ಯೆಹೋವನ ಸಾಕ್ಷಿಗಳು ತಮ್ಮ ಕೆಲಸಕ್ಕೆ ಹಣವನ್ನು ಎಲ್ಲಿಂದ ಪಡೆಯುತ್ತಾರೆ?
ನಮ್ಮ ಸಾರುವ ಕೆಲಸಕ್ಕೆ ಬೇಕಾಗಿರುವ ಹಣ ಸಹಾಯ ಮುಖ್ಯವಾಗಿ ಯೆಹೋವನ ಸಾಕ್ಷಿಗಳು ನೀಡುವ ಸ್ವಯಂಪ್ರೇರಿತ ಕಾಣಿಕೆಗಳಿಂದ ಬರುತ್ತದೆ. ನಮ್ಮ ಕೂಟದ ಸ್ಥಳದಲ್ಲಿ ಕಾಣಿಕೆ ಪೆಟ್ಟಿಗೆಗಳನ್ನು ಇಡಲಾಗಿದೆ. a ಯಾರಿಗಾದರೂ ಕಾಣಿಕೆ ಹಾಕಲು ಮನಸ್ಸಿರುವುದಾದರೆ ಅವರು ಹಾಕಬಹುದು. ಬೇರೆ ವಿಧಾನಗಳಲ್ಲಿ ಕಾಣಿಕೆ ನೀಡುವುದರ ಬಗ್ಗೆ ನಮ್ಮ ವೆಬ್ ಸೈಟ್ನಲ್ಲಿ ಹೆಚ್ಚಿನ ಮಾಹಿತಿಯಿದೆ. ನಮ್ಮ ಲೋಕವ್ಯಾಪಕ ಕೆಲಸಕ್ಕಾಗಿ, ಸ್ಥಳೀಯ ಕೆಲಸಕ್ಕಾಗಿ ಅಥವಾ ಎರಡಕ್ಕೂ ಕಾಣಿಕೆ ನೀಡಲು ಬಯಸುವುದಾದರೆ ಸೂಕ್ತವಾದ ವಿಧಾನವನ್ನು ಬಳಸಿ ಕಾಣಿಕೆ ನೀಡಬಹುದು.
ಯೆಹೋವನ ಸಾಕ್ಷಿಗಳಲ್ಲಿ ಯಾರೂ ದಶಮಾಂಶವನ್ನು ಕೊಡುವುದಿಲ್ಲ ಅಥವಾ ತಮ್ಮ ಸಂಬಳದಿಂದ ನಿರ್ದಿಷ್ಟ ಹಣವನ್ನು ಕೊಡುವಂತೆ ಕೇಳಿಕೊಳ್ಳುವುದಿಲ್ಲ. (2 ಕೊರಿಂಥ 9:7) ನಮ್ಮ ಕೂಟಗಳಿಗೆ ಬರುವವರ ಹತ್ರ ಹಣ ವಸೂಲಿ ಮಾಡುವುದಿಲ್ಲ. ದೀಕ್ಷಾಸ್ನಾನಕ್ಕಾಗಲಿ, ಶವಸಂಸ್ಕಾರಕ್ಕಾಗಿಲಿ, ಮದುವೆಗಳಿಗಾಗಲಿ ಅಥವಾ ಬೇರಾವುದೇ ಧಾರ್ಮಿಕ ಸೇವೆಗಳಿಗೆ ಹಣ ಕೇಳುವುದಿಲ್ಲ. ಜಾತ್ರೆ, ಹಬ್ಬಗಳು, ಆಟ ಸ್ಪರ್ದೆಗಳು, ಸದಸ್ಯರ ವಸ್ತುಗಳ ಮಾರಾಟ, ವಿಶೇಷ ಸಮಾರಂಭಗಳ ಮೂಲಕ ಹಣ ವಸೂಲಿ ಮಾಡುವುದಿಲ್ಲ. ಕಾಣಿಕೆ ನೀಡುವವರ ಬಗ್ಗೆ ಪ್ರಕಟಣೆ ಮಾಡುವುದಿಲ್ಲ ಅಥವಾ ಸಾರ್ವಜನಿಕರಿಗೆ ಹೇಳುವುದಿಲ್ಲ. (ಮತ್ತಾಯ 6:2-4) ಹಣ ಸಂಪಾದಿಸುವ ಜಾಹೀರಾತುಗಳನ್ನು ನಮ್ಮ ವೆಬ್ ಸೈಟ್ ಅಥವಾ ಪುಸ್ತಕಗಳಲ್ಲಿ ಹಾಕುವುದಿಲ್ಲ.
ಯೆಹೋವನ ಸಾಕ್ಷಿಗಳ ಕೂಟಗಳಲ್ಲಿ ಪ್ರತಿ ತಿಂಗಳು ಹಣಕಾಸಿನ ವರದಿಯನ್ನು ಓದಿ ತಿಳಿಸಲಾಗುತ್ತದೆ. ಸ್ವೀಕರಿಸಿದ ಕಾಣಿಕೆಗಳ ಸರಿಯಾದ ನಿರ್ವಹಣೆಗಾಗಿ ಆಯಾ ಸಭೆಗಳ ಖಾತೆಯ ವರದಿಗಳ ಲೆಕ್ಕಪರಿಶೋಧನೆಯನ್ನು ಕ್ರಮವಾಗಿ ಮಾಡಲಾಗುತ್ತದೆ.—2 ಕೊರಿಂಥ 8:20, 21.
ಕಾಣಿಕೆ ನೀಡುವ ವಿಧಗಳು
ಕಾಣಿಕೆ ಪೆಟ್ಟಿಗೆಗಳು: ನಮ್ಮ ಕೂಟಗಳು ನಡೆಸಲ್ಪಡುವಾಗ ರಾಜ್ಯ ಸಭಾಗೃಹಗಳಲ್ಲಿ, ಸಮ್ಮೇಳನಾ ಹಾಲ್ ಗಳಲ್ಲಿ ಅಥವಾ ಇನ್ನಿತರ ಸ್ಥಳಗಳಲ್ಲಿ ಇಡಲಾಗಿರುವ ಕಾಣಿಕೆ ಪೆಟ್ಟಿಗೆಗಳಲ್ಲಿ ನಗದು ಹಣ ಅಥವಾ ಚೆಕ್ ಗಳನ್ನು ಹಾಕಬಹುದು.
ಆನ್ಲೈನ್ನಲ್ಲಿ ದಾನಗಳು: “Donate to Jehovah’s Witnesses”ಅನ್ನು ಬಳಸಿ ಆನ್ಲೈನ್ ಮೂಲಕ ಕಾಣಿಕೆಗಳನ್ನು ಕೊಡಬಹುದು. ಇದಕ್ಕಾಗಿ ಎಲೆಕ್ಟ್ರಾನಿಕ್ ಬ್ಯಾಂಕ್ ವರ್ಗಾವಣೆ, ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ದಾನಗಳನ್ನು ಕೊಡಬಹುದು. ಬೇರೆ ರೀತಿಗಳಲ್ಲೂ ಆನ್ಲೈನ್ನಲ್ಲಿ ದಾನ ಕೊಡಬಹುದು. b ಇಂದು ಅನೇಕ ಯೆಹೋವನ ಸಾಕ್ಷಿಗಳು ಇಂತಿಷ್ಟು ಹಣವನ್ನು ‘ತೆಗೆದಿಟ್ಟು’ ಪ್ರತಿತಿಂಗಳು ಮರುಕಳಿಸುವ ಠೇವಣಿಯ ವಿಧಾನಗಳ ಮೂಲಕ ದಾನ ಕೊಡುತ್ತಾರೆ.—1 ಕೊರಿಂಥ 16:2.
ಯೋಜಿತ ಕೊಡುಗೆ: ಈ ರೀತಿಯ ದಾನವನ್ನು ಕೊಡುವಾಗ ಸ್ವಲ್ಪ ಯೋಜನೆ ಮಾಡಬೇಕಾಗುತ್ತದೆ ಅಥವಾ ಕಾನೂನಿನ ಸಲಹೆ ಬೇಕಾಗುತ್ತದೆ. ಏಕೆಂದರೆ ನೀವಿರುವ ದೇಶದ ತೆರಿಗೆ ಕಾನೂನುಗಳು ಅಥವಾ ಇತರ ಕಾನೂನುಗಳು ಬೇರೆ ಇರಬಹುದು. ಅನೇಕರು ಲೋಕವ್ಯಾಪಕವಾಗಿ ನಡೆಯುವ ನಮ್ಮ ಧಾರ್ಮಿಕ ಹಾಗೂ ಮಾನವೋಪಕಾರಿ ಚಟುವಟಿಕೆಗಳಿಗೆ ಈ ರೀತಿಯಲ್ಲಿ ಸಹಾಯ ನೀಡಿದ್ದಾರೆ ಮತ್ತು ತೆರಿಗೆ ವಿನಾಯಿತಿ ಪಡೆದಿದ್ದಾರೆ. ಚ್ಯಾರಿಟಬಲ್ ಕೊಡುಗೆಯ ದಾನವನ್ನು ಕೊಡುತ್ತಿರುವಲ್ಲಿ ಜೀವಾವಧಿ ಅನುಭೋಗಕ್ಕೆ ಕಾದಿರಿಸಿದ ಅಂದರೆ ದಾನಿಯು ಜೀವದಿಂದಿರುವ ವರೆಗೆ ಅಥವಾ ನಂತರ ಷರತ್ತಿನೊಂದಿಗೆ ದಾನಮಾಡಬಹುದು. ಹೆಚ್ಚಿನ ಮಾಹಿತಿಗಾಗಿ, ಮತ್ತು ಕೆಳಗೆ ತಿಳಿಸಲಾಗಿರುವ ರೀತಿಗಳಲ್ಲಿ ದಾನ ಕೊಡಲು ಬಯಸುವುದಾದರೆ ನಿಮ್ಮ ದೇಶದಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸನ್ನು ಸಂಪರ್ಕಿಸಿ.
ಬ್ಯಾಂಕ್ ಖಾತೆಗಳು
ವಿಮೆ ಮತ್ತು ನಿವೃತ್ತಿ ವೇತನ ಯೋಜನೆಗಳು
ಸ್ಥಿರಾಸ್ತಿ
ಸ್ಟಾಕ್ಗಳು ಮತ್ತು ಬಾಂಡ್ಗಳು
ಉಯಿಲುಗಳು ಮತ್ತು ನ್ಯಾಸಗಳು
ಸ್ಥಳೀಯವಾಗಿ ದಾನ ಕೊಡುವ ಬೇರೆ ವಿಧಾನಗಳನ್ನು ತಿಳಿಯಲು “Donate to Jehovah’s Witnesses”ಅನ್ನು ನೋಡಿ.
a ಲೋಕವ್ಯಾಪಕ ಕೆಲಸವನ್ನು ಬೆಂಬಲಿಸಲು ಯೆಹೋವನ ಸಾಕ್ಷಿಗಳಲ್ಲದವರೂ ಕಾಣಿಕೆಗಳನ್ನು ಕೊಡಬಹುದು.
b ವಿಡಿಯೋ ನೋಡಿ ಆನ್ಲೈನ್ನಲ್ಲಿ ದಾನಗಳನ್ನು ನೀಡುವುದು ಹೇಗೆ? ಹೆಚ್ಚಿನ ಮಾಹಿತಿಗಾಗಿ.