ಇದನ್ನ ಮಾಡಿ ನೋಡಿ!
ಯೆಹೋವನನ್ನ ಮೆಚ್ಚಿಸೋಕೆ ಇಷ್ಟಪಡೋರು ಒಳ್ಳೇ ತೀರ್ಮಾನ ಮಾಡ್ತಾರೆ
ಏಸಾವ ಮತ್ತು ಯಾಕೋಬ ಇವ್ರಿಬ್ರಲ್ಲಿ ಯಾರು ಒಳ್ಳೇ ತೀರ್ಮಾನ ಮಾಡಿದ್ರು ಅಂತ ತಿಳ್ಕೊಳ್ಳೋಕೆ ಆದಿಕಾಂಡ 25:29-34 ಓದಿ.
ಒಂದು ವಿಷ್ಯದ ಪೂರ್ತಿಯಾಗಿ ತಿಳ್ಕೊಳ್ಳಿ. ಮೊದ್ಲು ಏನಾಯ್ತು? (ಆದಿ. 25:20-28) ಆಮೇಲೆ ಏನಾಯ್ತು? ಅಂತ ತಿಳ್ಕೊಳ್ಳಿ.—ಆದಿ. 27:1-46.
ಆ ವಿಷ್ಯದ ಬಗ್ಗೆ ಚಿಕ್ಕಚಿಕ್ಕ ಮಾಹಿತಿಯನ್ನೂ ತಿಳ್ಕೊಳ್ಳಿ. ಆ ಕಾಲದಲ್ಲಿ ಮೊದಲನೇ ಮಗನಿಗೆ ಯಾವೆಲ್ಲ ಹಕ್ಕುಗಳಿತ್ತು ಮತ್ತು ಜವಾಬ್ದಾರಿಗಳಿತ್ತು ಅಂತ ತಿಳ್ಕೊಳ್ಳಿ.—ಆದಿ. 18:18, 19; ಕಾವಲಿನಬುರುಜು10-E 5/1 ಪುಟ 13.
-
ಒಬ್ಬ ವ್ಯಕ್ತಿ ಮೆಸ್ಸೀಯನ ಪೂರ್ವಜನಾಗಬೇಕಂದ್ರೆ ಅವನು ಮೊದಲನೇ ಮಗನೇ ಆಗಿರಬೇಕಿತ್ತಾ? (ಕಾವಲಿನಬುರುಜು17.12 ಪುಟ 14-15)
ಏನೆಲ್ಲಾ ಕಲಿತ್ರಿ ಅಂತ ಯೋಚಿಸಿ, ಅದನ್ನ ಪಾಲಿಸಿ. ಜ್ಯೇಷ್ಠ ಪುತ್ರನಿಗಿದ್ದ ಹಕ್ಕನ್ನ ಏಸಾವನಿಗಿಂತ ಯಾಕೋಬ ಯಾಕೆ ತುಂಬ ಅಮೂಲ್ಯವಾಗಿ ನೋಡಿದ? (ಇಬ್ರಿ. 12:16, 17; ಕಾವಲಿನಬುರುಜು03 10/15 ಪುಟ 28-29) ಅವ್ರಿಬ್ರ ಬಗ್ಗೆ ಯೆಹೋವನಿಗೆ ಹೇಗನಿಸ್ತು ಮತ್ತು ಯಾಕೆ? (ಮಲಾ. 1:2, 3) ಏಸಾವ ಒಳ್ಳೇ ತೀರ್ಮಾನ ತಗೊಳ್ಳೋಕೆ ಏನು ಮಾಡಬಹುದಿತ್ತು?
-
ನಿಮ್ಮನ್ನೇ ಕೇಳ್ಕೊಳ್ಳಿ, ‘ನಾನು ಇಡೀ ವಾರದಲ್ಲಿ ನನ್ನ ಸಮಯನ ಹೇಗೆ ಉಪಯೋಗಿಸ್ತಿದ್ದೀನಿ? ಇದ್ರಿಂದ ಯೆಹೋವನನ್ನ ಮೆಚ್ಚಿಸೋ ಆಸೆ ನನಗಿದೆ ಅಂತ ತೋರಿಸ್ತಿದ್ದೀನಾ? ಕುಟುಂಬ ಆರಾಧನೆ ಮಾಡೋಕೆ ನಾನು ಸಮಯ ಮಾಡ್ಕೊಳ್ತಾ ಇದ್ದೀನಾ?’