ಯೆಹೋವನ ಸಾಕ್ಷಿಗಳು ನಡೆಸುವ ಬೈಬಲ್ ಸ್ಟಡಿ ಹೇಗಿರುತ್ತೆ?
ಯೆಹೋವನ ಸಾಕ್ಷಿಗಳು ಬೈಬಲಲ್ಲಿ ಇರುವುದನ್ನು ಕಲಿಸಲು ನಿಮಗೆ ಸಹಾಯ ಮಾಡ್ತಾರೆ. ಈ ಸ್ಟಡಿಯಿಂದ ನಿಮಗೆ ಸಿಗುವ ಕೆಲವು ಪ್ರಯೋಜನಗಳು ಏನಂದ್ರೆ . . .
ಸಂತೋಷದ ಜೀವನ ಪಡೆಯುತ್ತೀರ
ದೇವರ ಸ್ನೇಹಿತರಾಗುತ್ತೀರ
ಭವಿಷ್ಯದ ಬಗ್ಗೆ ದೇವರು ಕೊಟ್ಟಿರುವ ಮಾತಿನ ಬಗ್ಗೆ ಕಲಿಯುತ್ತೀರ
ಈ ಕೆಳಗಿನ ಪ್ರಶ್ನೆಗಳಿಗೆ ನೀವು ಉತ್ತರ ಕಂಡುಕೊಳ್ತೀರ
ಬೈಬಲ್ ಸ್ಟಡಿ ಹೇಗಿರುತ್ತೆ?
ಬೈಬಲನ್ನು ಹಂತ ಹಂತವಾಗಿ ಕಲಿಯೋಕೆ ನಿಮಗೆ ಬೈಬಲ್ ಕಲಿಸುವವರು ಸಹಾಯ ಮಾಡ್ತಾರೆ. ನೀವು ಬೈಬಲ್ ವಿಷಯಗಳನ್ನು ಇನ್ನಷ್ಟು ಕಲಿಯೋಕೆ, ಅದರಿಂದ ಸಹಾಯ ಪಡೆದುಕೊಳ್ಳುವುದು ಹೇಗೆ ಅಂತ ತಿಳಿಯೋಕೆ ಎಂದೆಂದೂ ಖುಷಿಯಾಗಿ ಬಾಳೋಣ! ಅನ್ನೋ ಪುಸ್ತಕ ಸಹಾಯ ಮಾಡುತ್ತೆ. ಹೆಚ್ಚನ್ನು ತಿಳಿಯಲು ಈ ವಿಡಿಯೋ ನೋಡಿ.
ಸ್ಟಡಿ ಮಾಡೋಕೆ ನಾನು ಹಣ ಕೊಡಬೇಕಾ?
ಇಲ್ಲ. ಯೆಹೋವನ ಸಾಕ್ಷಿಗಳು ಯೇಸು ಕೊಟ್ಟ ಈ ಸಲಹೆಯನ್ನು ಪಾಲಿಸ್ತಾರೆ: “ನಿಮಗೆ ಉಚಿತವಾಗಿ ಸಿಕ್ಕಿದೆ, ಉಚಿತವಾಗಿ ಕೊಡಿ.” (ಮತ್ತಾಯ 10:8) ಹಾಗಾಗಿ ಬೈಬಲ್ ಕಲಿಯಲು, ಬೈಬಲ್ ಅಥವಾ ಎಂದೆಂದೂ ಖುಷಿಯಾಗಿ ಬಾಳೋಣ! ಪ್ರತಿಯನ್ನು ಪಡೆಯಲು ಹಣ ಕೊಡಬೇಕಾಗಿಲ್ಲ.
ಈ ಸ್ಟಡಿ ಎಷ್ಟೊತ್ತು ಇರುತ್ತೆ?
ಈ ಪುಸ್ತಕದಲ್ಲಿ ಒಟ್ಟು 60 ಪಾಠಗಳಿವೆ. ಪ್ರತಿಸಲ ಎಷ್ಟು ಕಲಿಯಬೇಕಂತ ನೀವೇ ತೀರ್ಮಾನಿಸಬಹುದು. ಹೆಚ್ಚಿನ ವಿದ್ಯಾರ್ಥಿಗಳು ವಾರಕ್ಕೆ ಒಂದು ಅಥವಾ ಅದಕ್ಕಿಂತ ಹೆಚ್ಚು ಪಾಠಗಳನ್ನು ಕಲಿಯಲು ಇಷ್ಟಪಡುತ್ತಾರೆ.
ಇದನ್ನು ಹೇಗೆ ಶುರುಮಾಡ್ಬೇಕು?
1. ಆನ್ಲೈನ್ ಫಾರ್ಮನ್ನು ಫಿಲ್ ಮಾಡಿ. ಅದರಲ್ಲಿ ನೀವು ಕೊಡುವ ವೈಯಕ್ತಿಕ ಮಾಹಿತಿಯನ್ನು ಯೆಹೋವನ ಸಾಕ್ಷಿಯೊಬ್ಬರು ನಿಮ್ಮನ್ನು ಸಂಪರ್ಕಿಸಲು ಮಾತ್ರ ಬಳಸುತ್ತೇವೆ.
2. ಬೈಬಲ್ ಕಲಿಸೋಕೆ ಒಬ್ಬರು ನಿಮ್ಮನ್ನು ಸಂಪರ್ಕಿಸುತ್ತಾರೆ. ಇವರು ಈ ಬೈಬಲ್ ಸ್ಟಡಿಯನ್ನು ಹೇಗೆ ನಡೆಸಲಾಗುತ್ತೆ ಅಂತ ಹೇಳಿಕೊಡ್ತಾರೆ. ಅಷ್ಟೇ ಅಲ್ಲ, ನಿಮಗೆ ಏನಾದ್ರೂ ಪ್ರಶ್ನೆಗಳಿದ್ರೆ ಅದಕ್ಕೂ ಉತ್ತರ ಕೊಡುತ್ತಾರೆ.
3. ಸ್ಟಡಿಗಾಗಿ ನೀವು ಮತ್ತು ನಿಮಗೆ ಬೈಬಲ್ ಕಲಿಸುವವರು ಪ್ಲ್ಯಾನ್ ಮಾಡಬಹುದು. ಸ್ಟಡಿಯನ್ನು ನೀವು ಒಟ್ಟಿಗೆ ಕೂತು ಮಾಡಬಹುದು. ಫೋನ್, ವಿಡಿಯೋ ಕ಼ಾಲ್, ಪತ್ರ ಅಥವಾ ಇಮೇಲ್ ಮೂಲಕ ಮಾಡಬಹುದು. ಹೆಚ್ಚಾಗಿ ಸ್ಟಡಿಯನ್ನು ಒಂದು ತಾಸು ಮಾಡಲಾಗುತ್ತೆ. ಆದ್ರೆ ನಿಮ್ಮ ಪರಿಸ್ಥಿತಿಗೆ ತಕ್ಕಂತೆ ಅದಕ್ಕಿಂತ ಜಾಸ್ತಿ ಅಥವಾ ಕಡಿಮೆ ಸಮಯ ಮಾಡಬಹುದು.
ಮೊದಲು ನಾನು ಸ್ಟಡಿ ಹೇಗಿರುತ್ತೆ ಅಂತ ನೋಡಬಹುದಾ?
ಖಂಡಿತ. ಅದಕ್ಕಾಗಿ ನೀವು ಆನ್ಲೈನ್ ಫಾರ್ಮನ್ನು ತುಂಬಿಸಬೇಕು. ಬೈಬಲ್ ಕಲಿಸುವವರು ನಿಮ್ಮನ್ನು ಸಂಪರ್ಕಿಸುವಾಗ, ನನಗೆ ಇಷ್ಟ ಆದ್ರೆ ಇದನ್ನು ಮುಂದುವರಿಸ್ತೀನಿ ಅಂತ ಅವರ ಹತ್ತಿರ ಹೇಳಬಹುದು. ಅವರು ನಿಮಗೆ 3 ಪಾಠಗಳಿರುವ ಎಂದೆಂದೂ ಖುಷಿಯಾಗಿ ಬಾಳೋಣ! ಅನ್ನುವ ಕಿರುಹೊತ್ತಿಗೆ ಬಳಸಿ ಬೈಬಲ್ ಕಲಿಸುತ್ತಾರೆ. ಅದು ನಿಮಗೆ ಆಸಕ್ತಿ ಇದೆಯಾ ಅಂತ ತಿಳಿಯಲು ಸಹಾಯ ಮಾಡುತ್ತೆ.
ಒಂದುವೇಳೆ ನಾನು ಸ್ಟಡಿಗೆ ಒಪ್ಪಿದ್ರೆ ಯೆಹೋವನ ಸಾಕ್ಷಿಯಾಗಲೇಬೇಕು ಅಂತ ಒತ್ತಾಯ ಮಾಡ್ತಾರಾ?
ಇಲ್ಲ. ಜನರಿಗೆ ಬೈಬಲ್ ಬಗ್ಗೆ ಕಲಿಸೋಕೆ ಯೆಹೋವನ ಸಾಕ್ಷಿಗಳಿಗೆ ತುಂಬ ಇಷ್ಟ. ಆದ್ರೆ ತಮ್ಮ ಧರ್ಮಕ್ಕೆ ಸೇರಲು ಯಾರನ್ನೂ ಒತ್ತಾಯ ಮಾಡಲ್ಲ. ಬದಲಿಗೆ ಬೈಬಲಲ್ಲಿ ಇರುವುದನ್ನು ನಾವು ಜನರಿಗೆ ಹೇಳ್ತೇವೆ ಮತ್ತು ನಂಬಿಕೆ ವಿಷಯದಲ್ಲಿ ಅವರವರಿಗೆ ಇರುವ ಅಭಿಪ್ರಾಯವನ್ನು ಗೌರವಿಸುತ್ತೇವೆ.—1 ಪೇತ್ರ 3:15.
ನನ್ನ ಬೈಬಲನ್ನೇ ನಾನು ಬಳಸಬಹುದಾ?
ಖಂಡಿತ. ನಿಮಗೆ ಇಷ್ಟವಾದ ಯಾವ ಬೈಬಲನ್ನೂ ಬಳಸಬಹುದು. ಸ್ಪಷ್ಟ ಮತ್ತು ನಿಖರವಾದ ಹೊಸ ಲೋಕ ಭಾಷಾಂತರ ಬೈಬಲನ್ನು ನಾವು ಬಳಸಲು ಇಷ್ಟಪಟ್ಟರೂ ಹೆಚ್ಚಿನವರು ತಮಗೆ ಇಷ್ಟವಾದ ಬೈಬಲ್ ಬಳಸುವುದನ್ನು ನಾವು ಗಮನಿಸಿದ್ದೇವೆ.
ಸ್ಟಡಿಗೆ ಬೇರೆಯವರನ್ನು ನಾನು ಕರೆಯಬಹುದಾ?
ಖಂಡಿತ. ನಿಮ್ಮ ಕುಟುಂಬದವರನ್ನು ನಿಮ್ಮ ಫ್ರೆಂಡ್ಸನ್ನು ಕರೆಯಬಹುದು.
ಈ ಮುಂಚೆ ನಾನು ಯೆಹೋವನ ಸಾಕ್ಷಿಗಳಿಂದ ಬೈಬಲ್ ಸ್ಟಡಿ ಮಾಡಿದ್ರೂ ಈಗ ಮತ್ತೆ ಮಾಡಬಹುದಾ?
ಹೌದು ಮಾಡಬಹುದು. ಈ ಮುಂಚಿನ ಸ್ಟಡಿಗಿಂತ ಈಗಿನ ಸ್ಟಡಿಯನ್ನು ನೀವು ತುಂಬ ಎಂಜಾಯ್ ಮಾಡ್ತೀರ. ಯಾಕಂದ್ರೆ ಈ ಸ್ಟಡಿಯನ್ನು ಈಗಿನ ಜನರ ಅಗತ್ಯಕ್ಕೆ ತಕ್ಕಂತೆ ಮಾಡಲಾಗಿದೆ. ಮುಂಚಿಗಿಂತ ಈಗ, ಹೆಚ್ಚು ಚರ್ಚೆ ಮಾಡುವ ವಿಷಯಗಳು ಮತ್ತು ವಿಡಿಯೋಗಳು ಇದರಲ್ಲಿವೆ.
ಬೈಬಲ್ ಟೀಚರ್ ಸಹಾಯ ಇಲ್ಲದೆ ಬೈಬಲ್ ಕಲಿಯೋಕೆ ಆಗುತ್ತಾ?
ಆಗುತ್ತೆ. ಆದ್ರೆ ಹೆಚ್ಚಿನ ವಿದ್ಯಾರ್ಥಿಗಳು ಬೈಬಲ್ ಟೀಚರ್ ಸಹಾಯದಿಂದ ಕಲಿಯಲು ಇಷ್ಟಪಡುತ್ತಾರೆ. ಆದ್ರೆ ಕೆಲವರು ಯಾರ ಸಹಾಯನೂ ಇಲ್ಲದೆ ಕಲಿಯಲು ಇಷ್ಟಪಡುತ್ತಾರೆ. ಬೈಬಲ್ ಅಧ್ಯಯನ ಸಾಧನಗಳು ಅನ್ನೋ ವಿಭಾಗದಲ್ಲಿರುವ ವಿಷಯಗಳು ನಿಮಗೆ ಬೈಬಲ್ ಕಲಿಯಲು ಸಹಾಯ ಮಾಡುತ್ತೆ. ನಿಮಗೆ ಇನ್ನಷ್ಟು ಸಹಾಯ ಮಾಡುವ ಕೆಲವು ಸಾಧನಗಳು . . .
ಬೈಬಲ್ ವಿಡಿಯೋಗಳು. ಈ ಚಿಕ್ಕ ಚಿಕ್ಕ ವಿಡಿಯೋಗಳು ಬೈಬಲಿನ ಪ್ರಾಮುಖ್ಯ ಸತ್ಯಗಳನ್ನು ತಿಳಿಸುತ್ತೆ.
ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ. ಬೈಬಲಿಗೆ ಸಂಬಂಧಿಸಿದ ತುಂಬ ಪ್ರಶ್ನೆಗಳಿಗೆ ಈ ಲೇಖನಗಳು ಉತ್ತರ ಕೊಡುತ್ತೆ.
ಬೈಬಲ್ ವಚನಗಳ ವಿವರಣೆ. ಚಿರಪರಿಚಿತವಾಗಿರುವ ವಚನಗಳ ಅರ್ಥವನ್ನು ಇದರಲ್ಲಿ ವಿವರಿಸಲಾಗಿದೆ.