ರ್ಯಾಗಿಂಗ್ ಸಮಸ್ಯೆಯನ್ನು ನಿಭಾಯಿಸಲು ಮಕ್ಕಳಿಗೆ ಸಹಾಯ ಮಾಡಿದ ವಿಡಿಯೋ
ಬ್ರಿಟಿಷ್‌ನ ಒಂದು ಚ್ಯಾರಿಟಿ ಹತ್ತು ವರ್ಷದ ಹ್ಯೂಗೋ ಎಂಬ ಹುಡುಗನಿಗೆ 2014ರಲ್ಲಿ ಡಯಾನಾ ಪ್ರಶಸ್ತಿ ನೀಡಿ ಗೌರವಿಸಿತು. ಕಾರಣ, ಅವನು ತನ್ನ ಶಾಲೆಯಲ್ಲಿದ್ದ ವಿದ್ಯಾರ್ಥಿಗಳಿಗೆ ರ್ಯಾಗಿಂಗ್ (ದಾದಾಗಿರಿ) ಸಮಸ್ಯೆಯನ್ನು ನಿಭಾಯಿಸಲು ಸಹಾಯ ಮಾಡಿದ್ದನು.
ಹ್ಯೂಗೋ ಹೀಗೆ ಹೇಳುತ್ತಾನೆ: ‘ಈ ಪ್ರಶಸ್ತಿ ನನಗಲ್ಲ, ಬೀಟ್ ಎ ಬುಲ್ಲಿ ವಿದೌಟ್ ಯೂಸಿಂಗ್ ಯುವರ್ ಫಿಸ್ಟಎಂಬ ವಿಡಿಯೋಗೆ ಸಲ್ಲಬೇಕು. jw.org ವೆಬ್‌ಸೈಟ್‌ನಲ್ಲಿರುವ ಈ ವಿಡಿಯೋವಿನಿಂದ ಇಡೀ ಶಾಲೆಯಲ್ಲಿ ನಾನು ಹೀರೋ ಆಗಿಬಿಟ್ಟೆ.’
ಮೊದಲು, ಬೀಟ್ ಎ ಬುಲ್ಲಿ ವಿಡಿಯೋವನ್ನು ಹ್ಯೂಗೋ ತನ್ನ ಶಾಲಾ ಶಿಕ್ಷಕರಿಗೆ ತೋರಿಸಿದನು. ಆ ಶಿಕ್ಷಕರಿಗೆ ವಿಡಿಯೋ ಇಷ್ಟವಾಗಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳು jw.org ವೆಬ್‌ಸೈಟ್ ನೋಡುವ ಏರ್ಪಾಡು ಮಾಡಿದರು. ಈಗ ಆ ಶಾಲೆಯಲ್ಲಿರುವ 8 ರಿಂದ 10 ವಯಸ್ಸಿನ ಮಕ್ಕಳೆಲ್ಲರೂ jw.org ವೆಬ್‌ಸೈಟನ್ನು ಕ್ರಮವಾಗಿ ನೋಡುತ್ತಿದ್ದಾರೆ. ಈ ವೆಬ್‌ಸೈಟ್ ರ್ಯಾಗಿಂಗನ್ನು ಸಮಸ್ಯೆಯನ್ನು ನಿಭಾಯಿಸುವುದು ಹೇಗೆ ಎನ್ನುವುದರ ಬಗ್ಗೆ ಮಾತ್ರ ತಿಳಿಸಲ್ಲ, ಇನ್ನೂ ಅನೇಕ ಪ್ರಶ್ನೆಗಳಿಗೆ ಉತ್ತರ ತಿಳಿಸುತ್ತೆ. ಉದಾಹರಣೆಗೆ, ‘ನನ್ನ ನಿಜ ಸ್ನೇಹಿತರು ಯಾರು?’ ಎನ್ನುವ ಪ್ರಶ್ನೆಗೂ ಉತ್ತರ ಕಂಡುಕೊಳ್ಳಲು ಸಹಾಯ ಮಾಡುತ್ತದೆ ಎಂದು ಆ ಮಕ್ಕಳು ಹೇಳುತ್ತಾರೆ.
ವಿಡಿಯೋವಿನಿಂದ ಮಕ್ಕಳಿಗಾದ ಪ್ರಯೋಜನಗಳು
ಇನ್ನೊಂದು ಬ್ರಿಟಿಷ್ ಶಾಲೆಯಲ್ಲಿ ಓದುತ್ತಿರುವ ಎಂಟು ವರ್ಷದ ಹುಡುಗನಾದ ಎಲೈಜಾಗೆ ಶಾಲೆಯಲ್ಲಿ ರ್ಯಾಗಿಂಗ್ ಮಾಡುತ್ತಿದ್ದರು. ಆಗ ಅವನೂ ಅವನ ಕುಟುಂಬದವರೂ ಬೀಟ್ ಎ ಬುಲ್ಲಿ ವಿಡಿಯೋ ನೋಡಿದರು. ನಂತರ, ರ್ಯಾಗಿಂಗ್ ನಡೆಯುವ ಸನ್ನಿವೇಶದಲ್ಲಿ ಎಲೈಜಾ ಏನು ಮಾತಾಡಬೇಕು, ಹೇಗಿರಬೇಕು ಅನ್ನೋದನ್ನು ಕುಟುಂಬದವರೆಲ್ಲರೂ ಸೇರಿ ತಯಾರಿ ಮಾಡಿದರು. ಇದರಿಂದ ತನ್ನ ಸಮಸ್ಯೆಯನ್ನು ನಿಭಾಯಿಸಲು ಎಲೈಜಾಗೆ ಧೈರ್ಯ ಬಂತು. ಸಮಯಾನಂತರ, ರ್ಯಾಗಿಂಗನ್ನು ವಿರೋಧಿಸುವ ವಾರದಲ್ಲಿ (ಆ್ಯಂಟಿ ಬುಲ್ಲಿಂಗ್ ವೀಕ್) ಎಲೈಜಾ ಶಾಲೆಯ ಮುಖ್ಯ ಶಿಕ್ಷಕರು ಇಡೀ ಶಾಲೆಗೆ ಆ ವಿಡಿಯೋವನ್ನು ತೋರಿಸಿದರು.
ರ್ಯಾಗಿಂಗ್ ಎಂಬ ಪಿಡುಗು ಬ್ರಿಟನ್‌ನಲ್ಲಿ ಮಾತ್ರವಲ್ಲ, ಇಡೀ ಪ್ರಪಂಚದಲ್ಲಿ ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಬೀಟ್ ಎ ಬುಲ್ಲಿ ವಿಡಿಯೋ ಈ ಪಿಡುಗಿನಿಂದ ತಪ್ಪಿಸಿಕೊಳ್ಳಲು ಪ್ರಪಂಚದೆಲ್ಲೆಡೆ ಇರುವ ಮಕ್ಕಳಿಗೆ ಸಹಾಯ ಮಾಡುತ್ತಿದೆ.
ಅಮೆರಿಕದಲ್ಲಿರುವ ಹತ್ತು ವರ್ಷದ ಹುಡುಗಿ ಐವೀಗೆ ಅವಳ ಸಹಪಾಠಿಯೊಬ್ಬಳು ರ್ಯಾಗಿಂಗ್ ಮಾಡುತ್ತಿದ್ದಳು. ಬೀಟ್ ಎ ಬುಲ್ಲಿ ವಿಡಿಯೋ ನೋಡಿದ ಮೇಲೆ ಐವೀಗೆ ಧೈರ್ಯ ಬಂತು. ಐವೀ ತನ್ನ ಶಿಕ್ಷಕನಿಗೆ ಈ ಸಮಸ್ಯೆ ಬಗ್ಗೆ ಹೇಳಿದಾಗ ಅವನು ಅವಳಿಗೆ ಸಹಾಯ ಮಾಡಿದನು. ಅವಳ ಸಹಪಾಠಿ ಕ್ಷಮೆ ಯಾಚಿಸಿದಳು. ಈಗ ಐವೀ ಮತ್ತು ಆ ಸಹಪಾಠಿ ಒಬ್ಬರಿಗೊಬ್ಬರು ಹೊಂದಿಕೊಂಡಿದ್ದಾರೆ.
ಮಕ್ಕಳಿಗೆ ಒಳಿತನ್ನು ಮಾಡಬೇಕೆನ್ನುವುದು ಯೆಹೋವನ ಸಾಕ್ಷಿಗಳಾದ ನಮ್ಮ ಕಳಕಳಿ. ರ್ಯಾಗಿಂಗ್‌ನಂಥ ಪ್ರತಿದಿನ ಎದುರಾಗುವ ಸಮಸ್ಯೆಗಳನ್ನು ನಿಭಾಯಿಸಲು ಪ್ರಾಯೋಗಿಕ ಸಲಹೆಗಳನ್ನು ನಾವು ಪ್ರಕಟಿಸುತ್ತಿರುತ್ತೇವೆ.