ಇದನ್ನೂ ನೋಡಿ!
ಯೆಹೋವನ ಅದ್ಭುತ ಗುಣಗಳನ್ನ ಹುಡುಕಿ
ಬೈಬಲನ್ನ ಓದಿ ಚೆನ್ನಾಗಿ ಅರ್ಥ ಮಾಡ್ಕೊಳ್ಳೋಕೆ ನಮ್ಮ ಹತ್ರ ಬೇರೆಬೇರೆ ಸಾಧನಗಳಿವೆ. ನಾವು ಬರೀ ಮಾಹಿತಿ ತಿಳ್ಕೊಳ್ಳೋಕೆ ಅದನ್ನ ಓದಬಾರದು. ಯೆಹೋವ ದೇವರ ಒಳ್ಳೇ ಗುಣಗಳ ಬಗ್ಗೆ ತಿಳ್ಕೊಳ್ಳೋದು ನಮ್ಮ ಗುರಿ ಆಗಿರಬೇಕು. ಆಗ್ಲೇ ನಮಗೆ ಯೆಹೋವನ ಮೇಲೆ ಪ್ರೀತಿ ಇನ್ನೂ ಜಾಸ್ತಿ ಆಗುತ್ತೆ. ಅದಕ್ಕೆ ನಾವು ಬೈಬಲ್ ಓದುವಾಗ ‘ಇದ್ರಿಂದ ನನಗೆ ಯೆಹೋವನ ಬಗ್ಗೆ ಏನು ಗೊತ್ತಾಗುತ್ತೆ?’ ಅಂತ ಕೇಳ್ಕೊಬೇಕು.
ಸಂಶೋಧನೆ ಮಾಡುವಾಗ ಯೆಹೋವ ದೇವರ ಮುಖ್ಯವಾಗಿರೋ 4 ಗುಣಗಳನ್ನ ಅಂದ್ರೆ ಪ್ರೀತಿ, ವಿವೇಕ, ನ್ಯಾಯ ಮತ್ತು ಶಕ್ತಿಯನ್ನ ಆತನು ಹೇಗೆಲ್ಲ ತೋರಿಸಿದ್ದಾನೆ ಅಂತ ಗಮನಿಸಿ. ಆತನಿಗೆ ಈ 4 ಗುಣ ಅಷ್ಟೇ ಅಲ್ಲ ಅದ್ಭುತವಾದ ಇನ್ನೂ ಬೇರೆಬೇರೆ ಗುಣಗಳಿವೆ. ಅದ್ರ ಬಗ್ಗೆ ಚೆನ್ನಾಗಿ ತಿಳ್ಕೊಳ್ಳೋದು ಹೇಗೆ?
ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನದಲ್ಲಿ “ಯೆಹೋವ ದೇವರು” ಅನ್ನೋ ವಿಷಯದ ಕೆಳಗೆ “ಯೆಹೋವನ ಗುಣಗಳು” ಅನ್ನೋ ಭಾಗ ನೋಡಿ. ಆಮೇಲೆ ಬೈಬಲ್ ಓದುವಾಗ ಯೆಹೋವನ ಯಾವ್ಯಾವ ಗುಣಗಳ ಬಗ್ಗೆ ನೋಡ್ತಿರೋ ಅದ್ರ ಬಗ್ಗೆ ಸಂಶೋಧನೆ ಮಾಡಿ.