು. ಯೆಹೋವನ ಸಾಕ್ಷಿಗಳು ತಮ್ಮ ಕುಟುಂಬದವರನ್ನ ತುಂಬ ಪ್ರೀತಿಸ್ತಾರೆ ಅಂತ ಗೊತ್ತಾದ ಮೇಲೆ ಅವರ ಕೂಟಕ್ಕೆ ಹೋಗೋಣ ಅಂತ ನೆನಸಿದೆ. ಅಲ್ಲಿ ನನಗೆ ಕೆವಿನ್‌ ಪರಿಚಯ ಆದ್ರು. ಬೈಬಲ್‌ ಕಲಿಸೋದ್ರಲ್ಲಿ ಅವರಿಗೆ ತುಂಬ ಅನುಭವ ಇತ್ತು. ಅವರು ನನಗೆ ಬೈಬಲ್‌ ಕಲಿಸೋಕೆ ಶುರುಮಾಡಿದ್ರು.

 ಕೆವಿನ್‌ ಮತ್ತು ಅವರ ಹೆಂಡತಿ ಬೇರೆಯವರಿಗೆ ಸತ್ಯ ಕಲಿಸೋಕೆ ಆದಷ್ಟು ಹೆಚ್ಚು ಸಮಯ ಕೊಡಬೇಕಂತ ಸರಳ ಜೀವನ ಮಾಡ್ತಿದ್ರು. ಅವರಿಗೆ ಬರೋ ಸಂಬಳದಲ್ಲಿ ದುಡ್ಡು ತೆಗೆದು ಇಟ್ಟು ಆಫ್ರಿಕ ಮತ್ತು ಸೆಂಟ್ರಲ್‌ ಅಮೆರಿಕಕ್ಕೆ ಹೋಗಿ ಸಾಕ್ಷಿಗಳ ಬ್ರಾಂಚ್‌ ನಿರ್ಮಾಣ ಕೆಲಸಕ್ಕೆ ಸಹಾಯ ಮಾಡ್ತಿದ್ರು. ಅವರು ಯಾವಾಗಲೂ ಖುಷಿಖುಷಿಯಾಗಿ ಇರ್ತಿದ್ರು. ಒಬ್ಬರನೊಬ್ಬರು ತುಂಬ ಪ್ರೀತಿಸ್ತಿದ್ರು. ಅವರನ್ನ ನೋಡಿದಾಗೆಲ್ಲ ನಂಗೂ ಅವರ ತರಾನೇ ಜೀವನ ಮಾಡಬೇಕು ಅಂತ ಅನಿಸ್ತಿತ್ತು.

 ಕೆವಿನ್‌ ನನಗೆ ಒಂದು ವಿಡಿಯೋ ತೋರಿಸಿ ಮಿಷನರಿ ಸೇವೆಯಿಂದ ಎಷ್ಟು ಖುಷಿ ಸಿಗುತ್ತೆ ಅಂತ ನೋಡು ಅಂದ್ರು. ಇದನ್ನೇ ನಾನೂ ಮಾಡಬೇಕು ಅಂತ ಅವತ್ತು ತೀರ್ಮಾನ ಮಾಡಿದೆ. ಆರು ತಿಂಗಳು ಬೈಬಲನ್ನ ಬಿಡದೆ ಅಧ್ಯಯನ ಮಾಡಿದ ಮೇಲೆ 1995 ರಲ್ಲಿ ದೀಕ್ಷಾಸ್ನಾನ ಪಡೆದು ಯೆಹೋವನ ಸಾಕ್ಷಿ ಆದೆ. ಅವತ್ತಿಂದ ನಾನು ದೇವರ ಹತ್ರ ಆಸ್ತಿಪಾಸ್ತಿ ಕೇಳೋದನ್ನ ಬಿಟ್ಟು, ’ಬಡತನವನ್ನಾಗಲಿ ಐಶ್ವರ್ಯವನ್ನಾಗಲಿ ನನಗೆ ಕೊಡಬೇಡ‘ ಅಂತ ಪ್ರಾರ್ಥಿಸಲು ಶುರು ಮಾಡಿದೆ.—ಜ್ಞಾನೋಕ್ತಿ 30:8.

ಸಿಕ್ಕಿದ ಪ್ರಯೋಜನಗಳು

 ಹೇಳಬೇಕಂದ್ರೆ ನಾನ ಈಗ ಶ್ರೀಮಂತನಾಗಿದ್ದೀನಿ. ದುಡ್ಡಿಂದ ಅಲ್ಲ, ದೇವರಿಗೆ ಹತ್ರ ಆಗಿರೋದ್ರಿಂದ ಶ್ರೀಮಂತನಾಗಿದ್ದೀನಿ. ಹೊಂಡುರಾಸ್‌ ದೇಶದಲ್ಲಿ ನನಗೆ ನ್ಯೂರೀಯಳ ಪರಿಚಯ ಆಯ್ತು. ನಾವು ಮದ್ವೆ ಆದ್ವಿ. ನಾನು ಮತ್ತು ನನ್ನ ಪ್ರೀತಿಯ ಹೆಂಡತಿ ಪನಾಮ ಮತ್ತು ಮೆಕ್ಸಿಕೋದಲ್ಲಿ ಮಿಷನರಿಗಳಾಗಿ ಸೇವೆ ಮಾಡಿದ್ವಿ. ಬೈಬಲಲ್ಲಿ ಹೇಳಿರೋ ಈ ಮಾತು ನೂರಕ್ಕೆ ನೂರು ನಿಜ: “ಯೆಹೋವನ ಆಶೀರ್ವಾದವು ಐಶ್ವರ್ಯವನ್ನುಂಟುಮಾಡುವುದು. ಅದರೊಂದಿಗೆ ಆತನು ಯಾವ ದುಃಖವನ್ನೂ ಸೇರಿಸುವುದಿಲ್ಲ.”—ಜ್ಞಾನೋಕ್ತಿ 10:22, ಪವಿತ್ರ ಗ್ರಂಥ.