ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ಗೊತ್ತಿತ್ತಾ?

ನಿಮಗೆ ಗೊತ್ತಿತ್ತಾ?

ಪುರಾತನ ಕಾಲಗಳಲ್ಲಿ ಬೆಂಕಿಯನ್ನು ಹೇಗೆ ಸಾಗಿಸುತ್ತಿದ್ದರು?

ಅಬ್ರಹಾಮ ಯಜ್ಞ ಕೊಡಲಿಕ್ಕಾಗಿ ದೂರದ ಪ್ರದೇಶಕ್ಕೆ ಹೋಗಬೇಕಿತ್ತು. ಇದಕ್ಕೆ ಬೇಕಾದ ತಯಾರಿ ಮಾಡುವಾಗ ಅವನು “ಯಜ್ಞಕ್ಕೆ ಬೇಕಾದ ಕಟ್ಟಿಗೆಯನ್ನು ತನ್ನ ಮಗನಾದ ಇಸಾಕನ ಮೇಲೆ ಹೊರಿಸಿ ತನ್ನ ಕೈಯಲ್ಲೇ ಬೆಂಕಿಯನ್ನೂ ಕತ್ತಿಯನ್ನೂ ತೆಗೆದುಕೊಂಡನಂತರ ಅವರಿಬ್ಬರೂ ಹೊರಟುಹೋದರು” ಎಂದು ಆದಿಕಾಂಡ 22:6 ಹೇಳುತ್ತದೆ.

ಆ ಕಾಲದಲ್ಲಿ ಹೇಗೆ ಬೆಂಕಿ ಹಚ್ಚುತ್ತಿದ್ದರು ಎಂಬ ವಿವರ ಬೈಬಲ್‌ನಲ್ಲಿಲ್ಲ. ಒಬ್ಬ ವಿಮರ್ಶಕರು ಹೇಳುವುದೇನೆಂದರೆ, ಇಷ್ಟು ದೂರದ ಪ್ರಯಾಣ ಮಾಡಲಿಕ್ಕಿದ್ದ ಅಬ್ರಹಾಮ ಮತ್ತು ಇಸಾಕ ಒಂದು ದೀಪವನ್ನೋ ಪಂಜನ್ನೋ ತೆಗೆದುಕೊಂಡು ಹೋಗಿದ್ದರೆ ಅದು ಆರಿಹೋಗುತ್ತಿತ್ತು. ಹಾಗಾಗಿ ಅವರು ಬೆಂಕಿಯನ್ನಲ್ಲ, ಬೆಂಕಿ ಹೊತ್ತಿಸಲು ಏನು ಬೇಕೋ ಅದನ್ನು ತೆಗೆದುಕೊಂಡು ಹೋಗಿರಬೇಕು.

ಹಿಂದಿನ ಕಾಲದಲ್ಲಿ ಬೆಂಕಿಯನ್ನು ಹಚ್ಚುವುದು ಸುಲಭದ ಕೆಲಸವಾಗಿರಲಿಲ್ಲ. ಆದ್ದರಿಂದ ಜನರು ಅಕ್ಕಪಕ್ಕದ ಮನೆಯವರಿಂದ ಸ್ವಲ್ಪ ಕೆಂಡವನ್ನು ಪಡೆದು ಒಲೆ ಹಚ್ಚಿರಬಹುದು ಎಂದು ಕೆಲವು ವಿಮರ್ಶಕರು ತಿಳಿಸುತ್ತಾರೆ. ವಿದ್ವಾಂಸರ ಪ್ರಕಾರ ಅಬ್ರಹಾಮನು ಒಂದು ಪಾತ್ರೆಯನ್ನು, ಬಹುಶಃ ತೂಗುವ ಮಡಕೆಯನ್ನು ತೆಗೆದುಕೊಂಡು ಹೋಗಿರಬಹುದು. ಹಿಂದಿನ ರಾತ್ರಿ ಹಾಕಿದ ಬೆಂಕಿಯ ಕೆಂಡ ಆ ಮಡಕೆಯಲ್ಲಿ ಇದ್ದಿರಬಹುದು. (ಯೆಶಾ. 30:14) ಹೀಗೆ ಬೆಂಕಿಯನ್ನು ಸಾಗಿಸುತ್ತಿದ್ದರು. ಈ ಕೆಂಡದ ಮೇಲೆ ಹುಲ್ಲು ಅಥವಾ ಕಡ್ಡಿ ಹಾಕಿದಾಗ ಬೇಗ ಬೆಂಕಿ ಹೊತ್ತಿಕೊಳ್ಳುತ್ತಿತ್ತು.