ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

2 ಥೆಸಲೊನೀಕ 3:14ರಲ್ಲಿ ಹೇಳಿರೋ “ಕಣ್ಣಿಡಿ” ಅಥವಾ ಗುರುತು ಮಾಡಿ ಅನ್ನೋದು ಹಿರಿಯರು ಮಾಡೋ ಕೆಲಸನಾ? ಪ್ರಚಾರಕರು ವೈಯಕ್ತಿಕವಾಗಿ ಮಾಡೋ ಕೆಲಸನಾ?

ಅಪೊಸ್ತಲ ಪೌಲ ಥೆಸಲೊನೀಕದಲ್ಲಿರೋ ಕ್ರೈಸ್ತರಿಗೆ “ಈ ಪತ್ರದಲ್ಲಿ ಹೇಳಿದ ಪ್ರಕಾರ ನಡಿಯದೇ ಇರೋ ವ್ಯಕ್ತಿ ಮೇಲೆ ಕಣ್ಣಿಡಿ” ಅಂತ ಹೇಳಿದ. (2 ಥೆಸ. 3:14) ಹಿಂದೆ ಹಿರಿಯರು ಪಾಲಿಸೋಕೆ ಈ ನಿರ್ದೇಶನವನ್ನ ನಾವು ಕೊಟ್ಟಿದ್ವಿ. ಅದೇನಂದ್ರೆ, ಒಬ್ಬ ಕ್ರೈಸ್ತನಿಗೆ ಎಷ್ಟೇ ಬುದ್ಧಿ ಹೇಳಿದ್ರೂ ಅವನು ಬೈಬಲ್‌ ತತ್ವನ ಅಲಕ್ಷ್ಯ ಮಾಡ್ತಿದ್ರೆ ಹಿರಿಯರು ಎಚ್ಚರಿಕೆಯ ಭಾಷಣ ಕೊಡಬಹುದಿತ್ತು. ಆಗ ಪ್ರಚಾರಕರು ಗುರುತು ಮಾಡಿರೋ ವ್ಯಕ್ತಿ ಜೊತೆ ಸಹವಾಸ ಮಾಡೋದನ್ನ ಬಿಟ್ಟುಬಿಡ್ತಿದ್ರು.

ಈಗ ಈ ನಿರ್ದೇಶನದಲ್ಲಿ ಒಂದು ಬದಲಾವಣೆ ಆಗಿದೆ. ಪೌಲ ಕೊಟ್ಟ ಸಲಹೆನ ಚೆನ್ನಾಗಿ ಗಮನಿಸಿದ್ರೆ, ಗುರುತು ಮಾಡೋದನ್ನ ಪ್ರಚಾರಕರು ವೈಯಕ್ತಿಕವಾಗಿ ಮಾಡಬೇಕು ಅಂತ ಗೊತ್ತಾಗುತ್ತೆ. ಹಾಗಾಗಿ ಇನ್ಮುಂದೆ ಹಿರಿಯರು ಸಭೆಗೆ ಒಂದು ಎಚ್ಚರಿಕೆಯ ಭಾಷಣ ಕೊಡೋ ಅಗತ್ಯ ಇಲ್ಲ. ಯಾಕೆ ಈ ಬದಲಾವಣೆ ಮಾಡಬೇಕಾಯ್ತು? ಇದನ್ನ ತಿಳ್ಕೊಳ್ಳೋಕೆ ಪೌಲ ಯಾವ ಸಂದರ್ಭದಲ್ಲಿ ಈ ಸಲಹೆ ಕೊಟ್ಟ ಅಂತ ನೋಡೋಣ.

ಥೆಸಲೊನೀಕ ಸಭೇಲಿ ಕೆಲವರು ‘ಸರಿಯಾದ ದಾರೀಲಿ ನಡೀದೆ’ ಅಕ್ರಮವಾಗಿ ನಡೀತಿದ್ದಾರೆ ಅಂತ ಪೌಲ ಗಮನಿಸಿದ. ದೇವರ ವಾಕ್ಯದಿಂದ ಅವ್ರಿಗೆ ಬುದ್ಧಿ ಹೇಳಿದ್ರೂ ಅವರು ಅದನ್ನ ಕಿವಿಗೇ ಹಾಕೊಳ್ತಾ ಇರಲಿಲ್ಲ. ಈ ಹಿಂದೆ ಆ ಸಭೆಯನ್ನ ಭೇಟಿ ಮಾಡಿದಾಗ ಪೌಲ “ಕೆಲಸ ಮಾಡೋಕೆ ಇಷ್ಟ ಇಲ್ಲದವರು ಊಟನೂ ಮಾಡಬಾರದು” ಅಂತ ಬುದ್ಧಿ ಹೇಳಿದ್ದ. ಕೆಲಸ ಮಾಡೋ ಶಕ್ತಿ ಇದ್ರೂ ಅವರು ಕೆಲಸ ಮಾಡದೆ, ಬೇರೆಯವ್ರ ವಿಷ್ಯದಲ್ಲಿ ತಲೆಹಾಕ್ತಿದ್ರು. ಈ ರೀತಿ ‘ಸರಿಯಾದ ದಾರೀಲಿ ನಡೀದೆ’ ಇರೋರ ಜೊತೆ ಸಭೆಯವರು ಹೇಗೆ ನಡ್ಕೊಬೇಕಿತ್ತು?—2 ಥೆಸ. 3:6, 10-12.

ಅಂಥವ್ರ “ಮೇಲೆ ಕಣ್ಣಿಡಿ” ಅಥವಾ ಅವ್ರನ್ನ ಗುರುತು ಮಾಡಿ ಅಂತ ಪೌಲ ಹೇಳಿದ. ಈ ಪದಕ್ಕೆ ಗ್ರೀಕ್‌ ಭಾಷೇಲಿ ಅವನ ವಿಷ್ಯದಲ್ಲಿ ಹುಷಾರಾಗಿರಿ ಅನ್ನೋ ಅರ್ಥ ಇದೆ. ಪೌಲ ಈ ಬುದ್ಧಿವಾದನ ಬರೀ ಹಿರಿಯರಿಗಲ್ಲ, ಇಡೀ ಸಭೆಗೆ ಕೊಟ್ಟ ಅನ್ನೋದನ್ನ ಗಮನಿಸಿ. (2 ಥೆಸ. 1:1; 3:6) ಹಾಗಾಗಿ ಬೈಬಲ್‌ ಬುದ್ಧಿವಾದನ ಪಾಲಿಸದೇ ಇರೋರನ್ನ ಕಂಡುಹಿಡಿದು ಅವ್ರ ‘ಜೊತೆ ಸೇರದೆ’ ಇರೋದು ಪ್ರತಿಯೊಬ್ಬ ಪ್ರಚಾರಕನ ಜವಾಬ್ದಾರಿ.

ಇದರರ್ಥ ಸಭೆಯಿಂದ ಹೊರಗೆ ಹಾಕಿದ ವ್ಯಕ್ತಿ ಜೊತೆ ನಡ್ಕೊಳ್ಳೋ ತರಾನೇ ಗುರುತು ಮಾಡಿದವ್ರ ಜೊತೆನೂ ನಡ್ಕೊಬೇಕಾಗಿತ್ತಾ? ಇಲ್ಲ. “ನಿಮ್ಮ ಸಹೋದರನಾದ ಅವನಿಗೆ ಬುದ್ಧಿಹೇಳ್ತಾ ಇರಿ” ಅಂತ ಪೌಲ ನಮಗೆ ಸಲಹೆ ಕೊಟ್ಟಿದ್ದಾನೆ. ಇದನ್ನ ಮಾಡೋಕೆ ಸಭೆಯವರು ಅವನ ಜೊತೆ ಕೂಟಗಳಲ್ಲಿ ಮತ್ತು ಸೇವೇಲಿ ಸಹವಾಸ ಮಾಡಬಹುದು. ಆದ್ರೆ ಮನೋರಂಜನೆಯಲ್ಲಿ, ಆಟ ಆಡೋದ್ರಲ್ಲಿ ಅವನ ಜೊತೆ ಸಮಯ ಕಳಿಯಲ್ಲ. ಯಾಕೆ? “ಅವನಿಗೆ ನಾಚಿಕೆ” ಆಗಬೇಕು ಅಂತ ಪೌಲ ಹೇಳಿದ. ಅಂದ್ರೆ ಅವನು ಬುದ್ಧಿವಾದನ ಪಾಲಿಸದೆ ಇರೋದ್ರಿಂದಾನೇ ಈ ತರ ನಡ್ಕೊಳ್ತಿದ್ದಾನೆ ಅಂತ ಅವನು ಅರ್ಥ ಮಾಡ್ಕೊಂಡು ಬದಲಾಗಬೇಕು ಅನ್ನೋದೇ ಇದ್ರ ಉದ್ದೇಶ.—2 ಥೆಸ. 3:14, 15.

ಇವತ್ತು ಕ್ರೈಸ್ತರು ಈ ಸಲಹೆನ ಹೇಗೆ ಪಾಲಿಸಬಹುದು? ಮೊದ್ಲು ಆ ವ್ಯಕ್ತಿ ಪೌಲ ಹೇಳಿದ ಹಾಗೆ ನಿಜವಾಗ್ಲೂ ‘ಸರಿಯಾದ ದಾರೀಲಿ ನಡೀದೆ’ ಅಕ್ರಮವಾಗಿ ನಡೀತಿದ್ದಾನಾ ಅಂತ ಕಂಡುಹಿಡಿಬೇಕು. ಯಾಕಂದ್ರೆ ಪೌಲ ಇಲ್ಲಿ, ಮನಸಾಕ್ಷಿ ಬಳಸಿ ನಮಗಿಂತ ಭಿನ್ನವಾದ ನಿರ್ಧಾರಗಳನ್ನ ಮಾಡೋ ವ್ಯಕ್ತಿಗಳ ಬಗ್ಗೆ ಹೇಳ್ತಿಲ್ಲ. ಜೊತೆಗೆ, ನಮ್ಮ ಮನಸ್ಸು ನೋಯಿಸಿದವ್ರ ಬಗ್ಗೆನೂ ಹೇಳ್ತಿಲ್ಲ. ಹಾಗಾದ್ರೆ ಪೌಲ ಯಾರ ಬಗ್ಗೆ ಹೇಳ್ತಿದ್ದಾನೆ? ಯಾರು ಬೇಕುಬೇಕಂತಾನೇ ದೇವರ ವಾಕ್ಯದಲ್ಲಿರೋ ಬುದ್ಧಿವಾದನ ಅಲಕ್ಷ್ಯ ಮಾಡ್ತಿದ್ದಾರೋ ಅವ್ರ ಬಗ್ಗೆ ಹೇಳ್ತಿದ್ದಾನೆ.

ಇವತ್ತು ಬೈಬಲ್‌ ಬುದ್ಧಿವಾದನ ಪಾಲಿಸದೇ ಇರೋ ಒಬ್ಬ ವ್ಯಕ್ತಿಯನ್ನ a ನಾವು ಗಮನಿಸಿದ್ರೆ ಅವ್ರಿಂದ ದೂರ ಇರ್ತೀವಿ. ಇದು ನಾವು ವೈಯಕ್ತಿಕವಾಗಿ ಮಾಡೋ ತೀರ್ಮಾನ. ಅವ್ರ ಜೊತೆ ಮನೋರಂಜನೆಯಲ್ಲಿ ಮತ್ತು ಆಟ ಆಡೋದ್ರಲ್ಲಿ ನಾವು ಸಮಯ ಕಳಿಯಲ್ಲ. ಇದು ನಮ್ಮ ವೈಯಕ್ತಿಕ ನಿರ್ಧಾರ ಆಗಿರೋದ್ರಿಂದ ಇದ್ರ ಬಗ್ಗೆ ನಮ್ಮ ಕುಟುಂಬದವ್ರ ಜೊತೆ ಬಿಟ್ಟು ಬೇರೆ ಯಾರ ಜೊತೆನೂ ಮಾತಾಡೋಕೆ ಹೋಗಲ್ಲ. ಆದ್ರೂ ಆ ವ್ಯಕ್ತಿ ಜೊತೆ ಕೂಟಗಳಲ್ಲಿ ಮತ್ತು ಸೇವೇಲಿ ಸಹವಾಸ ಮಾಡ್ತೀವಿ. ಆ ವ್ಯಕ್ತಿ ತನ್ನ ನಡತೆಯನ್ನ ಬದಲಾಯಿಸ್ಕೊಂಡಾಗ ಎಲ್ಲ ವಿಷ್ಯದಲ್ಲೂ ಮತ್ತೆ ಸಹವಾಸ ಶುರುಮಾಡ್ತೀವಿ.

a ಬುದ್ಧಿವಾದ ಕೊಟ್ರೂ ಕಿವಿಗೆ ಹಾಕೊಳ್ಳದೇ ಇರೋರನ್ನ ‘ಸರಿಯಾದ ದಾರೀಲಿ ನಡೀದೆ’ ಅಕ್ರಮವಾಗಿ ನಡಿಯೋರು ಅಂತ ಕರಿತೀವಿ. ಉದಾಹರಣೆಗೆ, ಕೆಲವರು ಕೆಲಸ ಮಾಡೋ ಶಕ್ತಿ ಇದ್ರೂ ತನ್ನನ್ನ ತಾನು ನೋಡ್ಕೊಳ್ಳೋಕೆ ಕೆಲಸ ಮಾಡದೆ ಇರಬಹುದು, ಎಷ್ಟೇ ಬುದ್ಧಿವಾದ ಹೇಳಿದ್ರೂ ಸತ್ಯದಲ್ಲಿ ಇಲ್ಲದೆ ಇರೋ ಹುಡುಗ/ಹುಡುಗಿಯನ್ನ ಪ್ರೀತಿಸ್ತಾ ಇರಬಹುದು, ಬೈಬಲ್‌ ಬೋಧನೆಗಳ ಬಗ್ಗೆ ಸಭೆಯ ಒಗ್ಗಟ್ಟು ಒಡೆಯೋ ತರ ಮಾತಾಡಬಹುದು ಅಥವಾ ಹಾನಿಕಾರಕ ಹರಟೆ ಮಾತು ಆಡಬಹುದು.—1 ಕೊರಿಂ. 7:39; 2 ಕೊರಿಂ. 6:14; 2 ಥೆಸ. 3:11, 12; 1 ತಿಮೊ. 5:13.