ಓದಿ ನೋಡಿ!
ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನದಲ್ಲಿ ಬೈಬಲ್ ವಚನಗಳ ವಿವರಣೆ ಓದಿ, ವಚನಗಳನ್ನ ಚೆನ್ನಾಗಿ ಅರ್ಥ ಮಾಡ್ಕೊಳ್ಳೋಕೆ ಆಗ್ತಿದ್ಯಾ?
ಈ ಪುಸ್ತಕದಲ್ಲಿರೋ ವಚನಗಳ ವಿವರಣೆ ಅನ್ನೋ ಭಾಗದಿಂದ ಬೈಬಲ್‌ನಲ್ಲಿರೋ ವಿಷಯಗಳ ಬಗ್ಗೆ ಇನ್ನೂ ಜಾಸ್ತಿ ತಿಳ್ಕೊಳ್ಳೋಕೆ ಆಗುತ್ತೆ. ನೀವು ಒಂದು ವಚನವನ್ನ ಓದ್ತಿರೋದಾದ್ರೆ ಅದ್ರ ಅರ್ಥ ಏನು, ಅದ್ರಲ್ಲಿರೋ ಪದಗಳ ಅರ್ಥ ಏನು, ಅದನ್ನ ಯಾಕೆ ಬರೆದ್ರು, ಯಾರಿಗೆ ಬರೆದ್ರು, ಅದನ್ನ ಬರೆದಾಗ ಆ ಕಾಲದಲ್ಲಿ ಪರಿಸ್ಥಿತಿ ಹೇಗಿತ್ತು ಅನ್ನೋ ಎಲ್ಲಾ ಮಾಹಿತಿನೂ ಸಿಗುತ್ತೆ.
ನೀವು ವಾಚ್‌ಟವರ್ ಆನ್‌ಲೈನ್ ಲೈಬ್ರರಿ ಅಥವಾ JW ಲೈಬ್ರರಿಯಲ್ಲಿ ಬೈಬಲ್ ಓದ್ತಾ ಇದ್ದೀರ ಅಂದ್ಕೊಳಿ. ನೀವು ವಚನವನ್ನ ಓದುವಾಗ್ಲೇ ಅದಕ್ಕೆ ಸಂಬಂಧಪಟ್ಟ ರೆಫರೆನ್ಸ್‌ಗಳನ್ನ ಸಂಶೋಧನಾ ಸಾಧನ ಪುಸ್ತಕದಿಂದ ಪಡ್ಕೊಬಹುದು. ಈ ಲೈಬ್ರರಿಗಳಲ್ಲಿ ಯಾವ ಬೈಬಲ್‌ನ ಓದಿದ್ರೂ ನಿಮಗೆ ಆ ರೆಫರೆನ್ಸ್‌ಗಳು ಸಿಗುತ್ತೆ.
ರೆಫರೆನ್ಸ್‌ಗಳಲ್ಲಿ ಇತ್ತೀಚಿಗೆ ಬಂದಿರೋ ಲೇಖನಗಳು ಮೇಲೆ ಇರುತ್ತೆ. ಅದ್ರ ಕೆಳಗೆ ಹೋಗ್ತಾ ಹೋಗ್ತಾ ಹಳೇ ಲೇಖನಗಳು ಇರುತ್ತೆ. ಕೆಲವೊಮ್ಮೆ ಹಳೆ ಲೇಖನಗಳಲ್ಲಿರೋ ತಿಳುವಳಿಕೆ ಈಗ ಬದಲಾಗಿರಬಹುದು.
ವಾಚ್‌ಟವರ್ ಆನ್‌ಲೈನ್ ಲೈಬ್ರರಿಯಲ್ಲಿ ಬೈಬಲ್ ಓದುವಾಗ ಸಂಶೋಧನಾ ಸಾಧನದ ರೆಫರೆನ್ಸ್‌ಗಳು ಅಲ್ಲೇ ಸಿಗುತ್ತೆ. ಡೌನ್‌ಲೋಡ್ ಮಾಡಬೇಕಾಗಿಲ್ಲ.
JW ಲೈಬ್ರರಿಯಲ್ಲಿ ಬೈಬಲ್ ಓದುವಾಗ ಸಂಶೋಧನಾ ಸಾಧನ ಪುಸ್ತಕವನ್ನ ಡೌನ್‌ಲೋಡ್ ಮಾಡಬೇಕು. ಆಗಾಗ ಅಪ್ಡೇಟ್ ಮಾಡಬೇಕು. ಆಗ ವಚನಗಳ ರೆಫರೆನ್ಸ್ ನಿಮಗೆ ಸಿಗುತ್ತೆ. ಅದನ್ನ ಡೌನ್‌ಲೋಡ್ ಮಾಡೋಕೆ ಬೈಬಲಿನ ಯಾವುದಾದ್ರೂ ಒಂದು ಪುಸ್ತಕದ ಒಂದು ಅಧ್ಯಾಯವನ್ನ ಓಪನ್ ಮಾಡಿ. ಅದರ ಸ್ಟಡಿ ಪೇನ್‌ನ ಮೇಲ್ಭಾಗದಲ್ಲಿ ಡೌನ್‌ಲೋಡ್ ಆಪ್ಷನ್ ಸಿಗುತ್ತೆ.