ಒತ್ತಡದಿಂದ ಹೊರಗೆ ಬನ್ನಿ
ಒತ್ತಡ ನಿಮ್ಮನ್ನು ಕಿತ್ತು ತಿನ್ನುತ್ತಿದೆಯಾ?
“ಒತ್ತಡ ಬರೋದು ಸಹಜ. ಆದ್ರೆ ನಂಗೆ ತುಂಬಾನೇ ಒತ್ತಡ ಇದೆ. ಒತ್ತಡ ನಂಗೆ ಬಂದಿದ್ದು ಯಾವುದೋ ಒಂದು ಕಷ್ಟದಿಂದಲ್ಲ. ಬೇರೆ ಬೇರೆ ಕಷ್ಟದ ಪರಿಸ್ಥಿತಿಗಳಿಂದ ಬಂತು. ನನ್ನ ಗಂಡನಿಗೆ ಕಾಯಿಲೆ ಬಂದಿದ್ದರಿಂದ ಅವ್ರನ್ನು ಸಾಯೋ ವರೆಗೂ ನೋಡಿಕೊಳ್ಳೋ ಜವಾಬ್ದಾರಿನೂ ನಂಗೆ ಬಂತು.”—ಜಾನ್ಹವಿ. a
“ಹೆಂಡ್ತಿ ನನ್ನನ್ನ ಬಿಟ್ಟುಹೋದಳು. ಎರಡು ಮಕ್ಕಳನ್ನೂ ನಾನೇ ಸಾಕಬೇಕಾಯ್ತು. ಮಕ್ಕಳನ್ನ ಒಬ್ಬನೇ ಸಾಕೋಕೆ ತುಂಬ ಕಷ್ಟ ಆಯ್ತು. ಸಾಲದು ಅಂತ ಕೆಲ್ಸನೂ ಹೋಯ್ತು. ನನ್ನ ಗಾಡಿನಾ ರಿಜಿಸ್ಟರ್ ಮಾಡಿಸಿಕೊಳ್ಳೋಷ್ಟು ದುಡ್ಡೂ ನನ್ನತ್ರ ಇರಲಿಲ್ಲ. ಇದನ್ನೆಲ್ಲಾ ಹೇಗೆ ನಿಭಾಯಿಸಬೇಕು ಅಂತಾನೂ ಗೊತ್ತಾಗಲಿಲ್ಲ. ಈ ಒತ್ತಡಗಳನ್ನು ನಂಗೆ ತಡೆಯೋಕೆ ಆಗ್ತಿರಲಿಲ್ಲ. ಆತ್ಮಹತ್ಯೆ ಮಾಡಿಕೊಳ್ಳಬೇಕು ಅಂತ ಅನಿಸ್ತು. ಆದ್ರೆ ಅದು ತಪ್ಪು ಅಂತ ನಂಗೊತ್ತಿತ್ತು. ಹಾಗಾಗಿ ಈ ಕಷ್ಟಗಳನ್ನೆಲ್ಲಾ ತೆಗೆದುಬಿಡಪ್ಪಾ ಅಂತ ದೇವ್ರ ಹತ್ರ ನಾನು ಬೇಡಿಕೊಂಡೆ.”—ಭಾಸ್ಕರ್.
ಜಾನ್ಹವಿ ಮತ್ತೆ ಭಾಸ್ಕರ್ ತರ ನಿಮಗೂ ಒತ್ತಡಗಳನ್ನು ತಡೆಯಲು ಆಗದೇ ಇರೋ ಪರಿಸ್ಥಿತಿಗಳು ಇದ್ಯಾ? ಹಾಗೇನಾದರು ಇದ್ರೆ ಈ ಪತ್ರಿಕೆಯಲ್ಲಿರುವ ಲೇಖನಗಳಿಂದ ನಿಮಗೆ ಸಹಾಯ ಆಗುತ್ತೆ. ಈ ಲೇಖನಗಳಲ್ಲಿ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಇದೆ: ಒತ್ತಡ ಬರಲು ಕಾರಣ ಏನು? ಇದ್ರಿಂದ ಯಾವೆಲ್ಲಾ ಹಾನಿ ಆಗುತ್ತೆ? ಒತ್ತಡದ ಪರಿಸ್ಥಿತಿಗಳನ್ನು ನಿಭಾಯಿಸೋದು ಹೇಗೆ?
a ಹೆಸರುಗಳನ್ನು ಬದಲಾಯಿಸಲಾಗಿದೆ.