ಕಾಮುಕರಿಂದ ಕಂದಮ್ಮಗಳನ್ನು ಕಾಪಾಡಲು ಯೆಹೋವನ ಸಾಕ್ಷಿಗಳು ನೀಡುತ್ತಿರುವ ಶಿಕ್ಷಣ
ಮಕ್ಕಳು ದೇವರಿಂದ ಬಂದ ಬಹುಮಾನ. ಆದ್ದರಿಂದ ಅವರನ್ನು ಪ್ರೀತಿಸಿ, ಮಾರ್ಗದರ್ಶಿಸಿ, ಸಂರಕ್ಷಿಸಬೇಕು ಎಂದು ಬೈಬಲ್ ಹೆತ್ತವರಿಗೆ ಹೇಳುತ್ತದೆ. (ಕೀರ್ತನೆ 127:3; ಜ್ಞಾನೋಕ್ತಿ 1:8; ಎಫೆಸ 6:1-4) ಹಾಗಾಗಿ ಮಕ್ಕಳನ್ನು ಅಪಾಯಗಳಿಂದ ಕಾಪಾಡುವುದು ಹೆತ್ತವರ ಜವಾಬ್ದಾರಿ. ಅದರಲ್ಲೂ ಲೈಂಗಿಕ ದೌರ್ಜನ್ಯ ಮಾಡುವ ಕಾಮುಕರಿಂದ ಮಕ್ಕಳನ್ನು ಕಾಪಾಡುವುದು ತುಂಬ ಪ್ರಾಮುಖ್ಯ.
ಅನೇಕ ದಶಕಗಳಿಂದ ಯೆಹೋವನ ಸಾಕ್ಷಿಗಳು ಕುಟುಂಬ ಬಾಂಧವ್ಯಗಳು ಬಲಗೊಳ್ಳಲು ಸಹಾಯ ಮಾಡುವಂಥ ವಿಷಯಗಳನ್ನು ಮುದ್ರಿಸಿ, ಜನರಿಗೆ ವಿತರಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಹೆತ್ತವರು ತಮ್ಮ ಮಕ್ಕಳನ್ನು ಕಾಮುಕರಿಂದ ಸಂರಕ್ಷಿಸುವುದು ಹೇಗೆ ಮತ್ತು ಈ ಕಾಮುಕರ ಬಗ್ಗೆ ಮುಂಜಾಗ್ರತೆ ವಹಿಸುವಂತೆ ಮಕ್ಕಳಿಗೆ ಕಲಿಸುವುದು ಹೇಗೆ ಎಂದೂ ತಿಳಿಸುತ್ತಿದ್ದಾರೆ. ಈ ವಿಷಯದ ಬಗ್ಗೆ ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲಾದ ಕೆಲವು ಸಾಹಿತ್ಯಗಳ ಪಟ್ಟಿ ಇಲ್ಲಿದೆ. ಅವು ಎಷ್ಟು ಭಾಷೆಗಳಲ್ಲಿ ಮತ್ತು ಎಷ್ಟು ಪ್ರತಿಗಳು ಪ್ರಕಾಶಿಸಲ್ಪಟ್ಟವು ಎಂದು ನೋಡಿ. *
ಶೀರ್ಷಿಕೆ: ಕುಟುಂಬದವರಿಂದ ಲೈಂಗಿಕ ಅತ್ಯಾಚಾರ—ಬೆಳಕಿಗೆ ಬಾರದ ಅಪರಾಧ
ಪ್ರಕಾಶನ: ಫೆಬ್ರವರಿ 8, 1981, ಎಚ್ಚರ! ಸಂಚಿಕೆ (ಕನ್ನಡದಲ್ಲಿ ಲಭ್ಯವಿಲ್ಲ)
ಪ್ರತಿಗಳು: 78,00,000
ಭಾಷೆಗಳು: 34
ಶೀರ್ಷಿಕೆ: ಕುಟುಂಬದವರಿಂದ ಲೈಂಗಿಕ ಅತ್ಯಾಚಾರಕ್ಕೆ ಒಳಗಾದವರಿಗೆ ಸಹಾಯ
ಪ್ರಕಾಶನ: ಅಕ್ಟೋಬರ್ 1, 1983, ಕಾವಲಿನಬುರುಜು ಸಂಚಿಕೆ (ಕನ್ನಡದಲ್ಲಿ ಲಭ್ಯವಿಲ್ಲ)
ಪ್ರತಿಗಳು: 1,00,50,000
ಭಾಷೆಗಳು: 102
ಶೀರ್ಷಿಕೆಗಳು: ಶಿಶು ಅತ್ಯಾಚಾರ—ತಾಯಂದಿರ ಭಯ; ಶಿಶು ಅತ್ಯಾಚಾರ—‘ಯಾರು ತಾನೇ ಇಂಥ ಕೆಲಸ ಮಾಡುತ್ತಾರೆ?’ ಶಿಶು ಅತ್ಯಾಚಾರ—ನೀವು ನಿಮ್ಮ ಮಕ್ಕಳನ್ನು ಕಾಪಾಡಲು ಸಾಧ್ಯ.
ಪ್ರಕಾಶನ: ಜನವರಿ 22, 1985, ಎಚ್ಚರ! ಸಂಚಿಕೆ (ಕನ್ನಡದಲ್ಲಿ ಲಭ್ಯವಿಲ್ಲ)
ಪ್ರತಿಗಳು: 98,00,000
ಭಾಷೆಗಳು: 54
ಶೀರ್ಷಿಕೆಗಳು: ಶಿಶು ಅತ್ಯಾಚಾರಕ್ಕೆ ಬಲಿಯಾಗುವ ಕಂದಮ್ಮಗಳು; ಶಿಶು ಅತ್ಯಾಚಾರ—ಮಾಸದ ಗಾಯ
ಪ್ರಕಾಶನ: ಅಕ್ಟೋಬರ್ 8, 1991, ಎಚ್ಚರ! ಸಂಚಿಕೆ (ಕನ್ನಡದಲ್ಲಿ ಲಭ್ಯವಿಲ್ಲ)
ಪ್ರತಿಗಳು: 1,29,80,000
ಭಾಷೆಗಳು: 64
ಶೀರ್ಷಿಕೆಗಳು: ನಿಮ್ಮ ಮಗು ಅಪಾಯದಲ್ಲಿದೆ!; ನಾವು ನಮ್ಮ ಮಕ್ಕಳನ್ನು ಸಂರಕ್ಷಿಸುವುದು ಹೇಗೆ?, ಮನೆಯಲ್ಲಿ ಸುರಕ್ಷೆಯನ್ನು ಸೃಷ್ಟಿಸುವ ಕ್ರಮಗಳು
ಪ್ರಕಾಶನ: ಅಕ್ಟೋಬರ್ 8, 1993, ಎಚ್ಚರ! ಸಂಚಿಕೆ (ಕನ್ನಡದಲ್ಲಿ ಲಭ್ಯವಿಲ್ಲ)
ಪ್ರತಿಗಳು: 1,32,40,000
ಭಾಷೆಗಳು: 67
ಶೀರ್ಷಿಕೆ: ನಿಮ್ಮ ಮಕ್ಕಳನ್ನು ಕಾಪಾಡಿ
ಪ್ರಕಾಶನ: ಜನಜಾಗೃತಿ ವಿಡಿಯೋ ಸಂಖ್ಯೆ 4, 2002ರಲ್ಲಿ ಪ್ರಕಾಶಿತ (ಕನ್ನಡದಲ್ಲಿ ಲಭ್ಯವಿಲ್ಲ)
ಭಾಷೆಗಳು: 2
ಶೀರ್ಷಿಕೆ: ದೇವರ ಸಂರಕ್ಷಣೆಯಲ್ಲಿ ಪುಟ್ಟ ಯೇಸು
ಪ್ರಕಾಶನ: ಮಹಾ ಬೋಧಕನಿಂದ ಕಲಿಯೋಣ ಪುಸ್ತಕದ 32ನೇ ಅಧ್ಯಾಯ, 2003ರಲ್ಲಿ ಪ್ರಕಾಶಿತ
ಪ್ರತಿಗಳು: 3,97,46,022
ಭಾಷೆಗಳು: 141
ಶೀರ್ಷಿಕೆಗಳು: ಪ್ರತಿಯೊಬ್ಬ ಹೆತ್ತವರ ನಿದ್ದೆಗೆಡಿಸಿದ ಸಮಸ್ಯೆ; ಮಕ್ಕಳನ್ನು ಸಂರಕ್ಷಿಸುವುದು ಹೇಗೆ?, ನಿಮ್ಮ ಮನೆ ಸುರಕ್ಷಾ ತಾಣವಾಗಿರಲಿ
ಪ್ರಕಾಶನ: ಅಕ್ಟೋಬರ್ 2007, ಎಚ್ಚರ! ಸಂಚಿಕೆ (ಕನ್ನಡದಲ್ಲಿ ಲಭ್ಯವಿಲ್ಲ)
ಪ್ರತಿಗಳು: 3,42,67,000
ಭಾಷೆಗಳು: 81
ಶೀರ್ಷಿಕೆಗಳು: ಕಾಮುಕರಿಂದ ತಪ್ಪಿಸಿಕೊಳ್ಳುವುದು ಹೇಗೆ?, ಹೆತ್ತವರ ಪ್ರಶ್ನೆಗಳು: ನನ್ನ ಮಗುವಿಗೆ ಸೆಕ್ಸ್ ಬಗ್ಗೆ ತಿಳಿಸಬೇಕಾ?
ಪ್ರಕಾಶನ: ಯುವ ಜನರ ಪ್ರಶ್ನೆಗಳು ಕಾರ್ಯಸಾಧಕ ಉತ್ತರಗಳು, ಸಂಪುಟ 1ರ ಅಧ್ಯಾಯ 32 ಮತ್ತು ಪರಿಶಿಷ್ಟ, 2011ರಲ್ಲಿ ಪ್ರಕಾಶಿತ (ಕನ್ನಡದಲ್ಲಿ ಲಭ್ಯವಿಲ್ಲ)
ಪ್ರತಿಗಳು: 1,83,81,635
ಭಾಷೆಗಳು: 65
ಶೀರ್ಷಿಕೆ: ಮಕ್ಕಳಿಗೆ ಲೈಂಗಿಕ ವಿಷಯಗಳ ಬಗ್ಗೆ ತಿಳಿಸುವುದು ಹೇಗೆ?
ಪ್ರಕಾಶನ: jw.org ವೆಬ್‌ಸೈಟ್, ಸೆಪ್ಟೆಂಬರ್ 5, 2013ರಂದು ಪ್ರಕಟವಾದ ಲೇಖನ (ಕನ್ನಡದಲ್ಲಿ ಲಭ್ಯವಿಲ್ಲ)
ಭಾಷೆಗಳು: 64
ಯೆಹೋವನ ಸಾಕ್ಷಿಗಳು ಈಗಿನಂತೆ ಇನ್ನು ಮುಂದೆ ಸಹ, ಮಕ್ಕಳಿಗೆ ಮತ್ತು ಅವರ ಹೆತ್ತವರಿಗೆ ಕಾಮುಕರ ಕೈಯಲ್ಲಿ ಸಿಕ್ಕಿಕೊಳ್ಳದಿರಲು ಏನು ಮಾಡಬೇಕೆಂಬ ಶಿಕ್ಷಣವನ್ನು ನೀಡುತ್ತಾರೆ.
^ ಪ್ಯಾರ. 3 ಇಲ್ಲಿ ಕೊಡಲಾದ ತಾರೀಖುಗಳು ಇಂಗ್ಲಿಷ್ ಆವೃತ್ತಿ ಪ್ರಕಟವಾದ ತಾರೀಖುಗಳಾಗಿವೆ