‘ಇದು ವಿಶೇಷವಾದ ಕೆಲಸ’
ರಾಜ ದಾವೀದನು ಯೆರೂಸಲೇಮಿನಲ್ಲಿ ಒಂದು ದೊಡ್ಡ ಸಭೆ ಕರೆದನು. ಅದಕ್ಕೆ ತನ್ನ ರಾಜ್ಯದ ಅಧಿಪತಿಗಳು, ಕಂಚುಕಿಗಳು, ರಣವೀರರನ್ನು ಕರೆದಿದ್ದನು. ಒಂದು ವಿಶೇಷವಾದ ಪ್ರಕಟಣೆಯನ್ನು ರಾಜ ಮಾಡಿದಾಗ ಜನರೆಲ್ಲರೂ ಬಹಳ ಸಂತೋಷಪಟ್ಟರು. ಯೆಹೋವನು ತನ್ನ ಆರಾಧನೆಗಾಗಿ ಒಂದು ಭವ್ಯವಾದ ಮಂದಿರವನ್ನು ಕಟ್ಟುವಂತೆ ಹೇಳಿದ್ದನು. ಇದನ್ನು ದಾವೀದನ ಮಗನಾದ ಸೊಲೊಮೋನ ಕಟ್ಟಲಿದ್ದನು. ದಾವೀದನಿಗೆ ಯೆಹೋವ ದೇವರು ದೇವಾಲಯದ ನಕ್ಷೆಯನ್ನು ಕೊಟ್ಟನು. ಅದನ್ನು ದಾವೀದ ಸೊಲೊಮೋನನಿಗೆ ಕೊಟ್ಟು ‘ಮಾಡತಕ್ಕ ಕೆಲಸ ವಿಶೇಷವಾದದ್ದು. ಕಟ್ಟತಕ್ಕ ಮಂದಿರವು ದೇವರಾದ ಯೆಹೋವನಿಗಾಗಿಯೇ ಹೊರತು ಮನುಷ್ಯನಿಗಾಗಿ ಅಲ್ಲ’ ಎಂದು ಹೇಳಿದನು.—1 ಪೂರ್ವ. 28:1, 2, 6, 11, 12; 29:1.
ನಂತರ ದಾವೀದನು ಜನರಿಗೆ ‘ಈ ಹೊತ್ತು ಉದಾರಹಸ್ತದಿಂದ ಯೆಹೋವನಿಗೋಸ್ಕರ ಕಾಣಿಕೆಯನ್ನರ್ಪಿಸುವದಕ್ಕೆ ಯಾರಿಗೆ ಮನಸ್ಸಿದೆ’ ಎಂದು ಕೇಳಿದನು. (1 ಪೂರ್ವ. 29:5) ನೀವು ಅಲ್ಲಿದ್ದಿದ್ದರೆ ಏನು ಮಾಡುತ್ತಿದ್ದಿರಿ? ಆ ವಿಶೇಷವಾದ ಕೆಲಸಕ್ಕೆ ಬೆಂಬಲ ಕೊಡುತ್ತಿದ್ದಿರಾ? ಇಸ್ರಾಯೇಲ್ಯರು ಕೂಡಲೇ ಸ್ಪಂದಿಸಿದರು. “ಅವರು ಪೂರ್ಣಮನಸ್ಸಿನಿಂದಲೂ ಸ್ವೇಚ್ಛೆಯಿಂದಲೂ ಯೆಹೋವನಿಗೆ ಕಾಣಿಕೆ” ಕೊಟ್ಟು ಸಂತೋಷಪಟ್ಟರು.—1 ಪೂರ್ವ. 29:9.
ಶತಮಾನಗಳ ನಂತರ ಯೆಹೋವನು ಆಧ್ಯಾತ್ಮಿಕ ಆಲಯದ ಏರ್ಪಾಡು ಮಾಡಿದನು. ಯೇಸುವಿನ ಯಜ್ಞದ ಆಧಾರದ ಮೇಲೆ ಮಾನವರು ಆತನನ್ನು ಆರಾಧಿಸುವ ಏರ್ಪಾಡೇ ಅದು. (ಇಬ್ರಿ. 9:11, 12) ಜನರು ತನ್ನೊಂದಿಗೆ ಪುನಃ ಒಳ್ಳೇ ಸಂಬಂಧವನ್ನು ಪಡೆಯಲು ಯೆಹೋವನು ಇಂದು ಹೇಗೆ ಸಹಾಯ ಮಾಡುತ್ತಿದ್ದಾನೆ? ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದ ಮೂಲಕ. (ಮತ್ತಾ. 28:19, 20) ಈ ಕೆಲಸದ ಫಲಿತಾಂಶ? ಪ್ರತಿವರ್ಷ ಲಕ್ಷಾಂತರ ಬೈಬಲ್ ಅಧ್ಯಯನಗಳನ್ನು ನಡೆಸಲಾಗುತ್ತಿದೆ, ಸಾವಿರಾರು ಶಿಷ್ಯರು ದೀಕ್ಷಾಸ್ನಾನ ಪಡಕೊಳ್ಳುತ್ತಿದ್ದಾರೆ ಮತ್ತು ನೂರಾರು ಹೊಸ ಸಭೆಗಳನ್ನು ರಚಿಸಲಾಗುತ್ತಿದೆ.
ಪ್ರಗತಿ ಹೆಚ್ಚುತ್ತಾ ಹೋದಂತೆ ಹೆಚ್ಚು ಬೈಬಲ್ ಪ್ರಕಾಶನಗಳನ್ನು ಮುದ್ರಿಸಬೇಕಾಗುತ್ತದೆ, ಹೆಚ್ಚು ರಾಜ್ಯ ಸಭಾಗೃಹಗಳನ್ನು ಕಟ್ಟಬೇಕಾಗುತ್ತದೆ, ಅಧಿವೇಶನ ಮತ್ತು ಸಮ್ಮೇಳನಗಳಿಗಾಗಿ ಜಾಗ ತೆಗೆದುಕೊಳ್ಳುವ ಅವಶ್ಯಕತೆಯೂ ಹೆಚ್ಚುತ್ತದೆ. ಸುವಾರ್ತೆ ಸಾರುವ ನಮ್ಮ ಕೆಲಸ ಒಂದು ವಿಶೇಷವಾದ, ಫಲದಾಯಕ ಕೆಲಸ ಅಂತ ನೀವು ಒಪ್ಪುವುದಿಲ್ವಾ?—ಮತ್ತಾ. 24:14.
ನಮಗೆ ದೇವರ ಮೇಲೆ ಮತ್ತು ಜನರ ಮೇಲೆ ಪ್ರೀತಿ ಇದೆ. ಇನ್ನೂ ಎಷ್ಟೋ ಜನರಿಗೆ ಸುವಾರ್ತೆ ಸಾರಬೇಕಾಗಿದೆ. ಹಾಗಾಗಿ “ಯೆಹೋವನಿಗೋಸ್ಕರ ಕಾಣಿಕೆಯನ್ನರ್ಪಿಸುವದಕ್ಕೆ” ನಾವು ಮುಂದೆ ಬರುತ್ತೇವೆ. ‘ನಮ್ಮ ಆದಾಯದಿಂದ ಯೆಹೋವನನ್ನು ಸನ್ಮಾನಿಸುವುದು’ ಒಂದು ದೊಡ್ಡ ಸುಯೋಗ ಅಲ್ಲವೇ? ನೀವು ಕೊಟ್ಟ ಕಾಣಿಕೆಗಳನ್ನು ಒಳ್ಳೇ ರೀತಿ ಉಪಯೋಗಿಸಿರುವುದನ್ನು ನೋಡುವಾಗ ಕಾಣಿಕೆ ಕೊಟ್ಟಿದ್ದು ಸಾರ್ಥಕ ಅಂತ ಅನಿಸುವುದಿಲ್ವಾ?—ಜ್ಞಾನೋ. 3:9.
^ ಪ್ಯಾರ. 9 ಭಾರತದಲ್ಲಾದರೆ, “Jehovah’s Witnesses of India”ಗೆ ಸಂದಾಯವಾಗಬೇಕೆಂದು ನಮೂದಿಸಿ.
^ ಪ್ಯಾರ. 11 ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು www.jwindiagift.org ವೆಬ್‌ಸೈಟ್ ಬಳಸಬಹುದು.
^ ಪ್ಯಾರ. 13 ನಿರ್ಣಯ ಮಾಡುವ ಮುಂಚೆ ದಯವಿಟ್ಟು ಸ್ಥಳೀಯ ಶಾಖಾ ಕಚೇರಿಯನ್ನು ಸಂಪರ್ಕಿಸಿ.
^ ಪ್ಯಾರ. 20 ‘ನಿಮ್ಮ ಅಮೂಲ್ಯ ವಸ್ತುಗಳಿಂದ ಯೆಹೋವನನ್ನು ಸನ್ಮಾನಿಸಿರಿ’ ಎಂಬ ಡಾಕ್ಯುಮೆಂಟ್ ಭಾರತದಲ್ಲಿ ಇಂಗ್ಲಿಷ್, ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಹಿಂದಿ ಭಾಷೆಗಳಲ್ಲಿ ಲಭ್ಯ.