ಮಾಹಿತಿ ಇರುವಲ್ಲಿ ಹೋಗಲು

ಪ್ರವಾಹದೊಂದಿಗೆ ಬಂದ ಸಿಹಿಸುದ್ದಿ

ಪ್ರವಾಹದೊಂದಿಗೆ ಬಂದ ಸಿಹಿಸುದ್ದಿ

2017 ರಲ್ಲಿ ನಿಕರಾಗುವಾದ ಕರಾವಳಿ ಪ್ರದೇಶವಾದ ಮಸ್ಕೀಟೊಗೆ (ಮಿಸ್ಕಿಟೊ) 12 ಯೆಹೋವನ ಸಾಕ್ಷಿಗಳು ಬೋಟ್‌ನಲ್ಲಿ ಹೋದ್ರು. ಅವ್ರ ಬೋಟಿನ ಹೆಸ್ರು ಸ್ತೂರಿ ಯಮ್ನಿ. ಆ ಗುಂಪಿನಲ್ಲಿದ್ದ ಸ್ಟೀಫನ್‌ ಹೀಗೆ ನೆನಪು ಮಾಡ್ಕೊಳ್ತಾರೆ: “ತುಂಬ ದೂರದಲ್ಲಿದ್ದ ಚಿಕ್ಕ ಗುಂಪಿನ ಯೆಹೋವನ ಸಾಕ್ಷಿಗಳಿಗೆ ಪ್ರೋತ್ಸಾಹ ಕೊಡೋದು ಮತ್ತು ವಿಶಾಲವಾದ ಟೆರಿಟೊರಿಯಲ್ಲಿ ಸುವಾರ್ತೆ ಸಾರೋಕೆ ಅವ್ರಿಗೆ ಸಹಾಯ ಮಾಡೋದೇ ನಮ್ಮ ಗುರಿಯಾಗಿತ್ತು.”

ಈ 12 ಸಾಕ್ಷಿಗಳು ಪರ್ಲ್‌ ಲಗೂನ್‌ನಿಂದ 200 ಕಿಲೋಮೀಟರ್‌ ದೂರ ಇದ್ದ ರಿಯೊ ಗ್ರಾಂಡೆ ಡಿ ಮಾತಾಗಲ್ಪಾಗೆ ಹೊರಟರು. ಮಿಸ್ಕಿಟೊ ಭಾಷೆಯಲ್ಲಿ ಅವ್ರ ಬೋಟಿನ ಹೆಸ್ರಿನ ಅರ್ಥ “ಸಿಹಿಸುದ್ದಿ” ಅಂತ ಅವ್ರಿಗೆ ಗೊತ್ತಿಲ್ಲಾಯ್ತು. ಆ ನದಿ ಪಕ್ಕದಲ್ಲಿ ವಾಸಿಸೋ ಜನ್ರಿಗೆ ಈ ಪದ ವಿಶೇಷ ಅರ್ಥ ಕೊಡ್ತಿತ್ತು. ಈ ಸಾಕ್ಷಿಗಳು 12 ಗಂಟೆ ಪ್ರಯಾಣ ಮಾಡ್ತಾ ತಲುಪಬೇಕಾದ ಸ್ಥಳಕ್ಕೆ ತಲುಪಿದ್ರು. ಅದು ಲಾ ಕ್ರೂಜ್‌ ಡಿ ರಿಯೊ ಗ್ರಾಂಡೆ ಸಮುದಾಯವಾಗಿತ್ತು. ಅಲ್ಲಿನ ಸ್ಥಳೀಯ ಸಾಕ್ಷಿಗಳು ಇವರನ್ನ ಆದರದಿಂದ ಸ್ವಾಗತಿಸಿದ್ರು.

ಅದೇ ರಾತ್ರಿ ಅಲ್ಲಿ ವಿಪತ್ತು ಸಂಭವಿಸಿತು. ಒಂದು ದೊಡ್ಡ ಚಂಡಮಾರುತ್ತದಿಂದಾಗಿ ರಿಯೊ ಗ್ರಾಂಡೆ ಡಿ ಮಾತಾಗಲ್ಪಾದಲ್ಲಿ ಮಳೆ ಬಂತು. ಇದಾಗಿ ಕೆಲವೇ ಗಂಟೆಗಳಲ್ಲಿ ನದಿ ಉಕ್ಕಿ ಹರಿಯಲು ಆರಂಭಿಸಿತ್ತು. ಎರಡು ದಿನಗಳ ತನಕ ಹೀಗೆ ಇತ್ತು. ಲಾ ಕ್ರೂಜ್‌ನಲ್ಲಿದ ರಾಜ್ಯ ಸಭಾಗೃಹ ಮತ್ತು ಅನೇಕ ಮನೆಗಳು ಪ್ರವಾಹದಿಂದ ಮುಳುಗಿತು. ಅಲ್ಲಿ ಭೇಟಿ ಮಾಡಿದ ಆ ಸಹೋದರರು ಸ್ಥಳೀಯರಿಗೆ ಅವ್ರ ಮನೆಗಳನ್ನ ಖಾಲಿ ಮಾಡೋಕೆ ಸಹಾಯ ಮಾಡಿದ್ರು. ಅನೇಕ ಜನ್ರು ಮುಂದಿನ ಎರಡು ರಾತ್ರಿ ಒಬ್ಬ ಸಾಕ್ಷಿಯ ಎರಡು ಅಂತಸ್ತಿನ ಮನೆಯಲ್ಲಿ ಉಳ್ಕೊಂಡ್ರು.

ಲಾ ಕ್ರೂಜ್‌ನ ಪ್ರವಾಹ ಪೀಡಿತ ರಾಜ್ಯ ಸಭಾಗೃಹ

ಮೂರನೇ ದಿನದ ರಾತ್ರಿ, ಅಲ್ಲಿ ಭೇಟಿ ಮಾಡಿದ ಸಾಕ್ಷಿಗಳ ಹತ್ರ ಲಾ ಕ್ರೂಜ್‌ನ ಮೇಯರ್‌ ಬಂದು ಸಹಾಯ ಕೇಳಿದ್ರು. ಇವ್ರ ಸ್ತೂರಿ ಯಮ್ನಿ ಬೋಟ್‌ ತುಂಬ ಗಟ್ಟಿಮುಟ್ಟಾಗಿತ್ತು. ಅದೊಂದೇ ಬೋಟ್‌ನಿಂದ ಪ್ರವಾಹದ ಸ್ಥಳಕ್ಕೆ ಹೋಗಕ್ಕೆ ಸಾಧ್ಯ ಇತ್ತು. ಹಾಗಾಗಿ ಮೇಯರ್‌ ಇವ್ರ ಹತ್ರ, ‘ಇನ್ನೊಂದು ಕಡೆ ಪ್ರವಾಹಕ್ಕೆ ಒಳಗಾದ ಸಮುದಾಯದವ್ರಿಗೆ ಸಹಾಯ ಮಾಡೋಕೆ ಪರಿಹಾರ ತಂಡದವ್ರನ್ನ ಕರ್ಕೊಂಡು ಹೋಗಬಹುದಾ?’ ಅಂತ ಕೇಳ್ಕೊಂಡ್ರು. ಈ ಸಾಕ್ಷಿಗಳು ಸಹಾಯ ಮಾಡೋಕೆ ಸಿದ್ಧರಿದ್ದರು.

ಮರುದಿನ ಬೆಳಿಗ್ಗೆ, ಪರಿಹಾರ ತಂಡದೊಟ್ಟಿಗೆ ಮೂವರು ಸಾಕ್ಷಿಗಳು ಹೋದ್ರು. ಸ್ಟೀಫನ್‌ ಹೀಗೆ ನೆನಪಿಸ್ಕೊಂಡ್ರು: “ಆಗ ನದಿ ರಭಸವಾಗಿ ಹರಿಯುತ್ತಿತ್ತು. ದೊಡ್ಡ-ದೊಡ್ಡ ಮರಗಳೆಲ್ಲ ಬೇರುಸಹಿತ ಬಿದ್ದು ನದಿಗಳಲ್ಲಿ ಕಸದ ತರ ತೇಲ್ಕೊಂಡು ಹೋಗ್ತಿತ್ತು. ಒಂದು ದೊಡ್ಡ ಸುಳಿ ಉಂಟಾಯ್ತು. ಆ ಸಮಯದಲ್ಲಿ ನದಿ ಗಂಟೆಗೆ 18 ಕಿಲೋಮೀಟರ್‌ ವೇಗದಲ್ಲಿ ಹರಿಯುತ್ತಿತ್ತು.” ಈ ಸವಾಲುಗಳ ಮಧ್ಯೆಯೂ ಮೂರು ಸಮುದಾಯದವರನ್ನ ಬೋಟನ್‌ನಲ್ಲಿ ಕರ್ಕೊಂಡು ಹೋಗೋಕೆ ಸಾಧ್ಯವಾಯ್ತು.

ಆ ಮೂವರು ಸಾಕ್ಷಿಗಳು ಹಳ್ಳಿಯವರಿಗೆ ಆದಷ್ಟು ಸಮಾಧಾನ ಪಡಿಸೋಕೆ ಸಿಕ್ಕ ಅವಕಾಶವನ್ನ ಬಳಸ್ಕೊಂಡ್ರು. ಅಲ್ಲದೇ ಅವ್ರು 2017 ರ “ವೆನ್‌ ಡಿಸಾಸ್ಟರ್‌ ಸ್ಟ್ರೈಕ್ಸ್‌—ಸ್ಟೆಪ್ಸ್‌ ಧ್ಯಾಟ್‌ ಕ್ಯಾನ್‌ ಸೇವ್‌ ಲೈವ್ಸ್‌” ಅನ್ನೋ ಎಚ್ಚರ ಪತ್ರಿಕೆಯನ್ನ ಹಂಚಿದ್ರು.

ನದಿ ಪಕ್ಕದಲ್ಲೇ ವಾಸಿಸೋ ಸಮುದಾಯದವರು ಈ ಸಾಕ್ಷಿಗಳು ಕೊಟ್ಟ ಪ್ರಾಯೋಗಿಕ ಮತ್ತು ಆಧ್ಯಾತ್ಮಿಕ ಸಹಾಯಕ್ಕಾಗಿ ತುಂಬ ಕೃತಜ್ಞತೆ ವ್ಯಕ್ತಪಡಿಸಿದ್ರು. ಹಳ್ಳಿಯ ಕೆಲವ್ರು ಹೀಗಂದ್ರು: “ಕಷ್ಟದ ಸಮಯದಲ್ಲೂ ಸಹಾಯ ಮಾಡೋಕೆ ಅವ್ರು ಸಿದ್ಧರಿದ್ದಾರೆ.” “ನೆರೆಯವರ ಬಗ್ಗೆ ಇವ್ರಿಗೆ ನಿಜವಾದ ಪ್ರೀತಿ ಇದೆ” ಅನೋದನ್ನ ಕೆಲವ್ರು ಗಮನಿಸಿದ್ರು. ಈ ಸಾಕ್ಷಿಗಳು ತಮ್ಮ ಜೊತೆ ಆರಾಧಕರಿಗೆ ಮತ್ತು ಇತರರಿಗೆ ಸಹಾಯ ಮಾಡೋಕೆ ಎಷ್ಟು ಕಷ್ಟ ಪಟ್ರು ಅನ್ನೋದನ್ನ ನೋಡಿ ಅನೇಕ ಹಳ್ಳಿಯವರು ಬೈಬಲಿನ ಸಮಾಧಾನದ ಸಂದೇಶವನ್ನ ಕೇಳೋಕೆ ಮುಂದೆ ಬಂದ್ರು.

ಸ್ತೂರಿ ಯಮ್ನಿ ಅನ್ನೋ ಬೋಟಿನಲ್ಲಿದ್ದ ಸಹೋದರ ಮಾರ್ಕೊ ಹಳ್ಳಿಯವರಿಗೆ ಸುವಾರ್ತೆ ಸಾರೋಕೆ ಹೋಗ್ತಿದ್ದಾರೆ

ಪ್ರವಾಹ ಪೀಡಿತ ಹಳ್ಳಿಯಲ್ಲಿ ಸ್ತೂರಿ ಯಮ್ನಿ ಬೋಟನ್ನ ನಿಲ್ಲಿಸಲಾಗಿದೆ