ಮಾಹಿತಿ ಇರುವಲ್ಲಿ ಹೋಗಲು

ಪ್ರಪಂಚದಲ್ಲಿ ಒಟ್ಟು ಎಷ್ಟು ಯೆಹೋವನ ಸಾಕ್ಷಿಗಳಿದ್ದಾರೆ?

ಪ್ರಪಂಚದಲ್ಲಿ ಒಟ್ಟು ಎಷ್ಟು ಯೆಹೋವನ ಸಾಕ್ಷಿಗಳಿದ್ದಾರೆ?

2023 ಸೇವಾ ವರ್ಷದ ವರದಿ

ಲೋಕವ್ಯಾಪಕವಾಗಿ ಯೆಹೋವನ ಸಾಕ್ಷಿಗಳ ಸಂಖ್ಯೆ

88,16,562

ಸಭೆಗಳು

1,18,177

ಯೆಹೋವನ ಸಾಕ್ಷಿಗಳು ಸುವಾರ್ತೆ ಸಾರುವ ದೇಶಗಳು

239

ಇತ್ತೀಚಿನ ಒಟ್ಟು ಸಂಖ್ಯೆ

ಇತ್ತೀಚಿನ ದೇಶ ಮತ್ತು ಕ್ಷೇತ್ರದ ವರದಿಗಳು

ನೀವು ಸದಸ್ಯತ್ವನ್ನು ಹೇಗೆ ಲೆಕ್ಕಿಸುತ್ತೀರ?

 ಪ್ರತಿ ತಿಂಗಳು ದೇವರ ರಾಜ್ಯದ ಸುವಾರ್ತೆ ಸಾರುವವರನ್ನು ಮಾತ್ರ ಯೆಹೋವನ ಸಾಕ್ಷಿಗಳೆಂದು ಪರಿಗಣಿಸುತ್ತೇವೆ. (ಮತ್ತಾಯ 24:14) ಇದರಲ್ಲಿ ಸಾಕ್ಷಿಯಾಗಿ ದೀಕ್ಷಾಸ್ನಾನ ಪಡೆದವರು ಮತ್ತು ಇನ್ನೂ ಪಡೆಯದಿದ್ದರೂ ಸಾರುವ ಕೆಲಸಕ್ಕೆ ಅರ್ಹರಾಗಿರುವವರು ಸೇರಿದ್ದಾರೆ.

ಇದರ ಸದಸ್ಯನಾಗಲು ಹಣ ಕೊಡಬೇಕಾ?

 ಇಲ್ಲ. ಸಾಕ್ಷಿಯಾಗಲು ಅಥವಾ ನಮ್ಮ ಸಂಘಟನೆಯಲ್ಲಿ ಯಾವುದೇ ನೇಮಕ ಅಥವಾ ಜವಾಬ್ದಾರಿ ಪಡೆಯಲು ಹಣ ಕೊಡುವ ಅಗತ್ಯವಿಲ್ಲ. (ಅಪೊಸ್ತಲರ ಕಾರ್ಯಗಳು 8:18-20) ಕಾಣಿಕೆಗಳನ್ನು ಕೊಡುವವರು ಅನೇಕ ಬಾರಿ ತಾವು ಯಾರು ಎಂದು ತಿಳಿಸುವುದೇ ಇಲ್ಲ. ಪ್ರತಿಯೊಬ್ಬ ಸಾಕ್ಷಿಯು ತನ್ನ ಸಮಯ, ಶಕ್ತಿ ಮತ್ತು ಸಂಪನ್ಮೂಲವನ್ನು ತನ್ನ ಇಷ್ಟದಂತೆ ಮತ್ತು ಸನ್ನಿವೇಶಕ್ಕನುಸಾರ ನೀಡುತ್ತಾನೆ.—2 ಕೊರಿಂಥ 9:7.

ಎಷ್ಟು ಸಾಕ್ಷಿಗಳು ಕ್ರಮವಾಗಿ ಸಾರುತ್ತಾರೆಂದು ಹೇಗೆ ತಿಳಿದುಕೊಳ್ಳುವಿರಿ?

 ಸಾಕ್ಷಿಗಳು ಪ್ರತಿ ತಿಂಗಳು ಸುವಾರ್ತೆ ಸಾರಿದ ವರದಿಯನ್ನು ಸ್ಥಳೀಯ ಸಭೆಗೆ ನೀಡುತ್ತಾರೆ. ತಾವಾಗಿಯೇ ಸ್ವಇಷ್ಟದಿಂದ ಇದನ್ನು ನೀಡುತ್ತಾರೆ.

 ಸಭೆಯು ಈ ವರದಿಗಳನ್ನೆಲ್ಲಾ ಕೂಡಿಸಿ, ಮೊತ್ತವನ್ನು ಸ್ಥಳೀಯ ಶಾಖಾ ಕಛೇರಿಗೆ ಕಳುಹಿಸುತ್ತದೆ. ಶಾಖೆಯು ಆ ದೇಶದ ಅಥವಾ ಆ ಪ್ರಾಂತ್ಯದ ಒಟ್ಟು ಮೊತ್ತವನ್ನು ಮುಖ್ಯ ಕಾರ್ಯಾಲಯಕ್ಕೆ ಕಳುಹಿಸುತ್ತದೆ.

 ಸೇವಾ ವರ್ಷದ ಕೊನೆಯಲ್ಲಿ, a ಎಲ್ಲ ದೇಶದಲ್ಲಿರುವ ಸಾಕ್ಷಿಗಳ ಆ ವರ್ಷದ ಗರಿಷ್ಠ ಸಂಖ್ಯೆಯನ್ನು ಕಂಡುಹಿಡಿಯುತ್ತಾರೆ. ಈ ಸಂಖ್ಯೆಯನ್ನೆಲ್ಲಾ ಕೂಡಿಸಿ ಲೋಕವ್ಯಾಪಕವಾಗಿ ಎಷ್ಟು ಸಾಕ್ಷಿಗಳಿದ್ದಾರೆ ಎಂದು ತಿಳಿದುಕೊಳ್ಳುತ್ತಾರೆ. ಪ್ರತಿ ದೇಶದ ಸಂಪೂರ್ಣ ವರದಿಯನ್ನು ಮತ್ತು ಸುವಾರ್ತೆ ಸಾರಿದಾಗ ಸಿಕ್ಕಿದ ಅನುಭವಗಳನ್ನು ಯಿಯರ್‌ಬುಕ್‌ಆಫ್‌ಜೆಹೋವಸ್‌ವಿಟ್ನೆಸಸ್‌ನಲ್ಲಿ ಕೊಡಲಾಗುತ್ತದೆ. ಮೊದಲನೆಯ ಶತಮಾನದಲ್ಲಿದ್ದ ಕ್ರೈಸ್ತರಿಗೆ ಇಂಥ ವರದಿಗಳಿಂದ ಪ್ರೋತ್ಸಾಹ ಸಿಕ್ಕಿದಂತೆ ಇಂದು ಸಹ ಈ ವರದಿಗಳು ನಮಗೆ ಪ್ರೋತ್ಸಾಹವನ್ನು ನೀಡುತ್ತವೆ.—ಅಪೊಸ್ತಲರ ಕಾರ್ಯಗಳು 2:41; 4:4; 15:3.

ನಿಮ್ಮ ಸಂಘಟನೆಯೊಂದಿಗೆ ಸಹವಾಸ ಮಾಡುತ್ತಿರುವ ಆದರೆ ಸುವಾರ್ತೆಯನ್ನು ಸಾರದವರನ್ನು ನೀವು ಲೆಕ್ಕಿಸುವಿರಾ?

 ಸಾಕ್ಷಿಗಳ ಸಂಖ್ಯೆಯಲ್ಲಿ ಅಂಥವರರನ್ನು ಲೆಕ್ಕಿಸುವುದಿಲ್ಲವಾದರೂ ಅವರನ್ನು ನಮ್ಮ ಸಭೆಗೆ ಹಾರ್ದಿಕವಾಗಿ ಸ್ವಾಗತಿಸುತ್ತೇವೆ. ಅವರಲ್ಲಿ ಅನೇಕರು ವರ್ಷಕ್ಕೊಮ್ಮೆ ನಡೆಯುವ ಕ್ರಿಸ್ತನ ಮರಣದ ಸ್ಮರಣೆಗೆ ಹಾಜರಾಗುತ್ತಾರೆ. ಹಾಗಾಗಿ, ಇಂಥವರ ಸಂಖ್ಯೆಯನ್ನು ಈ ಕೂಟಕ್ಕೆ ಹಾಜರಾದವರ ಸಂಖ್ಯೆ ಮತ್ತು ಸಾಕ್ಷಿಗಳ ಸಂಖ್ಯೆಯ ಮಧ್ಯೆಯಿರುವ ವ್ಯತ್ಯಾಸದಿಂದ ಕಂಡು ಹಿಡಿಯಬಹುದು. 2023ರಲ್ಲಿ ಸ್ಮರಣೆಯ ಹಾಜರಿ 2,04,61,767.

 ಅನೇಕರು ನಮ್ಮ ಕೂಟಗಳಿಗೆ ಹಾಜರಾಗದಿದ್ದರೂ ಉಚಿತ ಮನೆ ಬೈಬಲ್‌ ಅಧ್ಯಯನದಿಂದ ಪ್ರಯೋಜನ ಪಡೆಯುತ್ತಾರೆ. ನಾವು 2023ರಲ್ಲಿ ಪ್ರತಿ ತಿಂಗಳು ಸುಮಾರು 72,81,212 ಬೈಬಲ್‌ ಅಧ್ಯಯನಗಳನ್ನು ನಡೆಸಿದೆವು. ಕೆಲವೊಂದು ಅಧ್ಯಯನಗಳಲ್ಲಿ ಒಬ್ಬರಿಗಿಂತ ಹೆಚ್ಚು ಜನ ಕೂಡಿಬರುತ್ತಾರೆ.

ಸಾಕ್ಷಿಗಳ ಬಗ್ಗೆ ಸರ್ಕಾರ ಜನಗಣತಿ ಮಾಡಿರುವ ಸಂಖ್ಯೆಗಿಂತ ನೀವು ಕೊಡುವ ಸಂಖ್ಯೆ ಕಡಿಮೆಯಾಗಿರುತ್ತದೆ ಯಾಕೆ?

 ಜನಗಣತಿ ಮಾಡಲು ಸರ್ಕಾರ ನೇಮಿಸಿದವರು ಜನರ ಧರ್ಮ ತಿಳಿದುಕೊಳ್ಳಲು ‘ನೀವು ಯಾವ ಧರ್ಮಕ್ಕೆ ಸೇರಿದವರು?’ ಎಂದು ಕೇಳುತ್ತಾರೆ. ಉದಾಹರಣೆಗೆ, ಅಮೆರಿಕದ ಜನಗಣತಿಯ ಇಲಾಖೆಯು ತಮ್ಮ ವರದಿಯ ಬಗ್ಗೆ ಹೀಗೆ ತಿಳಿಸುತ್ತದೆ, “ತಾವು ಒಂದು ಧಾರ್ಮಿಕ ಪಂಗಡಕ್ಕೆ ಸೇರಿದ್ದೇವೆಂದು ಹೇಳಿಕೊಳ್ಳುವವರು ನಿಜವಾಗಿಯೂ ಆ ಪಂಗಡಕ್ಕೆ ಸೇರಿರುತ್ತಾರಾ ಎಂದು ಖಚಿತಪಡಿಸಿಕೊಳ್ಳಬೇಕಿದೆ.” “ಆ ಸಂಖ್ಯೆಗಳು ಜನರ ಅಭಿಪ್ರಾಯವಾಗಿದೆಯೇ ಹೊರತು ಯಥಾರ್ಥವಾದದ್ದಲ್ಲ.” ಆದರೆ ಯೆಹೋವನ ಸಾಕ್ಷಿಗಳಾದ ನಾವು, ಸುವಾರ್ತೆ ಸಾರಿ ಅದರ ವರದಿಯನ್ನು ಕೊಡುವವರ ಸಂಖ್ಯೆಯನ್ನು ತಿಳಿಸುತ್ತೇವೆ. ‘ನಾವು ಸಾಕ್ಷಿಗಳು’ ಎಂದು ಕೇವಲ ಹೇಳಿಕೊಳ್ಳುವವರ ಸಂಖ್ಯೆಯನ್ನು ಸೇರಿಸಿಕೊಳ್ಳುವುದಿಲ್ಲ.

a ಸೆಪ್ಟೆಂಬರ್‌ 1ರಿಂದ ಆರಂಭಿಸಿ ಮುಂದಿನ ವರ್ಷದ ಕ್ಯಾಲೆಂಡರ್‌ನಲ್ಲಿ ಬರುವ ಆಗಸ್ಟ್‌ 31ರವರೆಗಿನ ಅವಧಿಯನ್ನು ಒಂದು ಸೇವಾ ವರ್ಷ ಎಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ, 2015ರ ಸೇವಾ ವರ್ಷ ಸೆಪ್ಟೆಂಬರ್‌ 1, 2014ರಿಂದ ಆಗಸ್ಟ್‌ 31, 2015ರವರೆಗೆ ಇರುತ್ತದೆ.