ಕತ್ತಲ ಬಾಳಿಗೆ ದೇವರು ತೋರಿಸಿದ ದಾರಿದೀಪ
ಏಷ್ಯಾದ ಯಾನ್ಮಿ ಎಂಬ ಯೆಹೋವನ ಸಾಕ್ಷಿ ಕಣ್ಣು ಕಾಣದ ಸ್ತ್ರೀಯೊಬ್ಬಳಿಗೆ ರಸ್ತೆ ದಾಟಲು ಸಹಾಯ ಮಾಡಿದಳು. a ಆ ಸ್ತ್ರೀ ಹೆಸರು ಮಿಂಗ್ಜಿ. ಇವಳು ಯಾನ್ಮಿಗೆ, “ಥ್ಯಾಂಕ್ಯು, ದೇವರು ನಿನ್ನನ್ನ ಆಶೀರ್ವದಿಸಲಿ” ಅಂದಳು. ಆಗ ಯಾನ್ಮಿ ’ನಿನಗೆ ಬೈಬಲ್ ಕಲಿಯಲಿಕ್ಕೆ ಇಷ್ಟ ಇದ್ಯಾ?‘ ಅಂತ ಕೇಳಿದಳು. ಅದಕ್ಕೆ ಮಿಂಗ್ಜಿ ಒಪ್ಕೊಂಡಳು. ಆಮೇಲೆ, ’ದೇವರೇ ನನ್ನನ್ನ ನಿಜ ಕ್ರೈಸ್ತ ಸಭೆಗೆ ಕರಕೊಂಡು ಹೋಗಪ್ಪಾ‘ ಅಂತ ಪ್ರತಿದಿನ ಪ್ರಾರ್ಥನೆ ಮಾಡ್ತಿದ್ದೆ ಅಂದಳು.
2008 ರಲ್ಲಿ ಒಂದಿನ ಮಿಂಗ್ಜಿಯ ಗೆಳತಿ ಅವಳನ್ನ ಅಂಗವಿಕಲರಿಗೆಂದೇ ಇದ್ದ ಚರ್ಚ್ಗೆ ಬಾ ಅಂತ ಕರೆದಳು. ಮಿಂಗ್ಜಿ ಹೋಗಿ ಅಲ್ಲಿ ಪಾದ್ರಿ ಕೊಟ್ಟ ಪ್ರಸಂಗ ಕೇಳಿಸಿಕೊಂಡಳು. ಪ್ರಸಂಗ ಮುಗಿದ ಮೇಲೆ ಅವಳು ಪಾದ್ರಿ ಹತ್ರ ಹೋಗಿ, ’ನೀವು ಯಾವ ಪುಸ್ತಕದಿಂದ ಓದಿ ಹೇಳ್ತಾ ಇದ್ರಿ‘ ಅಂತ ಕೇಳಿದಳು. ಅದಕ್ಕೆ ಪಾದ್ರಿ, ’ಬೈಬಲಿಂದ ಓದಿ ಹೇಳ್ದೆ, ಅದು ದೇವರ ಮಾತು. ಅದ್ರಲ್ಲಿ ಬರೆದಿರೋದೆಲ್ಲ ಸತ್ಯ‘ ಅಂತ ಹೇಳಿದ್ರು. ಆಗ ಮಿಂಗ್ಜಿಗೆ ಬೈಬಲನ್ನ ಓದಲೇಬೇಕಂತ ಆಸೆ ಆಯ್ತು. ಹಾಗಾಗಿ ಅವಳು ಹೇಗೋ ಚೈನೀಸ್ ಬ್ರೇಲ್ ಬೈಬಲನ್ನ ಪಡಕೊಂಡು ಓದಿದಳು. ಇಡೀ ಬೈಬಲ್ 32 ಸಂಪುಟಗಳಲ್ಲಿದೆ. ಸುಮಾರು 6 ತಿಂಗಳಲ್ಲಿ ಅವಳು ಅದೆಲ್ಲವನ್ನ ಓದಿಮುಗಿಸಿದಳು. ಬೈಬಲನ್ನ ಓದುತ್ತಾ ಹೋದ ಹಾಗೆ ಅವಳ ಚರ್ಚಲ್ಲಿ ಕಲಿಸ್ತಿದ್ದ ತ್ರಿಯೇಕ ಬೋಧನೆ ತಪ್ಪು ಅಂತ ಅರ್ಥಮಾಡ್ಕೊಂಡಳು. ದೇವರ ಹೆಸರು ಯೆಹೋವ ಅಂತನೂ ತಿಳ್ಕೊಂಡಳು.
ದಿನ ಕಳೆದ ಹಾಗೆ ಚರ್ಚಲ್ಲಿದ್ದವ್ರ ನಡತೆಯಿಂದ ಮಿಂಗ್ಜಿಯ ಮನಸ್ಸು ಒಡೆದು ಹೋಯ್ತು. ಬೈಬಲ್ ಹೇಳೋ ಪ್ರಕಾರ ಅವರು ನಡಿತಿಲ್ಲ ಅಂತ ಅವಳಿಗೆ ಗೊತ್ತಾಯ್ತು. ಇದಕ್ಕೊಂದು ಉದಾಹರಣೆ ಹೇಳೋದಾದ್ರೆ ಕಣ್ಣು ಕಾಣುವವರಿಗೆ ಬಿಸಿ ಬಿಸಿ ಆಹಾರ ಕೊಡ್ತಿದ್ರು. ಅವರು ತಿಂದು ಉಳಿದದ್ದನ್ನ ಕುರುಡರಿಗೆ ಕೊಡ್ತಿದ್ರು. ಇಂಥ ಅನ್ಯಾಯದಿಂದ ಮಿಂಗ್ಜಿ ಮನಸ್ಸು ನೊಂದುಕೊಂಡಳು. ಹಾಗಾಗಿ ಅಲ್ಲೇ ಅಕ್ಕಪಕ್ಕದಲ್ಲಿ ಬೇರೆ ಚರ್ಚ್ ಇದ್ಯಾ ಅಂತ ಹುಡುಕೋಕೆ ಶುರು ಮಾಡಿದಳು. ನಿಜ ಕ್ರೈಸ್ತ ಸಭೆಗೆ ಕರಕೊಂಡು ಹೋಗಪ್ಪಾ ಅಂತ ಮಿಂಗ್ಜಿ ದೇವರಿಗೆ ಪ್ರಾರ್ಥನೆ ಮಾಡ್ತಿದ್ದದ್ದು ಅದಕ್ಕೇ.
ರಸ್ತೆ ದಾಟಲಿಕ್ಕೆ ಸಹಾಯ ಮಾಡಿದ ಯಾನ್ಮಿ ಎಷ್ಟು ದಯಾಮಯಿ ಅಂತ ಮಿಂಗ್ಜಿ ಬೈಬಲ್ ಕಲಿಯೋಕೆ ಒಪ್ಕೊಂಡಳು. ಇದಾದ ಮೇಲೆ ಅವಳು ಮೊದಲನೇ ಸಲ ಯೆಹೋವನ ಸಾಕ್ಷಿಗಳ ಕೂಟಕ್ಕೆ ಹೋದಳು. ಮಿಂಗ್ಜಿ ಹೇಳೋದು ಏನಂದ್ರೆ, “ನಾನು ಕೂಟಕ್ಕೆ ಹೋದ ಮೊದಲನೇ ದಿನನ ಯಾವತ್ತೂ ಮರೆಯಲ್ಲ. ಎಲ್ಲ ಸಹೋದರ ಸಹೋದರಿಯರು ತುಂಬ ಪ್ರೀತಿಯಿಂದ ಮಾತಾಡಿಸಿದ್ರು. ನನಗೆ ತುಂಬ ಖುಷಿ ಆಯ್ತು. ನನಗೆ ಕಣ್ಣು ಕಾಣಲ್ಲ ಅಂದ್ರೂ ಅವರ ಪ್ರೀತಿನ ಸವಿದೆ, ಏಕೆಂದ್ರೆ ಅವರು ಬೇಧಭಾವ ಮಾಡಲಿಲ್ಲ.”
ಮಿಂಗ್ಜಿ ಚೆನ್ನಾಗಿ ಪ್ರಗತಿ ಮಾಡಿದಳು, ತಪ್ಪದೆ ಕೂಟಗಳಿಗೆ ಹೋದಳು. ಕೂಟಗಳಲ್ಲಿ ಗೀತೆಗಳನ್ನು ಹಾಡೋದಂದ್ರೆ ಅವಳಿಗೆ ತುಂಬ ಇಷ್ಟ. ಆದ್ರೆ ಚೈನೀಸ್ ಬ್ರೇಲ್ನಲ್ಲಿ ಗೀತೆಪುಸ್ತಕ ಇರಲಿಲ್ಲ. ಹಾಗಾಗಿ ಗೀತೆಗಳನ್ನು ಹಾಡೋದು ಅವಳಿಗೆ ಕಷ್ಟ ಆಯ್ತು. ಅದಕ್ಕೇ ಅವಳು ಸಭೆಯವರ ಸಹಾಯದಿಂದ ತನ್ನದೇ ಗೀತೆಪುಸ್ತಕ ಮಾಡಿಕೊಂಡಳು. 22 ಗಂಟೆಯಲ್ಲಿ ಅವಳು 151 ಗೀತೆಗಳನ್ನು ಅನುವಾದ ಮಾಡಿದಳು. ಏಪ್ರಿಲ್ 2018 ರಲ್ಲಿ ಸುವಾರ್ತೆ ಸಾರಕ್ಕೆ ಶುರುಮಾಡಿದಳು. ಈ ಕೆಲಸದಲ್ಲಿ ಪ್ರತಿ ತಿಂಗಳು ಸುಮಾರು 30 ಗಂಟೆ ಕಳಿತಿದ್ದಳು.
ಮಿಂಗ್ಜಿಯನ್ನ ದೀಕ್ಷಾಸ್ನಾಕ್ಕೆ ತಯಾರಿಮಾಡಲು ಯಾನ್ಮಿ ಸಹಾಯ ಮಾಡಿದಳು. ಹೇಗಂದ್ರೆ ಸಭೆಯ ಹಿರಿಯರ ಜೊತೆ ಮಾಡಬೇಕಾದ ಚರ್ಚೆಗೋಸ್ಕರ ಯೆಹೋವನ ಚಿತ್ತವನ್ನು ಮಾಡಲು ನಾವು ಸಂಘಟಿತರು ಎಂಬ ಪುಸ್ತಕದಲ್ಲಿರೋ ಪ್ರಶ್ನೆಗಳನ್ನ ಮತ್ತು ಬೈಬಲ್ ವಚನಗಳನ್ನ ರೆಕಾರ್ಡ್ ಮಾಡಿ ಕೊಟ್ಟಳು. 2018 ರ ಜುಲೈಯಲ್ಲಿ ಮಿಂಗ್ಜಿ ದೀಕ್ಷಾಸ್ನಾನ ಪಡೆದಳು. ಅವಳು ಹೇಳೋದು: “ಅಧಿವೇಶನದಲ್ಲಿ ಸಹೋದರ ಸಹೋದರಿಯರು ನನಗೆ ತುಂಬ ಪ್ರೀತಿ ತೋರಿಸಿದ್ರು. ಇದ್ರಿಂದ ನನಗೆ ಎಷ್ಟು ಖುಷಿ ಆಯಿತ್ತಂದ್ರೆ ಕಣ್ಣಲ್ಲಿ ನೀರು ಬಂದುಬಿಡ್ತು. ಕೊನೆಗೂ ದೇವರು ನನಗೆ ದಾರಿದೀಪವಾದನು, ನಿಜ ಸಭೆಗೆ ಕರಕೊಂಡು ಬಂದನು.” (ಯೋಹಾನ 13:34, 35) ಮಿಂಗ್ಜಿಗೆ ಬೇರೆಯವರು ಹೇಗೆ ಪ್ರೀತಿ ತೋರಿಸಿದ್ರೋ ಅದೇ ತರ ಅವಳು ಬೇರೆಯವರಿಗೆ ಪ್ರೀತಿ ತೋರಿಸಲಿಕ್ಕೆ ದೃಢತೀರ್ಮಾನ ಮಾಡಿದ್ದಾಳೆ. ಈಗ ಮಿಂಗ್ಜಿ ಪೂರ್ಣ ಸಮಯ ಸುವಾರ್ತೆ ಸಾರುತ್ತಿದ್ದಾಳೆ.
a ಹೆಸರುಗಳು ಬದಲಾಗಿವೆ.