ಬೆತೆಲ್ ಭೇಟಿ ಮಾಡುವುದರ ಕುರಿತ ಮಾಹಿತಿ
ನಮ್ಮ ಬ್ರಾಂಚ್ ಆಫೀಸ್‌ಗಳನ್ನು ಅಂದರೆ ಬೆತೆಲನ್ನು ಭೇಟಿ ಮಾಡುವಂತೆ ನಿಮ್ಮನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇವೆ. ನಮ್ಮ ಆಫೀಸ್‌ಗಳಲ್ಲಿ ನಡೆಯೋ ಪ್ರದರ್ಶನಗಳನ್ನು ನೋಡಲು ಗೈಡ್‌ಗಳು ಬೇಕಾಗಿಲ್ಲ ನೀವೇ ನೋಡಬಹುದು.
Tours Resumed: In many countries, we resumed tours of our branch offices on June 1, 2023. For details, contact the branch you would like to tour. Please do not visit if you test positive for COVID-19, display cold or flu-like symptoms, or have recently been exposed to someone who tested positive for COVID-19.
ಥಾಯ್‌ಲೆಂಡ್
ಭೇಟಿಮಾಡುವುದರ ಕುರಿತ ಮಾಹಿತಿ
ಬ್ರಾಂಚ್‌ನೋಡಲು ನೀವು ಮೊದಲೇ ಬುಕ್ ಮಾಡಬೇಕಾ? ಹೌದು. ನೀವು ಮೊದಲೇ ಬುಕ್ ಮಾಡೋದಾದ್ರೆ ಒಮ್ಮೆಗೆ ಜಾಸ್ತಿ ಜನ ಬರೋದನ್ನ ತಪ್ಪಿಸಬಹುದು ಮತ್ತು ಬರುವ ಎಲ್ರೂ ಟೂರನ್ನ ಹೆಚ್ಚು ಆನಂದಿಸಬಹುದು. ಹಾಗಾಗಿ ಜನ ಕಡಿಮೆ ಇದ್ರು ಜಾಸ್ತಿ ಇದ್ರು ಬುಕ್ ಮಾಡಿ ಬರುವಂತೆ ವಿನಂತಿಸುತ್ತೇವೆ. ಕಡಿಮೆ ಪಕ್ಷ ಒಂದು ವಾರ ಮುಂಚೆನೇ ಬುಕ್ ಮಾಡಿ. ರಜಾದಿನಗಳಲ್ಲಿ ಟೂರಿಗೆ ಬರಲು ಬಯಸೋದಾದ್ರೆ ಇನ್ನೂ ಮುಂಚೆನೇ ಬುಕ್ ಮಾಡಿ.
ಮೊದಲೇ ಬುಕ್ ಮಾಡದಿದ್ರೆ ಬ್ರಾಂಚ್ ಟೂರ್ ಸಿಗುತ್ತಾ? ನೀವು ಮೊದಲೇ ಬುಕ್ ಮಾಡಿಲ್ಲ ಅಂದ್ರೆ ನಿಮಗೆ ಟೂರ್‌ಗೆ ಹೋಗಲು ಅವಕಾಶ ಸಿಗೋದಿಲ್ಲ. ಏಕಂದ್ರೆ ಪ್ರತಿದಿನ ಟೂರಿಗೆ ಇಂತಿಷ್ಟೆ ಜನ ಅಂತ ನಿಗದಿಪಡಿಸಲಾಗಿದೆ.
ಟೂರ್ ನೋಡಲು ಎಷ್ಟು ಗಂಟೆಗೆ ಬರಬೇಕು? ನೀವು ಟೂರ್ ಬುಕ್ ಮಾಡಿರೋ ಸಮಯಕ್ಕಿಂತ ಒಂದು ತಾಸು ಮುಂಚಿತವಾಗಿ ಬರಬಹುದು. ಅದಕ್ಕೂ ಮುಂಚೆ ಬಂದ್ರೆ ಜನಸಂದಣಿ ಜಾಸ್ತಿ ಆಗುತ್ತೆ.
ಟೂರನ್ನು ಬುಕ್ ಮಾಡೋದು ಹೇಗೆ? “ಮುಂಗಡ ಕಾಯ್ದಿರಿಸು” ಅನ್ನೋ ಬಟನ್ ಕ್ಲಿಕ್ ಮಾಡಿ.
ಬುಕ್ ಮಾಡಿದ್ದನ್ನು ಕ್ಯಾನ್ಸಲ್ ಮಾಡಬಹುದಾ ಅಥವಾ ದಿನವನ್ನು ಬದಲಿಸಬಹುದಾ? ಹೌದು. “ಕಾಯ್ದಿರಿಸುವಿಕೆ ತೋರಿಸು ಅಥವಾ ಬದಲಿಸು” ಬಟನ್ ಕ್ಲಿಕ್ ಮಾಡಿ.
ನೀವು ಇಷ್ಟಪಡೋ ದಿನದಲ್ಲಿ ಟೂರ್ ಸಿಗದಿದ್ರೆ ಏನ್ ಮಾಡ್ಬೇಕು? ಆಗಾಗ ಸೈಟನ್ನು ಚೆಕ್ ಮಾಡಿ. ಏಕಂದ್ರೆ ಕೆಲವ್ರು ಟೂರನ್ನು ಕ್ಯಾನ್ಸಲ್ ಮಾಡಬಹುದು ಅಥವಾ ದಿನವನ್ನು ಬದಲಿಸಬಹುದು.
ಮುಂಗಡ ಕಾಯ್ದಿರಿಸು
ವಿಳಾಸ ಮತ್ತು ಫೋನ್ ನಂಬರ್
78/12 Mu 2, Serithai Rd., Soi 31
Klongkum, Buengkum
BANGKOK 10240
THAILAND
+66 2-375-2200
ಮಾರ್ಗನಕ್ಷೆ