ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ತಂತ್ರಜ್ಞಾನ ಯಾವ ಪ್ರಭಾವ ಬೀರುತ್ತೆ? ಮಕ್ಕಳ ಮೇಲೆ

ತಂತ್ರಜ್ಞಾನ ಯಾವ ಪ್ರಭಾವ ಬೀರುತ್ತೆ? ಮಕ್ಕಳ ಮೇಲೆ

ತಂತ್ರಜ್ಞಾನ ಬಳಸೋದು ದೊಡ್ಡವರಿಗೆ ಕಷ್ಟ ಆಗಬಹುದು. ಆದ್ರೆ ಮಕ್ಕಳು ಇದರಲ್ಲಿ ಜಾಣರು.

ಆನ್‌ಲೈನಲ್ಲಿ ತುಂಬ ಸಮಯ ಕಳೆಯೋ ಮಕ್ಕಳಿಗೆ . . .

  • ತಂತ್ರಜ್ಞಾನ ಉಪಯೋಗಿಸೋದು ಚಟವಾಗಿದೆ.

  • ಬೇರೆಯವರಿಂದ ಹಾನಿ ಆಗುತ್ತೆ ಮತ್ತು ಮಕ್ಕಳೂ ಬೇರೆಯವರಿಗೆ ಹಾನಿ ಮಾಡ್ತಾರೆ.

  • ಇಷ್ಟ ಇಲ್ಲದೆ ಇದ್ದರೂ ಅಶ್ಲೀಲತೆ ನೋಡೋ ಸನ್ನಿವೇಶ ಬರಬಹುದು.

ನಿಮಗೆ ಗೊತ್ತಿರಬೇಕಾದ ವಿಷಯಗಳು

ತಂತ್ರಜ್ಞಾನದ ಚಟ

ಕೆಲವು ಆನ್‌ಲೈನ್‌ ಗೇಮ್‌ಗಳು ಚಟ ಹಿಡಿಸೋ ತರ ಇರುತ್ತೆ. ಬೇಕುಬೇಕು ಅಂತಾನೇ ಅದನ್ನು ಹಾಗೆ ಮಾಡಿರುತ್ತಾರೆ. “ಮೊಬೈಲ್‌ ಆ್ಯಪ್‌ಗಳು ನಮ್ಮನ್ನೇ ಕಂಟ್ರೋಲ್‌ ಮಾಡೋ ತರ ಇರುತ್ತೆ” ಅಂತ ರಿಕ್ಲೇಮಿಂಗ್‌ ಕನ್‌ವರ್‌ಸೇಷನ್‌ ಪುಸ್ತಕ ಹೇಳುತ್ತೆ. ನಾವು ಹೆಚ್ಚು ಸಮಯ ಆ್ಯಪ್‌ಗಳನ್ನ ಬಳಸಿದರೆ ಜಾಹಿರಾತುಗಾರರಿಗೆ ಹೆಚ್ಚು ಹಣ ಸಿಗುತ್ತೆ.

ಯೋಚಿಸಿ: ನಿಮ್ಮ ಮಕ್ಕಳು ಅತಿಯಾಗಿ ತಂತ್ರಜ್ಞಾನವನ್ನು ಉಪಯೋಗಿಸುತ್ತಾರಾ? ಅವರು ತಮ್ಮ ಸಮಯವನ್ನು ಚೆನ್ನಾಗಿ ಉಪಯೋಗಿಸೋಕೆ ನೀವು ಹೇಗೆ ಸಹಾಯ ಮಾಡಬಹುದು?—ಎಫೆಸ 5:15, 16.

ಸೈಬರ್‌ ಬೆದರಿಸುವಿಕೆ

ಕೆಲವರು ಆನ್‌ಲೈನಲ್ಲಿ ತುಂಬ ಕೆಟ್ಟದಾಗಿ ನಡ್ಕೊಳ್ತಾರೆ, ಕೆಟ್ಟಕೆಟ್ಟ ಮಾತಿಂದ ಬೇರೆಯವರ ಮನಸ್ಸನ್ನು ನೋಯಿಸ್ತಾರೆ.

ಹೆಸರು ಮಾಡೋಕೆ, ಎಲ್ಲರ ಗೌರವ ಗಳಿಸೋಕೆ ಕೆಲವರು ಆನ್‌ಲೈನಲ್ಲಿ ಕೆಟ್ಟದಾಗಿ ನಡ್ಕೊಳ್ತಾರೆ. ಇನ್ನು ಕೆಲವರು ಚಿಕ್ಕಪುಟ್ಟ ಕಾರಣಗಳಿಗೂ ತುಂಬ ಬೇಜಾರು ಮಾಡ್ಕೊಳ್ತಾರೆ. ಉದಾಹರಣೆಗೆ, ಫ್ರೆಂಡ್ಸ್‌ ಪಾರ್ಟಿ ಮಾಡಿ ಅವರನ್ನು ಮಾತ್ರ ಕರೆದಿಲ್ಲ ಅಂದ್ರೆ ತುಂಬ ನೊಂದ್ಕೊತಾರೆ.

ಯೋಚಿಸಿ: ಆನ್‌ಲೈನಲ್ಲಿ ನಿಮ್ಮ ಮಕ್ಕಳು ಬೇರೆಯವರ ಮನಸ್ಸನ್ನು ನೋಯಿಸೋ ತರ ನಡ್ಕೊಳ್ತಿದ್ದಾರಾ? (ಎಫೆಸ 4:31) ಫ್ರೆಂಡ್ಸ್‌ ಅವರನ್ನು ಬಿಟ್ಟು ಮಜಾ ಮಾಡ್ತಿದ್ದಾರೆ ಅಂತ ಗೊತ್ತಾದಾಗ ನಿಮ್ಮ ಮಗುಗೆ ಹೇಗನಿಸುತ್ತೆ?

ಅಶ್ಲೀಲತೆ

ಈಗ ಇಂಟರ್ನೆಟ್ಟಲ್ಲಿ ಅಶ್ಲೀಲ ವಿಷಯಗಳು ಸರ್ವೇ ಸಾಮಾನ್ಯ. ಎಲೆಕ್ಟ್ರಾನಿಕ್‌ ಸಾಧನಗಳಲ್ಲಿ ಮಕ್ಕಳು ಅಶ್ಲೀಲ ಚಿತ್ರಗಳನ್ನು ನೋಡದೆ ಇರೋ ಸೆಟ್ಟಿಂಗನ್ನು ಅಪ್ಪಅಮ್ಮ ಮಾಡಿಟ್ಟರೂ ಮಕ್ಕಳು ಅದನ್ನು ಮೀರಿ ಕೆಟ್ಟ ವಿಷಯಗಳನ್ನು ನೋಡ್ತಾರೆ.

ಅಶ್ಲೀಲ ಚಿತ್ರಗಳನ್ನು ಕಳಿಸುವುದು ಅಥವಾ ಸ್ವೀಕರಿಸುವುದು ಕಾನೂನು ಬಾಹಿರ. ಅದರಲ್ಲೂ ಮಕ್ಕಳ ಅಶ್ಲೀಲ ಚಿತ್ರಗಳನ್ನು ಕಳಿಸುವುದು ಅಥವಾ ನೋಡುವುದು ಗಂಭೀರ ಅಪರಾಧ ಆಗಿರೋದ್ರಿಂದ ಕೇಸ್‌ ತಗೊಳ್ಳಲಾಗುತ್ತೆ.

ಯೋಚಿಸಿ: ಆನ್‌ಲೈನಲ್ಲಿ ಅಶ್ಲೀಲ ಚಿತ್ರಗಳನ್ನು ನಿಮ್ಮ ಮಕ್ಕಳು ನೋಡದೆ ಇರೋಕೆ ಮತ್ತು ಕಳಿಸದೆ ಇರೋಕೆ ನೀವೇನು ಮಾಡಬಹುದು? —ಎಫೆಸ 5:3, 4.

ನೀವು ಮಾಡಬೇಕಾದ ವಿಷಯಗಳು

ಮಕ್ಕಳಿಗೆ ತರಬೇತಿ ಕೊಡಿ

ತಂತ್ರಜ್ಞಾನ ಉಪಯೋಗಿಸೋದ್ರಲ್ಲಿ ಮಕ್ಕಳು ಜಾಣರಾದ್ರೂ ಅದನ್ನ ಸರಿಯಾಗಿ ಉಪಯೋಗಿಸೋಕೆ ನೀವು ಅವರಿಗೆ ತರಬೇತಿ ಕೊಡಬೇಕು. ಇನ್‌ಡಿಸ್ಟ್ರಾಕ್ಟಬಲ್‌ ಪುಸ್ತಕ ಹೇಳುತ್ತೆ: “ಮಕ್ಕಳು ಸರಿಯಾದ ತರಬೇತಿ ಪಡೆಯದೆ ಫೋನ್‌ ಅಥವಾ ಎಲೆಕ್ಟ್ರಾನಿಕ್‌ ಸಾಧನಗಳನ್ನು ಬಳಸಿದರೆ, ಈಜು ಬರದಿರೋ ವ್ಯಕ್ತಿಯನ್ನು ನೀರಲ್ಲಿ ಧುಮುಕಲು ಹೇಳಿದ ಹಾಗೆ ಇರುತ್ತೆ.”

ಬೈಬಲ್‌ ತತ್ವ: “ಸರಿ ದಾರಿಯಲ್ಲಿ ನಡಿಯೋಕೆ ಮಗುಗೆ ತರಬೇತಿ ಕೊಡು, ವಯಸ್ಸಾದ ಮೇಲೂ ಅವನು ಆ ದಾರಿ ಬಿಟ್ಟು ಹೋಗಲ್ಲ.”—ಜ್ಞಾನೋಕ್ತಿ 22:6, ಪಾದಟಿಪ್ಪಣಿ.

ನೀವು ಬದಲಾವಣೆ ಮಾಡಲು ಬಯಸೋ ವಿಷಯಗಳಿಗೆ ಟಿಕ್‌ ಮಾಡಿ ಅಥವಾ ನಿಮಗನಿಸಿದ ಬೇರೆ ವಿಷಯಗಳನ್ನು ಬರೆಯಿರಿ.

  • ಆನ್‌ಲೈನಲ್ಲಿ ನಿಮ್ಮ ಮಗು ನಯವಾಗಿ ಮಾತಾಡೋಕೆ, ಸರಿಯಾಗಿ ನಡ್ಕೊಳ್ಳೋಕೆ ಹೇಳಿಕೊಡಿ

  • ಫ್ರೆಂಡ್ಸ್‌ ಸೇರಿಸಿಕೊಳ್ಳದೆ ಇರುವಾಗ ಅವರು ನೊಂದುಕೊಳ್ಳದೆ ಇರೋಕೆ ಸಹಾಯ ಮಾಡಿ

  • ಆನ್‌ಲೈನಲ್ಲಿರೋ ಕೆಟ್ಟ ವಿಷಯಗಳಿಂದ ಮಕ್ಕಳನ್ನು ಕಾಪಾಡೋಕೆ ನಿಮ್ಮಿಂದ ಆಗೋ ಎಲ್ಲ ಪ್ರಯತ್ನ ಮಾಡಿ

  • ಮಕ್ಕಳ ಫೋನ್‌ ಆಗಾಗ ಚೆಕ್‌ ಮಾಡಿ

  • ಪ್ರತಿದಿನ ಮಕ್ಕಳು ಎಷ್ಟು ಸಮಯ ಫೋನ್‌ ಬಳಸಬೇಕು ಅಂತ ನಿಶ್ಚಯಿಸಿ

  • ಮಲಗುವಾಗ ಅಥವಾ ಒಬ್ಬರೇ ಇರುವಾಗ ಅವರು ಎಲೆಕ್ಟ್ರಾನಿಕ್‌ ಸಾಧನಗಳನ್ನು ಬಳಸದ ಹಾಗೆ ನೋಡಿಕೊಳ್ಳಿ

  • ಯಾರೂ ಊಟದ ಸಮಯದಲ್ಲಿ ಫೋನ್‌ ಮುಟ್ಟಬಾರದು ಅಂತ ಹೇಳಿ