ಕಾವಲಿನಬುರುಜು - ಅಧ್ಯಯನ ಆವೃತ್ತಿ ಅಕ್ಟೋಬರ್ 2018

ಈ ಸಂಚಿಕೆಯಲ್ಲಿ 2018​ರ ಡಿಸೆಂಬರ್‌ 3-30​ರ ವರೆಗಿನ ಅಧ್ಯಯನ ಲೇಖನಗಳಿವೆ.

1918—ನೂರು ವರ್ಷಗಳ ಹಿಂದೆ

1918​ರಲ್ಲೂ ಯುರೋಪಿನಲ್ಲಿ ಮಹಾಯುದ್ಧದ ಬೆಂಕಿ ಉರಿಯುತ್ತಾ ಇತ್ತು. ಆದರೆ ಆ ವರ್ಷದ ಆರಂಭದಲ್ಲಿ ನಡೆದ ಘಟನೆಗಳನ್ನು ನೋಡಿದರೆ ಬೈಬಲ್‌ ವಿದ್ಯಾರ್ಥಿಗಳಿಗೆ ಮತ್ತು ಲೋಕಕ್ಕೆ ಒಳ್ಳೇದಾಗುತ್ತದೆ ಎನ್ನುವಂತೆ ತೋರುತ್ತಿದ್ದವು.

ಸತ್ಯವನ್ನೇ ಹೇಳಿ

ಜನ ಯಾಕೆ ಸುಳ್ಳು ಹೇಳುತ್ತಾರೆ ಮತ್ತು ಇದರಿಂದ ಏನಾಗುತ್ತದೆ? ನಾವು ಹೇಗೆ ಒಬ್ಬರಿಗೊಬ್ಬರು ಸತ್ಯವನ್ನಾಡಬಹುದು?

ಸತ್ಯವನ್ನು ಕಲಿಸಿ

ಸಾಕ್ಷಿಕೊಡಲು ನಮಗೆ ಉಳಿದಿರುವ ಸಮಯದಲ್ಲಿ ನಮ್ಮ ಗಮನ ಬೈಬಲ್‌ ಅಧ್ಯಯನಗಳನ್ನು ಆರಂಭಿಸಿ ಜನರಿಗೆ ಸತ್ಯ ಕಲಿಸುವುದರ ಮೇಲೆ ಇರಬೇಕು. ಸತ್ಯ ಕಲಿಸಲು ಸೇವೆಯಲ್ಲಿ ಬೋಧನಾ ಸಲಕರಣೆಗಳನ್ನು ಹೇಗೆ ಉಪಯೋಗಿಸಬಹುದು?

ಜೀವನ ಕಥೆ

ಒಂದು ನಿರ್ಧಾರ ತಂದ ಅನೇಕ ಆಶೀರ್ವಾದ

ಚಾರ್ಲ್ಸ್‌ ಮಾಲಹನ್‌ ಯುವಕರಾಗಿದ್ದಾಗ ಹೆಚ್ಚು ಸೇವೆ ಮಾಡಲಿಕ್ಕಾಗಿ ಬೆತೆಲ್‌ ಸೇವೆಗೆ ಅರ್ಜಿ ಹಾಕಿದರು. ಅಲ್ಲಿಂದ ದಶಕಗಳಾದ್ಯಂತ ಯೆಹೋವನು ಅವರನ್ನು ಸಮೃದ್ಧವಾಗಿ ಆಶೀರ್ವದಿಸಿದನು.

ನಮ್ಮ ನಾಯಕನಾದ ಯೇಸುವಿನಲ್ಲಿ ಭರವಸೆ ಇಡಿ

ದೇವರ ಸಂಘಟನೆ ಬೆಳೆಯುತ್ತಾ ಇರುವಾಗ, ನಾಯಕನಾಗಿ ನೇಮಿಸಲ್ಪಟ್ಟಿರುವ ಯೇಸುವಿನಲ್ಲಿ ಭರವಸೆ ಇಡಲು ನಮಗೆ ಯಾವ ಕಾರಣಗಳಿವೆ?

ಸನ್ನಿವೇಶ ಬದಲಾದರೂ ಸಮಾಧಾನವಾಗಿರಿ

ಜೀವನದಲ್ಲಿ ನೆನಸಿರದ ವಿಷಯಗಳು ನಡೆದಾಗ ನಾವು ಮಾನಸಿಕ ಒತ್ತಡಕ್ಕೆ ಒಳಗಾಗಬಹುದು. ಸನ್ನಿವೇಶ ಬದಲಾದಾಗ “ದೇವಶಾಂತಿ” ಹೇಗೆ ಸಹಾಯ ಮಾಡುತ್ತದೆ?

ನಿಮಗೆ ಗೊತ್ತಿತ್ತಾ?

ದಾಖಲೆಯಾಗಿರುವ ಮಾಹಿತಿ ಪ್ರಕಾರ ಕ್ರಿಸ್ತನ ಹಿಂಬಾಲಕರಲ್ಲಿ ಮೊದಲು ಹುತಾತ್ಮನಾಗಿದ್ದು ಸ್ತೆಫನ. ಹಿಂಸೆ ಬಂದಾಗಲೂ ಅಷ್ಟು ಶಾಂತನಾಗಿರಲು ಅವನಿಗೆ ಹೇಗೆ ಸಾಧ್ಯವಾಯಿತು?