ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಲೋಕದಲ್ಲಿದೆ ಕಷ್ಟ-ನೋವು—ಹೇಗೆ ಪಡೆಯೋದು ನೆಮ್ಮದಿ ನಾವು

ಲೋಕದಲ್ಲಿದೆ ಕಷ್ಟ-ನೋವು—ಹೇಗೆ ಪಡೆಯೋದು ನೆಮ್ಮದಿ ನಾವು

ಇಡೀ ಲೋಕದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತಿದೆ ಅಂತ ನಿಮಗೆ ಅನಿಸುತ್ತಿದೆಯಾ? ಅದರಿಂದ ವೈಯಕ್ತಿಕವಾಗಿ ನಿಮಗೆ ತೊಂದರೆ ಆಗುತ್ತಿದೆಯಾ? ನೀವಿರೋ ಕಡೆಯಲ್ಲಿ ಈ ಕೆಳಗಿನ ಸಮಸ್ಯೆಗಳು ಇದೆಯಾ:

  • ಯುದ್ಧ

  • ಸಾಂಕ್ರಾಮಿಕ ರೋಗಗಳು

  • ನೈಸರ್ಗಿಕ ವಿಪತ್ತುಗಳು

  • ಬಡತನ

  • ಭೇದಭಾವ

  • ಹಿಂಸೆ-ಅಪರಾಧ

ಇಂಥ ವಿಷಯಗಳು ನಡೆದಾಗ ಅನೇಕ ಜನರಿಗೆ ಭಯ ಆತಂಕ ಆಗುತ್ತೆ ಮತ್ತು ಕುಗ್ಗಿಹೋಗ್ತಾರೆ. ವಿಪತ್ತುಗಳನ್ನ ನೋಡಿ, ಅನುಭವಿಸಿ ಕೆಲವರಿಗೆ ಏನು ಮಾಡಬೇಕಂತನೇ ಗೊತ್ತಾಗಲ್ಲ. ಲೋಕದ ಪರಿಸ್ಥಿತಿಯಲ್ಲಿ ಸುಧಾರಣೆ ಆಗೋದರ ಬಗ್ಗೆ ಯಾವುದೇ ಸೂಚನೆ ಸಿಗದಿದ್ದಾಗ ಜೀವನ ಇನ್ನೂ ಹದಗೆಟ್ಟು ಹೋಗುತ್ತೆ.

ಎಲ್ಲೆಲ್ಲೂ ಕಷ್ಟ-ನೋವು ತುಂಬಿರೋ ಈ ಲೋಕದಲ್ಲಿ ಜೀವಿಸ್ತಾ ಇರೋವಾಗ, ನಿಮ್ಮ ಪ್ರೀತಿಯ ಜನರನ್ನ, ನಿಮ್ಮ ಆರೋಗ್ಯ, ನಿಮ್ಮ ಜೀವನರೀತಿ ಮತ್ತು ನಿಮ್ಮ ಸಂತೋಷವನ್ನ ಕಾಪಾಡಿಕೊಳ್ಳೋದು ತುಂಬ ಮುಖ್ಯ.

ಲೋಕದಲ್ಲಿರೋ ಕಷ್ಟ-ನೋವಿಂದ ನಿಮಗೆ ವೈಯಕ್ತಿಕವಾಗಿ ತೊಂದರೆ ಆಗುತ್ತಾ ಇದ್ರೆ ಅದನ್ನು ಹೇಗೆ ನಿಭಾಯಿಸೋದು?