ಬೇರೆಯವರನ್ನೂ ಫ್ರೆಂಡ್ಸ್ ಮಾಡ್ಕೊಳ್ಳಿ
ಯಾಕೆ ಪ್ರಾಮುಖ್ಯ?
ತುಂಬ ಜನ ತಮ್ಮ ಹಾಗೇ ಯೋಚಿಸೋವ್ರ ಜೊತೆ ಮಾತ್ರ ಫ್ರೆಂಡ್ಷಿಪ್ ಬೆಳೆಸಿಕೊಳ್ಳೋಕೆ ಇಷ್ಟಪಡ್ತಾರೆ. ಬೇರೆಯವರೊಟ್ಟಿಗೆ ಅಷ್ಟು ಬೆರೆಯಲ್ಲ. ಹೀಗೆ ಮಾಡಿದ್ರೆ ಭೇದಭಾವ ನಮ್ಮ ಮನಸ್ಸಲ್ಲಿ ಬೇರೂರಿ ಬಿಡುತ್ತೆ. ಅಷ್ಟೇ ಅಲ್ಲ ನಾವು ಯೋಚಿಸೋ ಮತ್ತು ಮಾಡೋ ರೀತಿನೇ ಸರಿ ಅನ್ನೋ ಭಾವನೆನೂ ಬಂದುಬಿಡುತ್ತೆ.
ಪವಿತ್ರ ಗ್ರಂಥದಲ್ಲಿರೋ ಸಲಹೆ
‘ನಿಮ್ಮ ಹೃದಯ ವಿಶಾಲಮಾಡಿಕೊಳ್ಳಿ.’—2 ಕೊರಿಂಥ 6:13.
ಈ ಸಲಹೆಯಿಂದ ನಾವೇನು ಕಲಿಬಹುದು? ಇಲ್ಲಿ “ಹೃದಯ” ಅನ್ನೋ ಪದ ನಮ್ಮ ಇಷ್ಟಗಳನ್ನ ಮತ್ತು ಭಾವನೆಗಳನ್ನ ಸೂಚಿಸುತ್ತೆ. ನಮ್ಮ ಹಾಗೇ ಯೋಚಿಸೋ ಜನರನ್ನ ಫ್ರೆಂಡ್ಸ್ ಮಾಡ್ಕೊಂಡ್ರೆ ಬಾವಿಲಿರೋ ಕಪ್ಪೆ ಆಗಿಬಿಡ್ತೀವಿ. ಹಾಗಾಗಿ ಬೇರೆಯವರನ್ನೂ ಫ್ರೆಂಡ್ಸ್ ಮಾಡ್ಕೋಬೇಕು.
ಬೇರೆಯವರನ್ನೂ ಫ್ರೆಂಡ್ಸ್ ಮಾಡ್ಕೊಂಡ್ರೆ ಸಿಗೋ ಪ್ರಯೋಜ್ನ
ನಾವು ಬೇರೆಯವರನ್ನೂ ಫ್ರೆಂಡ್ಸ್ ಮಾಡ್ಕೊಂಡಾಗ ಅವರ ಯೋಚ್ನೆ, ಭಾವನೆಗಳು ಯಾಕೆ ನಮ್ಮ ಹಾಗಿಲ್ಲ ಅಂತ ಅರ್ಥ ಆಗುತ್ತೆ. ನಾವು ನಿಧಾನಕ್ಕೆ ಅವ್ರಿಗೆ ಹತ್ರ ಆಗ್ತಾ ಹೋದಂತೆ ಅವರನ್ನ ಇಷ್ಟಪಡೋಕೆ ಶುರುಮಾಡ್ತೀವಿ, ಅವರ ಸುಖ ದುಃಖಗಳಲ್ಲೂ ಭಾಗಿಯಾಗ್ತೀವಿ.
ನಾರ್ವೆಯಲ್ಲಿ ಇರೋ ನಜ಼ರೀ ಅನ್ನೋ ಸ್ತ್ರೀಯ ಉದಾಹರಣೆ ನೋಡಿ. ಬೇರೆ ದೇಶದಿಂದ ಬಂದ ಜನರಂದ್ರೆ ಅವರಿಗೆ ಇಷ್ಟ ಆಗ್ತಿರಲಿಲ್ಲ. ಆದ್ರೆ ಅವರು ತಮ್ಮ ಯೋಚ್ನೆನ ಬದಲಾಯಿಸಿಕೊಂಡ್ರು. “ಜನರು ಅವರ ಬಗ್ಗೆ ಏನೇನೋ ಹೇಳೋದನ್ನ ನಾನು ಕೇಳಿಸಿಕೊಂಡಿದ್ದೆ. ಆದ್ರೆ ಅವರ ಜೊತೆ ಸ್ವಲ್ಪ ಕಾಲ ಕಳೆದಾಗ, ಕೆಲಸ ಮಾಡ್ದಾಗ ನಾನು ಕೇಳಿಸಿಕೊಂಡಿದ್ದೆಲ್ಲ ನಿಜ ಅಲ್ಲ ಅಂತ ಗೊತ್ತಾಯಿತು. ಬೇರೆಬೇರೆ ದೇಶ ಸಂಸ್ಕೃತಿಯ ಜನರನ್ನ ಫ್ರೆಂಡ್ಸ್ ಮಾಡ್ಕೊಂಡ್ರೆ ಅವರ ಬಗ್ಗೆ ಚೆನ್ನಾಗಿ ತಿಳುಕೊಳ್ಳೋಕೆ ಆಗುತ್ತೆ, ಅವರ ಮೇಲೆ ತಪ್ಪಭಿಪ್ರಾಯ ಬೆಳೆಯಲ್ಲ.
ಅವರ ಮೇಲಿರೋ ಪ್ರೀತಿ, ಗೌರವ ಜಾಸ್ತಿ ಆಗುತ್ತೆ. ನಮ್ಮ ಮಧ್ಯೆ ಇರೋ ಫ್ರೆಂಡ್ಷಿಪ್ಪೂ ಗಟ್ಟಿಯಾಗುತ್ತೆ” ಅಂತ ಅವರು ಹೇಳ್ತಾರೆ.ನೀವೇನು ಮಾಡಬಹುದು?
ಬೇರೆ ದೇಶ, ಜಾತಿ, ಭಾಷೆಯ ಜನರ ಹತ್ರ ಮಾತಾಡೋ ಅವಕಾಶ ಸಿಕ್ಕಿದಾಗ ಅದನ್ನ ಚೆನ್ನಾಗಿ ಉಪಯೋಗಿಸಿಕೊಳ್ಳಿ. ನೀವು ಹೀಗೆ ಮಾಡಬಹುದು:
-
ಅವರ ಜೊತೆ ಸ್ವಲ್ಪ ಹೊತ್ತು ಮಾತಾಡಿ, ಅವರ ಬಗ್ಗೆ ತಿಳುಕೊಳ್ಳಿ.
-
ಅವರನ್ನ ನಿಮ್ಮ ಮನೆಗೆ ಊಟಕ್ಕೆ ಕರೆಯಿರಿ.
-
ಅವರು ತಮ್ಮ ಬಗ್ಗೆ ಏನಾದ್ರು ಹೇಳುವಾಗ ಅದನ್ನ ಚೆನ್ನಾಗಿ ಕೇಳಿಸಿಕೊಳ್ಳಿ ಮತ್ತು ಅವರಿಗೆ ಏನು ಇಷ್ಟ, ಏನು ಇಷ್ಟ ಇಲ್ಲ ಅಂತ ತಿಳುಕೊಳ್ಳಿ.
ಹೀಗೆ ಬೇರೆಯವರ ಬಗ್ಗೆ ತಿಳುಕೊಂಡು ಅವರನ್ನ ಅರ್ಥಮಾಡಿಕೊಂಡ್ರೆ ಅವರ ಬಗ್ಗೆ ಇದ್ದಿದ್ದ ತಪ್ಪಭಿಪ್ರಾಯ ಎಲ್ಲ ಹೋಗಿಬಿಡುತ್ತೆ.