ಭೂಮಿ ನಾಶವಾಗದೇ ಉಳಿಯುತ್ತಾ?
ಶುದ್ಧ ನೀರು
ಶುದ್ಧ ನೀರು ಇಲ್ಲ ಅಂದ್ರೆ ಭೂಮಿ ಮೇಲೆ ಯಾವ ಜೀವಿನೂ ಬದುಕೋಕೆ ಆಗಲ್ಲ. ಎಲ್ಲಾ ಜೀವಿಗಳ ದೇಹದಲ್ಲಿ ಹೆಚ್ಚಿನಾಂಶ ನೀರಿದೆ. ಕೆರೆಗಳಿಂದ, ನದಿಗಳಿಂದ, ಜೌಗುಪ್ರದೇಶದಿಂದ (wetlands) ಮತ್ತು ಭೂಮಿಯ ಅಡಿಯಿಂದ ಮನುಷ್ಯರಿಗೆ ಮತ್ತು ಪ್ರಾಣಿಗಳಿಗೆ ಕುಡಿಯುವ ನೀರು ಸಿಗುತ್ತೆ ಮತ್ತು ನೀರಿಂದ ಬೆಳೆಗಳನ್ನೂ ಬೆಳೀತಿವಿ.
ಶುದ್ಧ ನೀರು ಅಪಾಯದಲ್ಲಿದೆ
ಭೂಮಿಯ ಹೆಚ್ಚಿನ ಭಾಗ ನೀರಿನಿಂದ ತುಂಬಿದೆ. ಆದ್ರೆ “ನಮ್ಮಿಂದ ಬಳಸೋಕೆ ಆಗ್ತಾ ಇರೋ ನೀರು 0.5% ಅಷ್ಟು ಮಾತ್ರ” ಅಂತ ವಿಶ್ವ ಹವಾಮಾನಶಾಸ್ತ್ರ ಸಂಘಟನೆ ಹೇಳುತ್ತೆ. ಭೂಮಿ ಮೇಲಿರೋ ಎಲ್ಲಾ ಜೀವಿಗಳು ಬದುಕೋಕೆ ಇಷ್ಟು ನೀರು ಸಾಕು. ಆದ್ರೆ ಹವಾಮಾನ ಬದಲಾಗ್ತಾ ಇರೋದ್ರಿಂದ ಮತ್ತು ನೀರಿನ ಬಳಕೆ ಜಾಸ್ತಿ ಆಗ್ತಾ ಇರೋದ್ರಿಂದ ಅದ್ರ ಮಾಲಿನ್ಯ ಕೂಡ ಹೆಚ್ಚಾಗ್ತಾ ಇದೆ. ಮುಂದಿನ 30 ವರ್ಷಗಳಲ್ಲಿ 500 ಕೋಟಿ ಜನ್ರಿಗೆ ಕುಡಿಯೋ ನೀರು ಸಿಗಲ್ಲ ಅಂತ ವಿಜ್ಞಾನಿಗಳು ಹೇಳ್ತಾರೆ.
ಭೂಮಿಗಿರೋ ಸಾಮರ್ಥ್ಯ
ಭೂಮಿ ಮೇಲಿರೋ ನೀರು ಪೂರ್ತಿಯಾಗಿ ಖಾಲಿ ಆಗದ ಹಾಗೆ ಭೂಮಿಯನ್ನ ಸೃಷ್ಟಿ ಮಾಡಲಾಗಿದೆ. ನೀರನ್ನ ಶುದ್ಧವಾಗಿ ಇಡೋದ್ರಲ್ಲಿ ಮಣ್ಣು, ಜಲಚರಗಳು ಮತ್ತು ಸೂರ್ಯನ ಬೆಳಕು ಸಹಾಯ ಮಾಡುತ್ತೆ. ಭೂಮಿ ನಾಶ ಆಗಲ್ಲ ಅನ್ನೋದಕ್ಕೆ ಇರೋ ಕಾರಣಗಳನ್ನ ನೋಡಿ:
-
ನೀರನ್ನ ಮಾಲಿನ್ಯ ಮಾಡೋ ಎಷ್ಟೋ ಅಂಶಗಳನ್ನ ಮಣ್ಣು ತೆಗೆದುಹಾಕುತ್ತೆ. ಜೌಗುಪ್ರದೇಶಗಳಲ್ಲಿ ಇರೋ ಕೆಲವು ಗಿಡಗಳು, ನೈಟ್ರೊಜನ್, ಪಾಸ್‌ಫರಸ್ ಮತ್ತು ಕೀಟನಾಶಕಗಳನ್ನ ನೀರಿನಿಂದ ತೆಗೆಯುತ್ತೆ.
-
ನೈಸರ್ಗಿಕವಾಗಿ ಹೇಗೆ ನೀರು ಸ್ವಚ್ಛವಾಗಿ ಇರುತ್ತೆ ಅಂತ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ನೀರನ್ನ ಮಾಲಿನ್ಯ ಮಾಡೋ ಅಂಶಗಳು ನೀರು ಹರಿಯುವಾಗ ಕರಗಿ ಹೋಗುತ್ತೆ. ನಂತ್ರ ಸೂಕ್ಷ್ಮ ಜೀವಿಗಳು ಅದನ್ನ ಇನ್ನೂ ಹೆಚ್ಚು ಶುದ್ಧ ಮಾಡುತ್ತೆ.
-
ಶುದ್ಧ ನೀರಲ್ಲಿರೋ ಹಾನಿಕಾರಕ ರಾಸಾಯನಗಳನ್ನ ತೆಗೆದು ಹಾಕೋ ಸಾಮರ್ಥ್ಯ ಚಿಪ್ಪು-ಮೀನುಗಳಿಗೆ ಇದೆ. ನೀರನ್ನ ಶುದ್ಧ ಮಾಡಲು ಮನುಷ್ಯರು ಮಾಡಿರೋ ಮಷಿನ್‌ಗಳಿಗಿಂತ ನೀರಲ್ಲಿರೋ ಜೀವಿಗಳು ಇದನ್ನ ಚೆನ್ನಾಗಿ ಸ್ವಚ್ಛ ಮಾಡುತ್ತೆ.
-
ಜಲಚಕ್ರದ ಮೂಲಕ ನೀರು ಯಾವಾಗ್ಲೂ ಭೂಮಿಯಲ್ಲೇ ಇರುತ್ತೆ. ಈ ಪ್ರಕ್ರಿಯೆ ಅಲ್ಲದೇ ಇನ್ನೂ ಬೇರೆ ಪ್ರಕ್ರಿಯೆಗಳಿಂದಾಗಿ ನೀರು ವಾತಾವರಣವನ್ನ ಬಿಟ್ಟು ಹೊರಗೆ ಹೋಗಲ್ಲ.
ಮನುಷ್ಯರ ಪ್ರಯತ್ನ
ಸಾಧ್ಯವಾದಷ್ಟು ಮಟ್ಟಿಗೆ ನೀರನ್ನ ಉಳಿಸಿ, ನೀರಿನ ಮಾಲಿನ್ಯ ಕಡಿಮೆ ಮಾಡೋಕೆ ವಾಹನಗಳಿಂದ ಆಯಿಲ್ ಚೆಲ್ಲದ ಹಾಗೆ ಜಾಗ್ರತೆ ವಹಿಸಿ ಅಂತ ತಜ್ಞರು ಸಲಹೆ ಕೊಟ್ಟಿದ್ದಾರೆ. ಜೊತೆಗೆ ಹಳೇ ಔಷಧಿಗಳನ್ನ, ತ್ಯಾಜ್ಯ ವಸ್ತುಗಳನ್ನ ನೀರಲ್ಲಿ ಚೆಲ್ಲಬೇಡಿ ಅಂತನೂ ಹೇಳಿದ್ದಾರೆ.
ಸಮುದ್ರದ ನೀರಿನಿಂದ ಉಪ್ಪನ್ನ ಬೇರೆ ಮಾಡೋಕೆ ಇಂಜಿನಿಯರ್‌ಗಳು ಹೊಸ-ಹೊಸ ವಿಧಾನವನ್ನ ಕಂಡುಹಿಡಿದಿದ್ದಾರೆ. ಹೀಗೆ ಮಾಡಿದಾಗ ಇನ್ನೂ ಹೆಚ್ಚು ಶುದ್ಧ ನೀರು ಸಿಗುತ್ತೆ. ಆದ್ರೆ ಇದು ಅಷ್ಟು ಸುಲಭ ಅಲ್ಲ.
ಈ ಪ್ರಕ್ರಿಯೆಯನ್ನ ಮಾಡೋಕೆ ತುಂಬ ಹಣ ಮತ್ತು ಶಕ್ತಿಯನ್ನ ಖರ್ಚು ಮಾಡಬೇಕಾಗುತ್ತೆ. ಈ ರೀತಿಯ ಶುದ್ಧೀಕರಣವನ್ನ “ಭೂಮಿ ಮೇಲೆ ಮನುಷ್ಯರು ಮಾಡಿರೋ ಪ್ರಗತಿಯನ್ನ ಗಮನದಲ್ಲಿ ಇಟ್ಕೊಂಡು ಇನ್ನೂ ಎರಡು ಪಟ್ಟು ಹೆಚ್ಚು ಮಾಡಬೇಕು” ಅಂತ 2021ರಲ್ಲಿ ಸಂಯುಕ್ತ ರಾಷ್ಟ್ರ ಸಂಘ ಹೇಳಿತು.
ನಮ್ಮ ನಿರೀಕ್ಷೆಗಿರೋ ಕಾರಣಗಳು—ಬೈಬಲಲ್ಲಿ ಹೀಗಿದೆ
“ದೇವರು . . . ನೀರಿನ ಹನಿಗಳನ್ನ ಮೇಲಕ್ಕೆ ಎಳ್ಕೊಳ್ತಾನೆ, ಆಮೇಲೆ ಅದು ಮಳೆಯಾಗುತ್ತೆ, ಮಂಜು ಆಗುತ್ತೆ, ಮೋಡಗಳಾಗಿ ಆಮೇಲೆ ಭೂಮಿಗೆ ನೀರು ಸುರಿಯುತ್ತೆ, ಎಲ್ಲ ಮನುಷ್ಯರ ಮೇಲೆ ಮಳೆ ನೀರು ಬೀಳುತ್ತೆ.”—ಯೋಬ 36:26-28.
ಭೂಮಿ ಮೇಲಿರೋ ನೀರನ್ನ ಸಂರಕ್ಷಿಸೋಕೆ ದೇವರು ಜಲಚಕ್ರಗಳನ್ನ ರಚಿಸಿದ್ದಾನೆ.—ಪ್ರಸಂಗಿ 1:7.
ಸ್ವಲ್ಪ ಯೋಚಿಸಿ, ನೀರಿಗೋಸ್ಕರ ದೇವರು ಇಷ್ಟು ಒಳ್ಳೇ ಏರ್ಪಾಡು ಮಾಡಿದ್ದಾನೆ ಅಂದಮೇಲೆ, ಮನುಷ್ಯರು ಮಾಡಿರೋ ಮಾಲಿನ್ಯವನ್ನ ಸರಿ ಮಾಡೋಕೆ ದೇವರಿಂದ ಆಗಲ್ವಾ? ಪುಟ 15ರಲ್ಲಿರೋ “ನಮ್ಮ ಭೂಮಿ ನಾಶ ಆಗಲ್ಲ ಅಂತ ದೇವರು ಮಾತು ಕೊಟ್ಟಿದ್ದಾನೆ” ಅನ್ನೋ ಲೇಖನ ನೋಡಿ.