ಪರಿಸರ ಸಂರಕ್ಷಣೆ ಮಾಡಿದ ಯೆಹೋವನ ಸಾಕ್ಷಿಗಳಿಗೆ ಸಿಕ್ಕಿದ ಪ್ರಶಸ್ತಿ
ಮೆಕ್ಸಿಕೊ ದೇಶದಲ್ಲಿ ಯೆಹೋವನ ಸಾಕ್ಷಿಗಳ ಮುದ್ರಣಾಲಯಕ್ಕೆ ಸತತ ಏಳನೇ ಬಾರಿ ‘ಸ್ವಚ್ಛ ಸಂಸ್ಥೆ ಸರ್ಟಿಫಿಕೆಟ್’ ಲಭಿಸಿದೆ.
“ಪರಿಸರ ಸಂರಕ್ಷಣೆ ಮಾಡಲು ತಮ್ಮನ್ನೇ ಮುಡಿಪಾಗಿಟ್ಟ” ಯೆಹೋವನ ಸಾಕ್ಷಿಗಳಿಗೆ ಮೆಕ್ಸಿಕೊ ಸರ್ಕಾರ 2012ರ ಸೆಪ್ಟೆಂಬರ್ 26ರಂದು ವಿಶೇಷ ಸರ್ಟಿಫಿಕೆಟ್ ನೀಡಿದೆ.
ಸರ್ಕಾರ ಆಯೋಜಿಸಿರುವ ಈ ‘ಸ್ವಚ್ಛ ಸಂಸ್ಥೆ’ ಕಾರ್ಯಕ್ರಮದಿಂದಾಗಿ ಕಾರ್ಖಾನೆಗಳು ಪರಿಸರ ಸಂರಕ್ಷಣೆಯ ಬಗ್ಗೆ ಒಲವು ತೋರಿಸುವಂತಾಗಿದೆ. ಯೆಹೋವನ ಸಾಕ್ಷಿಗಳ ಸಂಸ್ಥೆ ಒಂದು ವ್ಯಾಪಾರ ಸಂಸ್ಥೆ ಅಲ್ಲದಿದ್ದರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಮೆಕ್ಸಿಕೊ ಮುದ್ರಣಾಲಯದ ವಕ್ತಾರ ಹೀಗೆ ಹೇಳುತ್ತಾರೆ: “ಎಲ್ಲ ಕಾರ್ಖಾನೆಗಳು ಇದರಲ್ಲಿ ಭಾಗವಹಿಸಲೇಬೇಕು ಎನ್ನುವ ಕಡ್ಡಾಯವೇನಿಲ್ಲ. ಆದರೂ ನಾವು ಸ್ವಇಚ್ಛೆಯಿಂದ ಪಾಲ್ಗೊಳ್ಳುತ್ತಾ ಇದ್ದೇವೆ. ‘ಸ್ವಚ್ಛ ಸಂಸ್ಥೆ ಸರ್ಟಿಫಿಕೆಟ್’ ಪಡೆಯಬೇಕಾದರೆ 7 ಕ್ಷೇತ್ರಗಳಲ್ಲಿ ಅಂದರೆ ಗಾಳಿ, ನೀರು, ನಗರ ತ್ಯಾಜ್ಯ, ಅಪಾಯಕಾರಿ ತ್ಯಾಜ್ಯ, ಸುರಕ್ಷೆ, ವಿದ್ಯುತ್ ಶಕ್ತಿ, ಪರಿಸರ ಸಂರಕ್ಷಣಾ ತರಬೇತಿ ಈ ಕ್ಷೇತ್ರಗಳಲ್ಲಿ ಸರ್ಕಾರದ ನಿಯಮಗಳನ್ನು ತಪ್ಪದೆ ಪಾಲಿಸಿರಬೇಕು.”
ಯೆಹೋವನ ಸಾಕ್ಷಿಗಳು ಎಲ್ಲೇ ಇರಲಿ ಭೂಗ್ರಹದ ಅಮೂಲ್ಯ ಪರಿಸರವನ್ನು ಹಾಳುಮಾಡದೆ ನೋಡಿಕೊಳ್ಳಲು ತಮ್ಮಿಂದ ಆಗುವುದೆಲ್ಲವನ್ನೂ ಮಾಡುತ್ತಾರೆ.