ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 29

“ನಾನು ಬಲಹೀನನಾಗಿರುವಾಗಲೇ ಬಲವುಳ್ಳವನಾಗಿದ್ದೇನೆ”

“ನಾನು ಬಲಹೀನನಾಗಿರುವಾಗಲೇ ಬಲವುಳ್ಳವನಾಗಿದ್ದೇನೆ”

“ನಾನು ಕ್ರಿಸ್ತನ ನಿಮಿತ್ತ ಬಲಹೀನತೆಗಳಲ್ಲಿಯೂ ಅವಮಾನಗಳಲ್ಲಿಯೂ ಕೊರತೆಗಳಲ್ಲಿಯೂ ಹಿಂಸೆಗಳಲ್ಲಿಯೂ ಕಷ್ಟಗಳಲ್ಲಿಯೂ ಸಂತೋಷಪಡುತ್ತೇನೆ.”—2 ಕೊರಿಂ. 12:10.

ಗೀತೆ 60 ಆತನು ನಿನ್ನನ್ನು ಬಲಪಡಿಸುವನು

ಕಿರುನೋಟ *

1. ಅಪೊಸ್ತಲ ಪೌಲನಿಗೆ ಕೆಲವೊಮ್ಮೆ ತನ್ನ ಬಗ್ಗೆ ಏನು ಅನಿಸ್ತಿದೆ ಅಂತ ಒಪ್ಪಿಕೊಂಡ?

ಅಪೊಸ್ತಲ ಪೌಲನಿಗೆ ಕೆಲವೊಮ್ಮೆ ತಾನು ಬಲಹೀನ ಅಂತ ಅನಿಸ್ತಿತ್ತು. ತನ್ನ ‘ಶರೀರ ನಶಿಸಿ ಹೋಗ್ತಿದೆ’ ಅಂತ ಹೇಳ್ದ. ಅಂದ್ರೆ ಯಾವುದು ಸರಿಯೋ ಅದನ್ನ ಮಾಡೋಕೆ ತುಂಬ ಕಷ್ಟ ಆಗ್ತಿದೆ ಅಂತ ಮುಕ್ತವಾಗಿ ಒಪ್ಪಿಕೊಂಡ. ಅವನು ನಿರೀಕ್ಷಿಸಿದ ರೀತಿಯಲ್ಲೇ ಯಾವಾಗ್ಲೂ ಯೆಹೋವನು ಪ್ರಾರ್ಥನೆಗೆ ಉತ್ರ ಕೊಡಲ್ಲ ಅಂತ ಅವ್ನಿಗೆ ಅರ್ಥವಾಗಿತ್ತು. (2 ಕೊರಿಂ. 4:16; 12:7-9; ರೋಮ. 7:21-23) ವಿರೋಧಿಗಳು ಸಹ ತನ್ನನ್ನು ಬಲಹೀನ ವ್ಯಕ್ತಿಯಂತೆ ನೋಡ್ತಿದ್ದಾರೆ ಅನ್ನೋದು ಅವ್ನಿಗೆ ಗೊತ್ತಿತ್ತು. * ಆದ್ರೆ ಅವ್ರ ಮಾತಿನ ಬಗ್ಗೆಯಾಗಲಿ ಅಥ್ವಾ ತನ್ನ ಸ್ವಂತ ಬಲಹೀನತೆ ಬಗ್ಗೆಯಾಗಲಿ ಪೌಲ ತಲೆಕೆಡಿಸಿಕೊಂಡು ‘ನಾನು ಯಾವುದಕ್ಕೂ ಲಾಯಕ್ಕಿಲ್ಲ’ ಅಂತ ಅಂದುಕೊಳ್ಳಲಿಲ್ಲ.—2 ಕೊರಿಂ. 10:10-12, 17, 18.

2. ಎರಡನೇ ಕೊರಿಂಥ 12:9, 10 ರ ಪ್ರಕಾರ ಪೌಲ ಯಾವ ಮುಖ್ಯ ವಿಷ್ಯ ಅರ್ಥ ಮಾಡ್ಕೊಂಡ?

2 ಒಬ್ಬ ವ್ಯಕ್ತಿ ಬಲಹೀನ ಆಗಿರುವಾಗ್ಲೇ ಬಲವುಳ್ಳವನಾಗಿರುತ್ತಾನೆ ಅನ್ನೋ ಮುಖ್ಯ ವಿಷ್ಯನ ಪೌಲ ಅರ್ಥ ಮಾಡ್ಕೊಂಡ. (2 ಕೊರಿಂಥ 12:9, 10 ಓದಿ.) ಯೆಹೋವನು ಪೌಲನಿಗೆ, “ನನ್ನ ಬಲವು ಬಲಹೀನತೆಯಲ್ಲಿ ಪರಿಪೂರ್ಣಗೊಳಿಸಲ್ಪಡುತ್ತದೆ” ಅಂತ ಹೇಳಿದನು. ಅಂದ್ರೆ ಪೌಲನಿಗೆ ತನ್ನ ಸ್ವಂತ ಶಕ್ತಿಯಿಂದ ಏನು ಮಾಡೋಕೆ ಆಗಲ್ವೋ ಅದನ್ನ ಮಾಡೋಕೆ ಬೇಕಾದ ಶಕ್ತಿನ ಕೊಡ್ತೀನಿ ಅಂತ ಯೆಹೋವ ಹೇಳಿದನು. ಈಗ ನಾವು ಮೊದಲ್ನೇದಾಗಿ, ವಿರೋಧಿಗಳು ನಮ್ಗೆ ಅವಮಾನವಾಗೋ ತರ ಮಾತಾಡ್ದಾಗ ನಾವ್ಯಾಕೆ ಬೇಜಾರು ಮಾಡ್ಕೊಬಾರ್ದು ಅಂತ ನೋಡೋಣ.

ಅವಮಾನಗಳಲ್ಲಿಯೂ ಸಂತೋಷಪಡಿ’

3. ನಮ್ಗೆ ಅವಮಾನ ಆದಾಗ್ಲೂ ಯಾಕೆ ಸಂತೋಷಪಡ್ಬೇಕು?

3 ಜನ ಅವಮಾನ ಮಾಡೋದು ನಮಗ್ಯಾರಿಗೂ ಇಷ್ಟ ಆಗಲ್ಲ. ಹಾಗಾಗಿ ಯಾರಾದ್ರೂ ನಮ್ಮ ಬಗ್ಗೆ ತಪ್ಪಾಗಿ ಮಾತಾಡ್ದಾಗ ನಾವು ಅದ್ರ ಬಗ್ಗೇನೇ ಯೋಚಿಸ್ತಾ ಇದ್ರೆ ಕುಗ್ಗಿಹೋಗ್ತೇವೆ. (ಜ್ಞಾನೋ. 24:10) ಹಾಗಾದ್ರೆ ಇಂಥ ಸಮ್ಯದಲ್ಲಿ ಏನು ಮಾಡ್ಬೇಕು? ಪೌಲನ ತರ ನಾವು ಸಹ ‘ಅವಮಾನಗಳಲ್ಲಿ ಸಂತೋಷಪಡಬೇಕು.’ (2 ಕೊರಿಂ. 12:10) ಯಾಕೆ? ಯಾಕಂದ್ರೆ ನಮಗೆ ಅವಮಾನ ಆದಾಗ, ಹಿಂಸೆ ಬಂದಾಗ ನಾವು ಕ್ರಿಸ್ತನ ನಿಜ ಶಿಷ್ಯರು ಅನ್ನೋದು ರುಜುವಾಗುತ್ತೆ. (1 ಪೇತ್ರ 4:14) ತನ್ನ ಹಿಂಬಾಲಕರಿಗೆ ಹಿಂಸೆ ಬರುತ್ತೆ ಅಂತ ಯೇಸುನೇ ಹೇಳಿದ. (ಯೋಹಾ. 15:18-20) ಒಂದನೇ ಶತಮಾನದಲ್ಲೇ ಈ ಮಾತು ಸತ್ಯ ಅಂತ ರುಜುವಾಯ್ತು. ಗ್ರೀಕ್‌ ಸಂಪ್ರದಾಯ ಪಾಲಿಸ್ತಿದ್ದವ್ರು ಕ್ರೈಸ್ತರನ್ನ ಕೀಳಾಗಿ ನೋಡ್ತಿದ್ರು, ‘ದಡ್ರು’, ‘ಬಲಹೀನರು’ ಅಂತ ನೆನಸ್ತಿದ್ರು. ಯೆಹೂದ್ಯರು ಅಪೊಸ್ತಲ ಪೇತ್ರ ಮತ್ತು ಯೋಹಾನರಂಥ ಕ್ರೈಸ್ತರನ್ನು ಹೆಚ್ಚು ‘ವಿದ್ಯಾಭ್ಯಾಸ ಇಲ್ಲದ ಸಾಧಾರಣ’ ವ್ಯಕ್ತಿಗಳು ಅಂತ ನೆನಸ್ತಿದ್ರು. (ಅ. ಕಾ. 4:13) ಕ್ರೈಸ್ತರು ರಾಜಕೀಯ ವಿಷ್ಯದಲ್ಲಿ ತಲೆಹಾಕುತ್ತಿರಲಿಲ್ಲ ಮತ್ತು ಮಿಲಿಟರಿಗೆ ಸೇರುತ್ತಿರಲಿಲ್ಲ. ಅದಕ್ಕೆ ಜನ ಅವ್ರನ್ನ ‘ಕೈಲಾಗದವ್ರು’ ಅಂತ ನೆನಸ್ತಿದ್ರು, ಬಹಿಷ್ಕೃತರಂತೆ ನೋಡ್ತಿದ್ದರು.

4. ಒಂದನೇ ಶತಮಾನದ ಕ್ರೈಸ್ತರನ್ನು ಜನ್ರು ಅವಮಾನ ಮಾಡ್ದಾಗ ಅವ್ರು ಹೇಗೆ ನಡ್ಕೊಂಡ್ರು?

4 ಇಷ್ಟೆಲ್ಲಾ ಅವಮಾನ ಆದ್ರೂ ಒಂದನೇ ಶತಮಾನದ ಕ್ರೈಸ್ತರು ತಲೆ ಕೆಡಿಸಿಕೊಳ್ಳಲಿಲ್ಲ. ಉದಾಹರಣೆಗೆ ಅಪೊಸ್ತಲ ಪೇತ್ರ, ಯೋಹಾನರು ಯೇಸುವಿನ ಹಿಂಬಾಲಕರಾಗಿದ್ದಕ್ಕೆ ಮತ್ತು ಆತನ ಬೋಧನೆಗಳನ್ನು ಕಲಿಸಿದ್ದಕ್ಕೆ ಹಿಂಸೆಯನ್ನ ಎದುರಿಸಿದ್ರು. ಆದ್ರೆ ಅದು ತಮ್ಗೆ ಸಿಕ್ಕ ಗೌರವ ಅಂತ ಅವ್ರು ನೆನಸಿದ್ರು. (ಅ. ಕಾ. 4:18-21; 5:27-29, 40-42) ಶಿಷ್ಯರಿಗೆ ತಾವು ಮಾಡಿದ ಕೆಲ್ಸದ ಬಗ್ಗೆ ಹೆಮ್ಮೆ ಅನಿಸ್ತಿತ್ತು. ಸಮಾಜದಲ್ಲಿದ್ದ ಜನ್ರು ಅವ್ರಿಗೆ ಗೌರವ ಕೊಡ್ದೇ ಇದ್ರೂ ಜನ್ರಿಗೆ ಒಳ್ಳೇದನ್ನೇ ಮಾಡಿದ್ರು. ಉದಾಹರಣೆಗೆ ಆ ಕ್ರೈಸ್ತರಲ್ಲಿ ಕೆಲವ್ರು ಬರೆದಂಥ ಬೈಬಲ್‌ ಪುಸ್ತಕಗಳಿಂದ ಈಗಲೂ ಲಕ್ಷಾಂತರ ಜನ್ರು ಪ್ರಯೋಜನ ಪಡ್ಕೊಳ್ತಿದ್ದಾರೆ ಮತ್ತು ಅವ್ರಿಗೆ ನಿರೀಕ್ಷೆ ಸಿಕ್ಕಿದೆ. ಆ ಕ್ರೈಸ್ತರು ಯಾವ ಸರ್ಕಾರದ ಬಗ್ಗೆ ಸಾರಿದ್ರೋ ಅದು ಈಗ ಅಸ್ತಿತ್ವದಲ್ಲಿದೆ. ಮುಂದೆ ಇಡೀ ಮಾನವಕುಲದ ಮೇಲೆ ಆಳ್ವಿಕೆಯನ್ನು ನಡೆಸಲಿದೆ. (ಮತ್ತಾ. 24:14) ಆದ್ರೆ ಅವ್ರನ್ನು ಹಿಂಸಿಸಿದ ಬಲಾಢ್ಯ ರೋಮನ್‌ ಸರ್ಕಾರ ನಾಶವಾಗಿ ಇತಿಹಾಸದ ಪುಟ ಸೇರಿದೆ. ಅಷ್ಟೇ ಅಲ್ಲ, ಕ್ರೈಸ್ತರು ಈಗ ಸ್ವರ್ಗದಲ್ಲಿ ರಾಜರಾಗಿ ಆಳ್ತಿದ್ದಾರೆ. ಆದ್ರೆ ಹಿಂಸಿಸಿದವ್ರು ಈಗ ಸತ್ತು ಮಣ್ಣಾಗಿದ್ದಾರೆ. ಒಂದು ವೇಳೆ ಅವ್ರಿಗೆ ದೇವರ ರಾಜ್ಯದಲ್ಲಿ ಪುನರುತ್ಥಾನವಾದ್ರೆ ಅವ್ರು ಯಾರನ್ನು ಹಿಂದೆ ಹಿಂಸಿಸಿದ್ರೋ ಆ ಕ್ರೈಸ್ತರ ಕೈಕೆಳಗೆ ಪ್ರಜೆಗಳಾಗಿರ್ತಾರೆ.—ಪ್ರಕ. 5:10.

5. ಯೋಹಾನ 15:19 ರ ಪ್ರಕಾರ ಲೋಕದ ಜನ್ರು ಯಾಕೆ ನಮ್ಮನ್ನ ಕೀಳಾಗಿ ನೋಡ್ತಾರೆ?

5 ಇಂದು ಯೆಹೋವನ ಸಾಕ್ಷಿಗಳಾದ ನಮ್ಮನ್ನ ಜನ್ರು ಅವಮಾನಿಸ್ತಾರೆ. ಅವ್ರ ದೃಷ್ಟಿಯಲ್ಲಿ ನಾವು ದಡ್ರು, ಬಲಹೀನರು ಆಗಿದ್ದೇವೆ. ಯಾಕಂದ್ರೆ ಈ ಲೋಕದವ್ರು ಯೋಚಿಸೋ ತರ ನಾವು ಯೋಚಿಸಲ್ಲ. ಅವ್ರು ಅಹಂಕಾರಿಗಳಾಗಿದ್ದಾರೆ. ಒರಟಾಗಿ ನಡ್ಕೊಳ್ತಾರೆ, ತಮ್ಮಿಷ್ಟ ಬಂದಂತೆ ನಡೀತಾರೆ. ಆದ್ರೆ ನಾವು ದೀನತೆ ತೋರಿಸೋಕೆ, ತಗ್ಗಿಬಗ್ಗಿ ನಡೆಯೋಕೆ, ವಿಧೇಯತೆ ತೋರಿಸೋಕೆ ನಮ್ಮಿಂದಾದ ಪ್ರಯತ್ನ ಮಾಡ್ತೇವೆ. ರಾಜಕೀಯ ವಿಷ್ಯಕ್ಕೆ ತಲೆಹಾಕಲ್ಲ, ಮಿಲಿಟರಿಗೆ ಸೇರಲ್ಲ. ನಾವು ಈ ಲೋಕದವ್ರಿಗೆ ತದ್ವಿರುದ್ಧವಾಗಿ ನಡ್ಕೊಳ್ಳೋದ್ರಿಂದ ಅವ್ರು ನಮ್ಮನ್ನ ಕೀಳಾಗಿ ನೋಡ್ತಾರೆ.—ಯೋಹಾನ 15:19 ಓದಿ; ರೋಮ. 12:2.

6. ಯೆಹೋವನು ತನ್ನ ಜನ್ರ ಕೈಯಿಂದ ಯಾವ ವಿಷ್ಯಗಳನ್ನು ಸಾಧಿಸ್ತಿದ್ದಾನೆ?

6 ಲೋಕ ನಮ್ಮ ಬಗ್ಗೆ ಏನೇ ಅಂದುಕೊಂಡ್ರೂ ಯೆಹೋವ ಮಾತ್ರ ನಮ್ಮ ಕೈಯಿಂದ ಅಸಾಧಾರಣವಾದ ಕೆಲ್ಸಗಳನ್ನು ಮಾಡಿಸ್ತಿದ್ದಾನೆ. ಇವತ್ತು ಬೃಹತ್‌ ಪ್ರಮಾಣದಲ್ಲಿ ಸುವಾರ್ತಾ ಕೆಲ್ಸ ನಡೆಯುತ್ತಿದೆ. ಇಷ್ಟು ಪ್ರಮಾಣದಲ್ಲಿ ಈ ಕೆಲ್ಸ ಹಿಂದೆಂದೂ ನಡೆದಿರಲಿಲ್ಲ. ಯೆಹೋವನ ಸೇವಕರು ಸಾಹಿತ್ಯವನ್ನು ಭಾಷಾಂತರ ಮಾಡಿ ವಿತರಿಸುವಷ್ಟು ಬೇರೆ ಯಾವ ಸಂಘಟನೆನೂ ಮಾಡ್ತಿಲ್ಲ ಮತ್ತು ಅವ್ರು ಲಕ್ಷಾಂತರ ಜನ್ರಿಗೆ ಜೀವ್ನದಲ್ಲಿ ಸಂತೋಷ ಕಂಡುಕೊಳ್ಳೋದು ಹೇಗೆ ಅಂತ ಬೈಬಲಿನಿಂದ ಕಲಿಸ್ತಿದ್ದಾರೆ. ಇಂಥ ಅಸಾಧಾರಣ ಸಾಧನೆಗೆ ಯೆಹೋವನೇ ಕಾರಣ. ಆತನಿಗೇ ಮಹಿಮೆ ಸಲ್ಲಬೇಕು. ಲೋಕದವ್ರ ಕಣ್ಣಿಗೆ ಬಲಹೀನರು ಅಂತ ಕಾಣೋ ಚಿಕ್ಕ ಗುಂಪನ್ನ ಬಳಸಿ ಯೆಹೋವನು ಈ ದೊಡ್ಡ ಕೆಲ್ಸಗಳನ್ನು ಮಾಡಿಸ್ತಿದ್ದಾನೆ. ಆದ್ರೆ ಯೆಹೋವ ನಮ್ಮಲ್ಲಿ ಪ್ರತಿಯೊಬ್ಬರಿಗೂ ಬಲಕೊಡ್ತಾನಾ? ಕೊಡೋದಾದ್ರೆ ಆ ಸಹಾಯ ಪಡ್ಕೊಳ್ಳೋಕೆ ನಾವೇನು ಮಾಡ್ಬೇಕು? ಅಪೊಸ್ತಲ ಪೌಲ ಮಾಡಿದ ಮೂರು ವಿಷ್ಯಗಳನ್ನ ನಾವೀಗ ನೋಡೋಣ.

ನಿಮ್ಮ ಸ್ವಂತ ಬಲದ ಮೇಲೆ ಹೊಂದಿಕೊಳ್ಳಬೇಡಿ

7. ಪೌಲನ ಉದಾಹರಣೆಯಿಂದ ಯಾವ ಪಾಠ ಕಲಿಯಬಹುದು?

7 ಪೌಲನ ಉದಾಹರಣೆಯಿಂದ ನಾವು ಕಲಿಯೋ ಒಂದು ಪಾಠ ಏನಂದ್ರೆ ಯೆಹೋವನ ಸೇವೆಯಲ್ಲಿ ನಮ್ಮ ಸ್ವಂತ ಶಕ್ತಿ ಸಾಮರ್ಥ್ಯದ ಮೇಲೆ ಹೊಂದಿಕೊಳ್ಳಬಾರ್ದು. ಪೌಲನಿಗಿದ್ದ ಸಾಮರ್ಥ್ಯದಿಂದ ಅವನೊಬ್ಬ ಅಹಂಕಾರಿ ವ್ಯಕ್ತಿಯಾಗಬಹುದಿತ್ತು. ಯಾಕಂದ್ರೆ ಅವ್ನು ಹುಟ್ಟಿ ಬೆಳೆದಿದ್ದು ರೋಮನ್‌ ಸಾಮ್ರಾಜ್ಯದ ರಾಜಧಾನಿಯಾಗಿದ್ದ ತಾರ್ಸದಲ್ಲಿ. ಆ ಪಟ್ಟಣ ಸಮೃದ್ಧವಾಗಿತ್ತು ಮತ್ತು ಅಲ್ಲಿ ಪ್ರಸಿದ್ಧವಾದ ವಿಶ್ವವಿದ್ಯಾಲಯವಿತ್ತು. ಪೌಲ ಹೆಚ್ಚು ವಿದ್ಯಾಭ್ಯಾಸ ಮಾಡಿದ್ದನು. ಆಗಿನ ಸಮ್ಯದಲ್ಲಿ ತುಂಬ ಹೆಸರುವಾಸಿಯಾಗಿದ್ದ ಯೆಹೂದಿ ಮುಖಂಡನಾದ ಗಮಲಿಯೇಲನ ಶಿಷ್ಯನಾಗಿದ್ದನು. (ಅ. ಕಾ. 5:34; 22:3) ಮತ್ತು ಒಂದು ಸಮ್ಯದಲ್ಲಿ ಪೌಲ ಯೆಹೂದಿ ಜನಾಂಗದಲ್ಲಿ ಮುಖ್ಯ ವ್ಯಕ್ತಿಯಾಗಿದ್ದನು. ಆತನು ಹೀಗೆ ಹೇಳಿದ್ನು: “ನನ್ನ ಸಮಪ್ರಾಯದವರಲ್ಲಿ ಅನೇಕರಿಗಿಂತಲೂ ನಾನು ಯೆಹೂದಿಮತದಲ್ಲಿ ಹೆಚ್ಚು ಪ್ರಗತಿಯನ್ನು ಮಾಡುತ್ತಾ ಇದ್ದೆನು.” (ಗಲಾ. 1:13, 14; ಅ. ಕಾ. 26:4) ಇಷ್ಟಿದ್ರೂ ಪೌಲ ತನ್ನ ಸ್ವಂತ ಶಕ್ತಿ ಸಾಮರ್ಥ್ಯದ ಮೇಲೆ ಹೊಂದಿಕೊಳ್ಳಲಿಲ್ಲ.

ಪೌಲನು ಕ್ರಿಸ್ತನ ಶಿಷ್ಯನಾಗಿದ್ದನ್ನು ಒಂದು ಸುಯೋಗ ಅಂತ ನೆನಸಿದ. ಅದ್ರ ಮುಂದೆ ಲೋಕದ ಎಲ್ಲಾ ವಿಷ್ಯಗಳು ಅವ್ನಿಗೆ ‘ಕಸದ’ ತರ ಇದ್ವು (ಪ್ಯಾರ 8 ನೋಡಿ) *

8. (ಎ) ಫಿಲಿಪ್ಪಿ 3:8 ರ ಪ್ರಕಾರ ಪೌಲ ಬಿಟ್ಟು ಬಂದ ವಿಷ್ಯಗಳನ್ನ ಏನಂತ ನೆನಸ್ದ? (ಬಿ) ಅವ್ನು ಯಾಕೆ ಬಲಹೀನತೆಗಳಲ್ಲಿಯೂ ಸಂತೋಷಪಟ್ಟ?

8 ಲೋಕದವ್ರ ದೃಷ್ಟಿಯಲ್ಲಿ ಪೌಲನನ್ನ ಯಾವ ವಿಷ್ಯಗಳು ಪ್ರಾಮುಖ್ಯ ವ್ಯಕ್ತಿಯನ್ನಾಗಿ ಮಾಡಿದ್ವೋ ಆ ವಿಷ್ಯಗಳನ್ನು ಅವ್ನು ಸಂತೋಷದಿಂದ ಬಿಟ್ಟು ಕೊಟ್ಟ. ಅವುಗಳು ಪೌಲನ ದೃಷ್ಟಿಯಲ್ಲಿ “ಕಸ” ಆಗಿದ್ವು. (ಫಿಲಿಪ್ಪಿ 3:8 ಓದಿ.) ಅವನು ಯೇಸುವಿನ ಹಿಂಬಾಲಕನಾಗಿದ್ದಕ್ಕೆ ತುಂಬ ಕಷ್ಟ, ಹಿಂಸೆ ಅನುಭವಿಸ್ಬೇಕಾಯ್ತು. ಸ್ವಂತ ಜನಾಂಗದವ್ರೇ ಅವನನ್ನ ದ್ವೇಷಿಸಿದ್ರು. (ಅ. ಕಾ. 23:12-14) ರೋಮನ್‌ ಜನ್ರು ಅವನನ್ನ ಹೊಡೆದು ಬಡಿದು ಜೈಲಿಗೆ ಹಾಕಿದ್ರು. (ಅ. ಕಾ. 16:19-24, 37) ಇದ್ರ ಜೊತೆಗೆ, ಪೌಲನು ತನ್ನ ಸ್ವಂತ ಅಪರಿಪೂರ್ಣತೆ ಮತ್ತು ಬಲಹೀನತೆ ವಿರುದ್ಧ ಹೋರಾಡ್ಬೇಕಿತ್ತು. (ರೋಮ. 7:21-25) ಅವ್ನಿಗೆ ಎಷ್ಟೇ ವಿರೋಧಿಗಳಿದ್ರೂ ಅಥ್ವಾ ಬಲಹೀನತೆಗಳಿದ್ರೂ ಅವ್ನು ಮಾತ್ರ ಕ್ರಿಸ್ತನನ್ನು ಹಿಂಬಾಲಿಸೋದನ್ನ ಬಿಡ್ಲಿಲ್ಲ. ಅವ್ನು ‘ಬಲಹೀನತೆಗಳಲ್ಲಿಯೂ ಸಂತೋಷಪಟ್ಟ.’ ಯಾಕೆ? ಯಾಕಂದ್ರೆ ಬಲಹೀನನಾಗಿರುವಾಗ್ಲೇ ಅವ್ನಿಗೆ ಯೆಹೋವನ ಬಲ ಸಿಕ್ತು.—2 ಕೊರಿಂ. 4:7; 12:10.

9. ನಮ್ಮ ಕುಂದುಕೊರತೆಗಳ ಬಗ್ಗೆ ನಮ್ಗೆ ಹೇಗನಿಸ್ಬೇಕು?

9 ಯೆಹೋವನ ಆಶೀರ್ವಾದ ಅಥ್ವಾ ಬಲ ಪಡ್ಕೊಳ್ಳೋಕೆ ನಮಗೆ ಒಳ್ಳೇ ಆರೋಗ್ಯ, ವಿದ್ಯಾಭ್ಯಾಸ, ಒಳ್ಳೇ ಸಂಸ್ಕೃತಿ ಅಥ್ವಾ ಹಣ ಆಸ್ತಿ ಇರಬೇಕಂತಿಲ್ಲ. ಯಾಕಂದ್ರೆ ಇದ್ಯಾವುದೂ ಯೆಹೋವನಿಗೆ ಪ್ರಾಮುಖ್ಯವಲ್ಲ. ನಿಜ ಹೇಳಬೇಕಂದ್ರೆ ದೇವಜನರಲ್ಲಿ ಹೆಚ್ಚಿನವ್ರು ‘ಶಕ್ತಿಶಾಲಿಗಳಲ್ಲ, ವಿವೇಕಿಗಳಲ್ಲ, ಶ್ರೀಮಂತರೂ ಅಲ್ಲ.’ ಯೆಹೋವನು “ಲೋಕದ ಬಲಹೀನರನ್ನು” ತನ್ನ ಸೇವಕರಾಗಿ ಆರಿಸಿಕೊಂಡಿದ್ದಾನೆ. (1 ಕೊರಿಂ. 1:26, 27) ಈ ಪ್ಯಾರದ ಆರಂಭದಲ್ಲಿ ತಿಳಿಸಿದ ಯಾವ ವಿಷ್ಯಗಳಿಲ್ಲದಿದ್ರೂ ನೀವು ಯೆಹೋವನ ಸೇವೆ ಮಾಡ್ಬಹುದು. ಹೇಗೆ? ಹೇಗಂದ್ರೆ ನಿಮ್ಮಲ್ಲಿ ಏನೂ ಇಲ್ಲದಿರುವಾಗ್ಲೇ ಯೆಹೋವ ನಿಮ್ಮನ್ನ ಆಶೀರ್ವದಿಸ್ತಾನೆ. ಆ ಅನುಭವ ನಿಮಗಾಗುತ್ತೆ. ಉದಾಹರಣೆಗೆ ಯಾರಾದ್ರೂ ನಿಮ್ಮ ನಂಬಿಕೆ ಪ್ರಶ್ನಿಸಿದಾಗ ನಿಮ್ಗೆ ಭಯ ಆದ್ರೆ, ಅವ್ರತ್ರ ಸತ್ಯದ ಬಗ್ಗೆ ಧೈರ್ಯವಾಗಿ ಮಾತಾಡೋಕೆ ಸಹಾಯ ಮಾಡಪ್ಪಾ ಅಂತ ಯೆಹೋವನಿಗೆ ಪ್ರಾರ್ಥಿಸಿ. (ಎಫೆ. 6:19, 20) ಒಂದ್ವೇಳೆ ನೀವು ಯಾವುದಾದ್ರೂ ಕಾಯಿಲೆಯಿಂದ ನರಳ್ತಿದ್ರೆ ಸೇವೆಯಲ್ಲಿ ಬಿಝಿಯಾಗಿರೋಕೆ ಬೇಕಾದ ಶಕ್ತಿ ಕೊಡಪ್ಪಾ ಅಂತ ಆತನತ್ರ ಬೇಡಿಕೊಳ್ಳಿ. ಪ್ರತಿ ಸಲ ಯೆಹೋವ ಸಹಾಯ ಮಾಡೋದನ್ನ ನೋಡ್ವಾಗ ನಿಮ್ಮ ನಂಬಿಕೆ ಮತ್ತು ಬಲ ಇನ್ನಷ್ಟು ಹೆಚ್ಚಾಗುತ್ತೆ.

ಬೈಬಲಿನಲ್ಲಿರುವ ಮಾದರಿಗಳಿಂದ ಕಲಿಯಿರಿ

10. ಇಬ್ರಿಯ 11:32-34 ರಲ್ಲಿ ತಿಳಿಸಿರುವಂಥ ನಂಬಿಗಸ್ತ ದೇವಜನ್ರ ಉದಾಹರಣೆಗಳನ್ನು ನಾವ್ಯಾಕೆ ಅಧ್ಯಯನ ಮಾಡ್ಬೇಕು?

10 ಪೌಲನು ದೇವ್ರ ವಾಕ್ಯವನ್ನ ತಪ್ಪದೆ ಓದುತ್ತಿದ್ದ. ಅದರಲ್ಲಿ ದಾಖಲಾಗಿದ್ದ ಅನೇಕ ನಂಬಿಗಸ್ತ ದೇವಜನ್ರ ಉದಾಹರಣೆಗಳಿಂದ ತುಂಬ ವಿಷ್ಯಗಳನ್ನ ಕಲಿತಿದ್ದ. ಅದಕ್ಕೆ ಅವ್ನು ಇಬ್ರಿಯ ಕ್ರೈಸ್ತರಿಗೆ ಪತ್ರ ಬರೆದಾಗ ಆ ನಂಬಿಗಸ್ತ ದೇವಜನ್ರ ಮಾದರಿಯನ್ನ ಅನುಕರಿಸಿ ಅಂತ ಹೇಳ್ದ. (ಇಬ್ರಿಯ 11:32-34 ಓದಿ.) ಅಂಥ ಸೇವಕರಲ್ಲಿ ಒಬ್ಬನಾದ ದಾವೀದನ ಬಗ್ಗೆ ನೋಡಿ. ಅವ್ನಿಗೆ ವಿರೋಧಿಗಳಿಂದ ಮತ್ತು ಕೆಲವು ಸ್ನೇಹಿತರಿಂದಲೂ ಸಮಸ್ಯೆ ಬಂದ್ವು. ದಾವೀದನ ಉದಾಹರಣೆಯನ್ನ ತಿಳ್ಕೊಳ್ತಾ ಹೋದಂತೆ ಪೌಲ ಅದ್ರಿಂದ ಹೇಗೆ ಪ್ರಯೋಜ್ನ ಪಡ್ಕೊಂಡ ಮತ್ತು ನಾವು ಹೇಗೆ ಪೌಲನನ್ನ ಅನುಕರಿಸಬಹುದು ಅಂತ ನೋಡೋಣ.

ಯುವಕನಾಗಿದ್ದ ದಾವೀದ ಬಲಹೀನನಂತೆ ಕಂಡರೂ ಗೊಲ್ಯಾತನ ಜೊತೆ ಹೋರಾಡೋಕೆ ಭಯಪಡ್ಲಿಲ್ಲ. ಯಾಕೆಂದ್ರೆ ಅವ್ನು ಯೆಹೋವನಲ್ಲಿ ಭರವಸೆಯಿಟ್ಟಿದ್ದ. ಗೊಲ್ಯಾತನನ್ನು ಸೋಲಿಸಲು ಬೇಕಾದ ಶಕ್ತಿಯನ್ನ ಯೆಹೋವ ಕೊಡ್ತಾನೆ ಅಂತ ನಂಬಿದ್ದ. ಹಾಗೇ ಆಯ್ತು. (ಪ್ಯಾರ 11 ನೋಡಿ)

11. ದಾವೀದ ಬಲಹೀನನು ಅಂತ ಗೊಲ್ಯಾತನಿಗೆ ಯಾಕನಿಸ್ತು? (ಮುಖಪುಟ ಚಿತ್ರ ನೋಡಿ.)

11 ಗೊಲ್ಯಾತ ದಾವೀದನನ್ನು ಸಣ್ಣ ಪಿಳ್ಳೆ ತರ ನೋಡ್ದ. ಅದಕ್ಕೆ ಅವನನ್ನು “ತಿರಸ್ಕಾರದಿಂದ” ಹೀಯಾಳಿಸಿದ. ಗೊಲ್ಯಾತ ಬಲಾಢ್ಯ ರಣಶೂರನಾಗಿದ್ದ. ಅವ್ನ ಹತ್ರ ಆಯುಧಗಳಿದ್ವು. ಯುದ್ಧಕ್ಕೆ ಬೇಕಾದ ತರಬೇತಿಯನ್ನು ಪಡ್ಕೊಂಡಿದ್ದ. ಆದ್ರೆ ಇನ್ನೊಂದು ಕಡೆ ದಾವೀದನ ಹತ್ರ ಯುದ್ಧಕ್ಕೆ ಬೇಕಾಗಿದ್ದ ಯಾವ ಆಯುಧನೂ ಇರ್ಲಿಲ್ಲ. ಅನುಭವನೂ ಇರ್ಲಿಲ್ಲ. ಆದ್ರೆ ಅವ್ನು ಯೆಹೋವನ ಶಕ್ತಿ ಮೇಲೆ ಆತುಕೊಂಡ ಮತ್ತು ಆತನ ಸಹಾಯದಿಂದ ಗೊಲ್ಯಾತನನ್ನ ಸಾಯಿಸಿದ.—1 ಸಮು. 17:41-45, 50.

12. ದಾವೀದ ಇನ್ನೂ ಯಾವ ಸಮಸ್ಯೆ ಎದುರಿಸ್ದ?

12 ದಾವೀದ ಇನ್ನೊಂದು ಸಮಸ್ಯೆ ಎದುರಿಸ್ದ. ಆ ಸಮಸ್ಯೆಯಿಂದ ಅವನು ಕುಂದಿಹೋದ. ಯೆಹೋವನು ಅಭಿಷೇಕಿಸಿದ ಸೌಲನಿಗೆ ಅವ್ನು ನಿಷ್ಠೆಯಿಂದ ಸೇವೆ ಮಾಡ್ತಿದ್ದ. ಸೌಲ ಮೊದ್‌ಮೊದ್ಲು ದಾವೀದನನ್ನು ಇಷ್ಟಪಡ್ತಿದ್ದ, ಗೌರವಿಸ್ತಿದ್ದ. ಆದ್ರೆ ಅಹಂಕಾರಿಯಾದಾಗ ಅವ್ನ ಮೇಲೆ ಹೊಟ್ಟೆಕಿಚ್ಚು ಪಟ್ಟ. ಅವ್ನ ಜೊತೆ ಕೆಟ್ಟದಾಗಿ ನಡ್ಕೊಂಡ. ಎಷ್ಟರ ಮಟ್ಟಿಗಂದ್ರೆ ಅವನನ್ನು ಸಾಯಿಸೋದಕ್ಕೆ ಮುಂದಾದ.—1 ಸಮು. 18:6-9, 29; 19:9-11.

13. ಸೌಲ ದಾವೀದನಿಗೆ ಅನ್ಯಾಯ ಮಾಡ್ದಾಗ ಅವನು ಏನು ಮಾಡ್ದ?

13 ರಾಜ ಸೌಲನು ದಾವೀದನ ಜೊತೆ ಎಷ್ಟೇ ಅನ್ಯಾಯವಾಗಿ ನಡ್ಕೊಂಡ್ರೂ ಅವ್ನು ಮಾತ್ರ ಸೌಲನಿಗೆ ಗೌರವ ತೋರಿಸೋದನ್ನ ಮುಂದುವರಿಸ್ದ. ಯಾಕಂದ್ರೆ ಸೌಲನನ್ನು ಯೆಹೋವನು ರಾಜನಾಗಿ ಅಭಿಷೇಕಿಸಿದ್ದನು. (1 ಸಮು. 24:6) ಸೌಲನು ದಾವೀದನಿಗೆ ತುಂಬ ಹಿಂಸೆ ಕೊಟ್ರೂ ದಾವೀದ ಯೆಹೋವನನ್ನ ದೂರಲಿಲ್ಲ. ಬದ್ಲಿಗೆ ಅಂಥ ಕಷ್ಟಕರ ಸನ್ನಿವೇಶ ಬಂದಾಗ ತಾಳಿಕೊಳ್ಳಲು ಬೇಕಾದ ಶಕ್ತಿಗಾಗಿ ಯೆಹೋವನ ಮೇಲೆ ಆತುಕೊಂಡ.—ಕೀರ್ತ. 18:1 ಮತ್ತು ಮೇಲ್ಬರಹ.

14. ದಾವೀದ ಎದುರಿಸಿದಂಥ ಯಾವ ಸಮಸ್ಯೆಗಳನ್ನು ಪೌಲ ಎದುರಿಸ್ದ?

14 ದಾವೀದನಿಗೆ ಎದುರಾದಂಥ ಸಮಸ್ಯೆಗಳೇ ಪೌಲನಿಗೂ ಎದುರಾದವು. ಪೌಲನ ವಿರೋಧಿಗಳು ಎಲ್ಲ ವಿಷ್ಯಗಳಲ್ಲೂ ಅವ್ನಿಗಿಂತ ಹೆಚ್ಚು ಶಕ್ತಿಶಾಲಿಗಳಾಗಿದ್ರು. ದೊಡ್ಡದೊಡ್ಡ ಮುಖಂಡರಿಗೆ ಅವ್ನನ್ನ ಕಂಡ್ರೆ ಆಗ್ತಿರಲಿಲ್ಲ. ಅವನನ್ನು ಹೊಡೆದು ಬಡಿದು ಜೈಲಿಗೆ ಹಾಕಿದ್ರು. ದಾವೀದನಿಗೆ ತೊಂದ್ರೆ ಕೊಟ್ಟಂತೆ ಪೌಲನಿಗೂ ಸ್ನೇಹಿತರು ತೊಂದ್ರೆ ಕೊಟ್ರು. ಕ್ರೈಸ್ತ ಸಭೆಯಲ್ಲಿದ್ದ ಕೆಲವ್ರು ಪೌಲನನ್ನು ವಿರೋಧಿಸಿದ್ರು. (2 ಕೊರಿಂ. 12:11; ಫಿಲಿ. 3:18) ಪೌಲ ತನ್ನ ವಿರೋಧಿಗಳ ಎದುರಿಗೆ ಸೋಲಲಿಲ್ಲ. ಬದ್ಲಿಗೆ ಎಷ್ಟೇ ವಿರೋಧ ಬಂದ್ರು ಸುವಾರ್ತೆ ಸಾರೋದನ್ನ ಮುಂದುವರಿಸ್ದ. ಸಹೋದರ ಸಹೋದರಿಯರು ಅವ್ನಿಗೆ ನೋವು ಮಾಡಿದ್ರೂ ಅವ್ರಿಗೆ ಸಹಾಯ ಮಾಡೋದನ್ನ ಮುಂದುವರಿಸ್ದ. ಎಲ್ಲಕ್ಕಿಂತ ಹೆಚ್ಚಾಗಿ ಅವ್ನ ಕೊನೆ ಉಸಿರಿರೋವರೆಗೂ ದೇವ್ರಿಗೆ ನಂಬಿಗಸ್ತನಾಗಿ ಉಳಿದ. (2 ತಿಮೊ. 4:8) ಇಷ್ಟು ದೊಡ್ಡ ಸಮಸ್ಯೆಗಳನ್ನ ಅವ್ನು ಯೆಹೋವನ ಸಹಾಯದಿಂದ ಎದುರಿಸಿದನೇ ಹೊರತು ಅವ್ನ ಸ್ವಂತ ಬಲದಿಂದಲ್ಲ.

ನಿಮ್ಮ ನಂಬಿಕೆಯನ್ನ ಪ್ರಶ್ನಿಸುವವರ ಹತ್ರ ಪ್ರೀತಿ, ಗೌರವದಿಂದ ಮಾತಾಡಿ. (ಪ್ಯಾರ 15 ನೋಡಿ) *

15. (ಎ) ಜನ್ರು ನಮ್ಮನ್ನ ವಿರೋಧಿಸ್ದಾಗ ನಾವೇನು ಮಾಡ್ಬೇಕು? (ಬಿ) ಇದನ್ನು ಹೇಗೆ ಮಾಡ್ಬಹುದು?

15 ನಿಮ್ಮ ಕ್ಲಾಸ್‌ಮೇಟ್‌ಗಳಿಂದ, ಜೊತೆ ಕೆಲ್ಸ ಮಾಡುವವ್ರಿಂದ ಮತ್ತು ಸತ್ಯದಲ್ಲಿಲ್ಲದ ಕುಟುಂಬ ಸದಸ್ಯರಿಂದ ಅವಮಾನ, ಹಿಂಸೆ ಎದುರಿಸ್ತಿದ್ದೀರಾ? ಯಾವಾಗ್ಲಾದ್ರೂ ನಿಮ್ಮ ಸಭೆಯಲ್ಲಿರುವವ್ರು ನಿಮ್ಗೆ ನೋವು ಮಾಡಿದ್ದಾರಾ? ಹಾಗಿದ್ರೆ ದಾವೀದ ಮತ್ತು ಪೌಲನ ಉದಾಹರಣೆಗಳನ್ನ ನೆನಪು ಮಾಡ್ಕೊಳ್ಳಿ. ‘ಒಳ್ಳೇದರಿಂದ ಕೆಟ್ಟದ್ದನ್ನು ಜಯಿಸುತ್ತಾ ಇರಿ.’ (ರೋಮ. 12:21) ಜನ್ರು ನಮ್ಮನ್ನ ವಿರೋಧಿಸ್ದಾಗ, ದಾವೀದ ಗೊಲ್ಯಾತನ ಜೊತೆ ಹೋರಾಡಿದಂತೆ ನಾವು ಅವ್ರ ಜೊತೆ ಹೋರಾಡಬಾರ್ದು. ಬದ್ಲಿಗೆ ಅವ್ರಿಗೆ ಬೈಬಲ್‌ ಬಗ್ಗೆ, ಯೆಹೋವನ ಬಗ್ಗೆ ಕಲಿಸೋಕೆ ಪ್ರಯತ್ನಿಸಬೇಕು. ಹೀಗೆ ಕೆಟ್ಟತನವನ್ನು ಸೋಲಿಸ್ಬೇಕು. ಇದನ್ನು ಹೇಗೆ ಮಾಡ್ಬಹುದು? ಜನ್ರ ಪ್ರಶ್ನೆಗಳಿಗೆ ಬೈಬಲಿಂದ ಉತ್ರ ಕೊಡ್ಬೇಕು, ನಮ್ಮ ಜೊತೆ ಒರಟಾಗಿ ನಡಕೊಳ್ಳುವವ್ರಿಗೆ ಪ್ರೀತಿ, ಗೌರವ ತೋರಿಸ್ಬೇಕು ಮತ್ತು ಎಲ್ರಿಗೂ ಅದ್ರಲ್ಲೂ ವೈರಿಗಳಿಗೂ ಒಳ್ಳೇದನ್ನೇ ಮಾಡ್ಬೇಕು.—ಮತ್ತಾ. 5:44; 1 ಪೇತ್ರ 3:15-17.

ಬೇರೆಯವ್ರ ಸಹಾಯ ಸ್ವೀಕರಿಸಿ

16-17. ಪೌಲ ಯಾವುದನ್ನ ಯಾವತ್ತಿಗೂ ಮರೆಯಲಿಲ್ಲ?

16 ಅಪೊಸ್ತಲ ಪೌಲ ಕ್ರೈಸ್ತನಾಗೋಕೆ ಮುಂಚೆ ಕ್ರಿಸ್ತನ ಹಿಂಬಾಲಕರಿಗೆ ತುಂಬ ಅವಮಾನ ಮಾಡ್ತಿದ್ದ, ಹಿಂಸೆ ಕೊಡ್ತಿದ್ದ. (ಅ. ಕಾ. 7:58; 1 ತಿಮೊ. 1:13) ಅವ್ನಿಗೆ ಸೌಲ ಅಂತ ಹೆಸರಿತ್ತು. ಒಂದ್ಸಲ ಅವ್ನು ಕ್ರೈಸ್ತ ಸಭೆಯವ್ರ ಮೇಲೆ ದಾಳಿ ಮಾಡೋಕೆ ಹೋಗ್ತಿದ್ದಾಗ ಯೇಸು ತಡೆದ. ಅವ್ನ ಹತ್ರ ಯೇಸು ಸ್ವರ್ಗದಿಂದ ಮಾತಾಡ್ದ ಮತ್ತು ಅವ್ನ ದೃಷ್ಟಿ ಹೋಗುವಂತೆ ಮಾಡ್ದ. ಪೌಲ ಪುನಃ ದೃಷ್ಟಿ ಪಡ್ಕೊಳ್ಳಲು ಈ ಹಿಂದೆ ಯಾರಿಗೆ ತುಂಬ ಹಿಂಸೆ ಕೊಟ್ಟಿದ್ದನೋ ಆ ಜನ್ರ ಬಳಿಗೇ ಹೋಗ್ಬೇಕಾಗಿ ಬಂತು. ಅವರಲ್ಲೊಬ್ಬನಾದ ಅನನೀಯನ ಹತ್ರ ಸಹಾಯ ಪಡ್ಕೊಂಡ. ಅವ್ನು ಪೌಲನಿಗೆ ದೃಷ್ಟಿ ಬರುವಂತೆ ಮಾಡ್ದ.—ಅ. ಕಾ. 9:3-9, 17, 18.

17 ಆಮೇಲೆ ಪೌಲ ಕ್ರೈಸ್ತ ಸಭೆಯ ಸದಸ್ಯನಾದ. ಆದ್ರೆ ದಮಸ್ಕಕ್ಕೆ ಹೋಗುವ ದಾರಿಯಲ್ಲಿ ಯೇಸು ಅವ್ನಿಗೆ ಕಲಿಸಿದ ಪಾಠವನ್ನು ಅವ್ನು ಯಾವತ್ತೂ ಮರೆಯಲಿಲ್ಲ. ದೀನನಾಗಿ ಉಳಿದ. ಸಹೋದರ ಸಹೋದರಿಯರ ಸಹಾಯ ಸ್ವೀಕರಿಸಿದ. ಅವ್ರು ತನಗೆ “ಬಲವರ್ಧಕ ಸಹಾಯವಾಗಿದ್ದಾರೆ” ಅಂತ ಹೇಳಿದ.—ಕೊಲೊ. 4:10, 11.

18. ಕೆಲವೊಮ್ಮೆ ಸಹೋದರ ಸಹೋದರಿಯರು ಕೊಡೋ ಸಲಹೆಯನ್ನು ನಾವ್ಯಾಕೆ ಸ್ವೀಕರಿಸಲ್ಲ?

18 ಪೌಲನಿಂದ ಯಾವ ಪಾಠ ಕಲೀಬಹುದು? ನಾವು ಯೆಹೋವನ ಜನ್ರ ಜೊತೆ ಸಹವಾಸ ಮಾಡೋಕೆ ಶುರು ಮಾಡ್ದಾಗ ಅವ್ರಿಂದ ಸಹಾಯ ಪಡ್ಕೊಳ್ಳೋಕೆ ಕಾಯ್ತಾ ಇರ್ತಿದ್ವಿ. ‘ನಮ್ಗೆ ಬೈಬಲ್‌ ಬಗ್ಗೆ ಹೆಚ್ಚು ಗೊತ್ತಿಲ್ಲ ಇನ್ನೂ ತಿಳ್ಕೋಬೇಕು’ ಅಂತ ಅಂದುಕೊಳ್ತಿದ್ವಿ. (1 ಕೊರಿಂ. 3:1, 2) ಆದ್ರೆ ಈಗ್ಲೂ ನಾವು ಸಹಾಯವನ್ನ ಸ್ವೀಕರಿಸೋಕೆ ತಯಾರಿದ್ದೇವಾ? ನಾವು ತುಂಬ ವರ್ಷದಿಂದ ಸತ್ಯದಲ್ಲಿರಬಹುದು, ನಮ್ಗೆ ತುಂಬ ಅನುಭವನೂ ಇರಬಹುದು. ಅದಕ್ಕೇ ನಮ್ಗೆ ಬೇರೆಯವ್ರಿಂದ ಸಹಾಯ ಸ್ವೀಕರಿಸೋಕೆ ಮನಸ್ಸಾಗದೇ ಇರಬಹುದು. ಅದ್ರಲ್ಲೂ ಇತ್ತೀಚಿಗೆ ಸತ್ಯಕ್ಕೆ ಬಂದವ್ರು ನಮ್ಗೆ ಏನಾದ್ರೂ ಹೇಳೋಕೆ ಬಂದಾಗ ನಾವು ಅವ್ರ ಮಾತನ್ನ ಕೇಳೋಕೆ ಇಷ್ಟಪಡಲ್ಲ. ಯೆಹೋವ ಅಂಥ ಸಹೋದರ ಸಹೋದರಿಯರಿಂದಲೂ ನಮ್ಗೆ ಸಹಾಯ ಮಾಡ್ತಾನೆ ಅನ್ನೋದನ್ನ ನಾವು ಮರೆಯಬಾರ್ದು. (ರೋಮ. 1:11, 12) ನಮ್ಗೆ ಯೆಹೋವನ ಬಲ ಬೇಕಂದ್ರೆ ಸಹೋದರ ಸಹೋದರಿಯರು ಕೊಡೋ ಸಹಾಯವನ್ನು ಸ್ವೀಕರಿಸ್ಲೇಬೇಕು.

19. ಪೌಲ ಹೇಗೆ ಅದ್ಭುತ ವಿಷ್ಯಗಳನ್ನ ಸಾಧಿಸಿದ?

19 ಪೌಲನು ಕ್ರೈಸ್ತನಾದ ಮೇಲೆ ಕೆಲವು ಅದ್ಭುತ ವಿಷ್ಯಗಳನ್ನ ಸಾಧಿಸಿದ. ಅವನ ಕೈಯಿಂದ ಇದೆಲ್ಲಾ ಹೇಗೆ ಮಾಡಕ್ಕಾಯ್ತು? ಅವ್ನಿಗೆ ಒಂದು ವಿಷ್ಯ ಚೆನ್ನಾಗಿ ಅರ್ಥವಾಗಿತ್ತು. ಒಬ್ಬ ವ್ಯಕ್ತಿಗೆ ಆರೋಗ್ಯ, ವಿದ್ಯಾಭ್ಯಾಸ, ಹಣ ಆಸ್ತಿ ಅಥ್ವಾ ಒಳ್ಳೇ ಸಂಸ್ಕೃತಿ ಇದ್ರೆ ಮಾತ್ರ ಯಶಸ್ಸು ಸಿಗಲ್ಲ, ಬದ್ಲಿಗೆ ಅವನಲ್ಲಿ ದೀನತೆ ಇರಬೇಕು ಮತ್ತು ಅವನು ಯೆಹೋವನಲ್ಲಿ ಭರವಸೆ ಇಡಬೇಕು ಅನ್ನೋದು ಅರ್ಥವಾಗಿತ್ತು. ನಾವೂ ಪೌಲನನ್ನು ಅನುಕರಿಸ್ತಾ ಈ ಮೂರು ವಿಷ್ಯ ಮಾಡೋಣ. (1) ಯೆಹೋವನ ಮೇಲೆ ಆತುಕೊಳ್ಳೋಣ, (2) ಬೈಬಲಿನಲ್ಲಿರುವ ನಂಬಿಗಸ್ತ ವ್ಯಕ್ತಿಗಳ ಉದಾಹರಣೆಗಳನ್ನ ಕಲಿಯೋಣ ಮತ್ತು (3) ಸಹೋದರ ಸಹೋದರಿಯರು ಕೊಡೋ ಸಲಹೆಯನ್ನು ಸ್ವೀಕರಿಸೋಣ. ಹೀಗೆ ಮಾಡಿದ್ರೆ ನಾವು ಎಷ್ಟೇ ಬಲಹೀನರಾಗಿದ್ರೂ ಯೆಹೋವ ನಮ್ಮನ್ನ ಬಲಪಡಿಸ್ತಾನೆ!

ಗೀತೆ 100 ನಾವು ಯೆಹೋವನ ಸೈನ್ಯ!

^ ಪ್ಯಾರ. 5 ಈ ಲೇಖನದಲ್ಲಿ ಅಪೊಸ್ತಲ ಪೌಲನ ಉದಾಹರಣೆಯನ್ನ ಕಲಿಯಲಿದ್ದೇವೆ. ನಾವು ದೀನರಾಗಿದ್ರೆ, ಬೇರೆಯವ್ರು ಅವಮಾನ ಮಾಡ್ದಾಗ ಅದನ್ನ ಸಹಿಸಿಕೊಳ್ಳೋಕೆ ಮತ್ತು ನಮ್ಮ ಸ್ವಂತ ಬಲಹೀನತೆಗಳನ್ನ ಜಯಿಸೋಕೆ ಯೆಹೋವ ಹೇಗೆ ಸಹಾಯ ಮಾಡ್ತಾನೆ ಅನ್ನೋದನ್ನ ಈ ಲೇಖನದಲ್ಲಿ ನೋಡಲಿದ್ದೇವೆ.

^ ಪ್ಯಾರ. 1 ಪದ ವಿವರಣೆ: ಅಪರಿಪೂರ್ಣತೆ, ಬಡತನ, ಕಾಯಿಲೆ, ಹೆಚ್ಚು ವಿದ್ಯಾಭ್ಯಾಸ ಇಲ್ಲದಿರೋದು ಮುಂತಾದ ಕಾರಣಗಳಿಂದ ನಮ್ಗೆ ನಾವು ಬಲಹೀನರು ಅಂತ ಅನಿಸ್ಬಹುದು. ಅದ್ರ ಜೊತೆಗೆ ವಿರೋಧಿಗಳು ನಮ್ಮ ಬಗ್ಗೆ ತಪ್ಪಾಗಿ ಹೇಳ್ದಾಗ, ನಮ್ಮ ಮೇಲೆ ಹಲ್ಲೆ ಮಾಡ್ದಾಗಲೂ ಹೀಗೇ ಅನಿಸ್ಬಹುದು.

^ ಪ್ಯಾರ. 57 ಚಿತ್ರ ವಿವರಣೆ: ಪೌಲನು ಕ್ರಿಸ್ತನ ಬಗ್ಗೆ ಸುವಾರ್ತೆ ಸಾರಲು ಹೊರಟಾಗ, ಹಿಂದೆ ಅವನು ಫರಿಸಾಯನಾಗಿದ್ದಾಗ ಬಳಸ್ತಿದ್ದ ವಸ್ತುಗಳನ್ನ ಬಿಟ್ಟು ಹೋಗ್ತಿದ್ದಾನೆ. ಅದ್ರಲ್ಲಿ ಲೋಕದ ಜ್ಞಾನಕ್ಕೆ ಸಂಬಂಧಪಟ್ಟ ಸುರುಳಿಗಳು ಮತ್ತು ಅವನು ಹಣೆಗೆ ಕಟ್ಟಿಕೊಳ್ತಿದ್ದ ವಚನಗಳ ಡಬ್ಬಿ ಇದ್ದಿರಬಹುದು.

^ ಪ್ಯಾರ. 61 ಚಿತ್ರ ವಿವರಣೆ: ಜೊತೆ ಕೆಲ್ಸ ಮಾಡುವ ಒಬ್ಬನ ಬರ್ತಡೇ ಪಾರ್ಟಿಯಲ್ಲಿ ಒಳಗೂಡುವುದಕ್ಕೆ ನಮ್ಮ ಸಹೋದರನನ್ನು ಒಬ್ಬನು ಒತ್ತಾಯ ಮಾಡ್ತಿದ್ದಾನೆ.