ಯೆಹೋವನ ಸಾಕ್ಷಿಗಳು ಕುಟುಂಬಗಳನ್ನು ಒಡೆಯುತ್ತಾರಾ? ಇಲ್ಲ ಕಟ್ಟುತ್ತಾರಾ?
ಯೆಹೋವನ ಸಾಕ್ಷಿಗಳಾಗಿರುವ ನಾವು ನಮ್ಮ ಮತ್ತು ನೆರೆಹೊರೆಯ ಕುಟುಂಬಗಳನ್ನು ಕಟ್ಟಲು ಪ್ರಯಾಸಪಡುತ್ತೇವೆ. ಕುಟುಂಬವನ್ನು ಏರ್ಪಡಿಸಿದ ನಿರ್ಮಾಣಿಕನನ್ನು ಗೌರವಿಸುತ್ತೇವೆ. (ಆದಿಕಾಂಡ 2:21-24; ಎಫೆಸ 3:14, 15) ದೇವರು ಕೊಟ್ಟಿರುವ ಬೈಬಲ್ ತತ್ವಗಳನ್ನು ಪಾಲಿಸುತ್ತಿರುವುದರಿಂದ ಲೋಕವ್ಯಾಪಕವಾಗಿ ಅನೇಕರ ಕುಟುಂಬಗಳು ಸಂತೋಷವಾಗಿ ಬಲವಾಗಿ ಇವೆ.
ಮನೆಮಂದಿಯ ಮಧ್ಯೆ ಬಲವಾದ ಬಾಂಧವ್ಯ ಬೆಸೆಯಲು ಯೆಹೋವನ ಸಾಕ್ಷಿಗಳು ಏನೆಲ್ಲ ಮಾಡ್ತಾರೆ?
ನಾವು ಬೈಬಲಿನ ಸಲಹೆಗಳನ್ನು ಪಾಲಿಸುತ್ತೇವೆ. ಯಾಕೆಂದರೆ ಆ ಸಲಹೆಗಳು ಗಂಡ, ಹೆಂಡತಿ, ಹೆತ್ತವರಿಗೆ ತಮ್ಮ ಪಾತ್ರಗಳನ್ನು ಚೆನ್ನಾಗಿ ನಿರ್ವಹಿಸಲು ನೆರವಾಗುತ್ತವೆ. (ಜ್ಞಾನೋಕ್ತಿ 31:10-31; ಎಫೆಸ 5:22–6:4; 1 ತಿಮೊಥೆಯ 5:8) ಒಂದು ಮನೆಯಲ್ಲಿ ಬೇರೆಬೇರೆ ಧರ್ಮಗಳನ್ನು ಪಾಲಿಸುವ ಜನರಿದ್ದರೂ ಆ ಮನೆಯಲ್ಲಿ ನೆಮ್ಮದಿ ನೆಲೆಸಲು ಬೈಬಲ್ ತತ್ವಗಳು ಸಹಾಯ ಮಾಡುತ್ತವೆ. (1 ಪೇತ್ರ 3:1, 2) ಯೆಹೋವನ ಸಾಕ್ಷಿಗಳಲ್ಲದ ಸಂಗಾತಿಗಳ ಅನುಭವದ ಮಾತುಗಳನ್ನು ಕೇಳಿ:
“ಮದುವೆಯಾಗಿ ಮೊದಲ ಆರು ವರ್ಷಗಳನ್ನ ಬರೀ ಜಗಳ ಮಾಡ್ಕೊಂಡೇ ಕಳೆದ್ವಿ. ಆದ್ರೆ ಯಾವಾಗ ಈವೆಟ್ ಯೆಹೋವನ ಸಾಕ್ಷಿ ಆದಳೋ ಆಗಿಂದ ತುಂಬ ಪ್ರೀತಿಯಿಂದ ತಾಳ್ಮೆಯಿಂದ ನಡ್ಕೊಳ್ತಾ ಇದ್ಳು. ನಮ್ ಮದುವೆ ಮುರಿದುಹೋಗ್ದೆ ಉಳಿದಿದೆ ಅಂದ್ರೆ ಅದಕ್ಕೆ ನನ್ ಹೆಂಡ್ತಿ ಮಾಡಿದ್ ಆ ಬದಲಾವಣೆನೇ ಕಾರಣ.”—ಬ್ರೆಜಿಲ್ನಿಂದ ಕ್ಲಾಯೀರ್
“ನನ್ನ ಗಂಡ ಚಾನ್ಸಾ ಯೆಹೋವನ ಸಾಕ್ಷಿಗಳೊಟ್ಟಿಗೆ ಬೈಬಲ್ ಕಲಿಯಕ್ಕೆ ಶುರುಮಾಡಿದಾಗ ವಿರೋಧಿಸಿದೆ. ನಾನು ಅಂದುಕೊಂಡಿದ್ದೆ ಅವರು ಕುಟುಂಬಗಳನ್ನು ಒಡೆದುಹಾಕುತ್ತಾರೆ ಅಂತ, ಆದರೆ ಆವಾಗಿನಿಂದ ಬೈಬಲ್ ನಮ್ಮ ವಿವಾಹ ಬಂಧಕ್ಕೆ ನೆರವಾಗುತ್ತಾ ಬಂದಿದೆ.”—ಜಾಂಬಿಯದಿಂದ ಆ್ಯಗ್ನೆಸ್.
ನಾವು ಸುವಾರ್ತೆ ಸಾರುವಾಗ ಬೈಬಲಿನಲ್ಲಿರುವ ವಿವೇಕಭರಿತ ಸಲಹೆಗಳು ಪ್ರತಿಯೊಬ್ಬರಿಗೆ ಹೇಗೆ ನೆರವಾಗುತ್ತವೆಂದು ತೋರಿಸಿಕೊಡುತ್ತೇವೆ. ಉದಾಹರಣೆಗೆ:
ಮತಾಂತರ ಆಗುವುದರಿಂದ ಗಂಡ ಹೆಂಡತಿ ಮಧ್ಯೆ ಸಮಸ್ಯೆಗಳು ಬರಲ್ವಾ?
ಕೆಲವೊಮ್ಮೆ ಬರುತ್ತವೆ. 1998ರ ಒಂದು ವರದಿಯ ಪ್ರಕಾರ, ಪ್ರತಿ 20ಕ್ಕೆ ಒಂದರಂತೆ ಯೆಹೋವನ ಸಾಕ್ಷಿಗಳ ದಾಂಪತ್ಯದಲ್ಲಿ ಈ ತರಹದ ಸಮಸ್ಯೆ ಎದುರಾಯಿತು. ಯೆಹೋವನ ಸಾಕ್ಷಿಯಲ್ಲದ ಸಂಗಾತಿಯಿಂದ ತುಂಬ ವಿರೋಧ, ಕಷ್ಟ ಬಂತು.
ಯೇಸು ಎಷ್ಟೋ ಮುಂಚೆಯೇ ತನ್ನ ಬೋಧನೆಗಳ ಪ್ರಕಾರ ನಡೆಯುವವರಿಗೆ ಮನೆಯವರಿಂದ ಸಮಸ್ಯೆಗಳಾಗುತ್ತವೆ ಎಂದು ಹೇಳಿದ್ದಾನೆ. (ಮತ್ತಾಯ 10:32-36) ಇತಿಹಾಸಕಾರನಾದ ವಿಲ್ ಡುರಾಂಟ್ ರೋಮನ್ ಸಾಮ್ರಾಜ್ಯದ ಕುರಿತು ಹೀಗೆ ಬರೆದರು: “ಕ್ರೈಸ್ತತ್ವ ಮನೆಯನ್ನು ಮುರಿದುಹಾಕುತ್ತದೆ ಎಂಬ ಆರೋಪಕ್ಕೆ ಒಳಗಾಗಿತ್ತು.” a ಇಂದು ಅದೇ ಆರೋಪವನ್ನು ಕೆಲವು ಯೆಹೋವನ ಸಾಕ್ಷಿಗಳ ಮೇಲೆ ಹೊರಿಸಲಾಗುತ್ತಿದೆ. ಯೆಹೋವನ ಸಾಕ್ಷಿಗಳು ನಿಜವಾಗ್ಲೂ ಕುಟುಂಬ ಸದಸ್ಯರ ಮಧ್ಯೆ ದ್ವೇಷದ ಬೀಜ ಬಿತ್ತುತ್ತಾರಾ?
ಯೆಹೋವನ ಸಾಕ್ಷಿಗಳ ಮೇಲೆ ಕುಟುಂಬಗಳನ್ನು ಒಡೆದುಹಾಕುವ ಆರೋಪದ ಕುರಿತು ಮಾತಾಡುತ್ತಾ ಮಾನವ ಹಕ್ಕುಗಳ ಯೂರೋಪಿಯನ್ ಕೋರ್ಟ್ ಹೀಗೆ ಹೇಳಿತು: ಬೇರೆ ಧರ್ಮದ ಜನರು ಕೆಲವೊಮ್ಮೆ “ತಮ್ಮ ಕುಟುಂಬದವರ ಧಾರ್ಮಿಕ ನಂಬಿಕೆಗೆ ಗೌರವ ಕೊಡುವುದಿಲ್ಲ. ಅವರಿಗೂ ತಮ್ಮದೇ ಆದ ಧಾರ್ಮಿಕ ಆಚಾರವಿಚಾರಗಳಿವೆ ಎನ್ನುವುದನ್ನ ಒಪ್ಪಿಕೊಳ್ಳುವುದಿಲ್ಲ.” “ಈ ರೀತಿಯ ಸನ್ನಿವೇಶ ಬೇರೆ ಬೇರೆ ಧರ್ಮಕ್ಕೆ ಸೇರಿದ ವ್ಯಕ್ತಿಗಳು ಮದುವೆಯಾದಾಗ ಸರ್ವೇಸಾಮಾನ್ಯ. ಇದಕ್ಕೆ ಯೆಹೋವನ ಸಾಕ್ಷಿಗಳ ಕುಟುಂಬಗಳೇನು ಹೊರತಲ್ಲ.” b ಇಂಥ ಸನ್ನಿವೇಶದಲ್ಲಿ ಯೆಹೋವನ ಸಾಕ್ಷಿಗಳು ಬೈಬಲಿನ ಈ ಸಲಹೆಯನ್ನು ಪಾಲಿಸುತ್ತಾರೆ. “ಯಾರಿಗೂ ಕೆಟ್ಟದ್ದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು ಮಾಡಬೇಡಿ. . . . ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರೊಂದಿಗೆ ಶಾಂತಿಶೀಲರಾಗಿರಿ.”—ರೋಮನ್ನರಿಗೆ 12:17, 18.
ಯೆಹೋವನ ಸಾಕ್ಷಿಗಳು ಯೆಹೋವನ ಸಾಕ್ಷಿಗಳನ್ನೇ ಯಾಕೆ ಮದುವೆ ಆಗ್ತಾರೆ?
“ಕರ್ತನಲ್ಲಿರುವವನನ್ನು ಮಾತ್ರ” ಮದುವೆಯಾಗಬೇಕು ಅಂದರೆ ತಮ್ಮ ಧರ್ಮದವರನ್ನು ಮಾತ್ರ ಮದುವೆಯಾಗಬೇಕು ಎಂಬ ಬೈಬಲ್ ನಿಯಮವನ್ನು ಅವರು ಪಾಲಿಸುತ್ತಾರೆ. (1 ಕೊರಿಂಥ 7:39) ಇದು ಪ್ರಾಯೋಗಿಕ ಕೂಡ. ಉದಾಹರಣೆಗೆ, ಮದುವೆ ಕುರಿತಾದ 2010ರ ಒಂದು ಜರ್ನಲ್ ಹೀಗೆ ಹೇಳುತ್ತೆ: “ದಂಪತಿಗಳಲ್ಲಿ ಇಬ್ಬರಿಗೂ ಒಂದೇ ಧರ್ಮ ಮತ್ತು ಆಚಾರವಿಚಾರವಿದ್ದರೆ” ಅವರ ಸಂಬಂಧ ಬಲವಾಗಿರುತ್ತದೆ.—ಜರ್ನಲ್ ಆಫ್ ಮ್ಯಾರೆಜ್ ಆ್ಯಂಡ್ ಫ್ಯಾಮಿಲಿ. c
ತಮ್ಮ ಸಂಗಾತಿ ಬೇರೆ ಧರ್ಮದವಳು ಅಂದಮಾತ್ರಕ್ಕೆ ಅವಳನ್ನು ಬಿಟ್ಟುಬಿಡುವಂತೆ ಯೆಹೋವನ ಸಾಕ್ಷಿಗಳು ಕುಮ್ಮಕ್ಕು ನೀಡುವುದಿಲ್ಲ. ಬೈಬಲ್ ಹೇಳುತ್ತದೆ: “ಒಬ್ಬ ಸಹೋದರನಿಗೆ ಅವಿಶ್ವಾಸಿಯಾದ ಹೆಂಡತಿಯಿದ್ದು ಅವಳು ಅವನೊಂದಿಗೆ ಬಾಳಲು ಸಮ್ಮತಿಸುವುದಾದರೆ ಅವನು ಅವಳನ್ನು ಬಿಡದಿರಲಿ. ಅದೇ ರೀತಿಯಲ್ಲಿ ಒಬ್ಬ ಸ್ತ್ರೀಗೆ ಅವಿಶ್ವಾಸಿಯಾದ ಗಂಡನಿದ್ದು ಅವನು ಅವಳೊಂದಿಗೆ ಬಾಳಲು ಸಮ್ಮತಿಸುವುದಾದರೆ ಅವಳು ತನ್ನ ಗಂಡನನ್ನು ಬಿಡದಿರಲಿ.” (1 ಕೊರಿಂಥ 7:12, 13) ಈ ನಿಯಮವನ್ನು ಯೆಹೋವನ ಸಾಕ್ಷಿಗಳು ಮುರಿಯಲ್ಲ.