ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇವತ್ತು ಜನ ಯಾಕೆ ತಮಗೆ ತಾವೇ ಗೌರವ ಕೊಟ್ಕೊಳ್ತಿಲ್ಲ?

ಇವತ್ತು ಜನ ಯಾಕೆ ತಮಗೆ ತಾವೇ ಗೌರವ ಕೊಟ್ಕೊಳ್ತಿಲ್ಲ?

ನಾವ್ಯಾಕೆ ನಮಗೇ ಗೌರವ ಕೊಟ್ಕೊಳ್ಳೋದನ್ನ ಕಲಿಬೇಕು?

ತಮಗೆ ತಾವು ಗೌರವ ಕೊಟ್ಕೊಳ್ಳೋರು ಜೀವನದಲ್ಲಿ ಎಷ್ಟೇ ಸಮಸ್ಯೆಗಳು ಬಂದ್ರು ಅದನ್ನ ಧೈರ್ಯವಾಗಿ ಎದುರಿಸ್ತಾರೆ, ಸೋತು ಹೋಗಲ್ಲ.

  • ಒಂದು ಸಂಶೋಧನೆ ಪ್ರಕಾರ ಯಾರು ತಮ್ಮನ್ನ ತಾವು ಕೀಳಾಗಿ ನೋಡ್ಕೊಳ್ತಾರೋ ಅವ್ರಿಗೆ ಜಾಸ್ತಿ ಚಿಂತೆ, ಖಿನ್ನತೆ ಕಾಡುತ್ತೆ. ಅಷ್ಟೇ ಅಲ್ಲ ಅವರು ತುಂಬ ಜಾಸ್ತಿ ತಿಂತಾರೆ ಇಲ್ಲಾಂದ್ರೆ ತಿನ್ನದೆ ಇದ್ದುಬಿಡ್ತಾರೆ. ಅದ್ರ ಜೊತೆಗೆ ಅವರು ಕುಡಿಕತನಕ್ಕೆ ಮತ್ತು ಡ್ರಗ್ಸ್‌ ತಗೊಳ್ಳೋ ಚಟಕ್ಕೆ ಬಲಿ ಬೀಳೋ ಸಾಧ್ಯತೆ ಜಾಸ್ತಿ ಇರುತ್ತೆ.

  • ತಮಗೆ ತಾವು ಗೌರವ ಕೊಟ್ಕೊಳ್ಳೋರು ತಮ್ಮನ್ನ ಬೇರೆಯವ್ರ ಜೊತೆ ಹೋಲಿಸ್ಕೊಳ್ಳಲ್ಲ. ಎಲ್ರ ಜೊತೆ ಚೆನ್ನಾಗಿ ಬೆರಿತಾರೆ. ಬೇರೆಯವ್ರಿಗೆ ಅವರು ಒಳ್ಳೇ ಫ್ರೆಂಡ್ಸ್‌ ಆಗಿರ್ತಾರೆ. ಆದ್ರೆ ತಮ್ಮ ಬಗ್ಗೆ ಯಾರು ಕೀಳಾಗಿ ಯೋಚ್ನೆ ಮಾಡ್ತಾರೋ ಅವರು ಬೇರೆಯವ್ರಲ್ಲಿ ಯಾವಾಗ್ಲೂ ತಪ್ಪನ್ನೇ ಹುಡುಕ್ತಿರ್ತಾರೆ. ಇದ್ರಿಂದ ಇರೋ ಫ್ರೆಂಡ್‌ಶಿಪ್‌ನೂ ಹಾಳುಮಾಡ್ಕೊತಾರೆ.

  • ಯಾರು ತಮ್ಮನ್ನ ತಾವು ಗೌರವಿಸ್ಕೊಳ್ತಾರೋ ಅವರು ಜೀವನದಲ್ಲಿ ಎಷ್ಟೇ ಕಷ್ಟ ಬಂದ್ರೂ ಬಿಟ್ಕೊಡಲ್ಲ, ಅವ್ರಲ್ಲಿ ಛಲ ಇರುತ್ತೆ. ಅವರು ಜೀವನದಲ್ಲಿ ಎಷ್ಟು ಸಲ ಸೋತ್ರೂ ಮತ್ತೆ ಪ್ರಯತ್ನ ಮಾಡಿ ಗುರಿ ಮುಟ್ತಾರೆ. ಆದ್ರೆ ತಮ್ಮ ಮೇಲೆ ತಮಗೇ ಗೌರವ ಇಲ್ದೆ ಇರೋರು ಚಿಕ್ಕಪುಟ್ಟ ಸೋಲುಗಳನ್ನೂ ದೊಡ್ಡ ಬೆಟ್ಟದ ತರ ನೋಡ್ತಾರೆ. ಹಾಗಾಗಿ ಅವರು ಪ್ರಯತ್ನ ಮಾಡೋಕೇ ಹೋಗಲ್ಲ, ಬಿಟ್ಟುಬಿಡ್ತಾರೆ.

ನಿಮ್ಮ ಮೇಲೆ ನೀವು ಗೌರವ ಬೆಳೆಸ್ಕೊಬೇಕಾದ್ರೆ ಏನು ಮಾಡಬೇಕು?

ಒಳ್ಳೇ ಫ್ರೆಂಡ್ಸ್‌ನ ಮಾಡ್ಕೊಳ್ಳಿ. ನಿಮ್ಮ ಮೇಲೆ ಗೌರವ ಇರೋರನ್ನ, ನಿಮಗೆ ಯಾವಾಗ್ಲೂ ಒಳ್ಳೇದಾಗಬೇಕು ಅಂತ ಬಯಸೋರನ್ನ ಮತ್ತು ನಿಮ್ಮ ಕೈಹಿಡಿದು ಎತ್ತೋರನ್ನ ಸ್ನೇಹಿತರಾಗಿ ಮಾಡ್ಕೊಳ್ಳಿ.

“ನಿಜವಾದ ಸ್ನೇಹಿತ ಎಲ್ಲ ಸಮಯದಲ್ಲೂ ಪ್ರೀತಿಸ್ತಾನೆ. ಕಷ್ಟಕಾಲದಲ್ಲಿ ಅವನು ನಿಮ್ಮ ಸಹೋದರನಾಗ್ತಾನೆ.”—ಜ್ಞಾನೋಕ್ತಿ 17:17.

ಬೇರೆಯವ್ರಿಗೆ ಸಹಾಯ ಮಾಡಿ. ನೀವು ಬೇರೆಯವ್ರ ಜೊತೆ ಪ್ರೀತಿಯಿಂದ ನಡ್ಕೊಂಡಾಗ, ಅವ್ರಿಂದ ನಿಮಗೇನೂ ಸಹಾಯ ಸಿಗಲ್ಲ ಅಂತ ಗೊತ್ತಿದ್ರೂ ನೀವು ಸಹಾಯ ಮಾಡಿದಾಗ ನೀವು ಕೊಡೋದ್ರಲ್ಲಿ ಸಿಗೋ ಖುಷಿನ ಸವೀತಿರ. ನೀವು ಮಾಡಿರೋ ಸಹಾಯನ ಬೇರೆಯವರು ಗಮನಿಸದೇ ಇದ್ರೂ ನಿಮ್ಮ ಖುಷಿ ಹಾಗೇ ಇರುತ್ತೆ.

“ತಗೊಳ್ಳೋದಕ್ಕಿಂತ ಕೊಡೋದ್ರಲ್ಲಿ ಜಾಸ್ತಿ ಖುಷಿ ಸಿಗುತ್ತೆ.” —ಅಪೊಸ್ತಲರ ಕಾರ್ಯ 20:35.

ನಿಮ್ಮ ಮಕ್ಕಳಿಗೆ ಅವ್ರನ್ನ ಅವ್ರೇ ಗೌರವಿಸ್ಕೊಳ್ಳೋಕೆ ಕಲಿಸಿ. ನಿಮ್ಮ ಮಕ್ಕಳಿಗೆ ಏನಾದ್ರೂ ಸಮಸ್ಯೆಗಳು ಬಂದಾಗ ನೀವೇ ತಕ್ಷಣ ಹೋಗಿ ಸರಿ ಮಾಡಬೇಡಿ. ಅವ್ರಿಂದ ಅದನ್ನ ಬಗೆಹರಿಸೋಕಾದ್ರೆ ಅವ್ರಿಗೇ ಅದನ್ನ ಸರಿಮಾಡೋಕೆ ಬಿಟ್ಕೊಡಿ. ಹೀಗೆ ಅವರು ಜೀವನದ ಪಾಠಗಳನ್ನ ಕಲೀತಾರೆ. ಇದ್ರಿಂದ ಈಗಷ್ಟೇ ಅಲ್ಲ, ದೊಡ್ಡವರಾದಾಗಲೂ ಅವ್ರ ಮೇಲೆ ಅವ್ರಿಗೆ ಗೌರವ ಬೆಳಿಯುತ್ತೆ.

“ಸರಿ ದಾರಿಯಲ್ಲಿ ನಡಿಯೋಕೆ ಮಗುಗೆ ತರಬೇತಿ ಕೊಡು, ವಯಸ್ಸಾದ ಮೇಲೂ ಅವನು ಆ ದಾರಿ ಬಿಟ್ಟು ಹೋಗಲ್ಲ.”—ಜ್ಞಾನೋಕ್ತಿ 22:6, ಪಾದಟಿಪ್ಪಣಿ.

ಯೆಹೋವನ ಸಾಕ್ಷಿಗಳು ಇದನ್ನ ಹೇಗೆ ಕಲಿಸ್ತಾರೆ?

ಯೆಹೋವನ ಸಾಕ್ಷಿಗಳ ಕೂಟಗಳಿಂದ ಮತ್ತು ಅವರು ನಡೆಸೋ ಬೈಬಲ್‌ ಅಧ್ಯಯನದಿಂದ ಜನ್ರಿಗೆ ತಮ್ಮ ಜೀವನದಲ್ಲಿರೋ ಸಮಸ್ಯೆಗಳನ್ನ ಬಗೆಹರಿಸ್ಕೊಳ್ಳೋಕೆ ಆಗಿದೆ. ಇದ್ರಿಂದ ಅವ್ರ ಮೇಲೆ ಅವ್ರಿಗಿರೋ ಗೌರವನೂ ಜಾಸ್ತಿಯಾಗಿದೆ.

ಯೆಹೋವನ ಸಾಕ್ಷಿಗಳ ಕೂಟಗಳು

ಪ್ರತಿವಾರ ನಡಿಯೋ ನಮ್ಮ ಕೂಟಗಳಲ್ಲಿ ಬೈಬಲ್‌ ಆಧಾರಿತ ಭಾಷಣಗಳು ಇರುತ್ತೆ. ನಮ್ಮ ಕೂಟಗಳು ಫ್ರೀಯಾಗಿ ನಡಿಯುತ್ತೆ. ಅಲ್ಲಿಗೆ ಯಾರು ಬೇಕಾದ್ರೂ ಬರಬಹುದು. ಅಲ್ಲಿ ನಿಮ್ಮ ಮೇಲೆ ನೀವು ಗೌರವ ಬೆಳೆಸ್ಕೊಳ್ಳೋಕೆ ಏನು ಮಾಡಬೇಕು ಅಂತ ಕಲೀತಿರ. ಉದಾಹರಣೆಗೆ,

  • ನೀವಂದ್ರೆ ದೇವರಿಗೆ ಯಾಕಿಷ್ಟ?

  • ನಿಮ್ಮ ಜೀವನದ ಉದ್ದೇಶ ಏನು?

  • ಶಾಶ್ವತವಾದ ಸ್ನೇಹನ ಹೇಗೆ ಬೆಳೆಸ್ಕೊಳ್ಳೋದು ಅನ್ನೋ ಪ್ರಶ್ನೆಗಳಿಗೆ ಅಲ್ಲಿ ಉತ್ರ ತಿಳ್ಕೊತೀರ.

ಅಲ್ಲಿ ನಿಮಗೆ ‘ಒಬ್ರು ಇನ್ನೊಬ್ರ ಬಗ್ಗೆ ಚಿಂತೆ ಮಾಡೋ’ ನಿಜವಾದ ಸ್ನೇಹಿತರು ಸಿಗ್ತಾರೆ.—1 ಕೊರಿಂಥ 12:25, 26.

ನಮ್ಮ ಕೂಟಗಳ ಬಗ್ಗೆ ಇನ್ನೂ ಜಾಸ್ತಿ ತಿಳ್ಕೊಳ್ಳೋಕೆ jw.orgನಲ್ಲಿ ರಾಜ್ಯ ಸಭಾಗೃಹದಲ್ಲಿ ಏನು ನಡೆಯುತ್ತದೆ? ಅನ್ನೋ ಚಿಕ್ಕ ವಿಡಿಯೋ ನೋಡಿ.

ನಮ್ಮ ಬೈಬಲ್‌ ಕೋರ್ಸ್‌

ಚರ್ಚೆ ಮಾಡೋಕೆ ಸುಲಭವಾಗಿರೋ ಪುಸ್ತಕದಿಂದ ನೀವು ಬೈಬಲ್‌ ಕೋರ್ಸ್‌ ಮಾಡಬಹುದು. ಆ ಪುಸ್ತಕದ ಹೆಸ್ರು ಎಂದೆಂದೂ ಖುಷಿಯಾಗಿ ಬಾಳೋಣ! ಇದ್ರಲ್ಲಿ ಬೈಬಲಿಂದ ಆರಿಸಿರೋ ಮುಖ್ಯ ವಚನಗಳಿವೆ, ಸ್ಪಷ್ಟವಾದ ವಿವರಣೆಗಳಿವೆ, ಯೋಚ್ನೆ ಮಾಡೋ ತರ ಪ್ರಶ್ನೆಗಳಿವೆ, ಸುಂದರವಾದ ವಿಡಿಯೋಗಳು ಮತ್ತು ಚಿತ್ರಗಳಿವೆ. ಈ ಬೈಬಲ್‌ ಕೋರ್ಸಿಂದ ಜನ್ರು ತಮ್ಮ ಮೇಲೆ ಗೌರವ ಬೆಳೆಸ್ಕೊಳ್ಳೋಕೆ ಕಲ್ತಿದ್ದಾರೆ. ಈಗ ಅವರು ತಮ್ಮ ಜೀವನದಲ್ಲಿ ಖುಷಿಯಾಗಿದ್ದಾರೆ.

ಯೆಹೋವನ ಸಾಕ್ಷಿಗಳ ಜೊತೆ ಬೈಬಲ್‌ ಕಲಿಯೋದ್ರಿಂದ ನಿಮಗೆ ಹೇಗೆಲ್ಲಾ ಒಳ್ಳೇದಾಗುತ್ತೆ ಅಂತ ತಿಳ್ಕೊಳ್ಳೋಕೆ jw.orgನಲ್ಲಿ ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು? ಅನ್ನೋ ಚಿಕ್ಕ ವಿಡಿಯೋ ನೋಡಿ.