ಮಾಹಿತಿ ಇರುವಲ್ಲಿ ಹೋಗಲು

ಟೊರಾಂಟೊ ಪುಸ್ತಕ ಪ್ರದರ್ಶನದಲ್ಲಿ JW.ORG

ಟೊರಾಂಟೊ ಪುಸ್ತಕ ಪ್ರದರ್ಶನದಲ್ಲಿ JW.ORG

2014ರ ನವೆಂಬರ್‌ 13ರಿಂದ 16ರವರೆಗೆ ಮೆಟ್ರೋ ಟೊರಾಂಟೊ ಕನ್ವೆನ್ಷನ್‌ ಸೆಂಟರ್‌ನಲ್ಲಿ ಟೊರಾಂಟೊ ಅಂತರರಾಷ್ಟ್ರೀಯ ಪುಸ್ತಕ ಪ್ರದರ್ಶನವಿತ್ತು. ಮುದ್ರಿತ ಮತ್ತು ಡಿಜಿಟಲ್‌ ರೂಪದಲ್ಲಿರುವ ಪುಸ್ತಕಗಳನ್ನು ಪ್ರದರ್ಶನದಲ್ಲಿ ಇಡಲಾಗಿತ್ತು. ಆ ನಾಲ್ಕು ದಿನಗಳಲ್ಲಿ 20 ಸಾವಿರಕ್ಕಿಂತ ಹೆಚ್ಚು ಜನರು ಪ್ರದರ್ಶನವನ್ನು ನೋಡಲು ಬಂದಿದ್ದರು.

ಪ್ರದರ್ಶಕರಲ್ಲಿ ಯೆಹೋವನ ಸಾಕ್ಷಿಗಳೂ ಇದ್ದರು. ಅವರು ಕಣ್‌ಸೆಳೆಯುವಂಥ ಕಿರುಅಂಗಡಿಯನ್ನಿಟ್ಟು, jw.org ವೆಬ್‌ಸೈಟನ್ನು ಹುಡುಕುವುದು ಹೇಗೆ ಎಂದು ಟ್ಯಾಬ್ಲೆಟ್‌ಗಳಿಂದ ತೋರಿಸುತ್ತಿದ್ದರು.

ಈ ಪ್ರದರ್ಶನವನ್ನು ಏರ್ಪಡಿಸಿದ ಮ್ಯಾನೇಜರ್‌ ಸಾಕ್ಷಿಗಳಿಗೆ ಹೇಳಿದ್ದು: “ನಿಮ್ಮ ವೆಬ್‌ಸೈಟ್‌ ಇವತ್ತಿನ ಕಾಲಕ್ಕೆ ಸೂಕ್ತವಾಗಿದೆ. ಬಂದ ಜನರ ಹತ್ತಿರ ನೀವು ಮಾತಾಡುವ ವಿಧವನ್ನು ಇತರ ಪ್ರದರ್ಶಕರೂ ನೋಡಿ ಕಲಿಯಬೇಕು.” ಪ್ರದರ್ಶನ ನೋಡಲು ಬಂದವರು, ಈ ವೆಬ್‌ಸೈಟ್‌ ತುಂಬ ಪರಿಣಾಮಕಾರಿಯಾಗಿದೆ, ಹುಡುಕುವುದು ಸಹ ತುಂಬ ಸುಲಭ ಮತ್ತು ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರಗಳನ್ನೂ ಕೊಡುತ್ತದೆ ಎಂದು ಹೇಳಿದರು. ತಮ್ಮ ಸಮಸ್ಯೆಗಳನ್ನು, ಚಿಂತೆಗಳನ್ನು ನಿಭಾಯಿಸುವುದು ಹೇಗೆಂದು ವೆಬ್‌ಸೈಟ್‌ ಸಹಾಯ ಮಾಡುವ ವಿಧವನ್ನು ನೋಡಿ ಜನರಿಗೆ ತುಂಬ ಇಷ್ಟವಾಯಿತು.

ಕಿರುಅಂಗಡಿಯಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದ ಸಾಕ್ಷಿಗಳು ಬಂದ ಜನರೊಂದಿಗೆ ಮಾತಾಡಿದಾಗ, ಅವರಲ್ಲಿ ಅನೇಕರಿಗೆ ಈ ಪುಸ್ತಕ ಪ್ರದರ್ಶನಕ್ಕೆ ಬರುವ ಮುಂಚೆ jw.org ವೆಬ್‌ಸೈಟ್‌ ಬಗ್ಗೆ ಗೊತ್ತೇ ಇರಲಿಲ್ಲ ಅಂತ ತಿಳಿದುಬಂತು. ಬಂದವರಲ್ಲಿ ಹೆಚ್ಚು-ಕಡಿಮೆ ಎಲ್ಲರೂ ಸಾಕ್ಷಿಗಳ ವಿಳಾಸ ಪಡೆದುಕೊಂಡರು ಅಥವಾ ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಯಾರಿಂದ ಉತ್ತರ ಸಿಗಬಹುದು? ಕರಪತ್ರವನ್ನು ಪಡೆದುಕೊಂಡರು. ಅನೇಕರು ವೆಬ್‌ಸೈಟನ್ನು ಪುನಃ ನೋಡುತ್ತೇವೆಂದು ಹೇಳಿದರು. ಇನ್ನು ಕೆಲವರು ಯೆಹೋವನ ಸಾಕ್ಷಿಗಳು ತಮ್ಮನ್ನು ಭೇಟಿ ಮಾಡುವಂತೆ ಕೇಳಿಕೊಂಡರು.

ಪ್ರದರ್ಶನದ ಶುಕ್ರವಾರ “ಮಕ್ಕಳ ದಿನ” ಆಗಿತ್ತು. ಹಾಗಾಗಿ ಸಾಕ್ಷಿಗಳು jw.orgನಲ್ಲಿರುವ ಚಲಿಸುವ ಚಿತ್ರಗಳಿಂದ ಪಾಠಗಳನ್ನು (ವೈಟ್‌ಬೋರ್ಡ್‌ ಆ್ಯನಿಮೇಷನ್‌) ಪ್ರದರ್ಶಿಸಿದರು. ಶಾಲಾಮಕ್ಕಳ ಗುಂಪುಗಳು ತಮ್ಮ ಶಿಕ್ಷಕರೊಂದಿಗೆ ಬರುತ್ತಿರುವಾಗ ಈ ವಿಡಿಯೋಗಳನ್ನು ಸ್ವಲ್ಪ ಹೊತ್ತು ಅಲ್ಲೇ ನಿಂತು ನೋಡುತ್ತಿದ್ದರು.

ಬೈಬಲನ್ನು ಮುದ್ರಿಸುವ ಕಂಪೆನಿಯಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬ ಚಿಕಾಗೋವಿನಿಂದ ಬಂದಿದ್ದನು. ಪ್ರದರ್ಶನದಲ್ಲಿಟ್ಟ ಪವಿತ್ರ ಶಾಸ್ತ್ರಗ್ರಂಥದ ನೂತನ ಲೋಕ ಭಾಷಾಂತರ ಬೈಬಲಿನ ಗುಣಮಟ್ಟ ತುಂಬ ಚೆನ್ನಾಗಿದೆ ಎಂದು ಹೊಗಳಿದನು. ಅದನ್ನು ಮುದ್ರಿಸಿದವರನ್ನು ಸಂಪರ್ಕಿಸಲು ವಿಳಾಸವನ್ನು ಕೇಳಿ ಪಡೆದುಕೊಂಡನು.

jw.org ವೆಬ್‌ಸೈಟ್‌ 700ಕ್ಕಿಂತ ಹೆಚ್ಚು ಭಾಷೆಗಳಲ್ಲಿ ಲಭ್ಯವಿದೆ. ಪ್ರದರ್ಶನಕ್ಕೆ ಬಂದವರು ಆ್ಯಂಹ್ಯಾರಿಕ್‌, ಇಂಗ್ಲಿಷ್‌, ಉರ್ದು, ಕೊರಿಯನ್‌, ಗ್ರೀಕ್‌, ಗುಜರಾತಿ, ಚೈನೀಸ್‌, ಟೈಗ್ರಿನ್ಯ, ತಮಿಳು, ಪೋರ್ಚುಗೀಸ್‌, ಫ್ರೆಂಚ್‌, ಬೆಂಗಾಲಿ, ವಿಯಟ್ನಾಮೀಸ್‌, ಸ್ಪ್ಯಾನಿಷ್‌, ಸ್ವೀಡಿಷ್‌, ಹಿಂದಿ ಭಾಷೆಗಳಲ್ಲಿ ಈ ವೆಬ್‌ಸೈಟನ್ನು ನೋಡಿದರು.

ಬಂದವರನ್ನು ಸ್ವಾಗತ್ತಿಸುತ್ತಿದ್ದ ಸಾಕ್ಷಿಯೊಬ್ಬನು, ಜನರಿಗೆ ವೆಬ್‌ಸೈಟ್‌ ಬಗ್ಗೆ ಹೇಳುವುದಕ್ಕಿಂತ ಅದನ್ನು ತೋರಿಸುವುದು ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಕಂಡುಕೊಂಡನು. ಅವನು ಹೇಳಿದ್ದು: “ನಮ್ಮ ವೆಬ್‌ಸೈಟನ್ನು ಜನರಿಗೆ ಪರಿಚಯಿಸಲು ಈ ಪ್ರದರ್ಶನ ನಮಗೆ ಅದ್ಭುತ ಅವಕಾಶವನ್ನು ಕೊಟ್ಟಿತು.”