ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿಜ್ಞಾನಿಗಳಿಗೆ ಗೊತ್ತಿಲ್ಲದ ವಿಷಯ ಯಾವುದು

ವಿಜ್ಞಾನಿಗಳಿಗೆ ಗೊತ್ತಿಲ್ಲದ ವಿಷಯ ಯಾವುದು

ಈ ವಿಶ್ವದಲ್ಲಿರೋ ಪ್ರತಿಯೊಂದು ವಿಷಯದ ಬಗ್ಗೆ ವಿಜ್ಞಾನಿಗಳು ಸಾಕಷ್ಟು ಅಧ್ಯಯನ ಮಾಡಿದ್ದಾರೆ. ಆದರೆ ಅವರಿಗೆ ಪ್ರಾಮುಖ್ಯವಾಗಿರೋ ಎಷ್ಟೋ ಪ್ರಶ್ನೆಗಳಿಗೆ ಉತ್ತರಿಸೋಕೆ ಆಗಲಿಲ್ಲ.

ವಿಶ್ವ ಮತ್ತು ಜೀವ ಹೇಗೆ ಬಂತು ಅಂತ ವಿಜ್ಞಾನಿಗಳಿಗೆ ಹೇಳೋಕಾಗಿದ್ಯಾ? ಇಲ್ಲ. ವಿಶ್ವ ಹೇಗೆ ಬಂತು ಅನ್ನೋದ್ರ ಬಗ್ಗೆ ಕಾ಼ಸ್ಮಾಲಜಿ ಹೇಳುತ್ತೆ ಅಂತ ಕೆಲವರು ಹೇಳುತ್ತಾರೆ. ಡಾರ್ಟ್‌ಮೌತ್‌ ಕಾ಼ಲೇಜಿನ ಖಗೋಳಶಾಸ್ತ್ರ ಪ್ರೋಫೆಸರ್‌ ಮಾರ್ಸೆಲ್ಲೋ ಗ್ಲೀಸರ್‌ ದೇವರನ್ನು ನಂಬ್ತಿರಲಿಲ್ಲ. ಅವರು ಹೇಳಿದ್ದು “ವಿಶ್ವ ಹೇಗೆ ಬಂತು ಅನ್ನೋದರ ಬಗ್ಗೆ ನಾವು ಮಾತೇ ಎತ್ತಿಲ್ಲ.”

ಜೀವ ಹೇಗೆ ಬಂತು ಅನ್ನೋದರ ಬಗ್ಗೆ ಸೈನ್ಸ್‌ ನ್ಯೂಸ್‌ ಮ್ಯಾಗಜಿ಼ನ್‌ನ ಒಂದು ಲೇಖನ ಹೀಗೆ ಹೇಳುತ್ತೆ: “ಈ ಭೂಮಿಯಲ್ಲಿ ಜೀವ ಹೇಗೆ ಬಂತು ಅಂತ ಹೇಳೋದು ಅಸಾಧ್ಯ. ಯಾಕಂದ್ರೆ ಭೂಮಿಯ ಆರಂಭದ ದಿನಗಳಲ್ಲಿದ್ದ ಭೂವಿಜ್ಞಾನದ ದಾಖಲೆಗಳು ಅಂದ್ರೆ, ಬಂಡೆಗಳು ಮತ್ತು ಪಳೆಯುಳಿಕೆಗಳು ಈಗ ಕಣ್ಮರೆಯಾಗಿವೆ.” ಈ ಹೇಳಿಕೆ ಏನು ತೋರಿಸುತ್ತಂದ್ರೆ ಜೀವ ಮತ್ತು ವಿಶ್ವ ಹೇಗೆ ಬಂತು ಅನ್ನೋ ಪ್ರಶ್ನೆಗೆ ವಿಜ್ಞಾನಕ್ಕೆ ಇನ್ನೂ ಉತ್ತರಿಸೋಕೆ ಆಗಿಲ್ಲ.

ಒಂದುವೇಳೆ ಭೂಮಿ ವಿನ್ಯಾಸವಾಗಿದ್ದರೆ ಅದನ್ನು ಯಾರು ವಿನ್ಯಾಸಿಸಿದ್ರು? ಅಂತ ನೀವು ಯೋಚಿಸಿರಬಹುದು. ವಿವೇಕ ಇರೋ ಒಬ್ಬ ಪ್ರೀತಿಯ ಸೃಷ್ಟಿಕರ್ತ ಇರೋದಾದ್ರೆ ಜನರು ಇಷ್ಟು ಕಷ್ಟ ಅನುಭವಿಸುವಂತೆ ಯಾಕೆ ಬಿಟ್ಟಿದ್ದಾನೆ? ಇಷ್ಟೊಂದು ಧರ್ಮಗಳು ಇರುವಂತೆ ಆತನು ಯಾಕೆ ಅನುಮತಿಸಿದ್ದಾನೆ? ಜನರು ಕೆಟ್ಟ ಕೆಲಸ ಮಾಡುವಾಗ ದೇವರು ಯಾಕೆ ಸುಮ್ಮನಿದ್ದಾನೆ? ಇಂಥ ಪ್ರಶ್ನೆಗಳು ನಿಮ್ಮ ಮನಸ್ಸಲ್ಲಿ ಬರಬಹುದು.

ಈ ಪ್ರಶ್ನೆಗಳಿಗೆ ವಿಜ್ಞಾನಕ್ಕೆ ಉತ್ತರ ಕೊಡೋಕ್ಕಾಗಿಲ್ಲ. ಹಾಗಂತ ಈ ಪ್ರಶ್ನೆಗಳಿಗೆ ಉತ್ತರನೇ ಸಿಗಲ್ಲ ಅಂತಲ್ಲ. ಯಾಕಂದ್ರೆ ಎಷ್ಟೋ ಜನ ಬೈಬಲಿಂದ ಇದಕ್ಕೆ ಉತ್ತರ ಕಂಡ್ಕೊಂಡಿದ್ದಾರೆ.

ಬೈಬಲನ್ನು ಅಧ್ಯಯನ ಮಾಡಿದ ಕೆಲವು ವಿಜ್ಞಾನಿಗಳು ಒಬ್ಬ ಸೃಷ್ಟಿಕರ್ತ ಇದ್ದಾನೆ ಅಂತ ನಂಬಿದ್ದಾರೆ. ಅವರು ಹೇಳಿದ್ದನ್ನು ತಿಳಿಯಲು jw.orgಯಲ್ಲಿ “ಜೀವದ ಉಗಮದ ಬಗ್ಗೆ ದೃಷ್ಟಿಕೋನಗಳು” ಅನ್ನುವಲ್ಲಿ ನೋಡಿ.