ಯೆಹೋವನ ಸಾಕ್ಷಿಗಳು ಅಮೆರಿಕದಲ್ಲಿ ಆರಂಭವಾದ ಒಂದು ಧಾರ್ಮಿಕ ಪಂಥನಾ?
ನಮ್ಮ ಮುಖ್ಯ ಕಾರ್ಯಾಲಯ ಯುನೈಟೆಡ್ ಸ್ಟೇಟ್ಸ್ನ ಅಮೆರಿಕದಲ್ಲಿ ಇದೆ. ಆದರೂ ನಾವು ಅಮೆರಿಕದ ಒಂದು ಪಂಥವಲ್ಲ. ಈ ಕೆಳಗಿನ ಕಾರಣಗಳು ಅದನ್ನು ರುಜುಪಡಿಸುತ್ತದೆ:
ಒಂದು ಪಂಥವೆಂದರೆ ಸ್ಥಾಪಿತ ಧರ್ಮದಿಂದ ಬೇರ್ಪಟ್ಟ ಪಂಗಡವೆಂದು ಕೆಲವರು ವಿವರಿಸುತ್ತಾರೆ. ಯೆಹೋವನ ಸಾಕ್ಷಿಗಳು ಯಾವ ಧರ್ಮದ ಗುಂಪಿನಿಂದಲೂ ಹೊರಬಂದವರಲ್ಲ. ಅದಕ್ಕೆ ಬದಲಾಗಿ, ಮೊದಲ ಶತಮಾನದಲ್ಲಿ ಕ್ರೈಸ್ತ ಧರ್ಮ ಹೇಗಿತ್ತೊ ಅದೇ ರೀತಿಯಲ್ಲಿ ಅದನ್ನು ಪುನಃಸ್ಥಾಪಿಸಬೇಕು ಎನ್ನುವುದೇ ನಮ್ಮ ಉದ್ದೇಶ.
ಯೆಹೋವನ ಸಾಕ್ಷಿಗಳಾದ ನಾವು 230ಕ್ಕಿಂತಲೂ ಹೆಚ್ಚಿನ ದೇಶದ್ವೀಪಗಳಲ್ಲಿ ಸಕ್ರಿಯವಾಗಿ ಸಾರುವ ಕೆಲಸದಲ್ಲಿ ನಿರತರಾಗಿದ್ದೇವೆ. ನಾವೆಲ್ಲೇ ಇರಲಿ ನಮ್ಮ ಬೆಂಬಲ ಹಾಗೂ ನಿಷ್ಠೆ ಯೆಹೋವ ದೇವರಿಗೂ ಯೇಸು ಕ್ರಿಸ್ತನಿಗೂ ಹೊರತು ಅಮೆರಿಕ ಸರಕಾರಕ್ಕಾಗಲಿ ಯಾವುದೇ ಮಾನವ ಸರಕಾರಗಳಿಗಾಗಲಿ ಅಲ್ಲ.—ಯೋಹಾನ 15:19; 17:15, 16.
ನಮ್ಮ ಎಲ್ಲಾ ಬೋಧನೆಗಳು ಬೈಬಲ್ ಆಧಾರಿತವಾಗಿದೆ. ಅಮೆರಿಕದಲ್ಲಿರುವ ಕೆಲವು ಧಾರ್ಮಿಕ ನಾಯಕರ ಬರಹಗಳ ಮೇಲಲ್ಲ.—1 ಥೆಸಲೊನೀಕ 2:13.
ನಾವು ಯೇಸು ಕ್ರಿಸ್ತನನ್ನು ಹಿಂಬಾಲಿಸುತ್ತೇವೆ. ಯಾವುದೇ ಮಾನವ ನಾಯಕನನ್ನಲ್ಲ.—ಮತ್ತಾಯ 23:8-10