JW.ORG ಈಗ 300ಕ್ಕೂ ಹೆಚ್ಚಿನ ಭಾಷೆಗಳಲ್ಲಿ ಲಭ್ಯ!
jw.org ವೈಬ್‌ಸೈಟ್‌ನ ಮುಖ ಪುಟದಲ್ಲಿ ಭಾಷೆ ಎಂಬಲ್ಲಿ ಕ್ಲಿಕ್ಕಿಸಿದರೆ ನಿಮಗಲ್ಲಿ 300ಕ್ಕೂ ಹೆಚ್ಚಿನ ಭಾಷೆಗಳ ಪಟ್ಟಿ ಕಾಣಿಸುತ್ತದೆ. ಸಾಮಾನ್ಯವಾಗಿ ಬೇರೆ ಯಾವುದೇ ವೆಬ್‌ಸೈಟ್‌ನಲ್ಲೂ ಇಂಥ ಒಂದು ವಿಷಯ ಕಾಣಸಿಗುವುದಿಲ್ಲ!
ಇತರ ಪ್ರಖ್ಯಾತ ವೆಬ್‌ಸೈಟ್‌ಗಳ ಲಭ್ಯವಿರುವ ಭಾಷಾ ಸಂಖ್ಯೆಗಳಿಗೂ, jw.org ಲಭ್ಯವಿರುವ ಭಾಷಾ ಸಂಖ್ಯೆಗಳಿಗೂ ಹೋಲಿಸಿ ನೋಡಿದಾಗ ಗಮನಕ್ಕೆ ಬಂದದ್ದು: ಜುಲೈ 2013ರಷ್ಟಕ್ಕೆ ವಿಶ್ವ ಸಂಸ್ಥೆಯ ವೆಬ್‌ಸೈಟ್ ಕೇವಲ ಆರು ಭಾಷೆಗಳಲ್ಲಿ ಲಭ್ಯವಿತ್ತು. ಯುರೋಪಾ ಎಂಬ ಯುರೋಪಿಯನ್ ಯೂನಿಯನ್‌ನ ವೆಬ್‌ಸೈಟ್ 24 ಭಾಷೆಗಳಲ್ಲಿ ಲಭ್ಯವಿದೆ. ಗೂಗಲ್ 71 ಭಾಷೆಗಳಲ್ಲಿ ಲಭ್ಯವಿದ್ದರೆ ವಿಕಿಪೀಡಿಯಾ 287 ಭಾಷೆಗಳಲ್ಲಿ ಲಭ್ಯವಿದೆ.
300ಕ್ಕೂ ಹೆಚ್ಚು ಭಾಷೆಗಳಲ್ಲಿ ವೆಬ್‌ಸೈಟನ್ನು ಭಾಷಾಂತರಿಸಲು ಅನೇಕ ತಾಸುಗಳು ಕೆಲಸ ಮಾಡಬೇಕಾಗುತ್ತದೆ. ಲೋಕವ್ಯಾಪಕವಾಗಿ ಇರುವ ನೂರಾರು ಯೆಹೋವನ ಸಾಕ್ಷಿಗಳೇ ಇದಕ್ಕಾಗಿ ಹೆಚ್ಚಿನ ಕೆಲಸವನ್ನು ಮಾಡಿದ್ದಾರೆ. ಅವರು ಯೆಹೋವನಿಗೆ ಸ್ತುತಿ ತರಲು ಬಯಸುತ್ತಾರೆ. ಅವರು ಸುಸಂಘಟಿತ ಭಾಷಾ ತಂಡಗಳಾಗಿ ಕೆಲಸ ಮಾಡುತ್ತಾರೆ. ತಮ್ಮಲ್ಲಿರುವ ಕೌಶಲ್ಯವನ್ನು ಉಪಯೋಗಿಸಿ ಇಂಗ್ಲಿಷ್‌ನಿಂದ ತಮ್ಮ ತಮ್ಮ ಭಾಷೆಗಳಿಗೆ ಭಾಷಾಂತರಿಸುತ್ತಾರೆ.
JW.ORGಯಲ್ಲಿ ಲಭ್ಯವಿರುವ ಪುಟಗಟ್ಟಲೆ ಮಾಹಿತಿಯನ್ನು 300ಕ್ಕೂ ಹೆಚ್ಚು ಭಾಷೆಗಳಲ್ಲಿ ಭಾಷಾಂತರಿಸಲಾಗಿದೆ. ಈ ವೆಬ್‌ಸೈಟ್‌ನಲ್ಲಿರುವ ಒಟ್ಟು ಪುಟಗಳ ಸಂಖ್ಯೆ 2,00,000ಕ್ಕೂ ಹೆಚ್ಚು!
JW.ORG ವೆಬ್‌ಸೈಟ್ ಅತಿ ಹೆಚ್ಚು ಭಾಷೆಗಳಲ್ಲಿ ಲಭ್ಯವಿರುವುದು ಮಾತ್ರವಲ್ಲ, ಬಹು ಪ್ರಖ್ಯಾತ ವೆಬ್‌ಸೈಟ್ ಸಹ ಆಗಿದೆ. ಅಲೆಕ್ಸ್ ಎಂಬ ಕಂಪೆನಿ ಕೊಟ್ಟ ಮಾಹಿತಿಯಿಂದ ಈ ವಿಷಯ ತಿಳಿದು ಬಂದಿದೆ. ಈ ಕಂಪೆನಿ ಪ್ರಪಂಚದ ಯಾವ ವೆಬ್‌ಸೈಟ್ ಮೊದಲ ಸ್ಥಾನದಲ್ಲಿದೆ, ಎಷ್ಟು ಜನರು ಅದನ್ನು ನೋಡುತ್ತಾರೆ ಎನ್ನುವಂಥ ಮಾಹಿತಿಯನ್ನು ಕಲೆಹಾಕುತ್ತದೆ. ನಮ್ಮ ವೆಬ್‌ಸೈಟ್ “ಧರ್ಮ ಮತ್ತು ಆಧ್ಯಾತ್ಮ” ಎಂಬ ವಿಭಾಗಕ್ಕೆ ಸೇರುತ್ತದೆ. ಆ ವಿಭಾಗದಲ್ಲಿ ಸುಮಾರು 87,000 ವೆಬ್‌ಸೈಟ್‌ಗಳ ಹೆಸರನ್ನು ಪಟ್ಟಿ ಮಾಡಲಾಗಿದೆ. ಅದರಲ್ಲಿ ಪ್ರಪಂಚದ ದೊಡ್ಡ ದೊಡ್ಡ ಧರ್ಮಗಳ, ಅದರ ಧಾರ್ಮಿಕ ಪ್ರಚಾರಕರ ಮತ್ತು ಅದೇ ರೀತಿಯ ಇನ್ನಿತರ ಸಂಸ್ಥೆಗಳ ವೆಬ್‌ಸೈಟ್‌ಗಳ ಹೆಸರಿವೆ. ಜುಲೈ 2013ರಷ್ಟಕ್ಕೆ jw.org ವೆಬ್‌ಸೈಟ್ 2ನೇ ಸ್ಥಾನದಲ್ಲಿದೆ. ಮೊದಲ ಸ್ಥಾನವನ್ನು ವಿಭಿನ್ನ ಬೈಬಲ್ ಭಾಷಾಂತರಗಳನ್ನು ಒದಗಿಸುವ ಒಂದು ಖಾಸಗಿ ವೆಬ್‌ಸೈಟ್ ಪಡೆದಿದೆ.
ಅಕ್ಟೋಬರ್ 2013ರಷ್ಟಕ್ಕೆ ಪ್ರತಿದಿನ ಸುಮಾರು 8,90,000 ಹೊಸ ಜನರು jw.orgಯನ್ನು ವೀಕ್ಷಿಸುತ್ತಿದ್ದರು. ಲೋಕದಾದ್ಯಂತ ಎಲ್ಲಾ ಜನರಿಗೆ ಬೈಬಲಿನಲ್ಲಿರುವ ಪ್ರಾಯೋಗಿಕ ಮಾಹಿತಿಯು ಉಚಿತವಾಗಿ ಲಭ್ಯಗೊಳಿಸುತ್ತಿರುತ್ತೇವೆ.