ಮಾಹಿತಿ ಇರುವಲ್ಲಿ ಹೋಗಲು

ಬೆತೆಲ್‌ ಭೇಟಿ ಮಾಡುವುದರ ಕುರಿತ ಮಾಹಿತಿ

ನಮ್ಮ ಬ್ರಾಂಚ್‌ ಆಫೀಸ್‌ಗಳನ್ನು ಅಂದರೆ ಬೆತೆಲನ್ನು ಭೇಟಿ ಮಾಡುವಂತೆ ನಿಮ್ಮನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇವೆ. ನಮ್ಮ ಆಫೀಸ್‌ಗಳಲ್ಲಿ ನಡೆಯೋ ಪ್ರದರ್ಶನಗಳನ್ನು ನೋಡಲು ಗೈಡ್‌ಗಳು ಬೇಕಾಗಿಲ್ಲ ನೀವೇ ನೋಡಬಹುದು.

Tours Resumed: In many countries, we resumed tours of our branch offices on June 1, 2023. For details, contact the branch you would like to tour. Please do not visit if you test positive for COVID-19, display cold or flu-like symptoms, or have recently been exposed to someone who tested positive for COVID-19.

ದಕ್ಷಿಣ ಆಫ್ರಿಕ

ಟೂರ್‌ ಮುಂಗಡ ಕಾಯ್ದಿರಿಸುವಿಕೆ

ಬ್ರಾಂಚ್‌ ನೋಡಲು ನೀವು ಮೊದಲೇ ಬುಕ್‌ ಮಾಡಬೇಕಾ? ಹೌದು. ನೀವು ಮೊದಲೇ ಬುಕ್‌ ಮಾಡೋದಾದ್ರೆ ಒಮ್ಮೆಗೆ ಜಾಸ್ತಿ ಜನ ಬರುವುದನ್ನು ತಪ್ಪಿಸಬಹುದು ಮತ್ತು ಬರುವ ಎಲ್ರೂ ಟೂರನ್ನು ಹೆಚ್ಚು ಆನಂದಿಸಬಹುದು. ಹಾಗಾಗಿ ಜನ ಕಡಿಮೆ ಇದ್ರು ಜಾಸ್ತಿ ಇದ್ರು ಬುಕ್‌ ಮಾಡಿ ಬರುವಂತೆ ವಿನಂತಿಸುತ್ತೇವೆ. ಕಡಿಮೆಪಕ್ಷ ಒಂದು ವಾರ ಮೊದಲೇ ಬುಕ್‌ ಮಾಡಿ. ರಜಾದಿನಗಳಲ್ಲಿ ಟೂರ್‌ ಬೇಕಿದ್ರೆ ಇನ್ನೂ ಜಾಸ್ತಿ ದಿನಗಳಿಗೆ ಮುಂಚಿತವಾಗಿ ಬುಕ್‌ ಮಾಡಿ.

ಮೊದಲೇ ಬುಕ್‌ ಮಾಡದಿದ್ರೆ ಬ್ರಾಂಚ್‌ ಟೂರ್‌ ಸಿಗುತ್ತಾ? ಮೊದಲೇ ಬುಕ್‌ ಮಾಡದವರಿಗೆ ಟೂರ್‌ ಕೊಡಲು ಆಗಲ್ಲ. ಏಕೆಂದರೆ ಪ್ರತಿದಿನ ಟೂರಿಗೆ ಇಂತಿಷ್ಟೆ ಜನ ಎಂದು ನಿಗದಿಪಡಿಸಲಾಗಿದೆ.

ಟೂರ್‌ ನೋಡಲು ಎಷ್ಟು ಗಂಟೆಗೆ ಬರಬೇಕು? ಟೂರ್‌ ಬುಕ್‌ ಮಾಡಿರೋ ಸಮಯಕ್ಕಿಂತ ಒಂದು ತಾಸು ಮುಂಚಿತವಾಗಿ ನೀವು ಬರಬಹುದು. ಅದಕ್ಕೂ ಮುಂಚೆ ಬಂದ್ರೆ ಜನಸಂದಣಿ ಜಾಸ್ತಿ ಆಗುತ್ತೆ.

ಟೂರನ್ನು ಬುಕ್‌ ಮಾಡೋದು ಹೇಗೆ? “ಮುಂಗಡ ಕಾಯ್ದಿರಿಸು” ಬಟನ್‌ ಕ್ಲಿಕ್‌ಮಾಡಿ.

ಬುಕ್‌ ಮಾಡಿದನ್ನು ಕ್ಯಾನ್ಸಲ್‌ ಮಾಡಬಹುದಾ ಅಥವಾ ದಿನವನ್ನು ಬದಲಿಸಬಹುದಾ? ಹೌದು. “ಕಾಯ್ದಿರಿಸುವಿಕೆ ತೋರಿಸು ಅಥವಾ ಬದಲಿಸು” ಬಟನ್‌ ಕ್ಲಿಕ್‌ಮಾಡಿ.

ನೀವು ಇಷ್ಟಪಡೋ ದಿನದಲ್ಲಿ ಟೂರ್‌ ಸಿಗದಿದ್ರೆ ಏನ್‌ ಮಾಡ್ಬೇಕು? ಆಗಾಗ ಈ ಸೈಟನ್ನು ಚೆಕ್‌ಮಾಡಿ. ಏಕೆಂದ್ರೆ ಕೆಲವರು ಟೂರನ್ನು ಕ್ಯಾನ್ಸಲ್‌ ಮಾಡಬಹುದು ಅಥವಾ ದಿನವನ್ನು ಬದಲಿಸಬಹುದು.

ಮುಂಗಡ ಕಾಯ್ದಿರಿಸು

ಪ್ರವಾಸ ಬ್ರೋಷರ್‌ ಡೌನ್‌ಲೋಡ್‌

ಪ್ರವಾಸ

ಹೋಮ್‌ ವಿಸಿಟರ್‌ ಸೆಂಟರ್‌: ಬೆತೆಲ್‌ ಹೋಮ್‌ನಿಂದ ಒಂದು ವಿಡಿಯೋ ತೋರಿಸೋ ಮೂಲಕ ಟೂರ್‌ ಶುರುಮಾಡಲಾಗುತ್ತೆ. ಟೂರಿನಾದ್ಯಂತ ಇರೋ ವಿಡಿಯೋಗಳನ್ನು ನೋಡುವಾಗ ಬೆತೆಲಿನಲ್ಲಿ ಯಾವಲ್ಲಾ ಕೆಲಸಗಳು ನಡೀತಿವೆ ಮತ್ತು ನಮ್ಮ ಭಕ್ತಿ ಜಾಸ್ತಿ ಮಾಡೋಕೆ ಬೆತೆಲ್‌ ಹೇಗೆ ಸಹಾಯ ಮಾಡುತ್ತೆ ಅನ್ನೋದನ್ನು ತಿಳಿದುಕೊಳ್ಳಬಹುದು. ಯೆಹೋವ ದೇವರ ಗೆಳೆಯರಾಗೋಣ ವಿಭಾಗದಲ್ಲಿ ಮಕ್ಕಳು, ಸೋಫಿಯಾ ಮತ್ತು ಕೆಲೆಬ್‌ ಜೊತೆ ಫೋಟೋಗಳನ್ನು ತೆಗೆದುಕೊಳ್ಳಬಹುದು.

ಪ್ರಿಂಟರಿ-2 ವಿಸಿಟರ್‌ ಸೆಂಟರ್‌: ಸ್ಥಳೀಯ ಭಾಷೆಗಳಲ್ಲಿ ಭಾಷಾಂತರ ಮತ್ತು ಪ್ರಿಂಟಿಗ್‌ ಮಾಡೋದ್ರಿಂದ ಏನ್‌ ಪ್ರಯೋಜನ ಇದೆ ಅಂತ ಮೂರು ವಿಡಿಯೋಗಳಲ್ಲಿ ನೋಡಬಹುದು. ವೀಕ್ಷಕ ತಾಣದಿಂದ ಎರಡು ರೋಟರಿ ಆಫ್‌ಸೆಟ್‌ ಪ್ರೆಸ್‌ನ ಬಿರುಸಿನ ಕಾರ್ಯವನ್ನು ನೋಡಬಹುದು. ಇಲ್ಲಿನ ಬೈಬಲ್‌ ಪ್ರದರ್ಶನ ವಿಶೇಷವಾಗಿದ್ದು ಸ್ಥಳೀಯ ಭಾಷೆಯ ಕೆಲವು ಬೈಬಲಿನಲ್ಲಿ ದೇವರ ಹೆಸರನ್ನು ಹಿಂದೆ ಬಳಸಿದ್ದರು ಅನ್ನೋದಕ್ಕೆ ಇತಿಹಾಸದ ದಾಖಲೆ ನೋಡಬಹುದು.

ಪ್ರಿಂಟರಿ-3 ವಿಸಿಟರ್‌ ಸೆಂಟರ್‌: ವೀಕ್ಷಕ ತಾಣದಿಂದ ನಿಂತು ಸಾಹಿತ್ಯಗಳನ್ನು ಹೇಗೆ ಕಳುಹಿಸಲಾಗುತ್ತದೆ ಅನ್ನೋದನ್ನು ನೋಡಬಹುದು. ಜೊತೆಗೆ ಸಾಹಿತ್ಯಗಳನ್ನು ಎಲ್ಲಿಗೆ ಸಾಗಿಸಲಾಗುತ್ತಿದೆ ಅನ್ನೋದ್ರ ಮಾಹಿತಿಯನ್ನು ಡಿಸ್ಪ್ಲೇನಲ್ಲಿ ನೋಡಬಹುದು. ಮೂರು ವಿಡಿಯೋಗಳು ರಾಜ್ಯ ಸಭಾಗೃಹದ ನಿರ್ಮಾಣ ಕೆಲ್ಸದ ಬಗ್ಗೆ, ಸಾಹಿತ್ಯಗಳನ್ನು ಕಳುಹಿಸೋದ್ರ ಬಗ್ಗೆ ಮತ್ತು ಆಡಿಯೋ ವಿಡಿಯೋಗಳನ್ನು ಮಾಡೋದ್ರ ಬಗ್ಗೆ ಮಾಹಿತಿಯನ್ನು ಕೊಡುತ್ತೆ.

ಹೆಚ್ಚಿನ ಮಾಹಿತಿ: ಒಂದು ವಿಸಿಟರ್‌ ಸೆಂಟರ್‌ನಿಂದ ಮತ್ತೊಂದು ವಿಸಿಟರ್‌ ಸೆಂಟರ್‌ಗೆ ಹೋಗಲು ಬಸ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ನೀವು ತಂದಿರುವ ಊಟವನ್ನು ಭೇಟಿ ಮಾಡುವವರ ವಿಶ್ರಾಂತಿ ತಾಣದಲ್ಲಿ ಮಾಡಬಹುದು.

ವಿಳಾಸ ಮತ್ತು ಫೋನ್‌ ನಂಬರ್‌

1 Robert Broom Drive East

Rangeview

KRUGERSDORP

1739

SOUTH AFRICA

+27 11-761-1002

ಮಾರ್ಗನಕ್ಷೆ