ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹೇಗೆ ನಿರ್ಣಯಿಸ್ತೀರಾ?

ಹೇಗೆ ನಿರ್ಣಯಿಸ್ತೀರಾ?

“ವಿಶ್ವವು ತನ್ನನ್ನು ಶೂನ್ಯದಿಂದ ಸೃಷ್ಟಿಸಬಹುದು ಮತ್ತು ಸೃಷ್ಟಿಸುತ್ತದೆ.”—ಸ್ಟೀಫನ್‌ ಹಾಕಿಂಗ್‌ ಮತ್ತು ಲೆನಾರ್ಡ್‌ ಮ್ಲಾಡಿನಾವ್‌, ಭೌತಶಾಸ್ತ್ರಜ್ಞರು, 2010.

“ದೇವರು ಆಕಾಶ, ಭೂಮಿ ಸೃಷ್ಟಿ ಮಾಡಿದನು.”—ಬೈಬಲ್‌, ಆದಿಕಾಂಡ 1:1.

ಈ ವಿಶ್ವ ಮತ್ತು ಅದರಲ್ಲಿರೋ ಎಲ್ಲ ಜೀವರಾಶಿಗಳನ್ನು ದೇವರು ಸೃಷ್ಟಿಮಾಡಿದ್ದಾ ಅಥವಾ ಆಕಸ್ಮಿಕವಾಗಿ ಬಂತಾ? ಈ ಪ್ರಶ್ನೆಗೆ ಆ ಇಬ್ಬರು ಭೌತಶಾಸ್ತ್ರಜ್ಞರು ಮತ್ತು ಬೈಬಲ್‌ ಕೊಡೊ ಉತ್ತರ ಭಿನ್ನವಾಗಿದೆ. ಈ ಎರಡು ಅಭಿಪ್ರಾಯಗಳನ್ನು ಬೆಂಬಲಿಸೋ ಜನರಿದ್ದಾರೆ. ಆದರೂ ಹೆಚ್ಚಿನ ಜನ ಗೊಂದಲದಲ್ಲೇ ಇದ್ದಾರೆ. ಪ್ರಸಿದ್ಧ ಪುಸ್ತಕಗಳಲ್ಲಿ, ಟಿವಿ ಶೋಗಳಲ್ಲಿ ಜನರು ಇದರ ಬಗ್ಗೆ ವಾದ ಪ್ರತಿವಾದ ಮಾಡ್ತಾ ಇದ್ದಾರೆ.

ಈ ವಿಶ್ವ ಮತ್ತು ಅದರಲ್ಲಿರೋ ಎಲ್ಲ ಜೀವರಾಶಿಗಳು ತನ್ನಿಂದ ತಾನೇ ಬಂದಿದ್ದು, ದೇವರು ಸೃಷ್ಟಿಮಾಡಿಲ್ಲ ಅಂತ ಶಾಲೆಯಲ್ಲಿ ಕಲಿಸುತ್ತಾರೆ. ಆದರೆ ಅವರು ದೇವರು ಇಲ್ಲ ಅನ್ನೋದಕ್ಕೆ ಏನಾದರೂ ಪುರಾವೆ ಕೊಟ್ಟಿದ್ದಾರಾ? ಇನ್ನೊಂದು ಕಡೆ, ಧರ್ಮ ಗುರುಗಳು ಒಬ್ಬ ಸೃಷ್ಟಿಕರ್ತ ಇದ್ದಾನೆ ಅಂತ ಹೇಳುತ್ತಾರೆ. ಆದರೆ ಅದಕ್ಕೆ ಏನಾದರೂ ಪುರಾವೆ ಕೊಟ್ಟಿದ್ದಾರಾ ಅಥವಾ ನಾವು ಹೇಳೋದ್ರಿಂದ ನೀವು ನಂಬಲೇಬೇಕು ಅಂತ ಹೇಳ್ತಿದ್ದಾರಾ?

ಒಬ್ಬ ಸೃಷ್ಟಿಕರ್ತ ಇದ್ದಾನಾ ಅನ್ನೋ ಪ್ರಶ್ನೆ ಬಗ್ಗೆ ನೀವು ಯೋಚಿಸುವಾಗ ಇದಕ್ಕೆ ಉತ್ತರ ಯಾರಿಗೂ ಕೊಡೋಕೆ ಆಗ್ತಿಲ್ಲ ಅಂತ ಅನಿಸಬಹುದು. ಇದಕ್ಕೆ ಉತ್ತರ ತಿಳಿಯೋದ್ರಿಂದ ಏನಾದರೂ ಪ್ರಯೋಜನ ಇದೆಯಾ ಅಂತನೂ ನಿಮಗೆ ಅನಿಸಬಹುದು.

ಎಚ್ಚರ! ಪತ್ರಿಕೆ ದೇವರು ಇದ್ದಾನೆ ಅಂತ ನಂಬೋಕೆ ತುಂಬ ಜನರಿಗೆ ಸಹಾಯಮಾಡಿದ ಕೆಲವು ಕಾರಣಗಳ ಬಗ್ಗೆ ಹೇಳುತ್ತೆ. ಅಷ್ಟೇ ಅಲ್ಲ, ಈ ಪ್ರಶ್ನೆಗೆ ಉತ್ತರ ತಿಳಿಯೋದ್ರಿಂದ ಪ್ರಯೋಜನ ಇದೆ ಅಂತನೂ ಅರ್ಥಮಾಡ್ಕೊಳ್ತಿರ.