ಪೀಠಿಕೆ
ಯಶಸ್ವಿ ಕುಟುಂಬಗಳ 12 ಸೂತ್ರಗಳು
ಕುಟುಂಬಗಳು ಒಡೆದುಹೋದಾಗ ಅದಕ್ಕೆ ಕಾರಣವಾದ ವಿಷಯಗಳ ಬಗ್ಗೆ ನಾವು ಕೇಳಿಸಿಕೊಳ್ಳುತ್ತಲೇ ಇರುತ್ತೇವೆ. ಆದರೆ ಕುಟುಂಬ ಜೀವನ ಯಶಸ್ವಿಯಾಗಿರುವಾಗ ಅದಕ್ಕೆ ಕಾರಣವಾಗಿರುವ ವಿಷಯಗಳೇನೆಂದು ಕಲಿಯೋಣ.
ಅಮೆರಿಕದಲ್ಲಿ 1990ಕ್ಕೆ ಹೋಲಿಸಿದರೆ 2015ರಲ್ಲಿ 50ಕ್ಕೂ ಹೆಚ್ಚು ವಯಸ್ಸಿನವರ ವಿಚ್ಛೇದನ ಸಂಖ್ಯೆ ದುಪ್ಪಟ್ಟಾಗಿದೆ, 65ಕ್ಕೂ ಹೆಚ್ಚು ವಯಸ್ಸಿನವರ ವಿಚ್ಛೇದನ ಸಂಖ್ಯೆ ಮೂರು ಪಟ್ಟು ಆಗಿದೆ.
ಹೆತ್ತವರು ಗಲಿಬಿಲಿಯಲ್ಲಿದ್ದಾರೆ: ಕೆಲವು ತಜ್ಞರು ಮಕ್ಕಳನ್ನು ಯಾವಾಗಲೂ ಹೊಗಳುತ್ತಾ ಇರಬೇಕೆಂದು ಹೇಳಿದರೆ ಇನ್ನು ಕೆಲವರು ಅವರಿಗೆ ಕಟ್ಟುನಿಟ್ಟಾಗಿ ಶಿಸ್ತು ಕೊಡಬೇಕೆನ್ನುತ್ತಾರೆ.
ಯಶಸ್ವೀ ಜೀವನ ನಡೆಸಲಿಕ್ಕಾಗಿ ಬೇಕಾದ ಯಾವುದೇ ಕೌಶಲ ಈಗಿನ ಯುವಜನರಲ್ಲಿ ಇಲ್ಲ.
ಹಾಗಿದ್ದರೂ ನಿಜವೇನೆಂದರೆ . . .
ವಿವಾಹ ಬಂಧ ಸಂತೋಷದ್ದೂ ಕೊನೆವರೆಗೆ ಬಾಳುವಂಥದ್ದೂ ಆಗಿರಲು ಸಾಧ್ಯ.
ಹೆತ್ತವರು ತಮ್ಮ ಮಕ್ಕಳಿಗೆ ಪ್ರೀತಿಯಿಂದ ಶಿಸ್ತು ನೀಡುವುದು ಹೇಗೆಂದು ಕಲಿಯಲು ಸಾಧ್ಯ.
ಯುವ ಜನರು ತಮ್ಮ ಮುಂದಿನ ಜೀವನಕ್ಕೆ ಬೇಕಾದ ಕೌಶಲಗಳನ್ನು ಬೆಳೆಸಿಕೊಳ್ಳಲು ಸಾಧ್ಯ.
ಹೇಗೆ? ಯಶಸ್ವಿ ಕುಟುಂಬಗಳ 12 ಸೂತ್ರಗಳನ್ನು ಎಚ್ಚರ! ಪತ್ರಿಕೆಯ ಈ ಸಂಚಿಕೆ ತಿಳಿಸುತ್ತದೆ.