ಮಾಹಿತಿ ಇರುವಲ್ಲಿ ಹೋಗಲು

ಚಿತ್ರಗಳ ಮೂಲಕ ಬೋಧಿಸುವ ಬಹುಭಾಷೀಯ ಕಿರುಹೊತ್ತಗೆ

ಚಿತ್ರಗಳ ಮೂಲಕ ಬೋಧಿಸುವ ಬಹುಭಾಷೀಯ ಕಿರುಹೊತ್ತಗೆ

ಓಡ್ವಾಲ್‌ ಎಂಬಾಕೆ ಮಂಗೋಲಿಯದವರು. ಆಕೆಗೀಗ ವಯಸ್ಸೆಷ್ಟು ಅಂತ ಆಕೆಗೇ ಗೊತ್ತಿಲ್ಲ, ಆದರೆ ಆಕೆಯ ಪ್ರಕಾರ ಆಕೆ ಜನಿಸಿದ್ದು 1921ರಲ್ಲಿ. ಚಿಕ್ಕಪ್ರಾಯದಲ್ಲಿ ತನ್ನ ಹೆತ್ತವರು ಸಾಕಿದ್ದ ಪ್ರಾಣಿಗಳ ಪಾಲನೆ ಪೋಷಣೆಯನ್ನು ಈಕೆ ನೋಡಿಕೊಳ್ಳುತ್ತಿದ್ದದ್ದರಿಂದ, ಆಕೆ ಶಾಲೆಯ ಮುಖವನ್ನು ನೋಡಿದ್ದು ಕೇವಲ ಒಂದೇ ವರ್ಷ. ಹಾಗಾಗಿ ಆಕೆಗೆ ಓದು ಬರಹ ಗೊತ್ತಿಲ್ಲ. ಆದರೆ, ಇತ್ತೀಚೆಗೆ ಸಿಕ್ಕಿದ ಒಂದು ವರ್ಣರಂಜಿತ ಕಿರುಹೊತ್ತಗೆಯಿಂದ ಆಕೆ ದೇವರ ಬಗ್ಗೆ ತಿಳಿದುಕೊಂಡಳು ಮತ್ತು ಆತನು ಹೇಳಿದ ವಿಷಯಗಳನ್ನು ಆಲಿಸಿ, ಅನ್ವಯಿಸಿದರೆ ಸುಂದರ ಭವಿಷ್ಯತ್ತು ತನ್ನದಾಗುವುದೆಂದು ಅರಿತುಕೊಂಡಳು. ಆಕೆ ಪಡೆದ ಆ ಜ್ಞಾನ ಆಕೆಯ ಹೃದಯವನ್ನು ಸ್ಪರ್ಶಿಸಿತು.

ಯೆಹೋವನ ಸಾಕ್ಷಿಗಳು ಈ ಕಿರುಹೊತ್ತಗೆಯನ್ನು 2011ರಲ್ಲಿ ಪ್ರಕಾಶಿಸಿದರು. ಇದು ಒಂದೇ ಕಿರುಹೊತ್ತಗೆಯಾಗಿದ್ದರೂ, ಇದು ಎರಡು ವಿಭಿನ್ನ ರೂಪಗಳಲ್ಲಿದೆ. ಕಿರುಹೊತ್ತಗೆಯ ಈ ಎರಡೂ ವಿಭಿನ್ನ ರೂಪಗಳಲ್ಲೂ ಸುಂದರ ಚಿತ್ರಗಳಿವೆ. ಆದರೆ ಇವೆರಡರಲ್ಲಿರುವ ವ್ಯತ್ಯಾಸ, ಒಂದರಲ್ಲಿ ಸ್ವಲ್ಪ ಹೆಚ್ಚು ವಾಕ್ಯಗಳಿದ್ದರೆ ಇನ್ನೊಂದರಲ್ಲಿ ಕಡಿಮೆ ಇವೆ.

ಹೆಚ್ಚು ವಾಕ್ಯಗಳಿರುವ ಆವೃತ್ತಿಯ ಹೆಸರು ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ. ಶೀಘ್ರದಲ್ಲಿಯೇ ಇದು ಸುಮಾರು 583 ಭಾಷೆಗಳಲ್ಲಿ ಲಭ್ಯವಾಗಲಿದೆ. ಇನ್ನೊಂದರ ಶೀರ್ಷಿಕೆ ದೇವರ ಮಾತನ್ನು ಆಲಿಸಿ ಎಂದಾಗಿದೆ. ಇದು 483 ಭಾಷೆಗಳಲ್ಲಿ ಲಭ್ಯವಾಗಲಿದೆ. ಇವುಗಳನ್ನು 2013ರ ಅಕ್ಟೋಬರ್‌ರಷ್ಟಕ್ಕೆ 413 ಭಾಷೆಗಳಲ್ಲಿ ಭಾಷಾಂತರಿಸಲಾದ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಘೋಷಣೆಗೆ ಹೋಲಿಸಿ. ಜೊತೆಗೆ, ಕಿರುಹೊತ್ತಗೆಯ ಆ ಎರಡು ವಿಭಿನ್ನ ರೂಪಗಳ ಪ್ರತಿಗಳನ್ನು ಸುಮಾರು 8 ಕೋಟಿಯಷ್ಟು ವಿತರಿಸಲಾಗಿದೆ.

ಬ್ರಸಿಲ್‌ನಲ್ಲಿ, ದೇವರ ಮಾತನ್ನು ಆಲಿಸಿ ಕಿರುಹೊತ್ತಗೆಯನ್ನು ಒಬ್ಬ ವೃದ್ಧ ಮಹಿಳೆ ಸಂತೋಷದಿಂದ ಸ್ವೀಕರಿಸಿ, ಹೀಗಂದಳು: “ನನ್ನಂಥವರ ಬಗ್ಗೆ ಯೋಚಿಸುವವರೂ ಇದ್ದಾರೆ ಅಂತ ನೋಡಿ ನನಗೆ ತುಂಬ ಖುಷಿ ಆಯಿತು. ನನಗೆ ಓದಲು ಬಾರದಿದ್ದ ಕಾರಣ ಈ ಹಿಂದೆ ಎಂದೂ ನಾನು ನಿಮ್ಮ ಪತ್ರಿಕೆಗಳನ್ನು ತೆಗೆದುಕೊಂಡಿರಲಿಲ್ಲ. ಆದರೆ ಕಿರುಹೊತ್ತಗೆ ನನಗೆ ಬೇಕು.”

ಫ್ರಾನ್ಸ್‌ನಲ್ಲಿ ವಾಸಿಸುವ ಬ್ರೀಸೀಟ್‌ ಎಂಬ ಅನಕ್ಷರಸ್ಥೆ ಹೇಳಿದ್ದು. “ನಾನು ಪ್ರತಿದಿನ ಇದರಲ್ಲಿನ ಚಿತ್ರಗಳನ್ನು ನೋಡ್ತೇನೆ.”

ದಕ್ಷಿಣ ಆಫ್ರಿಕದ ಒಬ್ಬ ಸಾಕ್ಷಿ ಹೇಳುವುದು, “ಚೀನಾದ ಜನರಿಗೆ ಬೈಬಲಿನ ಸಂದೇಶವನ್ನು ಪರಿಚಯಿಸಲು ನಾನು ಈ ಕಿರುಹೊತ್ತಗೆಗಿಂತ ಉತ್ತಮವಾದ ಸಾಹಿತ್ಯವನ್ನು ಇಂದಿನವರೆಗೂ ಕಂಡಿಲ್ಲ. ನಾನು ಈ ಕಿರುಹೊತ್ತಗೆಯನ್ನು ಉಪಯೋಗಿಸಿ ವಿಶ್ವ ವಿದ್ಯಾನಿಲಯದ ಪದವೀಧರರೊಂದಿಗೆ, ಜ್ಞಾನಿಗಳೊಂದಿಗೆ ಮತ್ತು ಅಲ್ಪ ಸ್ವಲ್ಪ ಓದುವವರೊಂದಿಗೂ ಚರ್ಚಿಸಿದ್ದೇನೆ. ಇದು ಎಲ್ಲ ರೀತಿಯ ಜನರಿಗೂ ಸಹಾಯಮಾಡುತ್ತದೆ. ಮೂಲಭೂತ ಬೈಬಲ್‌ ಬೋಧನೆಗಳನ್ನು ವಿದ್ಯಾರ್ಥಿಗಳಿಗೆ ಬಹಳ ಬೇಗ ಕಲಿಸಲು ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ ಕಿರುಹೊತ್ತಗೆ ಸಹಾಯ ಮಾಡುತ್ತದೆ. ಕೇವಲ ಅರ್ಧ ಗಂಟೆಯಲ್ಲಿ ಬೈಬಲ್‌ ಅಧ್ಯಯನಕ್ಕೆ ತಳಪಾಯ ಹಾಕಬಹುದು.”

ಜರ್ಮನಿಯಲ್ಲಿ ವಿದ್ಯಾವಂತ ದಂಪತಿಯೊಂದಿಗೆ ಯೆಹೋವನ ಸಾಕ್ಷಿಗಳು ಅಧ್ಯಯನ ಆರಂಭಿಸಿದರು. ಕಿರುಹೊತ್ತಿಗೆಯನ್ನು ಬಹಳ ಮೆಚ್ಚಿಕೊಂಡ ಪತಿ ತಿಳಿಸುವುದು, “ಈ ಕಿರುಹೊತ್ತಗೆಯನ್ನು ನನಗೆ ಮೊದಲೇ ಯಾಕೆ ಕೊಡಲಿಲ್ಲ? ಇದು ನನಗೆ ಬೈಬಲ್‌ ಘಟನೆಗಳನ್ನು ಮತ್ತು ವಾಕ್ಯಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡಿದೆ.”

ಶ್ರವಣ ದೋಷವಿರುವ ಆಸ್ಟ್ರೇಲಿಯಾದ ಒಬ್ಬ ಮಹಿಳೆ ಹೀಗನ್ನುತ್ತಾಳೆ: “ನಾನು ಅನೇಕ ವರ್ಷಗಳವರೆಗೆ ಕಾನ್ವೆಂಟ್‌ನಲ್ಲಿ ಸನ್ಯಾಸಿನಿಯರೊಂದಿಗಿದ್ದೆ. ಚರ್ಚಿನ ಮುಖಂಡರಿಗೆ ನಾನು ತುಂಬ ಆಪ್ತಳಾಗಿದ್ದೆ. ಆದರೂ ಅವರಲ್ಲಿ ಯಾರೂ ನನಗೆ ದೇವರ ರಾಜ್ಯ ಅಂದರೇನು ಎಂದು ಕಲಿಸಲಿಲ್ಲ. ಈ ಕಿರುಹೊತ್ತಗೆಯಲ್ಲಿರುವ ಚಿತ್ರಗಳು ನನಗೆ ಮತ್ತಾಯ 6:10​ರಲ್ಲಿರುವ ಮಾತಿನ ನಿಜ ಅರ್ಥವನ್ನು ತಿಳಿದುಕೊಳ್ಳಲು ಸಹಾಯ ಮಾಡಿದೆ.”

ಕೆನಡದ ಯೆಹೋವನ ಸಾಕ್ಷಿಗಳ ಕಾರ್ಯಾಲಯ ತಿಳಿಸುವುದು: “ದೇವರ ಮಾತನ್ನು ಆಲಿಸಿ ಕಿರುಹೊತ್ತಗೆಯನ್ನು ಕ್ರಿಯೋ ಭಾಷೆಯಲ್ಲಿ ನೋಡಿದಾಗ ಇಲ್ಲಿನ ಸಿಯೆರಾ ಲಿಯೋನ್‌ ಸಮುದಾಯದ ಅನೇಕರು ಯೆಹೋವನ ಸಾಕ್ಷಿಗಳನ್ನು ಶ್ಲಾಘಿಸಿದರು. ಬೈಬಲ್‌ ಸಂದೇಶವನ್ನು ತಿಳಿಸಲು ನಿಜವಾಗಿಯೂ ತುಂಬ ಕಷ್ಟಪಟ್ಟು ಕೆಲಸಮಾಡುತ್ತಿದ್ದೀರಾ ಅಂದರು.” ಇನ್ನು ಕೆಲವರು, ‘ಹೆಚ್ಚಿನ ಜನರು ತೋರಿಸದಿರುವ ಕಾಳಜಿಯನ್ನು ನೀವು ತೋರಿಸುತ್ತೀರಿ’ ಎಂದರು.