ಒಂದು ವಿಶಿಷ್ಟ ಪುಸ್ತಕ
ಬೈಬಲನ್ನು ಬೇರೆ ಎಲ್ಲಾ ಪುಸ್ತಕಗಳಿಗಿಂತ ಹೆಚ್ಚು ಭಾಷೆಗಳಲ್ಲಿ ಭಾಷಾಂತರಿಸಿ ವಿತರಿಸಲಾಗಿದೆ. ಹಾಗಾಗಿ ಬೇರೆ ಎಲ್ಲಾ ಪುಸ್ತಕಗಳಿಗಿಂತ, ಬೈಬಲಲ್ಲಿರುವ ಜ್ಞಾನದಿಂದ ತುಂಬಾ ಜನರು ಪ್ರಯೋಜನ ಪಡೆದಿದ್ದಾರೆ. ಈ ವರದಿಯನ್ನು ಗಮನಿಸಿ:
ಬೈಬಲಿನ ಭಾಷಾಂತರ ಮತ್ತು ವಿತರಣೆ
96.5% ಜನರ ಹತ್ರ ಇಂದು ಬೈಬಲ್ ಇದೆ
3,350 ಭಾಷೆಗಳಲ್ಲಿ ಲಭ್ಯ (ಇಡೀ ಬೈಬಲ್/ಗ್ರೀಕ್ ಶಾಸ್ತ್ರಗ್ರಂಥ)
5,00,00,00,000 ಬೈಬಲ್ ಪ್ರತಿಗಳನ್ನು ತಯಾರಿಸಲಾಗಿದೆ. ಇಡೀ ಇತಿಹಾಸದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ತಯಾರಿಸಲಾದ ಪುಸ್ತಕ ಬೇರೆ ಯಾವುದೂ ಇಲ್ಲ
ಹೆಚ್ಚಿನ ಮಾಹಿತಿ
JW.ORG ವೆಬ್‌ಸೈಟ್‌ಗೆ ಭೇಟಿನೀಡಿ. ಅಲ್ಲಿ ನೀವು:
ಆನ್ಲೈನ್ನಲ್ಲಿ ಬೈಬಲ್ ಓದಬಹುದು (ನೂರಾರು ಭಾಷೆಗಳಲ್ಲಿ ಲಭ್ಯ)
ಅದರ ಒಂದು ಪ್ರತಿಯನ್ನು ಡೌನ್ಲೋಡ್ ಮಾಡಬಹುದು
ಬೈಬಲ್ ಪ್ರಶ್ನೆಗಳಿಗೆ ಉತ್ತರ ಹುಡುಕಬಹುದು
ಬೈಬಲ್, ಜನರ ಜೀವನಗಳನ್ನು ಹೇಗೆ ಉತ್ತಮಗೊಳಿಸಿದೆ ಎಂಬುದರ ಬಗ್ಗೆ ಇರುವ ಲೇಖನಗಳನ್ನು ಓದಬಹುದು
ಆನ್ಲೈನ್ ಬೈಬಲ್ ಕೋರ್ಸ್ ಮಾಡಬಹುದು a
ಬೈಬಲ್ ಬಗ್ಗೆ ಕಲಿಯಲು ವಿನಂತಿ ಕಳುಹಿಸಬಹುದು
ಯೆಹೋವನ ಸಾಕ್ಷಿಗಳ ಕೊಡುಗೆ
ಯೆಹೋವನ ಸಾಕ್ಷಿಗಳು ಬೈಬಲ್ ಭಾಷಾಂತರ ಮತ್ತು ವಿತರಣೆ ಕೆಲಸದಲ್ಲಿ ಹುರುಪಿನಿಂದ ಭಾಗವಹಿಸುತ್ತಾರೆ.
ಈ ಕೆಳಗಿನ ಬೈಬಲ್ ಭಾಷಾಂತರಗಳನ್ನು ಹಲವಾರು ವರ್ಷಗಳಿಂದ ನಾವು ವಿತರಿಸುತ್ತಾ ಬಂದಿದ್ದೇವೆ:
ದಿ ಅಮೆರಿಕನ್ ಸ್ಟ್ಯಾಂಡರ್ಡ್ ವರ್ಶನ್ ಆಫ್ 1901
ದಿ ಬೈಬಲ್ ಇನ್ ಲಿವಿಂಗ್ ಇಂಗ್ಲಿಷ್, ಬೈಯಿಂಗ್ಟನ್
ದಿ ಎಮ್‌ಫ್ಯಾಟಿಕ್ ಡಯಾಗ್ಲಾಟ್
ದಿ ಕಿಂಗ್ ಜೇಮ್ಸ್ ವರ್ಶನ್
ರಿವೈಸ್ಡ್ ಸ್ಟ್ಯಾಂಡರ್ಡ್ ವರ್ಶನ್
ಟಿಶೆನ್‌ಡೋರ್ಫ್ ನ್ಯೂ ಟೆಸ್ಟ್‌ಮೆಂಟ್
ನೂತನ ಲೋಕ ಭಾಷಾಂತರ
180ಕ್ಕೂ ಹೆಚ್ಚು ಭಾಷೆಗಳಲ್ಲಿ ಲಭ್ಯ (ಇಡೀ ಬೈಬಲ್/ಗ್ರೀಕ್ ಶಾಸ್ತ್ರಗ್ರಂಥ)
22 ಕೋಟಿ 70 ಲಕ್ಷ ನೂತನ ಲೋಕ ಭಾಷಾಂತರದ ಪ್ರತಿಗಳನ್ನು 1950ರಿಂದ ತಯಾರಿಸಲಾಗಿದೆ
a ಈಗ ಇಂಗ್ಲಿಷ್ ಮತ್ತು ಪೋರ್ಚುಗೀಸ್ ಭಾಷೆಯಲ್ಲಿ ಮಾತ್ರ ಲಭ್ಯ. ಮುಂದೆ ಇನ್ನೂ ಹೆಚ್ಚು ಭಾಷೆಗಳಲ್ಲಿ ಬರಲಿದೆ.