ಮಾಹಿತಿ ಇರುವಲ್ಲಿ ಹೋಗಲು

ಪಕ್ಷಪಾತವನ್ನು ಪಕ್ಕಕ್ಕಿಟ್ಟಿದ್ದಾರೆ

ಪಕ್ಷಪಾತವನ್ನು ಪಕ್ಕಕ್ಕಿಟ್ಟಿದ್ದಾರೆ

ದೇವರ ಕಣ್ಣಿಗೆ ಎಲ್ಲ ಜನರು ಒಂದೇ ಎನ್ನುವುದು ಯೆಹೋವನ ಸಾಕ್ಷಿಗಳ ನಂಬಿಕೆ. (ಅಪೊಸ್ತಲ ಕಾರ್ಯಗಳು 10:34, 35) ಹಾಗಾಗಿ ಸಮಾಜದಲ್ಲಿ ಬೇರೂರಿರುವಂಥ ಪಕ್ಷಪಾತದಿಂದ ಹೊರಬರಲು ಬೈಬಲ್‌ ಶಿಕ್ಷಣದ ಮೂಲಕ ನಾವು ಜನರಿಗೆ ನೆರವು ನೀಡುತ್ತೇವೆ.

ಯಾವುದೇ ಜಾತಿ ಅಥವಾ ಕುಲ ಪ್ರಚೋದಿಸುವ ಗಲಭೆಗಳಿಗೆ ನಾವು ಬೆಂಬಲ ನೀಡುವುದಿಲ್ಲ. ಉದಾಹರಣೆಗೆ, ನಾಜಿ ಕಾಲದಲ್ಲಿ ಹಿಟ್ಲರನು ಎಲ್ಲರನ್ನು ಮಟ್ಟಹಾಕುವ ಯೋಜನೆ ಹಾಕಿಕೊಂಡಿದ್ದ. ಆದರೆ ಜರ್ಮನಿಯ ಮತ್ತು ಇತರ ಯೆಹೋವನ ಸಾಕ್ಷಿಗಳು ಅವನಿಗೆ ನೆರವು ನೀಡಲಿಲ್ಲ. ನೂರಾರು ಜನರು ತಮ್ಮ ಜೀವವನ್ನು ಸಹ ಕಳೆದುಕೊಂಡರು.

ಅದೇ ರೀತಿ, 1994ರ ರುವಾಂಡದ ಹತ್ಯಾಕಾಂಡದಲ್ಲಿ ಯೆಹೋವನ ಸಾಕ್ಷಿಗಳು ಭಾಗವಹಿಸಲಿಲ್ಲ. ಯಾರನ್ನು ಹುಡುಕಿ-ಹುಡುಕಿ ಕೊಲ್ಲಲಾಗುತ್ತಿತ್ತೋ ಅವರನ್ನು ರಕ್ಷಿಸಲು ತಮ್ಮ ಜೀವವನ್ನು ಸಹ ಲೆಕ್ಕಿಸಲಿಲ್ಲ. ಕೆಲವರು ಜೀವತೆತ್ತರು ಸಹ.

ಎಲ್ಲ ರೀತಿಯ ಜನರಿಗೆ ನಾವು ನೆರವು ನೀಡಲು ಬಯಸುತ್ತೇವೆ. ಆದ್ದರಿಂದ ಇಂದು ನಮ್ಮ ಬೈಬಲ್‌ ಸಾಹಿತ್ಯವನ್ನು ಸುಮಾರು 600 ಭಾಷೆಗಳಲ್ಲಿ ಮುದ್ರಿಸಿ ವಿತರಿಸಲಾಗುತ್ತಿದೆ. ಅದೇ ಸಮಯದಲ್ಲಿ ನಮ್ಮ ಕೂಟಗಳಿಗೆ “ಎಲ್ಲ ಜನಾಂಗಗಳಿಂದಲೂ ಕುಲಗಳಿಂದಲೂ ಪ್ರಜೆಗಳಿಂದಲೂ ಭಾಷೆಗಳಿಂದಲೂ” ಜನರು ಬರುತ್ತಾರೆ. ಎಲ್ಲರಿಗೂ ಆದರದ ಸ್ವಾಗತ ನೀಡುತ್ತೇವೆ.—ಪ್ರಕಟನೆ 7:9.