ನಿಮ್ಮ ಪ್ರೀತಿನ ಅವ್ರಿಗೆ ತಿಳಿಸಿ
ಬಲ್ಗೇರಿಯದಲ್ಲಿ ಒನೋಗ್ಲಿ ಅನ್ನೋ ಯೆಹೋವನ ಸಾಕ್ಷಿ ಇದ್ದಳು. ಈ ಸಹೋದರಿ ಜಲಾಟ್ಕ್ ಅನ್ನೋ ಯುವ ಸ್ತ್ರೀಯೊಟ್ಟಿಗೆ ಬೈಬಲ್ ಅಧ್ಯಯನ ಮಾಡ್ತಿದ್ದಳು. ಆದ್ರೆ ಇವಳ ಗಂಡ ಬೈಬಲ್ ಅಧ್ಯಯನ ಸ್ವೀಕರಿಸಿರಲಿಲ್ಲ. ಒನೋಗ್ಲಿ ಹೀಗೆ ಹೇಳ್ತಾಳೆ: “ಕುಟುಂಬ ಜೀವನದ ಬಗ್ಗೆ ನಾನು ವಿವರಿಸೋವಾಗ ಬಾಳ ಸಂಗಾತಿಗೆ ಮತ್ತು ಮಕ್ಕಳಿಗೆ ನಾವು ಅವ್ರನ್ನ ಪ್ರೀತಿಸ್ತೀವಿ ಅಂತ ಹೇಳೋದು ಎಷ್ಟು ಪ್ರಾಮುಖ್ಯ ಅಂತ ಒತ್ತು ಕೊಟ್ಟು ತಿಳಿಸಿದೆ. ಆಗ ಜಲಾಟ್ಕ್ ಮುಖ ಸಪ್ಪೆ ಮಾಡ್ಕೊಂಡು ನನ್ನ ನೋಡಿ, ‘ನನ್ನ ಜೀವನದಲ್ಲಿ ಗಂಡನಿಗೆ ಮತ್ತು ಒಂಬತ್ತು ವರ್ಷದ ಮಗಳಿಗೆ ಅವರನ್ನ ಪ್ರೀತಿಸ್ತೀನಿ ಅಂತ ಯಾವತ್ತೂ ಹೇಳಲಿಲ್ಲ’ ಎಂದು ತಿಳಿಸಿದಳು.”
ಜಲಾಟ್ಕ್ ಹೀಗಂದಳು: “ನಾನು ಅವರಿಗೋಸ್ಕರ ಏನ್ ಮಾಡೋಕೂ ತಯಾರಿದ್ದೀನಿ. ಆದ್ರೆ ಇದನ್ನ ಹೇಳೋಕೆ ನನ್ಗೆ ಆಗಲ್ಲ. ನನ್ನ ಅಮ್ಮ ನನ್ನ ಪ್ರೀತಿಸ್ತೀನಿ ಅಂತ ಯಾವತ್ತೂ ಹೇಳಲಿಲ್ಲ ಮತ್ತು ನನ್ನ ಅಜ್ಜಿ ನನ್ನ ಅಮ್ಮನನ್ನ ಪ್ರೀತಿಸ್ತೀನಿ ಅಂತ ಯಾವತ್ತೂ ಹೇಳಲಿಲ್ಲ.” ಒನೋಗ್ಲಿ ಜಲಾಟ್ಕ್ಗೆ ಯೆಹೋವ ಯೇಸುವನ್ನು ಪ್ರೀತಿಸ್ತೀನಿ ಅಂತ ಜೋರಾಗಿ ಹೇಳಿದ್ದನ್ನ ಬೈಬಲ್ನಿಂದ ತೋರಿಸಿದಳು. (ಮತ್ತಾಯ 3:17) ಅಲ್ಲದೆ ಅವಳು ಜಲಾಟ್ಕ್ಗೆ ಇದ್ರ ಬಗ್ಗೆ ಯೆಹೋವನಿಗೆ ಪ್ರಾರ್ಥನೆ ಮಾಡೋಕೆ ಮತ್ತು ಗಂಡನನ್ನ, ಮಗಳನ್ನ ಪ್ರೀತಿಸ್ತೀನಿ ಅಂತ ಅವ್ರಿಗೆ ತಿಳಿಸಬೇಕನ್ನೋ ಗುರಿ ಇಟ್ಕೊಳ್ಳೋಕೆ ಪ್ರೋತ್ಸಾಹಿಸಿದಳು.
ಒನೋಗ್ಲಿ ಹೀಗಂದಳು: “ಎರಡು ದಿನದ ನಂತ್ರ, ಯೆಹೋವನ ಹತ್ರ ಸಹಾಯ ಮಾಡುವಂತೆ ಪ್ರಾರ್ಥನೆ ಮಾಡಿದೆ ಅಂತ ಜಲಾಟ್ಕ್ ಖುಷಿಯಿಂದ ಹೇಳ್ಕೊಂಡಳು. ಅವಳ ಗಂಡ ಮನೆಗೆ ಬಂದಾಗ, ಹೆಂಡತಿ ಗಂಡನನ್ನ ಗೌರವಿಸೋದು ಮತ್ತು ಪ್ರೀತಿಸೋದು ಎಷ್ಟು ಪ್ರಾಮುಖ್ಯ ಅಂತ ನಾನು ಬೈಬಲ್ ಅಧ್ಯಯನದಿಂದ ಕಲಿತೆ ಎಂದು ಹೇಳಿದಳು. ಸ್ವಲ್ಪ ಹೊತ್ತು ಆದ್ಮೇಲೆ ಅವಳು ‘ನಾನು ನಿಮ್ಮನ್ನ ತುಂಬ ಪ್ರೀತಿಸ್ತೀನಿ’ ಅಂತ ಗಂಡನಿಗೆ ಹೇಳಿದಳು! ಮಗಳು ಮನೆಗೆ ಬಂದಾಗ ಜಲಾಟ್ಕ್ ಅವಳನ್ನ ಅಪ್ಕೊಂಡು ‘ನಾನು ನಿನ್ನ ತುಂಬ ಪ್ರೀತಿಸ್ತೀನಿ’ ಅಂತ ಅಂದಳು. ಜಲಾಟ್ಕ್ ನನ್ಗೆ ಹೀಗಂದಳು: ‘ನನಗೀಗ ದೊಡ್ಡ ಭಾರ ಇಳಿಸಿದ ಹಾಗಿದೆ. ಇಷ್ಟು ವರ್ಷ ನನ್ನ ಭಾವನೆಗಳನ್ನ ಹೇಳ್ಕೊಳ್ಳೋಕೆ ಆಗ್ತಿಲ್ಲಾಯ್ತು. ಆದ್ರೆ ಈಗ ಯೆಹೋವನ ಸಹಾಯದಿಂದ ನನ್ನ ಕುಟುಂಬಕ್ಕೆ ನನ್ನ ಪ್ರೀತಿನ ತಿಳಿಸೋಕೆ ಆಗಿದೆ.’
ಒನೋಗ್ಲಿ ಇನ್ನೂ ಹೇಳಿದ್ದು: “ನಾನು ಒಂದು ವಾರದ ನಂತ್ರ ಜಲಾಟ್ಕ್ಳ ಗಂಡನನ್ನ ಭೇಟಿಯಾದೆ. ಅವ್ರು ಹೀಗಂದ್ರು, ‘ನಿಮ್ಮೊಟ್ಟಿಗೆ ಜಲಾಟ್ಕ್ ಬೈಬಲ್ ಅಧ್ಯಯನ ಮಾಡಬಾರದು ಅಂತ ತುಂಬ ಜನ ಹೇಳಿದ್ರು. ಆದ್ರೆ ಅವಳು ಬೈಬಲ್ ಅಧ್ಯಯನ ಮಾಡಿದ್ರಿಂದ ನಮ್ಮ ಕುಟುಂಬಕ್ಕೆ ತುಂಬ ಸಹಾಯ ಆಯ್ತು. ಈಗ ನಮ್ಮ ಕುಟುಂಬದಲ್ಲಿ ಐಕ್ಯತೆ, ಸಂತೋಷ ಇದೆ.’”