ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇವತ್ತು ಜನ ಯಾಕೆ ಕುಟುಂಬಕ್ಕೆ ಗೌರವ ಕೊಡ್ತಿಲ್ಲ?

ಇವತ್ತು ಜನ ಯಾಕೆ ಕುಟುಂಬಕ್ಕೆ ಗೌರವ ಕೊಡ್ತಿಲ್ಲ?

ನಾವ್ಯಾಕೆ ಕುಟುಂಬಕ್ಕೆ ಗೌರವ ಕೊಡಬೇಕು?

ಕುಟುಂಬದಲ್ಲಿರೋ ಗಂಡ-ಹೆಂಡ್ತಿ, ಮಕ್ಕಳು ಎಲ್ರೂ ಒಬ್ರಿಗೊಬ್ರು ಗೌರವ ತೋರಿಸಿದ್ರೆ ಮನೆಲಿ ಶಾಂತಿ ತುಂಬಿತುಳುಕುತ್ತೆ.

  • ಯಶಸ್ವಿ ಕುಟುಂಬಕ್ಕೆ ಏಳು ಸಲಹೆಗಳು ಅನ್ನೋ ಒಂದು ಇಂಗ್ಲಿಷ್‌ ಪುಸ್ತಕದಲ್ಲಿ, ಗಂಡ-ಹೆಂಡ್ತಿ ಒಬ್ರಿಗೊಬ್ರು ಗೌರವ ಕೊಟ್ರೆ “ಅವರು ದೊಡ್ಡ ವಿಷ್ಯಗಳಲ್ಲಿ ಮಾತ್ರ ಅಲ್ಲ ಚಿಕ್ಕಚಿಕ್ಕ ವಿಷ್ಯಗಳಲ್ಲೂ ಪ್ರೀತಿ ತೋರಿಸ್ತಾರೆ” ಅಂತ ಇದೆ.

  • ಬೇರೆಯವ್ರಿಗೆ ಗೌರವ ತೋರಿಸೋದು ಹೇಗೆ ಅಂತ ಕಲ್ತಿರೋ ಮಕ್ಕಳಿಗೆ ತಮ್ಮ ಬಗ್ಗೆ ಒಳ್ಳೇ ಅಭಿಪ್ರಾಯ ಇರುತ್ತೆ. ಅಪ್ಪಅಮ್ಮ ಜೊತೆ ಒಳ್ಳೇ ಫ್ರೆಂಡ್‌ಶಿಪ್‌ ಇರುತ್ತೆ. ಅವರು ಯಾವಾಗ್ಲೂ ಖುಷಿಯಾಗಿ ಇರ್ತಾರೆ. ಇದ್ರಿಂದ ಅವ್ರಿಗೆ ಮಾನಸಿಕ ತೊಂದ್ರೆಗಳು ಬರೋದು ಕಮ್ಮಿ ಅಂತ ಸಂಶೋಧನೆ ಹೇಳುತ್ತೆ.

ನೀವು ಹೇಗೆ ಗೌರವ ಕೊಡಬಹುದು?

ಕುಟುಂಬದಲ್ಲಿ ಎಲ್ರೂ ಸೇರಿ ಒಂದು ಪ್ಲ್ಯಾನ್‌ ಮಾಡಿ. ಮೊದಲನೇದಾಗಿ, ಗೌರವ ತೋರಿಸೋದು ಯಾಕೆ ಮುಖ್ಯ ಅನ್ನೋದನ್ನ ಕುಟುಂಬದಲ್ಲಿರೋ ಎಲ್ರೂ ಅರ್ಥ ಮಾಡ್ಕೊಂಡಿದ್ದಾರಾ ಅಂತ ಗಂಡ-ಹೆಂಡ್ತಿ ಇಬ್ರೂ ಕೂತು ಮಾತಾಡಿ. ಎರಡನೇದಾಗಿ, ಕುಟುಂಬದಲ್ಲಿರೋ ಪ್ರತಿಯೊಬ್ರು ಹೇಗೆ ನಡ್ಕೊಬೇಕು, ಹೇಗೆ ನಡ್ಕೊಬಾರದು ಅನ್ನೋದನ್ನ ಬರೆದಿಡಿ. ಮೂರನೇದಾಗಿ, ನಿಮ್ಮ ಕುಟುಂಬದಲ್ಲಿರೋ ಎಲ್ರ ಜೊತೆನೂ ಅಂದ್ರೆ ಮಕ್ಕಳ ಜೊತೆನೂ ನೀವು ಮಾಡಿರೋ ಪ್ಲ್ಯಾನ್‌ ಬಗ್ಗೆ ಚರ್ಚೆ ಮಾಡಿ. ಆಗ ಪ್ರತಿಯೊಬ್ರೂ ಹೇಗೆ ಗೌರವ ತೋರಿಸೋದು ಅಂತ ಕಲಿತಾರೆ.

“ಕಷ್ಟಪಟ್ಟು ಕೆಲಸ ಮಾಡುವವನ ಯೋಜನೆಗಳು ಯಶಸ್ಸು ಪಡಿಯುತ್ತೆ.”—ಜ್ಞಾನೋಕ್ತಿ 21:5.

ನೀವೇ ಮೊದ್ಲು ಗೌರವ ತೋರಿಸಿ. ನಿಮ್ಮ ಕುಟುಂಬದಲ್ಲಿ ಯಾರಾದ್ರೂ ತಪ್ಪು ಮಾಡಿದ್ರೆ ಅದನ್ನ ಎತ್ತಿ ಆಡಬೇಡಿ. ಅವರಿಗೆ ಅನಿಸಿದ್ದನ್ನ ಹೇಳುವಾಗ ಗೇಲಿ ಮಾಡಬೇಡಿ, ಗಮನಕೊಡಿ. ಮಧ್ಯ ಬಾಯಿ ಹಾಕಬೇಡಿ. ಆಗ ನೀವು ಅವ್ರಿಗೆ ಗೌರವ ಕೊಟ್ಟ ಹಾಗಾಗುತ್ತೆ.

ನಿಮಗೊಂದು ಟಿಪ್‌: ನಿಮ್ಮ ಸಂಗಾತಿ ಮತ್ತು ಮಕ್ಕಳು ನಿಮಗೆ ಗೌರವ ಕೊಟ್ರೆ ಮಾತ್ರ ನೀವು ಅವ್ರಿಗೆ ಗೌರವ ಕೊಡಬೇಕು ಅಂತೇನಿಲ್ಲ. ಅವರು ಹೇಗೇ ಇದ್ರೂ ಅವ್ರಿಗೆ ಗೌರವ ಕೊಡಿ.

“ಗೌರವ ತೋರಿಸೋದ್ರಲ್ಲಿ ಒಬ್ರಿಗಿಂತ ಒಬ್ರು ಮುಂದೆ ಬನ್ನಿ.”—ರೋಮನ್ನರಿಗೆ 12:10.

ನಿಮಗೆ ಏನಾದ್ರೂ ಇಷ್ಟ ಆಗಿಲ್ಲಾಂದ್ರೆ ಅದನ್ನ ಗೌರವದಿಂದ ಹೇಳಿ. ನಿಮಗೆ ಅನಿಸಿದ್ದನ್ನ ಹೇಳುವಾಗ ‘ನೀನು ಯಾವಾಗ್ಲೂ ಹೀಗೇನೇ,’ ‘ನಿಂಗೆ ಎಷ್ಟು ಹೇಳಿದ್ರೂ ಅಷ್ಟೇನೇ’ ಅನ್ನೋ ಪದಗಳನ್ನ ಉಪಯೋಗಿಸಬೇಡಿ. ಇಂಥ ಮಾತುಗಳಿಂದ ಅವ್ರ ಮನಸ್ಸಿಗೆ ನೋವಾಗುತ್ತೆ, ಜಗಳ ಇನ್ನೂ ದೊಡ್ಡದಾಗುತ್ತೆ.

“ಮೃದುವಾದ ಉತ್ತರ ಕೋಪ ಕಡಿಮೆ ಮಾಡುತ್ತೆ, ಒರಟಾದ ಮಾತು ಕೋಪ ಬರಿಸುತ್ತೆ.”—ಜ್ಞಾನೋಕ್ತಿ 15:1.

ಯೆಹೋವನ ಸಾಕ್ಷಿಗಳು ಹೇಗೆ ಗೌರವ ತೋರಿಸ್ತಿದ್ದಾರೆ?

ಯೆಹೋವನ ಸಾಕ್ಷಿಗಳು ಕುಟುಂಬದಲ್ಲಿ ಒಬ್ರಿಗೊಬ್ರು ಗೌರವ ಕೊಡಬೇಕು ಅಂತ ಬೇರೆಯವ್ರಿಗೆ ಕಲಿಸ್ತಾರೆ. ಅವರು ಬಿಡುಗಡೆ ಮಾಡಿರೋ ಎಷ್ಟೋ ಲೇಖನಗಳಲ್ಲಿ, ಪುಸ್ತಕಗಳಲ್ಲಿ, ಕಿರುಹೊತ್ತಗೆಗಳಲ್ಲಿ ಮತ್ತು ವಿಡಿಯೋಗಳಲ್ಲಿ ಈ ವಿಷ್ಯದ ಬಗ್ಗೆ ತುಂಬ ಮಾಹಿತಿ ಇದೆ. ಅವರು ಅದನ್ನ ಜನ್ರಿಗೆ ಫ್ರೀಯಾಗೂ ಕೊಡ್ತಿದ್ದಾರೆ.

ಮದುವೆ ಆಗಿರೋ ದಂಪತಿಗಳಿಗೆ: ಸುಖೀ ಸಂಸಾರಕ್ಕೆ ಸಲಹೆಗಳು ಅನ್ನೋ ಸರಣಿ ಲೇಖನಗಳು ಮದುವೆ ಆಗಿರೋ ಗಂಡ-ಹೆಂಡ್ತಿಗೆ . . .

  • ಚೆನ್ನಾಗಿ ಕೇಳಿಸ್ಕೊಳ್ಳೋಕೆ

  • ಮಾತು ಬಿಡದೇ ಇರೋಕೆ

  • ಜಗಳ ಮಾಡದೇ ಇರೋಕೆ ಸಹಾಯ ಮಾಡುತ್ತೆ.

(jw.orgನಲ್ಲಿ “ಸುಖೀ ಸಂಸಾರಕ್ಕೆ ಸಲಹೆಗಳು” ಅಂತ ಹುಡುಕಿ)

ಅಪ್ಪ-ಅಮ್ಮಂದಿರಿಗೆ: ಸುಖೀ ಸಂಸಾರಕ್ಕೆ ಸಲಹೆಗಳು ಅನ್ನೋ ಸರಣಿ ಲೇಖನಗಳು, ಅಪ್ಪ-ಅಮ್ಮಂದಿರು ಮಕ್ಕಳಿಗೆ . . .

  • ಮಾತು ಕೇಳೋದನ್ನ

  • ಮನೆಲಿ ಚಿಕ್ಕಪುಟ್ಟ ಕೆಲಸಗಳನ್ನ ಮಾಡೋದನ್ನ

  • “ಪ್ಲೀಸ್‌” ಮತ್ತು “ಥ್ಯಾಂಕ್ಯೂ” ಅಂತ ಹೇಳೋದನ್ನ ಕಲಿಸೋಕೆ ಸಹಾಯ ಮಾಡುತ್ತೆ.

(jw.orgನಲ್ಲಿ “ಮಕ್ಕಳನ್ನ ಬೆಳೆಸೋದು” ಮತ್ತು “ಹದಿವಯಸ್ಕರನ್ನ ಬೆಳೆಸೋದು” ಅಂತ ಹುಡುಕಿ)

ಮಕ್ಕಳಿಗೆ ಕಲಿಸಬೇಕಾದ ಆರು ಪಾಠಗಳು” ಅನ್ನೋ 2019ರ ನಂ. 2 ಎಚ್ಚರ! ಪತ್ರಿಕೆ ನೋಡಿ. “ಯಶಸ್ವಿ ಕುಟುಂಬಗಳ 12 ಸೂತ್ರಗಳು” ಅನ್ನೋ 2018ರ ನಂ. 2 ಎಚ್ಚರ! ಪತ್ರಿಕೆಯಲ್ಲಿ ಪುಟ 8-11 ನೋಡಿ. (ಇವನ್ನ jw.orgನಲ್ಲಿ ಹುಡುಕಿ)

ಯುವ ಜನ್ರಿಗೆ: jw.orgನಲ್ಲಿ ಹದಿವಯಸ್ಕರು ಅನ್ನೋ ಒಂದು ಭಾಗ ಇದೆ. ಅದ್ರಲ್ಲಿರೋ ಲೇಖನಗಳು, ವಿಡಿಯೋಗಳು ಮತ್ತು ವರ್ಕ್‌ಶೀಟ್‌ಗಳು ಯುವ ಜನ್ರಿಗೆ . . .

  • ಅಪ್ಪ-ಅಮ್ಮ ಮತ್ತು ಒಡಹುಟ್ಟಿದವ್ರ ಜೊತೆ ಪ್ರೀತಿಯಿಂದ ನಡ್ಕೊಳ್ಳೋಕೆ

  • ಅಪ್ಪ-ಅಮ್ಮ ಹತ್ರ ಅವ್ರಿಟ್ಟಿರೋ ರೂಲ್ಸ್‌ ಬಗ್ಗೆ ಗೌರವದಿಂದ ಮಾತಾಡೋಕೆ

  • ಅಪ್ಪ-ಅಮ್ಮನ ನಂಬಿಕೆ ಗಳಿಸೋಕೆ ಸಹಾಯ ಮಾಡುತ್ತೆ.

(jw.orgನಲ್ಲಿ “ಹದಿವಯಸ್ಕರು” ಅಂತ ಹುಡುಕಿ)

jw.org ವೆಬ್‌ಸೈಟನ್ನ ಫ್ರೀಯಾಗಿ ಬಳಸಬಹುದು. ಯಾವುದೇ ರೀತಿಯ ಫೀಸ್‌ ಆಗಲಿ, ಮೆಂಬರ್‌ಶಿಪ್‌ ಆಗಲಿ, ಸಬ್‌ಸ್ಕ್ರಿಪ್ಶನ್‌ ಆಗಲಿ ಬೇಕಾಗಿಲ್ಲ. ನಿಮ್ಮ ವೈಯಕ್ತಿಕ ಮಾಹಿತಿಯನ್ನ ಕೊಡೋ ಅವಶ್ಯಕತೆನೂ ಇಲ್ಲ.