ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇದನ್ನ ಮಾಡಿ ನೋಡಿ!

ಚಿತ್ರ ಬಿಡಿಸಿ, ಮನಸ್ಸಲ್ಲಿರಿಸಿ!

ಚಿತ್ರ ಬಿಡಿಸಿ, ಮನಸ್ಸಲ್ಲಿರಿಸಿ!

ನಾವು ಓದಿದ್ದನ್ನ ಕೆಲವು ಸಲ ಬೇಗ ಮರೆತು ಬಿಡ್ತೀವಿ. ಆದ್ರೆ ಯೇಸು ಹೇಳಿದ ಉದಾಹರಣೆಗಳನ್ನ ಮಾತ್ರ ಚೆನ್ನಾಗಿ ನೆನಪಲ್ಲಿ ಇಟ್ಕೊಂಡಿರ್ತೀವಿ. ಅದ್ಯಾಕೆ? ಯಾಕಂದ್ರೆ ಆ ಉದಾಹರಣೆಗಳನ್ನ ನಾವು ಮನಸಲ್ಲೇ ಚಿತ್ರಿಸ್ಕೊಳ್ತೀವಿ. ಹಾಗಾಗಿ ಅದು ತುಂಬಾ ಸಮಯ ಆದ್ರೂ ನೆನಪಿರುತ್ತೆ. ಅದೇ ತರ ನಾವೂ ಓದಿದ್ದನ್ನೆಲ್ಲಾ ಚಿಕ್ಕ ಚಿಕ್ಕ ಚಿತ್ರಗಳಾಗಿ ಬರೀಬೇಕು. ಆಗ ಅದು ನೆನಪಲ್ಲಿ ಇರುತ್ತೆ.

ಯಾರೆಲ್ಲ ಓದಿದ್ದನ್ನ ಚಿತ್ರ ಬಿಡಿಸ್ತಾರೋ ಅವರು ಅದನ್ನ ಚೆನ್ನಾಗಿ ನೆನಪಿಟ್ಕೊಳ್ತಾರೆ. ಬರೀ ಚಿಕ್ಕ ಚಿಕ್ಕ ವಿಷ್ಯಗಳನ್ನ ಮಾತ್ರ ಅಲ್ಲ ಕಷ್ಟವಾದ ವಿಷ್ಯಾನೂ ನೆನಪಿಟ್ಕೊಳ್ಳೋಕೆ ಆಗುತ್ತೆ. ಇದನ್ನ ಮಾಡೋಕೆ ತುಂಬ ಚೆನ್ನಾಗಿ ಚಿತ್ರ ಬಿಡಿಸೋಕೆ ಬರಬೇಕು ಅಂತೇನಿಲ್ಲ. ಓದಿದ್ರ ಬಗ್ಗೆ ಚಿಕ್ಕ ಚಿಕ್ಕ ಸ್ಕೆಚ್‌ಗಳನ್ನ, ಚಿತ್ರಗಳನ್ನ, ಗೊಂಬೆಗಳನ್ನ ಬರೆದ್ರೂ ಸಾಕು. ಈ ತರ ಚಿತ್ರಗಳು ವಯಸ್ಸಾಗಿರೋರಿಗೆ ಓದಿದ್ದನ್ನ ಚೆನ್ನಾಗಿ ನೆನಪಿಟ್ಕೊಳ್ಳೋಕೆ ಸಹಾಯ ಮಾಡ್ತಿದೆ.

ಮುಂದಿನ ಸಲ ನೀವು ಏನಾದ್ರು ಓದಿದಾಗ ಅದನ್ನ ಚಿತ್ರ ಬಿಡಿಸಿ. ಆಮೇಲೆ ನಿಮಗೆ ಎಷ್ಟು ನೆನಪಿರುತ್ತೆ ಅಂತ ನೋಡಿ ನಿಮಗೇ ಆಶ್ಚರ್ಯ ಆಗುತ್ತೆ.