ಯೆಹೋವನ ಸಾಕ್ಷಿಗಳು ತಾವು ನಂಬ್ತಿದ್ದ ಕೆಲವು ವಿಷ್ಯಗಳನ್ನ ಯಾಕೆ ಬದಲಾಯಿಸಿದ್ದಾರೆ?
ಯೆಹೋವನ ಸಾಕ್ಷಿಗಳ ನಂಬಿಕೆಗಳಿಗೆ ಮುಖ್ಯ ಆಧಾರನೇ ಬೈಬಲ್. ಅದಕ್ಕೆ ಬೈಬಲ್ ತಿಳುವಳಿಕೆ ಜಾಸ್ತಿ ಆದ ಹಾಗೇ ನಾವು ನಮ್ಮ ನಂಬಿಕೆಯಲ್ಲಿ ಕೆಲವು ಬದಲಾವಣೆಗಳನ್ನ ಮಾಡ್ಕೊಂಡಿದ್ದೀವಿ. a
ಈ ರೀತಿ ಬದಲಾವಣೆ ಮಾಡ್ಕೊಳ್ಳೋದಕ್ಕೆ ಮುಖ್ಯ ಕಾರಣ ಜ್ಞಾನೋಕ್ತಿ 4:18ರಲ್ಲಿರೋ ಬೈಬಲ್ ತತ್ವ. ಅದು ಹೇಳೋದು, “ಆದ್ರೆ ನೀತಿವಂತನ ದಾರಿ ಬೆಳಿಗ್ಗೆ ಕಾಣೋ ಕಿರಣಗಳ ತರ ಹೊಳೆಯುತ್ತೆ, ಮಟಮಟ ಮಧ್ಯಾಹ್ನ ಆಗ್ತಾ ಆ ಬೆಳಕು ಹೆಚ್ಚಾಗ್ತಾನೇ ಹೋಗುತ್ತೆ.” ಸೂರ್ಯನ ಬೆಳಕು ಜಾಸ್ತಿ ಆದ ಹಾಗೆ ನಮ್ಮ ಸುತ್ತಮುತ್ತ ಇರೋ ವಿಷ್ಯಗಳನ್ನ ಚೆನ್ನಾಗಿ ನೋಡೋಕೆ ಆಗುತ್ತೆ, ಅದೇ ತರ ದೇವರು ಬೈಬಲಿನಲ್ಲಿರೋ ಸತ್ಯಗಳನ್ನ ಸರಿಯಾದ ಸಮಯಕ್ಕೆ ಹಂತ ಹಂತವಾಗಿ ನಮಗೆ ಅರ್ಥ ಮಾಡಿಸ್ತಿದ್ದಾನೆ. (1 ಪೇತ್ರ 1:10-12) ಇದನ್ನ “ಅಂತ್ಯದ” ಸಮಯದಲ್ಲಿ ಮಾಡ್ತೀನಿ ಅಂತ ದೇವರು ಬೈಬಲಿನಲ್ಲಿ ಮುಂಚೆನೇ ಹೇಳಿದ್ದಾನೆ.—ದಾನಿಯೇಲ 12:4.
ಈ ರೀತಿ ನಮ್ಮ ನಂಬಿಕೆಯಲ್ಲಿ ಕೆಲವು ಬದಲಾವಣೆಗಳಾದಾಗ ನಮ್ಗೆ ಆಶ್ಚರ್ಯನೂ ಆಗಲ್ಲ, ಬೇಜಾರೂ ಆಗಲ್ಲ. ಯಾಕಂದ್ರೆ ಹಿಂದಿನ ಕಾಲದಲ್ಲಿದ್ದ ದೇವರ ಸೇವಕರು ಕೂಡ ಕೆಲವು ವಿಷ್ಯಗಳನ್ನ ತಪ್ಪಾಗಿ ಅರ್ಥ ಮಾಡ್ಕೊಂಡಿದ್ರು, ಆಮೇಲೆ ಅದನ್ನ ಸರಿ ಮಾಡ್ಕೊಂಡ್ರು. ಉದಾಹರಣೆಗೆ,
ಮೋಶೆ, ದೇವರು ನಿರ್ಧಾರ ಮಾಡಿದ್ದಕ್ಕಿಂತ 40 ವರ್ಷ ಮುಂಚೆನೇ ಇಸ್ರಾಯೇಲ್ಯರನ್ನ ಈಜಿಪ್ಟಿಂದ ಬಿಡುಗಡೆ ಮಾಡೋಕೆ ಪ್ರಯತ್ನ ಪಟ್ಟ.—ಅಪೊಸ್ತಲರ ಕಾರ್ಯ 7:23-25, 30, 35.
ಅಪೊಸ್ತಲರು ಯೇಸುವಿನ ಸಾವು ಹಾಗೂ ಮತ್ತೆ ಜೀವಂತವಾಗಿ ಎದ್ದು ಬರೋದ್ರ ಬಗ್ಗೆ ಇರೋ ಭವಿಷ್ಯವಾಣಿಗಳನ್ನ ತಪ್ಪಾಗಿ ಅರ್ಥ ಮಾಡ್ಕೊಂಡಿದ್ರು.—ಯೆಶಾಯ 53:8-12; ಮತ್ತಾಯ 16:21-23.
ಒಂದನೇ ಶತಮಾನದಲ್ಲಿದ್ದ ಕೆಲವು ಕ್ರೈಸ್ತರು ‘ಯೆಹೋವನ ದಿನದ‘ ಬಗ್ಗೆ ತಪ್ಪಾಗಿ ಅರ್ಥ ಮಾಡಿಕೊಂಡಿದ್ರು.—2 ಥೆಸಲೊನೀಕ 2:1, 2.
ಆಮೇಲೆ ದೇವರು ಅವರ ತಪ್ಪಭಿಪ್ರಾಯವನ್ನ ಸರಿ ಮಾಡಿದ್ರು. ನಾವು ಕೂಡ ದೇವರ ಹತ್ರ ಇದೇ ರೀತಿ ಬೈಬಲನ್ನ ಸರಿಯಾಗಿ ಮತ್ತು ಚೆನ್ನಾಗಿ ಅರ್ಥ ಮಾಡ್ಕೊಳ್ಳೋಕೆ ಸಹಾಯ ಮಾಡಪ್ಪಾ ಅಂತ ಪ್ರಾರ್ಥನೆ ಮಾಡ್ತೀವಿ.—ಯಾಕೋಬ 1:5.
a ನಾವು ನಮ್ಮ ನಂಬಿಕೆಗಳಲ್ಲಿ ಆದ ಬದಲಾವಣೆಗಳನ್ನ ಮುಚ್ಚಿಡಲ್ಲ. ಬದಲಿಗೆ ಈ ಬದಲಾವಣೆಗಳ ಬಗ್ಗೆ ದಾಖಲಿಸ್ತೀವಿ, ನಮ್ಮ ಪುಸ್ತಕ ಮತ್ತು ಪ್ರಕಾಶನಗಳಲ್ಲಿ ಮುದ್ರಿಸ್ತೀವಿ. ಉದಾಹರಣೆಗೆ, ಸಂಶೋಧನಾ ಸಾಧನ ಪುಸ್ತಕದಲ್ಲಿ ಯೆಹೋವನ ಸಾಕ್ಷಿಗಳು\ದೃಷ್ಟಿಕೋನಗಳು ಮತ್ತು ನಂಬಿಕೆಗಳು\ನಮ್ಮ ನಂಬಿಕೆಗಳ ಕುರಿತ ಸ್ಪಷ್ಟೀಕರಣ ಎಂಬಲ್ಲಿ ನೋಡಿ.