ಮಾಹಿತಿ ಇರುವಲ್ಲಿ ಹೋಗಲು

137ನೇ ಗಿಲ್ಯಡ್‌ಶಾಲೆಯ ಪದವಿಪ್ರದಾನ ಸಮಾರಂಭ

137ನೇ ಗಿಲ್ಯಡ್‌ಶಾಲೆಯ ಪದವಿಪ್ರದಾನ ಸಮಾರಂಭ

ಸೆಪ್ಟೆಂಬರ್‌ 13, 2014ರಂದು 137ನೇ ಗಿಲ್ಯಡ್‌ ಶಾಲೆಯ ಪದವಿಪ್ರದಾನ ಕಾರ್ಯಕ್ರಮ ನಡೆಯಿತು. ಇದು ನಡೆದದ್ದು ನ್ಯೂಯಾರ್ಕ್‌ನ ಪ್ಯಾಟರ್ಸನ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಎಜ್ಯುಕೇಷನಲ್‌ ಸೆಂಟರ್‌ನಲ್ಲಿ. ಈ ಶಾಲೆ ಅನುಭವಸ್ಥ ಪ್ರಚಾರಕರಿಗೆ, ತಮಗೆ ನೇಮಕವಾಗುವ ಸಭೆಗಳನ್ನು ಮತ್ತು ಬ್ರಾಂಚ್‌ಆಫೀಸುಗಳನ್ನು ಮತ್ತಷ್ಟು ಬಲಪಡಿಸಲು ತರಬೇತಿ ನೀಡಿತು. ಈ ಸಮಾರಂಭಕ್ಕೆ ಸುಮಾರು 12,333 ಮಂದಿ ಹಾಜರಿದ್ದರು. ಕೆಲವರಿಗೆ ಅಲ್ಲೇ ಹಾಜರಾಗುವ ಅವಕಾಶ ಸಿಕ್ಕಿತು. ಇನ್ನು ಕೆಲವರು ಕೆನಡಾ, ಜಮೈಕಾ, ಪೋರ್ಟರಿಕೊ ಮತ್ತು ಅಮೆರಿಕದಲ್ಲಿ ನಡೆದಂಥ ನೇರ ಪ್ರಸಾರದ ಮೂಲಕ ಇದನ್ನು ನೋಡಿ ಆನಂದಿಸಿದರು.

ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಸದಸ್ಯರಾದ ಸಹೋದರ ಸ್ಯಾಮುವೆಲ್‌ಹರ್ಡ್‌ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯೆಹೋವನ ಆಲೋಚನೆಗಳು ನಮ್ಮ ಆಲೋಚನೆಗಳಿಗಿಂತ ತುಂಬಾ ಉನ್ನತವೆಂದು ಹೇಳುತ್ತಾ ಕಾರ್ಯಕ್ರಮವನ್ನು ಆರಂಭಿಸಿದರು. (ಯೆಶಾಯ 55:8, 9) ಗಿಲ್ಯಡ್‌ ವಿದ್ಯಾರ್ಥಿಗಳು ಐದು ತಿಂಗಳಲ್ಲಿ ಎಷ್ಟೋ ಕಲಿತಿದ್ದಾರೆ. ಆದರೂ ಅದೆಲ್ಲವೂ ಕೇವಲ ಯೆಹೋವನ “ಮಾರ್ಗಗಳ ಅಂಚು ಮಾತ್ರವಷ್ಟೇ” ಎಂದು ಸಹ ಹೇಳಿದರು. (ಯೋಬ 26:14, NW) ದೇವರ ಆಲೋಚನೆಗಳನ್ನು ಚರ್ಚಿಸಲು ಸೇರಿದಾಗೆಲ್ಲ ನಾವು ಅದರಿಂದ ಪ್ರಯೋಜನ ಪಡೆಯುತ್ತೇವೆ, ಇದು ಈ ಕಾರ್ಯಕ್ರಮದ ವಿಷಯದಲ್ಲೂ ಸತ್ಯ ಅಂತ ಸಹೋದರ ಹರ್ಡ್‌ ಹೇಳಿದರು.

“ಪವಿತ್ರಾತ್ಮದಿಂದ ಉಂಟಾಗುವ ಫಲವೇನೆಂದರೆ . . . ತಾಳ್ಮೆ.” (ಗಲಾತ್ಯ 5:22) ಅಮೆರಿಕದ ಬ್ರಾಂಚ್‌ಕಮಿಟಿಯ ಸದಸ್ಯರಾದ ಜಾನ್‌ಲಾರ್ಸನ್‌ರವರು ಈ ಭಾಷಣ ನೀಡಿದರು. ಪವಿತ್ರಾತ್ಮದಿಂದ ಉಂಟಾಗುವ ಫಲದ ಒಂದಂಶವಾದ ತಾಳ್ಮೆಯನ್ನು ಹೇಗೆ ತೋರಿಸುವುದು ಎಂದು ವಿವರಿಸಿದರು. ಅದರಲ್ಲಿ ಎರಡು ವಿಧಗಳಿವೆ. ಒಂದು, ಯೆಹೋವನು ನಮಗೆ ತರಬೇತಿ ಕೊಡುವಾಗ ಮತ್ತು ನಂಬಿಕೆಯಲ್ಲಿ ಬಲವಾಗಿ ಬೇರೂರಲು ಸಹಾಯ ಮಾಡುವಾಗ ನಾವು ತಾಳ್ಮೆ ತೋರಿಸಬೇಕು. (1 ಪೇತ್ರ 5:10) ಈ ರೀತಿ ತಾಳ್ಮೆ ತೋರಿಸಿದವರಲ್ಲಿ ಉತ್ತಮ ಉದಾಹರಣೆ ಅಬ್ರಹಾಮ. ಯೆಹೋವನು ಅವನನ್ನು ತರಬೇತಿಗೊಳಿಸಿ ತನ್ನ ವಾಗ್ದಾನವನ್ನು ಪೂರೈಸುವ ತನಕ ಅವನು ತಾಳ್ಮೆಯಿಂದಿದ್ದನು.—ಇಬ್ರಿಯ 6:15.

ಎರಡು, ನಾವು ನಮ್ಮ ವಿಷಯದಲ್ಲೇ ತಾಳ್ಮೆ ತೋರಿಸಬೇಕು. ವಿದ್ಯಾರ್ಥಿಗಳು ಈ ಗಿಲ್ಯಡ್‌ ಶಾಲೆಯ ನಂತರ ಏನೇನೋ ಸಾಧಿಸಬೇಕೆಂದು ನೆನೆಸಿರುತ್ತಾರೆ. ಆದರೆ ತಾವು ನೆನಸಿದಂತೆ ಕೂಡಲೇ ಒಳ್ಳೇ ಪ್ರತಿಫಲ ಸಿಗದಿದ್ದಾಗ ‘ನನ್ನಲ್ಲೇ ಏನೋ ಕೊರತೆಯಿರಬೇಕು’ ಎನ್ನುವ ಮನೋಭಾವ ಅವರಲ್ಲಿ ಬರಬಹುದು. ಹೀಗೆ ತಾಳ್ಮೆ ಕಳೆದುಕೊಳ್ಳಬಹುದು. ದೇವರು ತರಬೇತಿ ನೀಡುವಾಗ ತಾಳ್ಮೆಯಿಂದ, ಶ್ರಮಶೀಲರಾಗಿರುವ ಮೂಲಕ ಸವಾಲುಗಳನ್ನು ಜಯಿಸಬಹುದೆಂದು ಸಹೋದರ ಲಾರ್ಸನ್‌ ತಮ್ಮ ಸ್ವಂತ ಅನುಭವದಿಂದ ಹೇಳಿದರು.—ಇಬ್ರಿಯ 6:11, 12.

“ನಿಮ್ಮ ಹೃದಯದಲ್ಲಿ ದೀನತೆಯಿರಲಿ ಮತ್ತು ಅದು ಚೈತನ್ಯವುಳ್ಳದ್ದಾಗಿರಲಿ!” ಆಡಳಿತ ಮಂಡಲಿಯ ಸದಸ್ಯರಾದ ಆ್ಯಂಟನಿ ಮಾರಿಸ್‌ರ ಭಾಷಣವು ಕೀರ್ತನೆ 22:26ರ ಮೇಲೆ ಆಧಾರಿತವಾಗಿತ್ತು. ಈ ವಚನದ ಎರಡನೇ ಭಾಗದ ಅಕ್ಷರಾರ್ಥ “ನಿಮ್ಮ ಹೃದಯವು ಸದಾ ಜೀವಿಸಲಿ” ಎಂದಾಗಿದೆ. ಈ ರೀತಿ ನಮ್ಮ ಹೃದಯ ಚೈತನ್ಯ ಪಡೆಯಬೇಕಾದರೆ ನಾವು ದೀನರಾಗಿರುವುದು ತುಂಬಾ ಅವಶ್ಯಕ. ನಮ್ಮಲ್ಲಿ ದೀನತೆ ಇಲ್ಲ ಅಂದರೆ ಯೆಹೋವನು ನಮ್ಮನ್ನು ಬಳಸಲಾರನು. ಕೆಲವೊಮ್ಮೆ ಅನೇಕ ವರ್ಷಗಳಿಂದ ಸತ್ಯದಲ್ಲಿರುವವರು ಕೂಡ ಕ್ರಿಸ್ತನಲ್ಲಿದ್ದಂಥ ದೀನತೆ ತೋರಿಸುವುದರಲ್ಲಿ ತಪ್ಪಿ ಹೋಗಿದ್ದಾರೆ. ಅದರಿಂದ ನಾವು ಎಚ್ಚರಿಕೆಯಿಂದಿರಬೇಕೆಂದು ಸಹೋದರ ಮಾರಿಸ್‌ ಒತ್ತಿಹೇಳಿದರು.—2 ಪೇತ್ರ 1:9.

ಬೈಬಲಿನಲ್ಲಿ, ದೀನತೆ ತೋರಿಸಿದವರ ಮತ್ತು ತೋರಿಸದವರ ಉದಾಹರಣೆಗಳಿವೆ. ದೀನತೆಯ ಕೊರತೆಯಿದ್ದ ಒಬ್ಬ ವ್ಯಕ್ತಿ ಹೆರೋದ ಅಗ್ರಿಪ್ಪ. ದೇವರಿಗೆ ಮಾತ್ರ ಸಲ್ಲಬೇಕಾದ ಮಹಿಮೆಯನ್ನು ಜನರು ಅವನಿಗೆ ಸಲ್ಲಿಸಿದಾಗ ಅದನ್ನು ಸ್ವೀಕರಿಸಿ ಅಹಂಕಾರದಿಂದ ಉಬ್ಬಿ ಹೋದನು. ಇದರ ಪರಿಣಾಮವಾಗಿ ಯೆಹೋವನ ದೂತನು ಅವನನ್ನು ಶಿಕ್ಷಿಸಿದನು. “ಅವನು ಹುಳಬಿದ್ದು ಸತ್ತನು.” (ಅಪೊಸ್ತಲರ ಕಾರ್ಯಗಳು 12:21-23) ಇದಕ್ಕೆ ವ್ಯತಿರಿಕ್ತವಾಗಿರುವ ಮಾದರಿ ಪೇತ್ರನದ್ದು. ಒಮ್ಮೆ ಯೇಸು ಪೇತ್ರನಿಗೆ “ನೀನು ಆಲೋಚಿಸುವುದು ಮನುಷ್ಯರ ಆಲೋಚನೆಗಳೇ ಹೊರತು ದೇವರದಲ್ಲ!” ಎಂದು ಗದರಿಸಿದಾಗ ಪೇತ್ರನು ಕೋಪಿಸಿಕೊಳ್ಳಲಿಲ್ಲ. (ಮತ್ತಾಯ 16:21-23) ಅವನು ದೀನತೆಯಿಂದ ಯೇಸು ನೀಡಿದ ಶಿಸ್ತನ್ನು ಸ್ವೀಕರಿಸಿದನು. ಹೀಗೆ ದೀನತೆ ತೋರಿಸುವ ವಿಷಯದಲ್ಲಿ ಉತ್ತಮ ಮಾದರಿಯಿಟ್ಟನು.—1 ಪೇತ್ರ 5:5.

ಕೆಲವು ವಿದ್ಯಾರ್ಥಿಗಳಿಗೆ ಬ್ರಾಂಚ್‌ ಆಫೀಸಿನಲ್ಲಿ ಕೆಲಸ ಮಾಡುವ ನೇಮಕ ಸಿಗಬಹುದು. ಒಂದುವೇಳೆ ಅವರಲ್ಲಿ ದೀನತೆಯಿಲ್ಲ ಅಂದರೆ ತಮ್ಮ ನೇಮಕವನ್ನು ಸಂತೋಷದಿಂದ ಮಾಡಲಾರರು ಅಂತ ಸಹೋದರ ಆ್ಯಂಟನಿ ಮಾರಿಸ್‌ ಎಚ್ಚರಿಸಿದರು. ಆದರೆ ನಮ್ಮಲ್ಲಿ ದೀನತೆಯ ಕೊರತೆಯಿದೆ ಅಂತ ಕಂಡುಹಿಡಿಯುವುದು ಸ್ವಲ್ಪ ಕಷ್ಟನೇ. ಇದಕ್ಕೆ ಒತ್ತು ನೀಡಲು ಸಹೋದರ ಮಾರಿಸ್‌, ಅನೇಕ ವರ್ಷಗಳ ಹಿಂದೆ ನಡೆದಂಥ ಒಂದು ಘಟನೆ ತಿಳಿಸಿದರು. ಒಬ್ಬ ಹಿರಿಯನು ದೀನತೆ ತೋರಿಸಲು ತಪ್ಪಿ ಹೋದ ಕಾರಣ ಅವನಿಗೆ ಸಲಹೆ ನೀಡಲ್ಪಟ್ಟಿತು. ಆಗ “ನನಗೆ ಗೊತ್ತಿರೋ ಮಟ್ಟಿಗೆ ನನ್ನಂಥ ದೀನ ವ್ಯಕ್ತಿ ಯಾರೂ ಇಲ್ಲ” ಅಂತ ಬ್ರಾಂಚ್‌ ಆಫೀಸಿಗೆ ಪತ್ರ ಬರೆದನಂತೆ. ಕೆಲವೊಮ್ಮೆ ಇಂಥ ಮನೋಭಾವ ನಮ್ಮಲ್ಲೂ ಬರಬಹುದು. ಹಾಗಾಗಿ ಎಚ್ಚರಿಕೆಯಿಂದ ಇರಬೇಕೆಂದು ಸಹೋದರ ಮಾರಿಸ್‌ ಪ್ರೋತ್ಸಾಹಿಸಿದರು. ನಮಗಿರುವ ಅಧಿಕಾರದ ಬಗ್ಗೆ ಹಿಗ್ಗಿಕೊಳ್ಳಬಾರದು. ಬದಲಿಗೆ ನಿಜ ಅಧಿಕಾರದ ಮೂಲ ಯೆಹೋವ ದೇವರು ಮತ್ತು ಯೇಸು ಕ್ರಿಸ್ತನೆಂದು ಗ್ರಹಿಸಬೇಕು. ಆಗ ಮಾತ್ರ ನಾವು ದೀನರಾಗಿರಲು ಸಾಧ್ಯ.

“ದೇವರು ಪವಿತ್ರಾತ್ಮವನ್ನು ಅಳತೆಮಾಡಿ ನೀಡುವುದಿಲ್ಲ.” (ಯೋಹಾನ 3:34) ವಿದ್ಯಾರ್ಥಿಗಳು ತಮ್ಮ ನೇಮಕಗಳಲ್ಲಿ ಕೆಲವೊಂದು ಸವಾಲುಗಳನ್ನು ಮತ್ತು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಆದರೆ ಅವುಗಳನ್ನು ಪವಿತ್ರಾತ್ಮದ ಸಹಾಯದಿಂದ ಖಂಡಿತ ಜಯಿಸಬಹುದು. ಈ ವಿಷಯವನ್ನು ಸದಾ ಮನಸ್ಸಿನಲ್ಲಿಡುವಂತೆ ಗಿಲ್ಯಡ್‌ ಶಾಲೆಯ ಶಿಕ್ಷಕರಾದ ಮೈಕಲ್‌ ಬರ್ನೆಟ್‌ ತಿಳಿಸಿದರು. ದೇವಗುಡಾರವನ್ನು ಕಟ್ಟುವ ಕಷ್ಟದ ನೇಮಕವನ್ನು ಪೂರೈಸಲು ಬೆಚಲೇಲನಿಗೆ ಪವಿತ್ರಾತ್ಮ ಸಹಾಯಮಾಡಿತು. (ವಿಮೋಚನಕಾಂಡ 35:30-35) ಕೆತ್ತನೆಗಾರನಾಗಿ ಅವನಿಗಿದ್ದ ಕೌಶಲ್ಯವನ್ನು ಉತ್ತಮಗೊಳಿಸುವುದರ ಜೊತೆಗೆ ಅದನ್ನು ಇತರರಿಗೆ ಕಲಿಸುವಷ್ಟರ ಮಟ್ಟಿಗೆ ಪವಿತ್ರಾತ್ಮವು ಅವನಿಗೆ ನೆರವು ನೀಡಿತು. ಹಾಗೆಯೇ ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿತಂತೆ ಬೈಬಲಾಧರಿತವಾಗಿ ಬೋಧಿಸುವಾಗ ಪವಿತ್ರಾತ್ಮ ಅವರಿಗೂ ಸಹಾಯ ನೀಡುವುದು.

ಬೆಚಲೇಲನ ಸಮಯದಲ್ಲಿ ಸ್ತ್ರೀಯರು ಸಹ ಗುಡಾರ ಕಟ್ಟುವ ಕೆಲಸದಲ್ಲಿ ಪ್ರಾಮುಖ್ಯ ಪಾತ್ರ ವಹಿಸಿದರು. (ವಿಮೋಚನಕಾಂಡ 35:25, 26) ಶಾಲೆಯಲ್ಲಿರುವ ಸಹೋದರಿಯರು ತಮ್ಮ ಗಂಡಂದಿರಿಗೆ ಬೆಂಬಲ ನೀಡುವ ಮೂಲಕ ಆ ‘ಜಾಣೆಯರಾದ ಸ್ತ್ರೀಯರಂತೆ’ ಇದ್ದಾರೆ. ಸಹೋದರ ಬರ್ನೆಟ್‌ ಈ ಮುಂದಿನ ಹೇಳಿಕೆಯ ಮೂಲಕ ತಮ್ಮ ಮಾತುಗಳನ್ನು ಮುಗಿಸಿದರು: “ನಿಮಗಿರುವ ಕೌಶಲ್ಯದಲ್ಲಿ ದೀನತೆ ಮತ್ತು ವಿಧೇಯತೆ ಕೂಡಿರಲಿ. ಹೀಗೆ ಮಾಡುವಲ್ಲಿ ಯೆಹೋವನು ತನ್ನ ಪವಿತ್ರಾತ್ಮವನ್ನು ಹೇರಳವಾಗಿ ಒದಗಿಸುವನು.”

ನೀನೂ ನನ್ನೊಟ್ಟಿಗೆ ಸಂಭ್ರಮಿಸುತ್ತೀಯೋ?” ಟೀಚಿಂಗ್‌ ಕಮಿಟಿಗೆ ನೆರವು ನೀಡುತ್ತಿರುವ ಸಹೋದರ ಮಾರ್ಕ್‌ ನ್ಯೂಮ್ಯಾರ್‌ ಈ ಭಾಷಣವನ್ನು ನೀಡಿದರು. ರಾಜ ದಾವೀದನು ಯೆರೂಸಲೇಮಿಗೆ ಒಡಂಬಡಿಕೆಯ ಮಂಜೂಷವನ್ನು ಹೊತ್ತು ತಂದ ವಿಷಯದ ಮೇಲೆ ಈ ಭಾಷಣ ಆಧರಿತವಾಗಿತ್ತು. (2 ಸಮುವೇಲ 6:12-14) ಮಂಜೂಷವನ್ನು ಹೊತ್ತು ತರುವ ಸಂಭ್ರಮದ ಸಮಯದಲ್ಲಿ ದಾವೀದನು ದೀನತೆಯಿಂದ “ತನ್ನ ಜನರ ದಾಸಿಯರ” ಜೊತೆಗೆ ಕುಣಿಯುತ್ತಾ ತನ್ನ ಸಂತೋಷವನ್ನು ವ್ಯಕ್ತಪಡಿಸಿದನು. ರಾಜನೊಂದಿಗೆ ಕುಣಿದಾಡಿದ ಆ ದಿನವನ್ನಂತೂ ದಾಸಿಯರು ಖಂಡಿತ ಮರೆತಿರಲ್ಲ. (2 ಸಮುವೇಲ 6:20-22) ಶಾಲೆಯ ವಿದ್ಯಾರ್ಥಿಗಳು ಸಹ ದಾವೀದನಂತೆ ದೀನತೆಯ ಮನೋಭಾವ ಬೆಳೆಸಿಕೊಳ್ಳುವಂತೆ ಸಹೋದರ ನ್ಯೂಮ್ಯಾರ್‌ ಕರೆಕೊಟ್ಟರು. ಆ ನಂತರ ಅವರು ಕೇಳಿದ್ದು: “ನಿಮ್ಮನ್ನು ಇತರರು ಹೇಗೆ ವೀಕ್ಷಿಸುತ್ತಾರೆ? ಬರೀ ಇತರರ ಸುಯೋಗ ನೋಡಿ ನೆರವು ನೀಡುವಂಥ ವ್ಯಕ್ತಿ ಅಂತನಾ? ಅಥವಾ ಇತರರಲ್ಲಿರುವ ಆಧ್ಯಾತ್ಮಿಕ ಗುಣವನ್ನು ಗಣ್ಯಮಾಡುವಂಥ ವ್ಯಕ್ತಿ ಅಂತನಾ?”

ವಿದ್ಯಾರ್ಥಿಗಳು ಪ್ರೀತಿ ತೋರಿಸುವ ಮೂಲಕ ಯೆಹೋವ ದೇವರನ್ನು ಅನುಕರಿಸಿಬಹುದು. (ಕೀರ್ತನೆ 113:6, 7) ಕೆಲವೊಮ್ಮೆ ಅಪರಿಪೂರ್ಣತೆಯ ಕಾರಣ ಇತರ ಸಹೋದರರು ದೀನತೆ ತೋರಿಸಲು ತಪ್ಪಿಹೋಗಬಹುದು. ಅದು ತಮ್ಮ ಮೇಲೆ ಪ್ರಭಾವ ಬೀರದಂತೆ ವಿದ್ಯಾರ್ಥಿಗಳು ನೋಡಿಕೊಳ್ಳಬೇಕು ಎಂಬ ಸಲಹೆಯನ್ನು ಸಹೋದರ ನ್ಯೂಮ್ಯಾರ್‌ ನೀಡಿದರು. “ಬೇರೆಯವರಿಗಿಂತ ನಾವು ಶ್ರೇಷ್ಠರಲ್ಲ ಎಂಬ ಮನೋಭಾವ ನಿಮ್ಮಲ್ಲಿರಲಿ . . . ಯೆಹೋವನು ತನ್ನ ಕುರಿಗಳನ್ನು ಹೇಗೆ ನೋಡಿಕೊಳ್ಳುತ್ತಾನೋ ಹಾಗೇ ನೀವೂ ನೋಡಿಕೊಳ್ಳಿ” ಎಂದು ಸಹ ಹೇಳಿದರು.

“ಪ್ರತಿಯೊಂದು ಸಂದರ್ಭದಲ್ಲೂ ಸಾಕ್ಷಿನೀಡಿ.” ತಿಯಾಕ್ರ್ಯಾಟಿಕ್‌ ಸ್ಕೂಲ್ಸ್‌ ಡಿಪಾರ್ಟ್‌ಮೆಂಟ್‌ನ ಮೇಲ್ವಿಚಾರಕರಾದ ವಿಲ್ಯಮ್‌ ಸ್ಯಾಮ್ವೆಲ್‌ಸನ್‌ಪೌಲನ ಉದಾಹರಣೆಯನ್ನು ಹೇಳಿದರು. ಅವನು ತನಗೆ ಸಿಕ್ಕಿದ ಪ್ರತಿಯೊಂದು ಅವಕಾಶವನ್ನು ಸುವಾರ್ತೆಗಾಗಿ ಸದುಪಯೋಗಿಸಿಕೊಂಡ ಅಂಶವನ್ನು ಒತ್ತಿ ಹೇಳಿದರು. (ಅಪೊಸ್ತಲರ ಕಾರ್ಯಗಳು 17:17) ಗಿಲ್ಯಡ್‌ ಶಾಲೆಯ ಸಮಯದಲ್ಲಿ ತಮಗೆ ಶುಶ್ರೂಷೆಯಲ್ಲಿ ಸಿಕ್ಕಿದ ಅನುಭವಗಳನ್ನು ವಿದ್ಯಾರ್ಥಿಗಳು ಪುನರಭಿನಯಿಸಿ ತೋರಿಸಿದರು. ಉದಾಹರಣೆಗೆ, ದಂಪತಿಯೊಬ್ಬರು ಮಾರುಕಟ್ಟೆಯಲ್ಲಿ ಗುಮಾಸ್ತೆಯೊಬ್ಬಳಿಗೆ ಸಾಕ್ಷಿ ನೀಡಿದರು. ಆಕೆ ಪುರುಸೊತ್ತಾಗುವವರೆಗೆ ಕಾದು ನಂತರ ಆಕೆಯೊಂದಿಗೆ ಮಾತಾಡಿದರು. ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು? ಎಂಬ ವಿಡಿಯೋವನ್ನು ತೋರಿಸಿದರು. jw.org ವೆಬ್‌ಸೈಟಿಗೆ ಆಕೆಯನ್ನು ನಿರ್ದೇಶಿಸುತ್ತಾ ಆಕೆಯ ಸ್ವಂತ ಭಾಷೆಯಾದ ಲಓಷಿಯನ್‌ನಲ್ಲಿ ಮಾಹಿತಿಯನ್ನು ಪಡೆಯಬಹುದೆಂದು ತಿಳಿಸಿದರು. ನಂತರ ಪುನರ್ಭೇಟಿ ಮಾಡಿದರು.

“ದೇವರ ರಾಜ್ಯದ ಕೆಲಸಕ್ಕಾಗಿ ಮುಂದಾಗಿರಿ.” ಅಮೆರಿಕ ಬ್ರಾಂಚ್‌ನ ಸರ್ವಿಸ್‌ ಡಿಪಾರ್ಟ್‌ಮೆಂಟ್‌ನಲ್ಲಿ ಕೆಲಸಮಾಡುತ್ತಿರುವ ಸಹೋದರ ವಿಲ್ಯಮ್‌ ನಾನ್‌ಕೀಸ್‌, ಗಿಲ್ಯಡ್‌ ಶಾಲೆಯ ನಾಲ್ಕು ವಿದ್ಯಾರ್ಥಿಗಳನ್ನು ಸಂದರ್ಶಿಸಿದರು. ಯೆಶಾಯ 6:8​ರಲ್ಲಿರುವ ಮನೋಭಾವವನ್ನು ತೋರಿಸುತ್ತಾ ಇವರೆಲ್ಲರೂ ಈಗಾಗಲೇ ರಾಜ್ಯದ ಸೇವೆಗಾಗಿ ತಮ್ಮನ್ನು ನೀಡಿಕೊಂಡಿದ್ದಾರೆ. ಇನ್ನೂ ಹೆಚ್ಚು ಸೇವೆ ಮಾಡಲು ಈ ಶಾಲೆ ಅವರಿಗೆ ತರಬೇತಿ ನೀಡಿದೆ. ತನ್ನ ಸೇವೆಯನ್ನು ಹೇಗೆ ಇನ್ನಷ್ಟು ಉತ್ತಮಗೊಳಿಸಬಹುದೆಂದು ಗಿಲ್ಯಡ್‌ ಶಾಲೆಯಿಂದ ಕಲಿತಿರುವುದಾಗಿ ಸಹೋದರಿ ಸ್ನೋಲಿಯಾ ಮಾಸೆಕೋ ಹೇಳಿದರು. ದಿನ ಪೂರ್ತಿ ಸೇವೆ ಮಾಡಿದ ನಂತರ ಉಳಿಯುವ ಸಮಯ ಕೊಂಚ, ಆದರೂ ಆ ಸಮಯವನ್ನು ಒಳ್ಳೆ ರೀತಿಯಲ್ಲಿ ಹೇಗೆ ಬಳಸಬಹುದು ಅಂತ ಈ ಶಾಲೆಯಿಂದ ಕಲಿತೆ ಎಂದು ಹೇಳುತ್ತಾ “ನನ್ನ ಕೈಯಲ್ಲಿ ಆಗಲ್ಲ ಅಂತ ಯೋಚಿಸಿದ್ದನ್ನೆಲ್ಲಾ ಮಾಡುವಂತೆ ಈ ಶಾಲೆ ನನಗೆ ತರಬೇತಿ ನೀಡಿತು” ಎಂದು ಸಂತೋಷಪಟ್ಟರು. ಸಹೋದರ ಡೆನಿಸ್‌ ನೀಲ್‌ಸನ್‌ರವರು ಶಾಲೆಯಲ್ಲಿ ಚೆಫನ್ಯ 3:17​ರಿಂದ ಕಲಿತ ವಿಷಯವನ್ನು ಹಂಚಿಕೊಂಡರು. “ಶುಶ್ರೂಷೆಯಲ್ಲಿ ಒಳ್ಳೆಯ ಪ್ರತಿಫಲ ಸಿಗದಿದ್ದರೆ ನಾನು ನಿರಾಶನಾಗಬಾರದು. ಯೆಹೋವನು ಆನಂದಿಸಿ ಹರ್ಷಧ್ವನಿಗೈಯುತ್ತಿದ್ದಾನೆ ಅಂತ ನೆನಪಿನಲ್ಲಿಟ್ಟುಕೊಂಡು ನಾನೂ ಹರ್ಷಿಸಬೇಕು” ಎಂದರು ಸಹೋದರ ನೀಲ್‌ಸನ್‌.

“ಆಕಾಶದ ಪಕ್ಷಿಗಳನ್ನು ಸೂಕ್ಷ್ಮವಾಗಿ ಗಮನಿಸಿರಿ.” (ಮತ್ತಾಯ 6:26) ಆಡಳಿತ ಮಂಡಲಿಯ ಸದಸ್ಯರಾದ ಸಹೋದರ ಸ್ಟೀಫನ್‌ ಲೆಟ್‌ರವರು ಕಾರ್ಯಕ್ರಮದ ಈ ಮುಖ್ಯ ಭಾಷಣವನ್ನು ನೀಡಿದರು. ಆಕಾಶದ ಪಕ್ಷಿಗಳನ್ನು “ಸೂಕ್ಷ್ಮವಾಗಿ ಗಮನಿಸಿರಿ” ಎಂದು ಯೇಸು ಹೇಳಿದ ವಿಷಯದಿಂದ ನಾವು ಅನೇಕ ಪಾಠಗಳನ್ನು ಕಲಿಯಬಹುದು. ಅವುಗಳನ್ನು ಸಹೋದರ ಲೆಟ್‌ ಎತ್ತಿ ತೋರಿಸಿದರು.—ಯೋಬ 12:7.

ಯೆಹೋವನು ಪಕ್ಷಿಗಳಿಗೆ ಹೇಗೆ ಆಹಾರ ಒದಗಿಸುತ್ತಾನೋ ಹಾಗೆಯೇ ನಮ್ಮ ಅವಶ್ಯಕತೆಗಳನ್ನೂ ನೋಡಿಕೊಳ್ಳುತ್ತಾನೆ ಎನ್ನುವುದು ಒಂದು ಪಾಠ. ಯೆಹೋವನು ತನ್ನ ‘ಸ್ವಂತದವರಿಗೆ, ವಿಶೇಷವಾಗಿ ತನ್ನ ಮನೆವಾರ್ತೆಯ ಸದಸ್ಯರಿಗೆ ಅಗತ್ಯವಿರುವುದನ್ನು ಒದಗಿಸುವೆನು’ ಎಂಬ ಆಶ್ವಾಸನೆ ಕೊಟ್ಟಿದ್ದಾನೆ. ನಾವು “ದೇವರ ಮನೆವಾರ್ತೆಯ” ಸದಸ್ಯರಾಗಿರುವುದರಿಂದ ಖಂಡಿತ ಆತನು ನಮ್ಮ ಅವಶ್ಯಕತೆಗಳನ್ನು ಪೂರೈಸುವನು. (1 ತಿಮೊಥೆಯ 3:15; 5:8) ಹಾಗಂತ ನಾವು ಸುಮ್ಮನೆ ಕೂತರೆ ಆಗಲ್ಲ, ಪ್ರಯತ್ನ ಹಾಕಬೇಕು. ಪಕ್ಷಿಗಳು ಕೂಡ ದೇವರು ಒದಗಿಸುವ ಆಹಾರಕ್ಕಾಗಿ ಹುಡುಕಬೇಕು. ಹಾಗೆಯೇ ನಾವೂ ‘ರಾಜ್ಯವನ್ನು . . . ಹುಡುಕುತ್ತಾ ಇರಬೇಕು.’—ಮತ್ತಾಯ 6:33.

ಸಹೋದರ ಲೆಟ್‌ ಇನ್ನೊಂದು ಮುಖ್ಯ ಅಂಶವನ್ನು ಒತ್ತಿ ಹೇಳಿದರು. ಪಕ್ಷಿಗಳು ಅಪಾಯ ಕಂಡಾಗ ಬೇರೆ ಪಕ್ಷಿಗಳನ್ನೂ ಎಚ್ಚರಿಸುತ್ತವೆ. ಹಾಗೆಯೇ ನಾವು ಸಹ ಯಾವುದಾದರೂ ಸಹೋದರನು “ತನಗೆ ಅರಿವಿಲ್ಲದೆಯೇ ಯಾವುದೋ ತಪ್ಪುಹೆಜ್ಜೆಯನ್ನು ಇಡುವುದಾದರೆ” ಅವನಿಗೆ ಎಚ್ಚರಿಸಬೇಕು. (ಗಲಾತ್ಯ 6:1) ಅಲ್ಲದೆ, ಶುಶ್ರೂಷೆಯ ಮೂಲಕ “ಯೆಹೋವನ ಮಹಾದಿನ” ತುಂಬಾ ಹತ್ತಿರದಲ್ಲಿದೆ ಎಂದು ಜನರಿಗೆ ಎಚ್ಚರಿಕೆ ನೀಡಬೇಕು. (ಚೆಫನ್ಯ 1:14) ಸಹೋದರ ಲೆಟ್‌ ಇನ್ನೊಂದು ಉದಾಹರಣೆಯನ್ನೂ ಹೇಳಿದರು. ವಲಸೆ ಹೋಗುತ್ತಿರುವ ಪಕ್ಷಿಗಳು ಹೇಗೆ ದೊಡ್ಡ ದೊಡ್ಡ ಬೆಟ್ಟಗಳ ಮೇಲೆ ಹಾರಿಹೋಗುತ್ತವೆಯೋ ಹಾಗೆಯೇ ನಾವು ಯೆಹೋವನ ಸಹಾಯದಿಂದ ಬೆಟ್ಟದಂಥ ಸಮಸ್ಯೆಗಳನ್ನು ಜಯಿಸಬಹುದು ಎಂದು ಹೇಳಿದರು.—ಮತ್ತಾಯ 17:20.

ಮುಕ್ತಾಯ. ವಿದ್ಯಾರ್ಥಿಗಳು ತಮ್ಮ ಪದವಿ ಸ್ವೀಕರಿಸಿದ ನಂತರ ಅವರಲ್ಲೊಬ್ಬರು ಎಲ್ಲರ ಪರವಾಗಿ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಮುಕ್ತಾಯದ ಹೇಳಿಕೆಯಲ್ಲಿ ಸಹೋದರ ಹರ್ಡ್‌ ಯೆಹೋವನ ಆಲೋಚನೆಗಳನ್ನು ನಮ್ಮ ಹೃದಯದಲ್ಲಿ ನಾಟಿಸುವುದು ಹೇಗೆ ಅಂತ ತಿಳಿಸುತ್ತಾ ಒಂದು ಉದಾಹರಣೆಯನ್ನು ಹೇಳಿದರು. ರೈಲುಕಂಬಿಯ ಕೆಳಗೆ ಹಾಸಿರುವ ಅಡ್ಡದಿಮ್ಮಿಯನ್ನು ಬಿಗಿಯಾಗಿ ಕೂರಿಸಲು ಆಣಿಗಳನ್ನು ಜೋರಾಗಿ ಮತ್ತೆ ಮತ್ತೆ ಹೊಡೆಯಬೇಕಾಗುತ್ತದೆ. ಯೆಹೋವನ ಯೋಚನೆಗಳನ್ನು ನಮ್ಮ ಹೃದಯದಲ್ಲಿ ನಾಟಿಸಲು ಅಂಥದ್ದೇ ಶ್ರಮ ಅವಶ್ಯವೆಂದು ತಿಳಿಸಿದರು. ಅದರಂತೆ ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿತಂಥ ವಿಷಯಗಳನ್ನು ಮನನ ಮಾಡಬೇಕು. “ನಿಮ್ಮ ಹೃದಯದಲ್ಲಿ ದೇವರ ಆಲೋಚನೆಗಳನ್ನು ನಾಟಿಸಲು ಸಮಯ ಕೊಡಿ” ಅಂತ ಸಹೋದರ ಹರ್ಡ್‌ ಪ್ರೋತ್ಸಾಹಿಸಿದರು. “ದೇವರ ಆಲೋಚನೆಗಳಂತೆ ನಡೆದರೆ ನೀವು ಸಂಘಟನೆಗೆ ವರವಾಗಬಲ್ಲಿರಿ” ಎಂಬ ಹೇಳಿಕೆಯ ಮೂಲಕ ತಮ್ಮ ಭಾಷಣ ಮುಗಿಸಿದರು.