JW.ORG ವೆಬ್‌ಸೈಟನ್ನು ಜನಪ್ರಿಯಗೊಳಿಸಿದ ಲೋಕವ್ಯಾಪಕ ಅಭಿಯಾನ
jw.org ವೆಬ್‌ಸೈಟ್ ಬಗ್ಗೆ ಪ್ರಚಾರ ಮಾಡಲು ಯೆಹೋವನ ಸಾಕ್ಷಿಗಳು 2014ರ ಆಗಸ್ಟ್ ತಿಂಗಳಿನಲ್ಲಿ ಲೋಕವ್ಯಾಪಕವಾಗಿ ಒಂದು ಕರಪತ್ರವನ್ನು ಹಂಚುವ ಅಭಿಯಾನ ಮಾಡಿದರು. ಫಲಿತಾಂಶವಾಗಿ, ಆ ತಿಂಗಳಿನಲ್ಲಿ ವೆಬ್‌ಸೈಟ್‌ಗ ಭೇಟಿಕೊಟ್ಟವರ ಸಂಖ್ಯೆ ಮುಂಚೆಗಿಂತ ಶೇ.20ರಷ್ಟು ಹೆಚ್ಚಾಯಿತು. ಹತ್ತಿರತ್ತಿರ 6ಕೋಟಿ 50ಲಕ್ಷ ಜನರು ವೆಬ್‌ಸೈಟಿಗೆ ಭೇಟಿ ಕೊಟ್ಟರು. ಲೋಕವ್ಯಾಪಕವಾಗಿ ಸುಮಾರು 10ಸಾವಿರ ಜನರು ಅಂದರೆ ಹಿಂದಿನ ತಿಂಗಳಿಗಿಂತ ಸುಮಾರು 67 ಶೇಕಡದಷ್ಟು ಜಾಸ್ತಿ ಜನರು ವೆಬ್‌ಸೈಟ್ ಮೂಲಕ ಉಚಿತ ಮನೆ ಬೈಬಲ್ ಅಧ್ಯಯನಗಳಿಗೆ ಕೇಳಿಕೊಂಡರು. ಈ ಅಭಿಯಾನದಿಂದ ಎಲ್ಲ ಕಡೆಯಿದ್ದ ಜನರಿಗೆ ತುಂಬಾನೇ ಸಹಾಯವಾಯಿತು.
ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದವರಿಗೆ ಸಿಕ್ಕಿದ ಸಹಾಯ
ಕೆನಡಾದಲ್ಲಿರುವ ಸಾಕ್ಷಿಯೊಬ್ಬಳು ಲಿಫ್ಟ್‌ನಲ್ಲಿ ಸಿಕ್ಕಿದ ಮ್ಯಾಡ್ಲನ್ ಎಂಬ ಸ್ತ್ರೀಯನ್ನು ಮಾತನಾಡಿಸಿ ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಯಾರಿಂದ ಉತ್ತರ ಸಿಗಬಹುದು? ಕರಪತ್ರವನ್ನು ಅವಳಿಗೆ ತೋರಿಸಿದಳು. ಆಗ ಮ್ಯಾಡ್ಲನ, ಕಳೆದ ರಾತ್ರಿಯೇ ತನ್ನ ಮನೆಯ ಬಾಲ್ಕನಿಯಲ್ಲಿ ನಿಂತು ತನಗಿದ್ದ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಲು ಸಹಾಯ ಮಾಡುವಂತೆ ದೇವರಲ್ಲಿ ಪ್ರಾರ್ಥಿಸಿದ್ದಳೆಂದು ಹೇಳಿದಳು. ಈ ಹಿಂದೆ ಅವಳು ತನಗೆ ಬೈಬಲ್ ಅಧ್ಯಯನ ಮಾಡುವಂತೆ ಅನೇಕ ಚರ್ಚುಗಳಲ್ಲಿ ಕೇಳಿದ್ದರೂ ಯಾರೂ ಅವಳಿಗೆ ಬೈಬಲ್ ಅಧ್ಯಯನ ಮಾಡಿರಲಿಲ್ಲ. ಆದರೆ ಈಗ ಅವಳು ತಡಮಾಡದೇ ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್ ಅಧ್ಯಯನ ಮಾಡಲು ಪ್ರಾರಂಭಿಸಿದಳು.
ಬೈಬಲ್ ಬಗ್ಗೆ ಪರಿಚಯವಿಲ್ಲದಿದ್ದವರಿಗೆ ಸಿಕ್ಕಿದ ಸಹಾಯ
ಫಿಲಿಪ್ಪೀನ್ಸ್‌ನಲ್ಲಿ, ರೋಈನ್ ಎಂಬ ಸಾಕ್ಷಿ ಫಾಸ್ಟ್-ಫುಡ್ ರೆಸ್ಟೋರೆಂಟ್ ಮುಂದೆ ನಿಂತಿದ್ದ ಒಬ್ಬ ಚೀನೀ ವ್ಯಕ್ತಿಯೊಂದಿಗೆ ಮಾತನಾಡಿದಳು. ಅವನಿಗೆ ಕರಪತ್ರವನ್ನು ಕೊಡುತ್ತಾ ಯೆಹೋವನ ಸಾಕ್ಷಿಗಳು ಉಚಿತವಾಗಿ ಬೈಬಲ್ ಶಿಕ್ಷಣ ನಡೆಸಿ ಜನರಿಗೆ ಸಹಾಯ ಮಾಡಲು ಬಯಸುತ್ತಾರೆಂದು ತಿಳಿಸಿದಳು.
ಆ ವ್ಯಕ್ತಿ ಇದನ್ನು ಕೇಳಿ ಬೈಬಲ್ ಅಂದರೆ ಹೇಗಿರುತ್ತದೆಂದು ಸಹ ತಾನು ನೋಡಿಲ್ಲ ಎಂದು ಹೇಳಿದನು. ನಂತರ ನಡೆದ ಸಂಭಾಷಣೆಯಿಂದಾಗಿ ಯೆಹೋವನ ಸಾಕ್ಷಿಗಳ ಸಮ್ಮೇಳನಕ್ಕೆ ಅವನು ಹಾಜರಾದನು. ಅಲ್ಲಿಗೆ ಹೋಗಿಬಂದ ನಂತರ ‘ಬೈಬಲ್ ಬಗ್ಗೆ ಇನ್ನೂ ಹೆಚ್ಚನ್ನು ತಿಳಿದುಕೊಳ್ಳಲು ಬಯಸುತ್ತೇನೆ ಮತ್ತು ವೆಬ್‌ಸೈಟ್‌ನಿಂದ ಬೈಬಲನ್ನು ಡೌನ್‌ಲೋಡ್ ಮಾಡಿಕೊಳ್ಳುತ್ತೇನೆ’ ಎಂದು ಹೇಳಿದನು.
ಶ್ರವಣ ದೋಷವಿರುವವರಿಗೆ ಸಿಕ್ಕಿದ ಸಹಾಯ
ಸ್ಪೇನಿನಲ್ಲಿರುವ ಗೀಯೆರ್‌ಮೋ ಎಂಬ ಶ್ರವಣ ದೋಷವಿರುವ ಯೆಹೋವನ ಸಾಕ್ಷಿ ಹಿಂದೆ ತನ್ನ ಸಹಪಾಠಿಯಾಗಿದ್ದ ಹಾರ್ಹೇ ಎಂಬವನನ್ನು ಭೇಟಿ ಮಾಡಿದ. ಹಾರ್ಹೇಗೂ ಶ್ರವಣ ದೋಷವಿತ್ತು. ತನ್ನ ತಾಯಿ ಇತ್ತೀಚೆಗಷ್ಟೇ ತೀರಿಹೋದರು ಮತ್ತು ಇದರ ಬಗ್ಗೆ ತನಗೆ ಅನೇಕ ಪ್ರಶ್ನೆಗಳಿವೆ ಎಂದು ಹಾರ್ಹೇ ಹೇಳಿದನು. ಗೀಯೆರ್‌ಮೋ ಅವನಿಗೆ ಅಭಿಯಾನದ ಕರಪತ್ರವನ್ನು ಕೊಟ್ಟನು ಮತ್ತು jw.org ವೆಬ್‌ಸೈಟ್‌ನಲ್ಲಿ ಆತನಿಗಿರುವ ಪ್ರಶ್ನೆಗಳಿಗೆ ಉತ್ತರಗಳನ್ನು ಸನ್ನೆ ಭಾಷೆಯಲ್ಲೇ ಹೇಗೆ ಹುಡುಕಬಹುದೆಂದು ವಿವರಿಸಿದನು. ರಾಜ್ಯ ಸಭಾಗೃಹದಲ್ಲಿ ನಡೆಯುವ ಕೂಟಗಳಿಗೂ ಹಾಜರಾಗುವಂತೆ ಹಾರ್ಹೇಯನ್ನು ಆಮಂತ್ರಿಸಿದನು. ಅವನು ಹಾಜರಾದನು. ರಾಜ್ಯ ಸಭಾಗೃಹ 60 ಕಿ.ಮೀ.ರಷ್ಟು ದೂರವಿದ್ದರೂ ಹಾರ್ಹೇಯು ಆಗಿನಿಂದ ತಪ್ಪದೇ ಕೂಟಗಳಿಗೆ ಹಾಜರಾಗುತ್ತಿದ್ದಾನೆ.
ದೂರದ ಸ್ಥಳದಲ್ಲಿರುವವರಿಗೆ ಸಿಕ್ಕಿದ ಸಹಾಯ
ಸಾಕಷ್ಟು ಹಣ ಖರ್ಚು ಮಾಡಿ ಗ್ರೀನ್‌ಲೆಂಡ್‌ನಲ್ಲಿರುವ ಇಬ್ಬರು ಸಾಕ್ಷಿ ದಂಪತಿಗಳು ಚಿಕ್ಕ ದೋಣಿಯಲ್ಲಿ ಸುಮಾರು 6 ಗಂಟೆಗಳು ಪ್ರಯಾಣ ಮಾಡಿ 280 ನಿವಾಸಿಗಳಿರುವ ಒಂದು ಹಳ್ಳಿಯನ್ನು ತಲುಪಿದರು. ಅಲ್ಲಿ ಅವರು ಸುವಾರ್ತೆ ಸಾರಿ, ಕರಪತ್ರಗಳನ್ನು ಹಂಚಿದರು. jw.orgನಲ್ಲಿದ್ದ ವಿಡಿಯೋವನ್ನು ಗ್ರೀನ್‌ಲ್ಯಾಂಡಿಕ್ ಭಾಷೆಯಲ್ಲಿ ತೋರಿಸಿದರು. ಅವರು ಭೇಟಿ ಮಾಡಿದ ದಂಪತಿಯೊಟ್ಟಿಗೆ ಬೈಬಲ್ ಅಧ್ಯಯನವನ್ನು ಸಹ ಆರಂಭಿಸಿದರು. ಈಗ ಫೋನ್‌ನಲ್ಲಿ ವಾರಕ್ಕೆರಡು ಬಾರಿ ಅಧ್ಯಯನ ನಡೆಸುತ್ತಿದ್ದಾರೆ.
ಇಂಥ ಪ್ರಯತ್ನಗಳು ಈ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಕ್ಯಾರಿಬೀಅನ್ ಕಾಡಿನಲ್ಲಿ ಮಯಂಗ್ನ ಭಾಷೆಯಲ್ಲಿ ಮಾತಾಡುವ ಜನರಿಗೆ ಕರಪತ್ರಗಳನ್ನು ಹಂಚಲು ನಿಕಾರಾಗ್ವದಲ್ಲಿದ್ದ ಸಾಕ್ಷಿಗಳು ಏರ್ಪಾಡು ಮಾಡಿದರು. ಅಲ್ಲಿಗೆ ತಲುಪಲು ಗುಂಡಿ-ಹಳ್ಳಗಳಿದ್ದ ರಸ್ತೆಯ ಮೇಲೆ ಡಕೋಟ ಬಸ್‌ನಲ್ಲಿ ಕುಳಿತು ಸತತ 20 ತಾಸುಗಳು ಪ್ರಯಾಣ ಮಾಡಿದರು. ನಂತರ 11 ತಾಸುಗಳು ಕಾಲ್ನಡಿಗೆಯಲ್ಲಿ ಹೋದರು. ಅಲ್ಲಲ್ಲಿದ್ದ ಕೆಸರು ಗುಂಡಿಗಳಲ್ಲಿ ನಡೆದು ಹೋಗಬೇಕಾಯಿತು. ಕರಪತ್ರಗಳನ್ನು ಹಂಚಿ ಮಯಂಗ್ನ ಭಾಷೆಯಲ್ಲಿದ್ದ ವಿಡಿಯೋಗಳನ್ನು ತೋರಿಸಿದಾಗ ಅಲ್ಲಿದ್ದವರಿಗೆ ಆಶ್ಚರ್ಯವಾಯಿತು. ತುಂಬ ಖುಷಿಪಟ್ಟರು.
ಬ್ರೆಜಿಲ್‌ನ ಅಮೆಜಾನಿನ ಮಳೆಕಾಡಿನಲ್ಲಿರುವ ಒಂದು ಸಣ್ಣ ಪಟ್ಟಣದಲ್ಲಿ ಹಾದು ಹೋಗುತ್ತಿದ್ದ ವ್ಯಕ್ತಿಯೊಬ್ಬನಿಗೆ ಎಸ್ಟೆಲಾ ಎಂಬವಳು ಕರಪತ್ರವನ್ನು ಕೊಟ್ಟಳು. ಕರಪತ್ರವನ್ನು ತೆಗೆದುಕೊಂಡರೂ ಓದಲು ಅಷ್ಟೇನೂ ಆಸಕ್ತಿ ತೋರಿಸದೆ, ಅವನು ಅದನ್ನು ತನ್ನ ಜೇಬಿನಲ್ಲಿ ಇಟ್ಟುಕೊಂಡನು. ಅವನು ತನ್ನ ಮನೆಗೆ ಹೋಗುವಾಗ ದೋಣಿಯ ಇಂಜಿನ್ ಹಾಳಾಗಿ ಮುಂದಕ್ಕೆ ಹೋಗದೆ ಅಲ್ಲೇ ನಿಂತಿತು. ನದಿಯ ಮಧ್ಯದಲ್ಲೇ ಅವನು ಸಿಕ್ಕಿಹಾಕಿಕೊಂಡನು. ಯಾರಾದರೂ ಸಹಾಯಕ್ಕೆ ಬರುತ್ತಾರಾ ಅಂತ ಕಾಯುತ್ತಿರುವಾಗ ಆ ಕರಪತ್ರವನ್ನು ಅವನು ಓದಲು ಆರಂಭಿಸಿದನು. ತನ್ನ ಮೊಬೈಲ್ ಫೋನಿನಲ್ಲಿ jw.org ವೆಬ್‌ಸೈಟನ್ನು ತೆರೆದು ಅಲ್ಲಿದ್ದ ಅನೇಕ ಲೇಖನಗಳನ್ನು ಓದಿದನು ಮತ್ತು ಕೆಲವು ವಿಡಿಯೋಗಳನ್ನು ಡೌನ್‌ಲೋಡ್ ಮಾಡಿಕೊಂಡನು. ಸ್ವಲ್ಪ ದಿವಸಗಳ ನಂತರ, ಆ ವ್ಯಕ್ತಿಗೆ ಎಸ್ಟೆಲಾಳ ಪತಿ ಸಿಕ್ಕಿದಾಗ ಆಕೆಗೆ ಧನ್ಯವಾದವನ್ನು ತಿಳಿಸುವಂತೆ ಕೇಳಿಕೊಂಡನು. “ನದಿ ಮಧ್ಯದಲ್ಲಿ ಸಿಕ್ಕಿಹಾಕಿಕೊಂಡಾಗ ಯಾರಾದರೂ ಸಹಾಯಕ್ಕೆ ಬರುವವರೆಗೂ ಸಮಾಧಾನದಿಂದ ಇರಲು ಈ ಲೇಖನಗಳು ನನಗೆ ಸಹಾಯ ಮಾಡಿದವು. ನನ್ನ ಮಕ್ಕಳಿಗೆ ಕೇಲಬ್ ವಿಡಿಯೋಗಳು ತುಂಬ ಇಷ್ಟ, ನಾನು jw.org ವೆಬ್‌ಸೈಟನ್ನು ನೋಡುತ್ತಿರುತ್ತೇನೆ” ಎಂದು ಅವನು ಹೇಳಿದನು.