ಯೆಹೋವನ ಸಾಕ್ಷಿಗಳು ತಮ್ಮ ಕೂಟದ ಸ್ಥಳವನ್ನು ಚರ್ಚ್ ಎಂದು ಏಕೆ ಕರೆಯುವುದಿಲ್ಲ?
ಬೈಬಲ್‌ನಲ್ಲಿ ಕೆಲವೊಂದು ಕಡೆ “ಚರ್ಚ್” ಎಂದು ಭಾಷಾಂತರಿಸಲಾದ ಗ್ರೀಕ್ ಪದವಿದೆ. ಅದು ಆರಾಧಕರ ಒಂದು ಗುಂಪನ್ನು ಸೂಚಿಸುತ್ತದೆಯೇ ಹೊರತು ಅವರು ಕೂಡುತ್ತಿದ್ದ ಕಟ್ಟಡವನ್ನು ಸೂಚಿಸುವುದಿಲ್ಲ.
ಈ ಉದಾಹರಣೆಯನ್ನು ಗಮನಿಸಿ: ಅಪೊಸ್ತಲ ಪೌಲನು ರೋಮ್‌ನಲ್ಲಿದ್ದ ಕ್ರೈಸ್ತರಿಗೆ ಪತ್ರ ಬರೆದಾಗ, ಅಕ್ವಿಲ್ಲ ಮತ್ತು ಪ್ರಿಸ್ಕಿಲ್ಲ ಎಂಬ ದಂಪತಿಗೆ ವಂದನೆಯನ್ನು ತಿಳಿಸಲು ಹೇಳಿದನು ಮತ್ತು ಮುಂದುವರಿಸುತ್ತಾ: “ಅವರ ಮನೆಯಲ್ಲಿ ಕೂಡುವ ಚರ್ಚ್‌ಗೆ ನನ್ನ ವಂದನೆಯನ್ನು ಹೇಳಿರಿ” ಎಂದನು. (ರೋಮನ್ನರಿಗೆ 16:5, ಕಂಟೆಂಪರರಿ ಇಂಗ್ಲಿಷ್ ವರ್ಷನ್) ಇದರರ್ಥ ಪೌಲನು ಕಟ್ಟಡಕ್ಕೆ ವಂದನೆಗಳನ್ನು ತಿಳಿಸುತ್ತಿದ್ದಾನೆ ಎಂದಲ್ಲ. ಬದಲಿಗೆ ಅವನು ವಂದನೆಗಳನ್ನು ಅಲ್ಲಿನ ಜನರಿಗೆ ಅಂದರೆ ಆ ಮನೆಯಲ್ಲಿ ಕೂಡಿ ಬರುತ್ತಿದ್ದ ಸಭೆಗೆ ತಿಳಿಸುತ್ತಿದ್ದನು. a
ಆದ್ದರಿಂದ ನಾವು ಆರಾಧನೆಗಾಗಿ ಕೂಡಿ ಬರುವ ಸ್ಥಳವನ್ನು ಚರ್ಚ್ ಎಂದು ಕರೆಯದೆ “ರಾಜ್ಯ ಸಭಾಗೃಹ” ಎಂದು ಕರೆಯುತ್ತೇವೆ.
“ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹ” ಎಂದು ಏಕೆ ಕರೆಯುತ್ತೀರಿ?
ಈ ಹೆಸರು ಸೂಕ್ತವಾಗಿದೆ ಎನ್ನಲು ಅನೇಕ ಕಾರಣಗಳಿವೆ:
ಕಟ್ಟಡವು ಒಂದು ಸಭಾಗೃಹ ಅಥವಾ ಕೂಡಿ ಬರುವ ಸ್ಥಳವಾಗಿದೆ.
ಬೈಬಲಿನಲ್ಲಿ ದೇವರು ಎಂದು ಕರೆದಿರುವ ಯೆಹೋವನನ್ನು ಆರಾಧಿಸಲು, ಆತನ ಕುರಿತು ಸಾಕ್ಷಿ ಹೇಳಲು ಅಥವಾ ದೃಢವಾಗಿ ಮಾತಾಡಲು ಕೂಡಿ ಬರುತ್ತೇವೆ.—ಕೀರ್ತನೆ 83:18; ಯೆಶಾಯ 43:12.
ಯೇಸು ಯಾವಾಗಲೂ ಯಾವುದರ ಬಗ್ಗೆ ಮಾತಾಡಿದನೋ ಆ ದೇವರ ರಾಜ್ಯದ ಬಗ್ಗೆ ಕಲಿಯಲು ನಾವು ಕೂಡಿ ಬರುತ್ತೇವೆ.—ಮತ್ತಾಯ 6:9, 10; 24:14; ಲೂಕ 4:43.
ಯೆಹೋವನ ಸಾಕ್ಷಿಗಳು ಕೂಟಗಳನ್ನು ಹೇಗೆ ನಡೆಸುತ್ತಾರೆ ಎಂದು ನೋಡಲು ಹತ್ತಿರದಲ್ಲಿರವ ರಾಜ್ಯಸಭಾಗೃಹಕ್ಕೆ ನಿಮ್ಮನ್ನು ಆಮಂತ್ರಿಸುತ್ತೇವೆ.
a ಇಂಥದ್ದೇ ಅಭಿವ್ಯಕ್ತಿಗಳು 1 ಕೊರಿಂಥ 16:19; ಕೊಲೊಸ್ಸೆ 4:15; ಮತ್ತು ಫಿಲೆಮೋನ 2ರಲ್ಲಿವೆ.