ಮಾಹಿತಿ ಇರುವಲ್ಲಿ ಹೋಗಲು

ಬಹುದಿನಗಳ ಕನಸು ನನಸಾಯಿತು

ಬಹುದಿನಗಳ ಕನಸು ನನಸಾಯಿತು

ಪ್ರತಿ ವರ್ಷ ಹತ್ತಾರು ಸಾವಿರ ಜನರು ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸನ್ನು ಮತ್ತು ಮುಖ್ಯ ಕಾರ್ಯಾಲಯವನ್ನು ಸಂದರ್ಶಿಸಲು ಆಗಮಿಸುತ್ತಾರೆ. ಈ ಸ್ಥಳಗಳನ್ನು ಬೆತೆಲ್‌ ಎಂದು ಕರೆಯುತ್ತಾರೆ. ಬೆತೆಲ್‌ ಎಂಬ ಹೀಬ್ರು ಪದದ ಅರ್ಥ “ದೇವರ ಮನೆ” ಎಂದಾಗಿದೆ. ಜನರು ಈ ಸ್ಥಳಗಳಿಗೆ ಭೇಟಿ ನೀಡಲು ಹತ್ತಿರದಿಂದ ಮತ್ತು ದೂರದೂರದ ಸ್ಥಳಗಳಿಂದ ಬರುತ್ತಾರೆ. ನಮ್ಮ ಸಾಹಿತ್ಯಗಳು ಹೇಗೆ ತಯಾರಿಸಲ್ಪಡುತ್ತವೆ ಮತ್ತು ನಮ್ಮ ಕೆಲಸ ಹೇಗೆ ಸಂಘಟಿಸಲ್ಪಟ್ಟಿದೆ ಎಂಬುದನ್ನು ತಮ್ಮ ಕಣ್ಣಾರೆ ನೋಡುತ್ತಾರೆ. ಜೊತೆಗೆ, ಅಲ್ಲಿ ಸೇವೆ ಮಾಡುವ ತಮ್ಮ ಸ್ನೇಹಿತರನ್ನು ಭೇಟಿಮಾಡುತ್ತಾರೆ. ಇತ್ತೀಚೆಗೆ ಹೀಗೆ ಭೇಟಿ ಮಾಡಿದವರಲ್ಲಿ ಒಬ್ಬರು ಕಠಿಣ ಪ್ರಯತ್ನಗಳನ್ನು ಮಾಡಿ ಬಂದಿದ್ದರು. ಬನ್ನಿ, ಅವರ ಪ್ರಯತ್ನಗಳೇನೆಂದು ತಿಳಿಯೋಣ.

ಯೆಹೋವನ ಸಾಕ್ಷಿಯಾಗಿರುವ ಮಾರ್ಸೆಲಸ್‌ ಎಂಬ ಸಹೋದರನು ಅಮೆರಿಕದ ಅಲಾಸ್ಕದಲ್ಲಿರುವ ಅ್ಯಂಕರೆಜ್‌ ಎಂಬ ಸ್ಥಳದವನು. ಕೆಲವು ವರ್ಷಗಳ ಹಿಂದೆ ಅವನು ಪಾರ್ಶ್ವವಾಯು ರೋಗಕ್ಕೆ ತುತ್ತಾಗಿದ್ದರಿಂದ ಆತನ ಮಾತುಕತೆ ಕೆಲವೇ ಪದಗಳಿಗೆ ಸೀಮಿತವಾಯಿತು. * ಹೀಗೆ ಸದಾ ಗಾಲಿಕುರ್ಚಿಯಲ್ಲೇ ಇರುತ್ತಿದ್ದ ಅವನಿಗೆ ತನ್ನ ಎಲ್ಲಾ ಕೆಲಸಗಳಿಗೆ ಇತರರ ನೆರವಿನ ಅವಶ್ಯಕತೆಯಿತ್ತು. ಇಷ್ಟೆಲ್ಲಾ ಸವಾಲುಗಳಿದ್ದರೂ ಬೆತೆಲನ್ನು ಸಂದರ್ಶಿಸಬೇಕೆಂಬ ಹಂಬಲವಿತ್ತು. ಇತ್ತೀಚಿಗೆ ಆತನ ಬಹುದಿನಗಳ ಕನಸು ನನಸಾಯಿತು.

ಬೆತೆಲ್‌ ಪ್ರಯಾಣಕ್ಕೆ ನೆರವು ನೀಡಿದ ಮಾರ್ಸೆಲಸ್‌ರ ಸ್ನೇಹಿತನಾದ ಕಾರೀ ತಿಳಿಸಿದ್ದು “ಬೆತೆಲಿಗೆ ಹೋಗಲೇಬೇಕು ಎಂಬ ಛಲ ಆತನಲ್ಲಿತ್ತು. ಆಗಾಗ ನನಗೆ ಫೋನ್‌ ಮಾಡಿ ಬೆತೆಲ್‌ ಪ್ರಯಾಣದ ಕುರಿತು ಮಾಹಿತಿಯನ್ನು ಪಡೆಯುತ್ತಿದ್ದ. ಆತನ ಮಾತು ‘ಹೌದು’ ಮತ್ತು ‘ಇಲ್ಲ’ ಎಂಬ ಪದಗಳಿಗಷ್ಟೇ ಸೀಮಿತವಾಗಿದ್ದರಿಂದ ಆತನು ಫೋನ್‌ ಮಾಡಿದಾಗೆಲ್ಲಾ ನಾನು ಅವನಿಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಬೇಕಾಗುತ್ತಿತ್ತು.” ಆ ಸ್ನೇಹಿತರಿಬ್ಬರ ಸಂಭಾಷಣೆ ಹೀಗಿರುತ್ತಿತ್ತು:

“ನೀನ್‌ ನನ್ನನ್ನಾ ನೋಡಬೇಕಿತ್ತಾ?”

“ಇಲ್ಲ.”

“ಡಾಕ್ಟರ್‌ಗೆ ಬರಲಿಕ್ಕೆ ಹೇಳಬೇಕಿತ್ತಾ?”

“ಇಲ್ಲ.”

“ಬೆತೆಲಿಗೆ ಹೋಗೋದ್ರ ಬಗ್ಗೆನಾ?”

“ಹೌದು.”

“ಆ ನಂತರ ನಮ್ಮ ಪ್ರಯಾಣಕ್ಕಾಗಿ ಏನೆಲ್ಲಾ ತಯಾರಿ ಆಗಿದೆ, ಇನ್ನೂ ಏನೆಲ್ಲಾ ಬಾಕಿ ಇದೆ ಎಂದು ತಿಳಿಸುತ್ತಿದ್ದೆ. ಬೆತೆಲಿಗೆ ಹೋಗಬೇಕೆಂಬ ಆತನ ಕನಸು ನನಸಾಗುತ್ತಿರುವುದನ್ನು ನೋಡಿ ನನಗೆ ತುಂಬಾ ಸಂತೋಷ ಆಯಿತು.”

ಈ ಪ್ರಯಾಣಕ್ಕಾಗಿ ಮಾರ್ಸೆಲಸ್‌ ಹಲವಾರು ಸಮಸ್ಯೆಗಳನ್ನು ಜಯಿಸಿದನು. ಅವನಿರುವ ಸ್ಥಳದಿಂದ ನ್ಯೂಯಾರ್ಕ್‌ಗೆ ಸುಮಾರು 5,400 ಕಿ.ಮೀ. (3,400 ಮೈಲಿ). ಅಲ್ಲದೇ ಆತನಿಗಿದ್ದ ಆದಾಯ ಕೂಡ ಕಡಿಮೆ. ಹಾಗಾಗಿ ಅಷ್ಟು ದೂರದ ಪ್ರಯಾಣಕ್ಕಾಗಿ ಆತ ಸುಮಾರು ಎರಡು ವರ್ಷ ಹಣ ಕೂಡಿಸಿಡಬೇಕಾಯಿತು. ಅವನು ಗಾಲಿಕುರ್ಚಿಯಲ್ಲೇ ಇರಬೇಕಾಗಿದ್ದರಿಂದ ಪ್ರಯಾಣದಾದ್ಯಂತ ಅವನಿಗೆ ಒಬ್ಬ ಜೊತೆಗಾರನ ಅವಶ್ಯಕತೆಯಿತ್ತು. ಇದರ ಜೊತೆಗೆ, ವೈದ್ಯರಿಂದ ಅನುಮತಿ ಸಹ ಪಡೆದುಕೊಳ್ಳಬೇಕಿತ್ತು. ಈ ಅನುಮತಿ ಸಿಕ್ಕಿದ್ದು ಪ್ರಯಾಣಕ್ಕೆ ಕೇವಲ ಕೆಲವೇ ದಿನಗಳ ಹಿಂದೆ.

ಮಾರ್ಸೆಲಸ್‌ ನ್ಯೂಯಾರ್ಕಗೆ ಬಂದಾಗ ಬ್ರೂಕ್ಲಿನ್‌, ಪ್ಯಾಟರ್‌ಸನ್‌ ಮತ್ತು ವಾಲ್‌ಕಿಲ್‌ಗೆ ಭೇಟಿ ನೀಡಿದರು. ತಮ್ಮ ಪ್ರವಾಸಕ್ಕಾಗಿ ಮಾರ್ಗದರ್ಶಕರ ಸಹಾಯ ಪಡೆದರು. ಅಲ್ಲಿ ಬೈಬಲ್‌ಗಳನ್ನು ಮತ್ತು ಪುಸ್ತಕಗಳನ್ನು ಮುದ್ರಿಸುತ್ತಿರುವ ದೊಡ್ಡ ದೊಡ್ಡ ಮುದ್ರಣ ಯಂತ್ರಗಳನ್ನು ನೋಡಿದರು. ಜೊತೆಗೆ ನಮ್ಮ ಕೆಲಸ ಹೇಗೆ ಸಂಘಟಿಸಲ್ಪಟ್ಟಿದೆ ಎಂಬುದನ್ನು ಸಹ ತಿಳಿದುಕೊಂಡರು. ತನ್ನ ಈ ಪ್ರವಾಸದಲ್ಲಿ “ಬೈಬಲ್‌ ಮತ್ತು ದೇವರ ಹೆಸರು” ಮತ್ತು “ಯೆಹೋವನ ಹೆಸರಿಗಾಗಿ ಜೀವಿಸುತ್ತಿರುವ ಜನ” ಎಂಬ ವಿಡಿಯೋ ಮತ್ತಿತರ ಪದರ್ಶನಗಳ ಮೂಲಕ ಇತಿಹಾಸದ ಉದ್ದಕ್ಕೂ ನಮ್ಮ ಕೆಲಸ ಹೇಗೆ ಪ್ರಗತಿಯಾಗುತ್ತಾ ಬಂತು ಎಂಬುದನ್ನು ತಿಳಿದುಕೊಂಡನು. ಈ ಪ್ರವಾಸದಲ್ಲಿ ಅವನು ಅನೇಕ ಹೊಸ ಸ್ನೇಹಿತರನ್ನು ಮಾಡಿಕೊಂಡನು. ಇದು ಖಂಡಿತ ಅವನಿಗೆ ಜೀವನದಲ್ಲೇ ಮರೆಯಲಾಗದ ಪ್ರವಾಸವಾಗಿತ್ತು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ!

ಅನೇಕರನ್ನು ಬೆತೆಲ್‌ ಪ್ರವಾಸದ ಕುರಿತು ತಮ್ಮ ಅನುಭವವನ್ನು ತಿಳಿಸುವಂತೆ ಕೇಳಿಕೊಂಡಾಗ ಅದನ್ನು ಮಾತಿನಲ್ಲಿ ಬಣ್ಣಿಸಲು ಅಸಾಧ್ಯವೆಂದು ಹೇಳುತ್ತಾರೆ. ಆದರೆ ಮಾತಾಡಲು ಹೆಣಗಾಡುವ ಮಾರ್ಸೆಲಸ್‌ನನ್ನು ಅವನ ಈ ಬೆತೆಲ್‌ ಪ್ರವಾಸ ಸಾರ್ಥಕವಾಯಿತಾ ಎಂದು ಕೇಳಿದಾಗ ಅವನಿಂದ ಬಂದ ಮನದಾಳದ ಉತ್ತರ “ಹೌದು. ಹೌದು. ಹೌದು!”

ಮಾರ್ಸೆಲಸ್‌ಗೆ ಆದಂತೆ, ಬೆತೆಲ್‌ ಪ್ರವಾಸ ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ಪ್ರೋತ್ಸಾಹನೀಯವಾಗಿರುತ್ತದೆ. ನಮ್ಮ ಬ್ರಾಂಚ್‌ ಆಫೀಸನ್ನು ಭೇಟಿ ಮಾಡಲು ಎಲ್ಲರಿಗೂ ಆದರದ ಸ್ವಾಗತ. ನೀವೇಕೆ ಒಮ್ಮೆ ಭೇಟಿ ಮಾಡಿ ನೋಡಬಾರದು?

^ ಪ್ಯಾರ. 3 ಮಾರ್ಸೆಲಸ್‌ ಮೇ 19, 2014ರಲ್ಲಿ ನಿಧನರಾದರು. ಆಗಷ್ಟೇ ಈ ಲೇಖನವನ್ನು ಮುದ್ರಿಸಲು ನಿರ್ಧರಿಸಲಾಗಿತ್ತು.