ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎಚ್ಚರ! ನಂ. 1 2024 | ಗೌರವ ಕಣ್ಮರೆ ಆಗ್ತಿದ್ಯಾ?

ಇತ್ತೀಚೆಗೆ ಗೌರವ ಅನ್ನೋದು ಅಳಿದು ಹೋಗ್ತಾ ಇದೆ. ಅದು ತುಂಬ ಅಪರೂಪ ಆಗಿಬಿಟ್ಟಿದೆ. ಯಾರಾದ್ರೂ ಗೌರವ ತೋರಿಸಿದ್ರೆ ಆಶ್ಚರ್ಯ ಪಡೋ ಕಾಲ ಬಂದುಬಿಟ್ಟಿದೆ.

ಇವತ್ತು ಜನ ಯಾರಿಗೂ ಮರ್ಯಾದೆನೇ ಕೊಡ್ತಿಲ್ಲ. ಅಪ್ಪ-ಅಮ್ಮಂಗೆ, ದೊಡ್ಡವರಿಗೆ, ಅಷ್ಟೇ ಯಾಕೆ ಟೀಚರ್ಸ್‌ಗೆ, ಪೊಲೀಸರಿಗೆ, ಕೆಲಸ ಮಾಡ್ತಿರೋ ಜಾಗದಲ್ಲಿರೋ ಬಾಸ್‌ಗಳಿಗೂ ಮರ್ಯಾದೆ ಕೊಡ್ತಿಲ್ಲ. ಸೋಶಿಯಲ್‌ ಮೀಡಿಯಾದಲ್ಲೂ ಬೇರೆಯವ್ರ ಬಗ್ಗೆ ಕೆಟ್ಟಕೆಟ್ಟದಾಗಿ, ಒಂಚೂರೂ ಗೌರವ ಕೊಡದೆ ಕಮೆಂಟ್‌ಗಳನ್ನ ಹಾಕ್ತಿದ್ದಾರೆ. “ಇವತ್ತು ಒಬ್ರಿಗೊಬ್ರು ಗೌರವ ಕೊಡೋದು ತುಂಬ ಕಮ್ಮಿಯಾಗಿಬಿಟ್ಟಿದೆ. . . . ಇದನ್ನ ತುಂಬ ಜನ ಒಪ್ಕೊಳ್ತಾರೆ” ಅಂತ ಹಾರ್ವರ್ಡ್‌ ಬಿಜ಼್‌ನೆಸ್‌ ರಿವೀವ್‌ ಅನ್ನೋ ಮ್ಯಾಗಜ಼ಿನ್‌ನ ಒಂದು ಲೇಖನ ಹೇಳುತ್ತೆ.

 

ಇವತ್ತು ಜನ ಯಾಕೆ ಬೇರೆಯವ್ರಿಗೆ ಗೌರವ ಕೊಡ್ತಿಲ್ಲ?

ಬೇರೆಯವ್ರಿಗೆ ಯಾಕೆ ಮತ್ತು ಹೇಗೆ ಗೌರವ ಕೊಡಬೇಕು ಅಂತ ಕಲೀರಿ.

ಇವತ್ತು ಜನ ಯಾಕೆ ಜೀವಕ್ಕೆ ಗೌರವ ಕೊಡ್ತಿಲ್ಲ?

ನಾವು ನಮ್ಮ ಜೀವಕ್ಕೆ ಮತ್ತು ಬೇರೆಯವ್ರ ಜೀವಕ್ಕೆ ಹೇಗೆ ಗೌರವ ತೋರಿಸಬಹುದು ಅಂತ ಬೈಬಲಲ್ಲಿರೋ ಬುದ್ಧಿಮಾತುಗಳಿಂದ ಕಲೀರಿ.

ಇವತ್ತು ಜನ ಯಾಕೆ ಕುಟುಂಬಕ್ಕೆ ಗೌರವ ಕೊಡ್ತಿಲ್ಲ?

ಮನೆಯಲ್ಲಿ ಎಲ್ರೂ ಒಬ್ರಿಗೊಬ್ರು ಗೌರವ ಕೊಟ್ರೆ ಕುಟುಂಬದಲ್ಲಿ ಸಂತೋಷ ತುಂಬಿರುತ್ತೆ.

ಇವತ್ತು ಜನ ಯಾಕೆ ತಮಗೆ ತಾವೇ ಗೌರವ ಕೊಟ್ಕೊಳ್ತಿಲ್ಲ?

ಬೈಬಲಿಂದ ಜನ್ರು ತಮ್ಮನ್ನ ತಾವೇ ಗೌರವಿಸ್ಕೊಳ್ಳೋಕೆ ಕಲಿತಾರೆ. ಇದ್ರಿಂದ ಅವರು ಜೀವನದಲ್ಲಿ ಖುಷಿಯಾಗಿ ಇರ್ತಾರೆ.

ಇವತ್ತು ಜನ ಯಾಕೆ ಗೌರವ ಕೊಡ್ತಿಲ್ಲ?

ಗೌರವದ ಬಗ್ಗೆ ಮತ್ತು ಯೆಹೋವನ ಸಾಕ್ಷಿಗಳು ಜನ್ರಿಗೆ ಗೌರವ ಕೊಡೋದನ್ನ ಹೇಗೆಲ್ಲ ಕಲಿಸ್ತಿದ್ದಾರೆ ಅನ್ನೋದ್ರ ಬಗ್ಗೆ ಲೇಖನಗಳನ್ನ ಓದಿ.